Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಪ್ರೀತಿ ಎಂಬ ಮಾಯಾ ಲೋಕದಲ್ಲಿ ಕಳೆದು ಹೋಗದಿರಿ!
ಪ್ರೀತಿಯಲ್ಲಿ ಬಿದ್ದವನಿಗೆ ಲೋಕವೇ ತನ್ನನ್ನು ಪ್ರೀತಿಸುತ್ತಿದೆ ಎನ್ನುವ ಭಾವನೆ ಮೂಡುತ್ತದೆ. ಪ್ರೀತಿಯೇ ದೊಡ್ಡದು, ಪ್ರೀತಿಗಿಂತ ಮಿಗಿಲಾಗಿರುವುದು ಯಾವುದೂ ಇಲ್ಲ ಎನ್ನುವ ವಾದ ಪ್ರೀತಿಸುವವರದ್ದಾಗಿರುತ್ತದೆ. ಪ್ರೀತಿಯಲ್ಲಿ ತೇಲಾಡುತ್ತಾ ಸಮಯ ಕಳೆಯುವುದು ತಿಳಿಯುವುದೇ ಇಲ್ಲ. ಇಂತಹ ಪ್ರೇಮಿಗಳು ಹಠಾತ್ ಆಗಿ ದೂರವಾದಾಗ ದೊಡ್ಡ ಸಮಸ್ಯೆಯನ್ನೇ ಎದುರಿಸುತ್ತಾರೆ. ಒತ್ತಡ ಹಾಗೂ ಖಿನ್ನತೆಗೆ ಒಳಗಾಗುವ ಸಾಧ್ಯತೆಯೂ ಇದೆ. ಇಂತವರು ತುಂಬಾ ಎಚ್ಚರಿಕೆ ವಹಿಸಬೇಕಾಗುತ್ತದೆ.

ಈ ಲೇಖನದಲ್ಲಿ ಪ್ರೀತಿಯಲ್ಲಿರುವಾಗ ಏನೆಲ್ಲಾ ಕಲಿತುಕೊಳ್ಳಬೇಕು ಎನ್ನುವುದನ್ನು ತಿಳಿಸಿಕೊಡಲಾಗುವುದು. ಇಲ್ಲಿ ಕೊಟ್ಟಿರುವ ಸಲಹೆಗಳಿಂದ ನಿಮ್ಮ ಸಂಬಂಧವನ್ನು ಉಳಿಸಿಕೊಂಡು ಅದನ್ನು ಉತ್ತಮ ಪಡಿಸಬಹುದಾಗಿದೆ. ಯಾಕೆಂದರೆ ಸಂಬಂಧವನ್ನು ಕಾಯ್ದುಕೊಳ್ಳುವುದು ತುಂಬಾ ಮುಖ್ಯ. ಈ ಲೇಖನವನ್ನು ಓದಿದಾಗ ನಿಮ್ಮ ಪ್ರೇಮ ಸಂಬಂಧವನ್ನು ಹೇಗೆ ಗಟ್ಟಿ ಮಾಡಿಕೊಂಡು ಬಾಳಬಹುದು ಎಂದು ತಿಳಿದುಕೊಳ್ಳಬಹುದು. ಇಲ್ಲಿ ಕೊಟ್ಟಿರುವ ಸಲಹೆಗಳನ್ನು ಓದಿಕೊಂಡು ಪ್ರೀತಿಯಲ್ಲಿ ಮುಂದಡಿ ಇಡಿ. ಪ್ರತಿಯೊಬ್ಬರು ಓದಲೇಬೇಕಾದ ಸ್ಟೋರಿ ಇದು
ನಿಮ್ಮನ್ನು ಚೆನ್ನಾಗಿ ತಿಳಿದಿರುವವರೇ ನಿಮ್ಮನ್ನು ಪ್ರೀತಿಸುವವರು ಎನ್ನುವ ಸತ್ಯವನ್ನು ನೆನಪಿನಲ್ಲಿಡಿ. ನಿಮ್ಮನ್ನು ಬದಲಾಯಿಸಲು ಪ್ರಯತ್ನಿಸಬೇಡಿ ಮತ್ತು ಸಂಬಂಧದಲ್ಲಿ ನಿಮ್ಮಿಂದ ಆಗುವಷ್ಟನ್ನು ನೀಡಿ. ನೀವು ಏನಾಗಿದ್ದೀರೋ ಅದನ್ನು ಪ್ರೀತಿಸಿ. ಇದರಿಂದ ಬೇರೆಯವರು ಕೂಡ ನಿಮಗೆ ಗೌರವ ನೀಡುತ್ತಾರೆ. ಅಷ್ಟಕ್ಕೂ ಪ್ರೀತಿ ಎಂದರೇನು, ಇದರ ಹಿಂದಿರುವ ರಹಸ್ಯವೇನು?
ನಿಮ್ಮನ್ನು ಪ್ರೀತಿಸಲು ಕಲಿಯಿರಿ
ನೀವು ಇನ್ನೊಬ್ಬರನ್ನು ಪ್ರೀತಿಸುತ್ತಿದ್ದರೂ ನಿಮ್ಮನ್ನು ನೀವು ಪ್ರೀತಿಸುವುದನ್ನು ಕಲಿಯಬೇಕು. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿ ಜೀವನ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ನಿಮ್ಮನ್ನು ನೀವು ಸ್ವೀಕರಿಸಿ. ಇದರಿಂದ ಸುತ್ತಲಿನ ವಸ್ತುಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ. ಪತ್ನಿಯೊಂದಿಗೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಳ್ಳಿ.
ಗೌಪ್ಯತೆಯಿಲ್ಲದೆ ಪ್ರೀತಿಸಿರಿ
ಯಾವುದೇ ಒಪ್ಪಂದಗಳು ಇಲ್ಲದೆ ನಿಮ್ಮ ಜತೆಗಾರರನ್ನು ಪ್ರೀತಿಸಲು ಕಲಿಯಿರಿ. ಇದರಿಂದ ನಿಮ್ಮಿಬ್ಬರ ಸಂಬಂಧವನ್ನು ಬಲಗೊಳಿಸಲು ಆಕೆ/ಆತ ಮಾಡುತ್ತಿರುವ ಪ್ರಯತ್ನವನ್ನು ಸ್ವೀಕರಿಸಲು ನಿಮಗೆ ನೆರವಾಗುತ್ತದೆ. ಯಾವುದೇ ಗೌಪ್ಯತೆ ಇಲ್ಲದಿದ್ದರೆ ನಿಮ್ಮ ಸಂಬಂಧವು ಆರೋಗ್ಯಕರವಾಗಿರುತ್ತದೆ ಮತ್ತು ಜತೆಗಾರರೊಂದಿಗೆ ಎಲ್ಲಾ ಗುಟ್ಟನ್ನು ಹಂಚಿಕೊಳ್ಳಬಹುದು. ನಿಮ್ಮ ಸಲಹೆ ಸೂಚನೆಗಳು ಏನಾದರೂ ಇದ್ದರೆ ಅದನ್ನು ಕೆಳಗಿರುವ ಕಮೆಂಟ್ ಸೆಕ್ಷನ್ ನಲ್ಲಿ ಬರೆಯಿರಿ. ಆಕೆಯ ಪ್ರೀತಿ, ಸ್ಲೋ ಪಾಯಿಸನ್ ರೀತಿ! ನಂಬಬೇಡಿ
ವಾದ, ಪ್ರತಿವಾದದಿಂದ ದೂರವಿರಿ!



Click it and Unblock the Notifications



