For Quick Alerts
ALLOW NOTIFICATIONS  
For Daily Alerts

ಮಹಿಳೆಯರು ಮಕ್ಕಳಿಗಾಗಿ ವಿಚ್ಛೇದನಕ್ಕೆ ಹಿಂದೇಟು ಹಾಕುತ್ತಾರಂತೆ!

By Hemanth
|

ಜೀವನದ ಪ್ರಮುಖ ಘಟ್ಟವಾಗಿರುವ ವೈವಾಹಿಕ ಜೀವನವು ಸರಿಯಾಗಿದ್ದರೆ ಅದು ದೇವರು ಕೊಟ್ಟ ವರವೆನ್ನಬಹುದು. ಒಂದು ವೇಳೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉಂಟಾಗಿ ವಿಚ್ಛೇದನ ನೀಡುವಂತಹ ಪರಿಸ್ಥಿತಿ ಬಂದರೆ ಆಗ ಇದರ ಪರಿಣಾಮ ಮಹಿಳೆಯರ ಮೇಲೆ ಹೆಚ್ಚಾಗುತ್ತದೆ. ಯಾಕೆಂದರೆ ಅದಾಗಲೇ ಮಗುವಾಗಿದ್ದರೆ ಮಗುವಿನ ಜವಾಬ್ದಾರಿಯನ್ನು ಕೂಡ ತೆಗೆದುಕೊಳ್ಳಬೇಕು.

ವಿಚ್ಛೇದನ ನೀಡುವಾಗ ತಾಯಿ ಆರೈಕೆಗೆ ಮಗುವನ್ನು ನೀಡುವ ಕಾರಣದಿಂದ ಪುರುಷರಿಗೆ ಯಾವುದೇ ಜವಾಬ್ದಾರಿ ಇರುವುದಿಲ್ಲ. ಆದರೆ ಮಹಿಳೆಯರು ಮಗುವನ್ನು ಸಾಕಲು ಕಷ್ಟಪಡಬೇಕಾಗುತ್ತದೆ. ಜೀವನಾಂಶ ಸಿಕ್ಕಿದರೂ ಸಮಾಜದಲ್ಲಿ ಮಗುವನ್ನು ದೊಡ್ಡವರನ್ನಾಗಿ ಮಾಡಿ ಬೆಳೆಸುವುದು ಒಂದು ಸವಾಲಿನ ಕೆಲಸ. ಅದರಲ್ಲೂ ಮಹಿಳೆಯರಿಗೆ ವೃತ್ತಿ ಹಾಗೂ ಮಗುವಿನ ಜವಾಬ್ದಾರಿ ತೆಗೆದುಕೊಳ್ಳುವುದು ಅತೀ ಕಠಿಣ ಪರಿಸ್ಥಿತಿ ನಿರ್ಮಾಣ ಮಾಡುತ್ತದೆ.

ವಿಚ್ಛೇದನದ ವಿಷಯ ಬಂದಾಗ ದಂಪತಿಗಳು ಅದೇಕೆ ಹಿಂಜರಿಯುತ್ತಾರೆ?

ಇದೇ ಕಾರಣದಿಂದಾಗಿ ಹೆಚ್ಚಿನ ಮಹಿಳೆಯರು ಏನೇ ಸಮಸ್ಯೆ ಬಂದರೂ ವಿಚ್ಛೇದನ ನೀಡಲು ಹಿಂಜರಿಯುತ್ತಾರೆ. ಎಷ್ಟೇ ಕಷ್ಟವಾದರೂ ತನ್ನ ಪತಿಯೊಂದಿಗೆ ಮುಂದುವರಿಯುತ್ತಾರೆ. ಯಾಕೆಂದರೆ ಮಗುವಿನ ಭವಿಷ್ಯದ ಬಗ್ಗೆ ಅವರಿಗೆ ಭೀತಿಯಿರುತ್ತದೆ,. ಆದರೆ ಅಧ್ಯಯನಗಳ ಪ್ರಕಾರ ಮಹಿಳೆಯರು ಮಗುವನ್ನು ಯಶಸ್ವಿಯಾಗಿ ಬೆಳೆಸಬಲ್ಲರು ಎಂದು ಹೇಳಿವೆ. ಇದರ ಬಗ್ಗೆ ಮತ್ತಷ್ಟು ತಿಳಿಯಿರಿ....

ಅಧ್ಯಯನಗಳು ಏನು ಹೇಳುತ್ತವೆ?

ಅಧ್ಯಯನಗಳು ಏನು ಹೇಳುತ್ತವೆ?

ಕೇವಲ ತಾಯಿ ಬೆಳೆಸುತ್ತಿರುವಂತಹ ಮಕ್ಕಳ ಭಾವನಾತ್ಮಕ ಆರೋಗ್ಯ ಮತ್ತು ಒತ್ತಡದ ಮಟ್ಟವನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ಇದರ ವರದಿಯನ್ನು ಇತರ ಮಕ್ಕಳೊಂದಿಗೆ ತಾಳೆ ಮಾಡಿ ನೋಡಿದಾಗ ಯಾವುದೇ ವ್ಯತ್ಯಾಸ ಕಂಡುಬರಲಿಲ್ಲ.

ಒಂಟಿ ತಾಯಂದಿರು ಹೇಗೆ?

ಒಂಟಿ ತಾಯಂದಿರು ಹೇಗೆ?

ಮಗುವನ್ನು ಬೆಳೆಸುವಂತಹ ಒಂಟಿ ತಾಯಂದಿರುವ ಕುಟುಂಬದವರು ಹಾಗೂ ಸ್ನೇಹಿತರ ಬೆಂಬಲವನ್ನು ಪಡೆದುಕೊಳ್ಳುವರು. ಈ ನೆರವಿನಿಂದಾಗಿ ಮಕ್ಕಳು ಆರೋಗ್ಯಕರ ವಾತಾವರಣದಲ್ಲಿ ಬೆಳೆದು ಸಾಮಾಜಿಕ ಸಂಬಂಧವು ಆರೋಗ್ಯಕರವಾಗಿರುವುದು.

ಕಿರುಚಾಡುವ ಪೋಷಕರು

ಕಿರುಚಾಡುವ ಪೋಷಕರು

ಯಾವಾಗಲೂ ಕಿರುಚಾಡುವಂತಹ ಪೋಷಕರ ಮಕ್ಕಳು ತುಂಬಾ ಸಮಸ್ಯೆಗೆ ಸಿಲುಕುತ್ತಾರೆ ಎಂದು ಹೇಳಿರುವ ಅಧ್ಯಯನಗಳು, ಒಂಟಿ ತಾಯಂದಿರ ಮಕ್ಕಳಿಗಿಂತ ಕಿರುಚಾಡುವ ಪೋಷಕರ ಮಕ್ಕಳು ಹೆಚ್ಚು ತೊಂದರೆಗೊಳಗಾಗುತ್ತಾರೆ.

ಮಾನವೀಯ ಸಂಬಂಧಗಳು

ಮಾನವೀಯ ಸಂಬಂಧಗಳು

ಪೋಷಕರ ನಡುವೆ ಬಿರುಕು ಬಿಟ್ಟಿರುವ ಸಂಬಂಧ ಮತ್ತು ಪೋಷಕರು ಮತ್ತು ಮಕ್ಕಳ ನಡುವೆ ಸಂಬಂಧ ಸರಿಯಗಿರದಿದ್ದರೆ ಅದರಿಂದ ಮಕ್ಕಳ ಭಾವನಾತ್ಮಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುವುದು.

ಮಗುವನ್ನು ಬೆಳೆಸುವುದು

ಮಗುವನ್ನು ಬೆಳೆಸುವುದು

ತಂದೆಯಿಲ್ಲದೆ ಮಗುವನ್ನು ಬೆಳೆಸುವುದು ಯಾವಾಗಲೂ ಆರೋಗ್ಯಕರ ನಿರ್ಧಾರವಲ್ಲ. ಸಮಸ್ಯೆಯನ್ನು ಸರಿಯಾಗಿ ನಿಭಾಯಿಸಿದರೆ ಪ್ರತೀದಿನ ತಂದೆ-ತಾಯಿ ಜಗಳವಾಡುವ ವಾತಾವರಣದಲ್ಲಿ ಬೆಳೆಯುವ ಬದಲು ಬೇರೆ ಕಡೆ ಬೆಳೆಯುವುದು ಸೂಕ್ತ. ತಂದೆ-ತಾಯಿ ಯಾವಾಗಲೂ ಜಗಳವಾಡುತ್ತಾ ಇದ್ದರೆ ಅದರಿಂದ ಮಕ್ಕಳಲ್ಲಿ ಭೀತಿ, ಒತ್ತಡ, ಅಸುರಕ್ಷಿತ ಮನೋಭಾವ ಮತ್ತು ಖಿನ್ನತೆ ಉಂಟಾಗುವುದು.

ಅಧ್ಯಯನ ವರದಿ

ಅಧ್ಯಯನ ವರದಿ

ಅಧ್ಯಯನದ ವೇಳೆ ಸುಮಾರು 70 ಮಂದಿ ಒಂಟಿ ತಾಯಂದಿರು ಮತ್ತು ಅವರ ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಯಿತು. ಈ ವರದಿಯನ್ನು ಇತರ ಮಕ್ಕಳೊಂದಿಗೆ ಹೋಲಿಕೆ ಮಾಡಿ ನೋಡಲಾಯಿತು. ಇದರಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬರಲಿಲ್ಲ. ಒಂಟಿ ತಾಯಿ ಕೂಡ ಮಗುವನ್ನು ಸರಿಯಾಗಿ ಬೆಳೆಸಬಲ್ಲಲು ಎಂದು ಅಧ್ಯಯನಗಳು ಹೇಳಿವೆ.

English summary

Avoiding Divorce Because Of Kids? Read This!

Though most of us think that children of single moms may face a tough childhood, a new study has cleared such doubts. Actually, many women avoid divorce and resort to stay in troubled marriages mainly because they fear the future of their kids. But now, researchers say that even single mothers of this generation are managing to successfully raise the kid.
X
Desktop Bottom Promotion