Latest Updates
-
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ
ಪ್ರೀತಿಯ ಸಿಹಿ ಭಾವನೆ ಬರವಣಿಗೆ ರೂಪ ಪಡೆದಾಗ...
"ಪ್ರೀತಿ ಮಾಡಿ ನೋಡು" ಎಂಬ ನಾಣ್ಣುಡಿಯನ್ನು ನೀವು ಕೇಳಿರುತ್ತೀರಿ. ಪ್ರೀತಿಯೆಂಬುದು ಅಮೃತವಿದ್ದಂತೆ, ಈ ಅಮೃತವನ್ನು ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತಿರುತ್ತದೆ. ಪ್ರೀತಿಯನ್ನು ಕಲಿಸುವಂತಹ ಶಾಲೆಗಳು, ಗುರುಗಳು ಯಾರೂ ಇಲ್ಲ. ಅದರ ಪಾಡಿಗೆ ಅದು ಆಗುತ್ತದೆ ಮತ್ತು ಆಗಬೇಕು. ಪ್ರೀತಿಯನ್ನು ಮಾಡದಿದ್ದವನು ತನ್ನ ಜೀವನದ ಸುಂದರ ಮುಖವನ್ನು ನೋಡಿರುವುದಿಲ್ಲ ಎಂದು ಪರಿಣತರು ಹೇಳುತ್ತಾರೆ.
ಶತಮಾನಗಳ ಹಿಂದೆ ಪ್ರೀತಿಯಲ್ಲಿ ಬೀಳುವುದು ಎಂಬುದು ಒಂದು ಮಧುರಾತಿಮಧುರವಾದ ಭಾವನೆಯಾಗಿತ್ತು. ಈಗ ಇಂದಿನ ಯುವಜನತೆಯು ಈ ಭಾವನೆಯನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಮತ್ತು ಇದಕ್ಕೆ ಒಂದು ಹೊಸ ಅರ್ಥವನ್ನು ಸಹ ನೀಡಿದ್ದಾರೆ.
ಯಾವಾಗ ಒಂದು ಗಂಡು-ಹೆಣ್ಣು ಪರಸ್ಪರ ಪ್ರೀತಿಗೆ ಬೀಳುತ್ತಾರೋ, ಆಗ ಅವರ ನಡುವಿನ ಪ್ರೀತಿಯನ್ನು ಮುಂದೆ ಹಸಿರಾಗಿ ನೆನಪಿಸಿಕೊಳ್ಳಲು ಉಡುಗೊರೆಗಳಿಗಿಂತ ಪ್ರೇಮ ಪತ್ರಗಳು ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತವೆ. ಇಂದು ಹತ್ತರಲ್ಲಿ ನಾಲ್ಕು ಜನ ಸಹ ಪ್ರೇಮ ಪತ್ರ ಬರೆಯುವುದನ್ನು ಇಷ್ಟಪಡುವುದಿಲ್ಲ. ನಮ್ಮ ಪ್ರೀತಿ ಪಾತ್ರರಿಗೆ ನಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಅತ್ಯಂತ ಸುಂದರವಾದ ಮಾರ್ಗವೆಂದರೆ, ಅದು ಪ್ರೇಮ ಪತ್ರಗಳು. ಪ್ರೇಮ ಪತ್ರಗಳು ನಿಮ್ಮ ಪ್ರೇಮ ಮತ್ತು ಅದರ ಕುರಿತಾದ ಭಾವನೆಗಳನ್ನು ದಾಖಲು ಮಾಡುವ ಐತಿಹಾಸಿಕ ದಾಖಲೆಗಳಾಗಿ ನಿಮ್ಮ ಜೀವನದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ.

ನಮ್ಮ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿಸಿಕೊಡಲು ಬರವಣಿಗೆಗಿಂತ ಶಕ್ತಿಶಾಲಿ ಮಾಧ್ಯಮ ಮತ್ತೊಂದಿಲ್ಲ. ಅದರಲ್ಲಿಯೂ ನೀವು ಪ್ರೀತಿಸುವಂತಹ ನಿಮ್ಮ ಸಂಗಾತಿಗೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಇದು ಅತ್ಯಂತ ಸಮರ್ಥ ಸಾಧನವಾಗಿರುತ್ತದೆ. ಬಾಯಿ ಮಾತಿನಲ್ಲಿ ಹೇಳುವುದಕ್ಕಿಂತ ನಿಮ್ಮ ಬರವಣಿಗೆಯ ಮೂಲಕ ಈ ಮಾತುಗಳನ್ನು ತಿಳಿಸುವುದು ಸನ್ನಿವೇಶವನ್ನು ಮತ್ತಷ್ಟು ಆಪ್ಯಾಯಮಾನವಾಗಿಸುತ್ತದೆ. ಪ್ರತಿಯೊಬ್ಬರು ಓದಲೇಬೇಕಾದ ಸ್ಟೋರಿ ಇದು
ಇಂದಿನ ಯುವಕರು ಕಾಗದದಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಅಗತ್ಯವೇನಿದೆ ಎಂದು ಕೇಳುತ್ತಾರೆ. ಆದರೆ ಒಮ್ಮೆ ಆಲೋಚನೆ ಮಾಡಿ, ನಿಮ್ಮ ಭಾವನೆಯನ್ನು ಕಾಗದದಲ್ಲಿ ವ್ಯಕ್ತಪಡಿಸುವಾಗ ನೀವು ನಿಮ್ಮ ಮನಸ್ಸಿನಿಂದ ಅಲ್ಲ, ಹೃದಯದಿಂದ ಮಾತನಾಡುತ್ತಿದ್ದೀರಿ ಎಂದು ತೋರಿಸುತ್ತೀರಿ. ಸಂಬಂಧದ ತಜ್ಞರು ಸಹ ಇಂದಿನ ಕಾಲದ ದಂಪತಿಗಳು ಮತ್ತೆ ಬರೆಯುವ ಯುಗಕ್ಕೆ ಹೋಗಬೇಕು ಎಂದು ಹೇಳುತ್ತಾರೆ. " ಐ ಲವ್ ಯೂ" ಎಂದು ಹೇಳುವ ಮೂರು ಪದಗಳನ್ನು ಅತ್ಯಂತ ಸಮರ್ಥವಾಗಿ ಹೇಳುವ ಮಾಧ್ಯಮ ಬರವಣಿಗೆ ಎಂದು ಹೇಳುತ್ತಾರೆ.
ತಜ್ಞರ ಪ್ರಕಾರ ನಿಮ್ಮ ಭಾವನೆಗಳನ್ನು ನಿಮ್ಮ ಸಂಗಾತಿಗೆ ಸ್ಪಷ್ಟವಾಗಿ ಹೇಳಲು ಬರಣಿಗೆಯನ್ನು ಬಳಸಿಕೊಳ್ಳುವುದು ಉತ್ತಮವಂತೆ. ಆದ್ದರಿಂದ ನಿಮ್ಮ ಸಂಗಾತಿಗೆ ನಿಮ್ಮ ಪ್ರೇಮವನ್ನು ವ್ಯಕ್ತಪಡಿಸಲಾದರು ಬರೆಯಿರಿ, ಅದಕ್ಕೆ ಹೆಚ್ಚಿನ ಮೌಲ್ಯ ದೊರೆಯುತ್ತದೆ ಎಂಬುದು ಅವರ ಅಭಿಪ್ರಾಯ. ಬಾಯಿಯಿಂದ ಹೇಳುವ ಸಾವಿರ ಪದಗಳಿಗಿಂತ ಬರೆದು ತಿಳಿಸುವ ಒಂದು ಹತ್ತು ಪದಗಳಿಗೆ ಬೆಲೆ ಜಾಸ್ತಿ ಎಂಬುದನ್ನು ಅರಿತುಕೊಳ್ಳಿ. ನೀವು ಪತ್ರಗಳ ಜೊತೆಗೆ ಪ್ರಯೋಗ ಮಾಡಬಹುದು: ಪ್ರೇಮ ಪತ್ರಗಳು ನಿಮ್ಮ ಪ್ರೀತಿಯನ್ನು ತೋರಿಸುವ ಉತ್ತಮ ಮಾರ್ಗಗಳಾಗಿರುತ್ತವೆ. ಇದರಿಂದ ನಿಮ್ಮ ಪ್ರೀತಿ ಪಾತ್ರರಿಗೆ ನಿಮ್ಮ ಪ್ರೀತಿಯನ್ನು ಸಮರ್ಪಕವಾಗಿ ತಿಳಿಸಬಹುದು.
ಇದರಲ್ಲಿ ಹಲವಾರು ಬಗೆಯ ಪ್ರಯೋಗಗಳು ಲಭ್ಯವಿರುತ್ತವೆ. ಕವನ, ಕನಸು, ಇತ್ಯಾದಿ ಇತ್ಯಾದಿ ಸಾಹಿತ್ಯಿಕ ಪತ್ರಗಳು ನಿಮ್ಮ ಪ್ರೇಮವನ್ನು ಮತ್ತಷ್ಟು ಮಧುರಗೊಳಿಸುತ್ತವೆ. ಇದರಿಂದ ಆಳವಾದ ಪರಿಣಾಮವುಂಟಾಗುತ್ತದೆ: ಪ್ರೇಮ ಪತ್ರಗಳಿಗೆ ಆಳವಾದ ಅರ್ಥಗಳು ಇರುತ್ತವೆ. ನೀವು ಪತ್ರ ಬರೆಯುವ ತೊಂದರೆ ತೆಗೆದುಕೊಂಡಾಗಲೆ ಗೊತ್ತಾಗುತ್ತದೆ. ಆ ವ್ಯಕ್ತಿಗೆ ನೀವು ಎಷ್ಟು ಬೆಲೆಯನ್ನು ನೀಡಿದ್ದೀರಿ ಎಂದು. ಹಾಗಾಗಿ ನಿಮ್ಮ ಪ್ರೇಮವನ್ನು ಪತ್ರದ ಮೂಲಕ, ಅಂದರೆ ಬರವಣಿಗೆಯ ಮೂಲಕ ವ್ಯಕ್ತಪಡಿಸಿ. ಅದನ್ನು ಓದಿ, ಓದಿ ನಲಿಯುವ ಅವಕಾಶವನ್ನು ನಿಮ್ಮ ಸಂಗಾತಿಗೆ ಕಲ್ಪಿಸಿ....



Click it and Unblock the Notifications

