Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಚೆಲ್ಲಾಟವಾಡುವ ಹುಡುಗರ ಬುದ್ಧಿ ಹೇಗಿರುತ್ತೇ ನೋಡಿ...
ಮಹಿಳೆಯರ ಗಮನ ಸೆಳೆಯುವ ವಿಧಾನಗಳಲ್ಲಿ ಚೆಲ್ಲಾಟ ಒಂದು ಹಳೆಯ ವಿಧಾನವಾಗಿದೆ. ಪುರುಷರು ಮಹಿಳೆಯರೊಂದಿಗೆ ಮಾತನಾಡುವಾಗ ಬಳಸುವ ಪದಗಳಿಂದ ಇವರು ಸಾಮಾನ್ಯವಾಗಿ ಮಾತನಾಡುತ್ತಿದ್ದಾರೋ ಅಥವಾ ಚೆಲ್ಲಾಟವಾಡುತ್ತಿದ್ದಾರೋ ಎಂಬುದನ್ನು ಸುಲಭವಾಗಿ ಕಂಡುಕೊಳ್ಳಬಹುದು. ವಾಸ್ತವವೆಂದರೆ ಹೆಚ್ಚಿನ ಪುರುಷರು ಈ ಚೆಲ್ಲಾಟದ ಮಾತುಗಳನ್ನಾಡಲು ಇಷ್ಟಪಡುತ್ತಾರೆ. ಕೆಲವರು ಸುಮ್ಮನೇ ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಚೆಲ್ಲಾಟವಾಡಿದರೆ ಉಳಿದವರು ಕೇವಲ ಮೋಜಿಗಾಗಿ ಚೆಲ್ಲಾಟವಾಡುತ್ತಾರೆ.
ಆದರೆ ಕೆಲವರು ಮಾತ್ರ ನಿಜವಾಗಿಯೂ ನಿಮ್ಮ ಬಳಿ ಬರಲು ಉತ್ಸುಕರಾಗಿದ್ದು ಇವರ ಮಾತುಗಳೂ ಚೆಲ್ಲಾಟದಂತೆಯೇ ತೋರುತ್ತವೆ. ಒಂದು ವೇಳೆ ನೀವೂ ಆತನ ಬಗ್ಗೆ ನಿಜವಾದ ಅಭಿಮಾನವನ್ನು ಹೊಂದಿದ್ದರೆ ಮಾತ್ರ ಆತನ ಚೆಲ್ಲಾಟದ ಮಾತುಗಳಿಗೆ ಸಕರಾತ್ಮಕ ಉತ್ತರ ನೀಡಬಹುದು. ಇಲ್ಲದಿದ್ದರೆ ಆತನ ಮಾತುಗಳಿಗೆ ಸೊಪ್ಪು ಹಾಕದೇ ಬಾಗಿಲು ಎಲ್ಲಿದೆ ಎಂತು ತೋರಿಸುವುದೇ ಉತ್ತಮ ಕ್ರಮವಾಗಿದೆ. ಬನ್ನಿ ಪುರುಷರು ಆಡುವ ಚೆಲ್ಲಾಟಗಳ ಬಗ್ಗೆ ಕೆಲವು ಮಾಹಿತಿಗಳನ್ನು ಪಡೆಯೋಣ...

ಆತ ನಿಮ್ಮೊಂದಿಗೆ ಸತತವಾಗಿ ಮಾತನಾಡಲು ಬಯಸುತ್ತಾನೆ
ಒಂದು ವೇಳೆ ಆತ ನಿಮ್ಮೊಂದಿಗೆ ಮಾತನಾಡಲು ಸತತ ಪ್ರಯತ್ನ ಮಾಡುತ್ತಿದ್ದು ಅವಕಾಶಗಳಿಗೆ ಹೊಂಚು ಹಾಕುತ್ತಿರುವಂತೆ ಕಂಡುಬಂದರೆ ಇದು ಚೆಲ್ಲಾಟದ ಸ್ಪಷ್ಟ ಲಕ್ಷಣವಾಗಿದೆ.

ಆತ ನಿಮ್ಮಲ್ಲಿ ವಿವಿಧ ಪ್ರಶ್ನೆಗಳನ್ನು ಕೇಳಬಯಸುತ್ತಾನೆ
ಆತ ನಿಮ್ಮಲ್ಲಿ ಅಗತ್ಯಕ್ಕಿಂತಲೂ ಅನಗತ್ಯವಾದ ಹಲವು ಪ್ರಶ್ನೆಗಳನ್ನು ಕೇಳತೊಡಗುತ್ತಾನೆ. ಇದರಲ್ಲಿ ಕೆಲವು ಪ್ರಶ್ನೆಗಳಾದರೂ ವೈಯಕ್ತಿಕವಾಗಿರುತ್ತವೆ. ಈ ಪರಿ ಚಲ್ಲಾಟದ ಪರಿಯಾಗಿದ್ದು ತನ್ನ ಪ್ರಶ್ನೆಗಳಿಂದ ನಿಮ್ಮನ್ನು ಅರಿಯಲು ಯತ್ನಿಸುತ್ತಿದ್ದಾನೆ.

ನಿಮ್ಮಿಬ್ಬರಲ್ಲಿ ಯಾವ ವಿಷಯ ಸಾಮಾನ್ಯ ಎಂದು ಗಮನಿಸುತ್ತಾನೆ
ನಿಮ್ಮ ಹವ್ಯಾಸ, ಚಲನವಲನ, ನಿಮ್ಮ ಇಷ್ಟದ ವಿಷಯಗಳನ್ನು ಅರಿಯುವ ಮೂಲಕ ತಮ್ಮಿಬ್ಬರಲ್ಲಿ ಸಮಾನವಾಗಿರುವ ಆಸಕ್ತಿಯ ವಿಷಯಗಳು ಯಾವುವು ಎಂದು ಆತ ಅರಿಯಲು ಯತ್ನಿಸುತ್ತಾನೆ.

ಆತ ನಿಮ್ಮ ಗುಣಗಳನ್ನು ಮೆಚ್ಚಿರುವ ಬಗ್ಗೆ ಮಾತನಾಡುತ್ತಾನೆ
ಒಂದು ವೇಳೆ ನೀವು ಆತನ ಯಾವುದೇ ಪ್ರತಿಕ್ರಿಯೆಗೆ ಒಂದಿನಿತಾದರೂ ಪ್ರತಿಕ್ರಿಯೆ ತೋರಿದರೆ ಇದನ್ನೇ ಆತ ನೆಪವಾಗಿಸಿ ನಿಮ್ಮ ಗುಣಗಳನ್ನು ಮೆಚ್ಚುವ ಬಗ್ಗೆ ಮಾತನಾಡಲು ತೊಡಗುತ್ತಾನೆ. ಸಾಮಾನ್ಯವಾಗಿ ನಿಮ್ಮ ಸೌಂದರ್ಯದ ವರ್ಣನೆ ಹೆಚ್ಚಾಗಿರುತ್ತದೆ. ಆದರೆ ಇದು ಜೀವನಪರ್ಯಂತ ನೀಡುವ ಜೊತೆ ಎಂದು ಸರ್ವಥಾ ಹೇಳಲಾಗದು.

ನೀವು ಮಾತನಾಡತೊಡಗಿದಾಗ ಆತನ ಮುಖ ಬೆಳಗುತ್ತದೆ
ನೀವು ಆತನ ಪ್ರಶ್ನೆಗಳಿಗೆ ಉತ್ತರಿಸುವಾಗ ಆತನ ಮುಖವನ್ನು ಕೊಂಚ ಗಮನಿಸಿ. ಹಿಗ್ಗಿ ಹೀರೇಕಾಯಿಯಂತಾಗಿರುವ ಮುಖ ಕಿವಿಯಿಂದ ಕಿವಿಯವರೆಗೆ ಕಿರಿದಿರುವಂತೆ ಗೋಚರಿಸಿದರೆ ಆತನ ಚೆಲ್ಲಾಟ ಫಲನೀಡಿದ ಬಗ್ಗೆ ಸಂತೋಷಗೊಂಡಿರುವುದು ಸ್ಪಷ್ಟವಾಗುತ್ತದೆ.

ಆತ ನಿಮ್ಮನ್ನೇ ಗಮನಿಸುತ್ತಿರುತ್ತಾನೆ
ಒಂದು ವೇಳೆ ನೀವು ಆತನ ಸುತ್ತಮುತ್ತ ಇದ್ದರೆ ಆತ ಸದಾ ನಿಮ್ಮೆಡೆಗೇ ಗಮನಿಸುತ್ತಿರುತ್ತಾನೆ. ಅಥವಾ ಯಾವುದಾದರೊಂದು ನೆಪ ತೆಗೆದು ನಿಮ್ಮೆಡೆಗೆ ನೋಡುವ ಅಥವಾ ನಿಮ್ಮೊಂದಿಗೆ ಮಾತನಾಡುವ ಅವಕಾಶಕ್ಕಾಗಿ ಹವಣಿಸುತ್ತಿರುತ್ತಾನೆ.

ಉಡುಗೊರೆಗಳನ್ನು ಕಳುಹಿಸಲು ಪ್ರಾರಂಭಿಸುತ್ತಾನೆ
ಒಂದು ವೇಳೆ ನಿಮ್ಮ ಪ್ರತಿಕ್ರಿಯೆ ಸಕಾರಾತ್ಮಕವಾಗಿದ್ದಲ್ಲಿ ಅತ ನಿಮಗೆ ಉಡುಗೊರೆಗಳನ್ನು ಕಳುಹಿಸಲು ಪ್ರಾರಂಭಿಸುತ್ತನೆ. ಇದಕ್ಕಾಗಿ ಆತ ಅಂದಿನ ದಿನದ ವಿಶೇಷಗಳನ್ನು ಗಮನಿಸಲು ತೊಡಗುತ್ತಾನೆ. ವಿಶೇಷವಾಗಿ ನಿಮ್ಮ ಹುಟ್ಟಿದ ದಿನ ಮೊದಲಾದವುಗಳಿಗೆ ಆತ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾನೆ.



Click it and Unblock the Notifications
