Latest Updates
-
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ
ಕರ್ಕಾಟಕ ರಾಶಿಯವರೊಂದಿಗೆ ಡೇಟಿಂಗ್-ಸ್ವಲ್ಪ ಯೋಚಿಸಿ!
ಜ್ಯೋತಿಷ್ಯವನ್ನು ಇಂದಿನ ದಿನಗಳಲ್ಲಿ ನಂಬದವರು ತುಂಬಾ ಕಡಿಮೆ. ಇದರಿಂದಾಗಿಯೇ ಜ್ಯೋತಿಷ್ಯ ಇಂದು ಜನಪ್ರಿಯವಾಗುತ್ತಿದೆ. ಪ್ರತಿಯೊಬ್ಬರು ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಜ್ಯೋತಿಷ್ಯವನ್ನು ನೋಡಿಯೇ ಮುಂದುವರಿಯುತ್ತಾರೆ. ಅದರಲ್ಲೂ ಕೆಲವರಿಗೆ ಪ್ರತಿಯೊಂದು ಕೆಲಸ ಮಾಡುವಾಗಲೂ ಜ್ಯೋತಿಷ್ಯವನ್ನು ನೋಡಿಯೇ ಮುಂದುವರಿಯಬೇಕು. ಅದರಲ್ಲೂ ಕೆಲವರು ಪ್ರೀತಿಯ ವಿಷಯದಲ್ಲಿ ಸಿಲುಕುವಾಗ ಇದೇ ರಾಶಿಯವರು ಬೇಕೆಂದು ಬಯಸುತ್ತಾರೆ. ಇದಕ್ಕೆ ಕಾರಣಗಳೂ ಇದೆ. ಅದರಲ್ಲೂ ಕರ್ಕಾಟಕ ರಾಶಿಯವರನ್ನು ಡೇಟಿಂಗ್ ಮಾಡುವವರು ತುಂಬಾ ಅದೃಷ್ಟವಂತರೆಂದು ನಂಬಲಾಗಿದೆ.
ಕರ್ಕಾಟಕ ರಾಶಿಯವರ ಮನೋಭಾವದ ಬಗ್ಗೆ ನೀವು ಗೊಂದಲಕ್ಕೆ ಒಳಗಾಗಬಹುದು. ಆದರೆ ಈ ಲೇಖನದಲ್ಲಿ ಕರ್ಕಾಟಕ ರಾಶಿಯವರೊಂದಿಗೆ ಡೇಟಿಂಗ್ ಮಾಡುವಾಗ ಯಾವ ರೀತಿಯಿಂದ ಇರಬೇಕೆಂದು ಹೇಳಿಕೊಡಲಾಗಿದೆ. ಕರ್ಕಾಟಕ ರಾಶಿಯ ಪುರುಷ/ಮಹಿಳೆಯೊಂದಿಗೆ ನೀವು ಡೇಟಿಂಗ್ ಮಾಡುತ್ತಿದ್ದರೆ ಈ ಕೆಲವೊಂದು ಲಕ್ಷಣಗಳನ್ನು ತಿಳಿದುಕೊಂಡು ಮುಂದೆ ಸಾಗಬೇಕು. ಡೇಟಿಂಗ್ ವಿಷಯದಲ್ಲಿ ಪುರುಷರನ್ನು ಮಾತ್ರ ನಂಬಬೇಡಿ!
ಇದರಿಂದ ಅವರನ್ನು ಸರಿಯಾಗಿ ಅರ್ಥಮಾಡಿಕೊಳ್ಳಬಹುದು. ಕರ್ಕಾಟಕ ರಾಶಿಯವರು ಸ್ವಲ್ಪ ಹೊಟ್ಟೆಕಿಚ್ಚನ್ನು ಹೊಂದಿರುತ್ತಾರೆ. ಇದು ತುಂಬಾ ಸಾಮಾನ್ಯ. ಇದನ್ನು ಹೊರತುಪಡಿಸಿ ಇತರ ಕೆಲವೊಂದು ಲಕ್ಷಣಗಳನ್ನು ಇಲ್ಲಿ ನೀಡಲಾಗಿದೆ. ಕರ್ಕಾಟಕ ರಾಶಿಯವರನ್ನು ಡೇಟಿಂಗ್ ಮಾಡುವಾಗ ಯಾವ ರೀತಿಯಿಂದ ಇರಬೇಕಾಗುತ್ತದೆ ಎಂದು ಲೇಖನವನ್ನು ಮುಂದಕ್ಕೆ ಓದುತ್ತಾ ತಿಳಿಯಿರಿ....

ಹುಟ್ಟುತ್ತಲೇ ಗೆಲುವು ಪಡೆದವರು
ಪ್ರತಿಯೊಂದರಲ್ಲೂ ಅವರು ಮಿಂಚಲು ಬಯಸುತ್ತಾರೆ ಮತ್ತು ಇದರ ಬಗ್ಗೆ ಅವರಿಗೆ ಸರಿಯಾದ ನಿಯಂತ್ರಣವೂ ಇದೆ. ಇದನ್ನು ಮೈಕ್ರೋಮ್ಯಾನೆಜಿಂಗ್ ಎನ್ನಬಹುದು. ಆದರೆ ಅವರು ಇದನ್ನು ಯಶಸ್ಸು ಎನ್ನುತ್ತಾರೆ. ಕಠಿಣ ಪರಿಶ್ರಮ ಅವರ ಹೆಸರಿಗೆ ಅಂಟಿಕೊಂಡಿರುತ್ತದೆ ಮತ್ತು ಅವರು ಪ್ರಯತ್ನಿಸುವ ಪ್ರತಿಯೊಂದರಲ್ಲೂ ಅತ್ಯುತ್ತಮವಾಗಿರುವುದನ್ನು ನೀಡಲು ಬಯಸುತ್ತಾರೆ.

ತುಂಬಾ ಸೂಕ್ಷ್ಮಮತಿಗಳು
ಕರ್ಕಾಟಕ ರಾಶಿಯವರು ತುಂಬಾ ಪ್ರೀತಿ ಮತ್ತು ಪ್ರಾಮಾಣಿಕ ಮನುಷ್ಯರೆಂದು ಕರೆಯಲಾಗುತ್ತದೆ. ಅವರಿಗೆ ಮೋಸ, ನಿರಾಶೆ ಮತ್ತು ಬೇಸರವಾದಾಗ ತುಂಬಾ ಕುಸಿಯುತ್ತಾರೆ. ಅವರ ಬಗ್ಗೆ ಬಳಸುವ ಪದಗಳ ಆಯ್ಕೆಯಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕು.

ಪ್ರಾಮಾಣಿಕರು
ನಿಮ್ಮ ಪ್ರೀತಿಗೆ ಬದ್ಧತೆ ತೋರಿಸಿದರೆ ಅವರು ಯಾವಾಗಲೂ ಪ್ರಾಮಾಣಿಕರಾಗಿರುತ್ತಾರೆ. ಪ್ರೀತಿಯನ್ನು ವ್ಯಕ್ತಪಡಿಸಲು ಅವರು ಯಾವಾಗಲೂ ನಾಚಿಕೆ ಪಡುವುದಿಲ್ಲ. ಅವರು ತುಂಬಾ ಪ್ರಾಮಾಣಿಕರು,

ಪ್ಯಾಷನ್ ಪ್ರಿಯರು
ಅವರು ಏನೇ ಮಾಡಿದರೂ ಪ್ಯಾಷನ್ ನಿಂದ ಮಾಡುತ್ತಾರೆ. ತಮ್ಮನ್ನು ಪ್ರೀತಿಸುವವರು ಕೂಡ ಇದೇ ರೀತಿಯಾಗಿರಬೇಕೆಂದು ಬಯಸುತ್ತಾರೆ. ಅವರು ಏನೇ ಮಾಡಿದರೂ ಅದರಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ. ಇದರಿಂದ ಕರ್ಕಾಟಕ ರಾಶಿಯವರೊಂದಿಗೆ ಸಂಬಂಧ ಬೆಳೆಸುವುದು ಉತ್ತಮ.

ಚಂಚಲ ಮನಸ್ಸಿನವರು
ಕರ್ಕಾಟಕ ರಾಶಿಯವರಿಗೆ ನಿರಾಶೆಯಾದಾಗ ಅಥವಾ ಮನಸ್ಸಿಗೆ ನೋವಾದಾಗ ಅವರ ಸುತ್ತಲು ಇರುವವರು ಇದನ್ನು ಅನುಭವಿಸಬೇಕಾಗುತ್ತದೆ. ಅವರ ಮನಸ್ಥಿತಿ ಯಾವ ರೀತಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇದರಿಂದ ನೀವು ಗೊಂದಲಕ್ಕೆ ಒಳಗಾಗಬಹುದು. ಅವರನ್ನು ಏಕಾಂಗಿಯಾಗಿ ಸ್ವಲ್ಪ ಹೊತ್ತು ಬಿಟ್ಟರೆ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳುವರು.

ವಾದ ಪ್ರವೀಣರು
ಕರ್ಕಾಟಕ ರಾಶಿಯವರೊಂದಿಗೆ ವಾದ ಮಾಡಲು ಹೋದಾಗ ನೀವು ಸೋಲುವುದು ಗ್ಯಾರಂಟಿ. ಅವರು ಸರಿಯಾ ಅಥವಾ ತಪ್ಪಾ ಎಂದು ಯೋಚಿಸುವುದಿಲ್ಲ. ಆದರೆ ವಾದವನ್ನು ಗೆಲ್ಲಲು ಅವರು ಬಯಸುತ್ತಾರೆ.



Click it and Unblock the Notifications











