Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
ಸುಮ್ ಸುಮ್ನೆ, ಹುಡುಗಿಯರ ಬ್ಯೂಟಿಗೆ ಇವರು ಮರುಳಾಗುವುದಿಲ್ಲ!
ಹೂವಿನೆಡೆಗೆ ದುಂಬಿ ಆಕರ್ಷಿತವಾಗುವುದು ಪ್ರಕೃತಿ ಸಹಜಗುಣ. ಆದರೂ ಪ್ರತಿಯೊಂದು ಹೂವಿನೆಡೆಗೂ ದುಂಬಿ ಹೋಗಲ್ಲ. ಕೇವಲ ಮಕರಂದ ಸಿಗುವ ಹೂವಿನಲ್ಲಿ ಮಾತ್ರ ದುಂಬಿ ಹೋಗಿ ಕೂರುವುದು. ಅದೇ ರೀತಿ ಪುರುಷರು ಕೂಡ. ಮಹಿಳೆರೆಡೆಗೆ ಆಕರ್ಷಿತವಾಗುವುದು ಪ್ರಕೃತಿದತ್ತ. ಆದರೆ ಪುರುಷರು ಕೂಡ ಕೆಲವೊಂದು ಗುಣಗಳು, ಸೌಂದರ್ಯ ಮತ್ತು ಮನೋಭಾವವನ್ನು ನೋಡಿಕೊಂಡೇ ಮಹಿಳೆಯರೆಡೆಗೆ ಆಕರ್ಷಿತರಾಗುತ್ತಾರೆ.
ತಮ್ಮೊಂದಿಗೆ ಜೀವನ ಸಾಗಿಸುವ ಹುಡುಗಿ ಇದೇ ರೀತಿಯಾಗಿರಬೇಕು. ಆಕೆಯ ಅಂದ, ಹಾವಭಾವ ಮತ್ತು ವರ್ತನೆ ಇದೇ ರೀತಿಯಲ್ಲಿರಬೇಕು ಎಂದು ಪುರುಷರ ಮೆದುಳಿನಲ್ಲಿ ಮೊದಲೇ ಒಂದು ಅಚ್ಚೊತ್ತಿರುತ್ತದೆ. ಇದರಂತೆ ಅವರು ಹುಡುಕಾಟವನ್ನು ಆರಂಭಿಸುತ್ತಾರೆ. ಕೆಲವರು ಸೌಂದರ್ಯವನ್ನು ಮುಖ್ಯವಾಗಿ ಪರಿಗಣಿಸಿದರೆ, ಇನ್ನು ಕೆಲವರು ಗುಣಕ್ಕೆ ಪ್ರಾಮುಖ್ಯತೆ ನೀಡುತ್ತಾರೆ.
ಪುರುಷರು ಇತರ ಕೆಲವೊಂದು ಅಂಶಗಳನ್ನು ಮಹಿಳೆಯರಲ್ಲಿ ಕಾಣಲು ಬಯಸುತ್ತಾರೆ. ಆದರೆ ಪುರುಷರ ಮನೋಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಕಷ್ಟವೇನಲ್ಲ. ಕಬ್ಬಿಣವು ಆಯಸ್ಕಾಂತದೆಡೆ ಆಕರ್ಷಿತವಾಗುವಂತೆ ಪುರುಷರು ಮಹಿಳೆಯರ ಕಡೆ ಆಕರ್ಷಿತರಾಗುತ್ತಾರೆ. ಪುರುಷರನ್ನು ಮಹಿಳೆಯರು ಸೆಳೆಯುವ ಕಾರಣಗಳನ್ನು ಪಟ್ಟಿ ಮಾಡಲಾಗಿದೆ. ನೀವು ಓದಿಕೊಳ್ಳಿ...

ದೇಹದ ಅಂದ
ಪುರುಷರು ಮೊದಲಾಗಿ ನೋಡುವುದು ದೇಹದ ಅಂದ. ದೇಹವು ಇದೇ ರೀತಿಯಲ್ಲಿರಬೇಕೆಂದು ಅವರು ಯೋಚಿಸುತ್ತಾರೆ. ಮಹಿಳೆಯರು ಕೂಡ ತಮ್ಮ ಜತೆಗಾರನನ್ನು ಆಯ್ಕೆ ಮಾಡುವಾಗ ಇದೇ ಮಾನದಂಡವನ್ನು ಇಟ್ಟುಕೊಂಡಿರುತ್ತಾಳೆ. ಆದರೆ ಪುರುಷರು ಮಾತ್ರ ತಮಗೆ ಇದೇ ರೀತಿಯ ದೇಹ ಹೊಂದಿರುವ ಮಹಿಳೆ ಬೇಕೆಂದು ಪಟ್ಟು ಹಿಡಿದಿರುತ್ತಾರೆ.

ವಿನೋದ ಪ್ರೀತಿ ಮತ್ತು ಸಹಜತೆ
ತಾವು ಯಾವಾಗಲೂ ಜತೆಯಾಗಿ ಕುಳಿತುಕೊಂಡು ಮಾತನಾಡುತ್ತಾ ತಮಾಷೆ ಮಾಡುತ್ತಾ ಇರಬೇಕು. ಯಾವುದು ಸರಿ ಮತ್ತು ಯಾವುದು ಸರಿಯಲ್ಲ ಎನ್ನುವುದನ್ನು ಅರಿತುಕೊಳ್ಳಬೇಕು ಎಂದು ಪುರುಷರು ಬಯಸುತ್ತಾರೆ.

ಸ್ವಾತಂತ್ರ್ಯ
ಯಾವಾಗಲೂ ತನ್ನನ್ನು ಹದ್ದುಬಸ್ತಿನಲ್ಲಿಡುವ ಪುರುಷರನ್ನು ಮಹಿಳೆಯರು ಇಷ್ಟಪಡುವುದಿಲ್ಲ. ಅದೇ ರೀತಿ ಪುರುಷರು ಕೂಡ ಸ್ವಾತಂತ್ರ್ಯವನ್ನು ಬಯಸುತ್ತಾರೆ. ಮಹಿಳೆಯರು ಅಭದ್ರತೆಯಿಂದ ಬದುಕುಬಾರದು. ಅವರಿಗೆ ತಮ್ಮದೇ ಆದಂತಹ ಆಸಕ್ತಿಗಳಿರಬೇಕು ಮತ್ತು ಅದರಲ್ಲಿ ಅವರು ಬೆರೆತಿರಬೇಕು ಎಂದು ಬಯಸುತ್ತಾರೆ.

ಆತ್ಮವಿಶ್ವಾಸ
ಮಹಿಳೆಯರು ತಮ್ಮ ಶಕ್ತಿಯನ್ನು ತಾವೇ ಅರಿತುಕೊಂಡಿರಬೇಕು ಮತ್ತು ಅದನ್ನು ಅವರಿಗೆ ಆಗಾಗ ಜ್ಞಾಪಿಸುವಂತಹ ಕೆಲಸ ಮಾಡಬಾರದು. ಆತ್ಮವಿಶ್ವಾಸದಿಂದ ಇರುವ ಮಹಿಳೆ ತನ್ನ ಕುಟುಂಬ ಮತ್ತು ಸ್ನೇಹಿತರನ್ನು ಜತೆಯಾಗಿ ಮುನ್ನಡೆಸುತ್ತಾಳೆ. ಇದರಿಂದ ಆಕೆ ಹಾಗೂ ಆಕೆಯ ಪತಿಗೆ ಹೆಮ್ಮೆಯೆನಿಸುವುದು.

ಸ್ತ್ರೀ ಸಹಜಗುಣ
ಹೆಣ್ತನವೆಂದರೆ ಅದು ದುರ್ಬಲತೆಯೆಂಬ ಅರ್ಥವಲ್ಲ. ಹೆಣ್ತನವನ್ನು ಅಳವಡಿಸಿಕೊಳ್ಳಬೇಕು. ಸುಂದರವಾಗಿ ಹಾಗೂ ಶಕ್ತಿಯುತವಾಗಿ ಕಾಣಿಸಿಕೊಳ್ಳಬೇಕು. ಕುಟುಂಬದ ಪೋಷಣೆ ಮಾಡಬೇಕು. ಕುತಂತ್ರವಲ್ಲ.

ಜಾಣ್ಮೆ
ಜಾಣ್ಮೆ ಎನ್ನುವುದು ತುಂಬಾ ಒಳ್ಳೆಯದು. ಆದರೆ ಹೆಚ್ಚಿನ ಪುರುಷರು ಮಹಿಳೆಯರೊಂದಿಗೆ ಚರ್ಚೆ ಬಯಸುತ್ತಾರೆ ಹೊರತು ಜಗಳವನ್ನಲ್ಲ.

ಪ್ರೋತ್ಸಾಹ
ತಮ್ಮ ಅಂಹಗೆ ಕೊಡಲಿ ಬೀಳಲು ಪುರುಷರು ಇಷ್ಟಪಡುವುದಿಲ್ಲ. ಯಾವಾಗಲೂ ತಮ್ಮನ್ನು ಇತರರಿಗೆ ಹೋಲಿಸಿಕೊಳ್ಳುವುದು ಅವರಿಗೆ ಇಷ್ಟವಿಲ್ಲ. ತಮ್ಮ ಅಗತ್ಯವಿದೆ ಎನ್ನುವ ಭಾವನೆ ಅವರಲ್ಲಿ ಮೂಡುತ್ತಿರಬೇಕು. ಪ್ರೋತ್ಸಾಹ ನೀಡುವ ಮಹಿಳೆಯರನ್ನು ಬಯಸುತ್ತಾರೆ.

ಹೊಂದಾಣಿಕೆ
ಪ್ರತಿಯೊಬ್ಬರು ತಮಗೆ ಹೊಂದಿಕೊಳ್ಳುವಂತಹ ಜತೆಗಾರರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದೇ ರೀತಿ ಪುರುಷರು ಕೂಡ. ಹೊಂದಾಣಿಕೆ ಮಾಡಿಕೊಳ್ಳಲು ಸ್ವಲ್ಪ ಕಷ್ಟಪಡಬೇಕಾಗುತ್ತದೆ.



Click it and Unblock the Notifications