ಶ್! ಇದು ಮಹಿಳೆಯರ ಸೀಕ್ರೆಟ್, ಕೊಂಚ ಡಿಫರೆಂಟ್!

By Hemanth
Subscribe to Boldsky

ಮಹಿಳೆಯರ ಮನಸ್ಸೇ ಹಾಗೆ. ಅಲ್ಲಿ ಏನೂ ಉಳಿಯುವುದಿಲ್ಲ. ಎಷ್ಟು ಗುಟ್ಟಿನ ವಿಷಯವಿದ್ದರೂ ಅದನ್ನು ಅವರು ಹೇಳಿಯೇ ತೀರುತ್ತಾರೆ. ಇದರಿಂದ ಹೆಚ್ಚಾಗಿ ಗಂಡಸರು ಗುಟ್ಟಿನ ವಿಷಯಗಳನ್ನು ಮಹಿಳೆಯರ ಮುಂದೆ ಹೇಳುವುದೇ ಇಲ್ಲ. ಅದರಲ್ಲೂ ಹೇಳಿದ ಬಳಿಕ ಇದನ್ನು ಯಾರಿಗೂ ಹೇಳಬೇಡಿ ಎಂದರೆ ಅದನ್ನು ಅವರು ಹೇಳಿಯೇ ಬಿಡುತ್ತಾರೆ. ಮಹಿಳೆಯರ ಮನಸ್ಸಿನ ಬಗ್ಗೆ ತಿಳಿಯದ ಕೆಲವೊಂದು ವಿಷಯಗಳನ್ನು ನಾವು ಇಲ್ಲಿ ಹೇಳಲು ಹೊರಟಿದ್ದೇವೆ.    ಮಹಿಳೆಯರಿಗೂ ಆಸೆಗಳಿರುತ್ತವೆ, ಆದರೆ ರಹಸ್ಯವಾಗಿ ಇಟ್ಟು ಕೊಳ್ಳುತ್ತಾರೆ!

ಅದರಲ್ಲೂ ಪುರುಷರಿಂದ ಮಹಿಳೆಯರು ಮುಚ್ಚಿಡುವಂತಹ ಕೆಲವೊಂದು ವಿಷಯಗಳನ್ನು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತೇವೆ. ಮಹಿಳೆಯರು ಮುಚ್ಚಿಡುವಂತಹ ಕೆಲವೊಂದು ರಹಸ್ಯಗಳನ್ನು ನಿಮಗೆ ತಿಳಿಸಿಕೊಡುವುದರಿಂದ ಸಂಬಂಧವನ್ನು ಉತ್ತಮಪಡಿಸಲು ನಿಮಗಿದು ನೆರವಾಗುವುದು. ಈ ರಹಸ್ಯಗಳನ್ನು ನೀವು ತಿಳಿದುಕೊಂಡರೆ ನಿಮ್ಮನ್ನು ಪ್ರೀತಿಸುವ ಮಹಿಳೆಯನ್ನು ಯಾವ ರೀತಿಯಲ್ಲಿ ನಡೆಸಿಕೊಳ್ಳಬಹುದು ಎನ್ನುವುದನ್ನು ತಿಳಿಯಬಹುದು.

ಆಕೆಯ ಬೆಸ್ಟ್ ಫ್ರೆಂಡ್‌ಗೆ ಎಲ್ಲವೂ ತಿಳಿದಿರುತ್ತದೆ

ಆಕೆಯ ಬೆಸ್ಟ್ ಫ್ರೆಂಡ್‌ಗೆ ಎಲ್ಲವೂ ತಿಳಿದಿರುತ್ತದೆ

ಬೆಸ್ಟ್ ಫ್ರೆಂಡ್‌ಗಳ ಮಧ್ಯೆ ಯಾವುದೂ ಗುಟ್ಟಾಗಿ ಉಳಿಯುವುದಿಲ್ಲ. ಆಕೆ ತನ್ನ ಬೆಸ್ಟ್ ಫ್ರೆಂಡ್ ಜತೆ ಎಲ್ಲವನ್ನೂ ಹಂಚಿಕೊಳ್ಳುತ್ತಾಳೆ. ಆಕೆ ನಿಮ್ಮ ಬ್ಯಾಂಕ್ ಖಾತೆ ಮತ್ತು ರಾತ್ರಿ ಮಂಚದ ಮೇಲಿನ ವಿಷಯಗಳನ್ನು ಬೆಸ್ಟ್ ಫ್ರೆಂಡ್ ಜತೆ ಹಂಚಿಕೊಳ್ಳುತ್ತಾಳೆ. ಪುರುಷರೇ ಇದರ ಬಗ್ಗೆ ಎಚ್ಚರವಾಗಿರಿ!

ಮದುವೆಗೆ ಮೊದಲು ಆಕೆಗೆ ಇತರರೊಂದಿಗಿನ ಸಂಬಂಧದ ಬಗ್ಗೆ ಹೇಳಲ್ಲ

ಮದುವೆಗೆ ಮೊದಲು ಆಕೆಗೆ ಇತರರೊಂದಿಗಿನ ಸಂಬಂಧದ ಬಗ್ಗೆ ಹೇಳಲ್ಲ

ಹುಡುಗಿಯನ್ನು ಸರಿಯಾಗಿ ಕುಡಿಸಿ ನಶೆ ಏರಿಸಿದರೆ ಆಕೆ ಎಲ್ಲಾ ವಿಷಯವನ್ನು ನಿಮಗೆ ಹೇಳಿಬಿಡುತ್ತಾಳೆ ಎಂದು ನಿಮಗನಿಸಿದರೆ ಅದು ದೊಡ್ಡ ತಪ್ಪು. ಎಷ್ಟೇ ಕುಡಿದರೂ ಈ ರಹಸ್ಯವನ್ನು ಹುಡುಗಿಯರು ಬಾಯಿ ಬಿಡುವುದಿಲ್ಲ.

ದೇಹದ ರಹಸ್ಯ

ದೇಹದ ರಹಸ್ಯ

ಹುಡುಗಿಯರು ತಮ್ಮ ಪತಿಗೆ ಕೂದಲು ತೆಗೆದಿರುವುದು ಮತ್ತು ಕೂದಲು ಇರುವುದನ್ನು ತಿಳಿಯಲು ಯಾವತ್ತೂ ಬಿಡುವುದಿಲ್ಲ. ಆಕೆ ಕೂದಲು ತೆಗೆದಿರುವುದು, ವ್ಯಾಕ್ಸಿಂಗ್ ಮಾಡಿರುವುದು, ಮಾಯಿಶ್ಚರೈಸ್ ಮಾಡಿರುವ ಸಣ್ಣ ಸುಳಿವು ಕೂಡ ನಿಮಗೆ ಸಿಗದಂತೆ ನೋಡಿಕೊಳ್ಳುತ್ತಾಳೆ.

ಹಳೆಯ ಗೆಳೆಯನ ಜತೆ ನಿಮ್ಮ ವರ್ಣನೆ

ಹಳೆಯ ಗೆಳೆಯನ ಜತೆ ನಿಮ್ಮ ವರ್ಣನೆ

ತಮ್ಮ ಹಳೆಯ ಗೆಳೆಯ ಎಷ್ಟೇ ನೋವನ್ನು ನೀಡಿದ್ದರೂ ಹುಡುಗಿಯರು ಆತನನ್ನುಮರೆಯುವುದಿಲ್ಲ. ಅವರು ಆತನ ಬಗ್ಗೆ ಚಿಂತಿಸುತ್ತಾ ಯಾವಾಗಲೂ ನಿಮ್ಮನ್ನು ಆತನಿಗೆ ಹೋಲಿಕೆ ಮಾಡಿಕೊಳ್ಳುತ್ತಿರುತ್ತಾರೆ. ಆಕೆಗೆ ತುಂಬಾ ನೋವಾದಲೂ ಹಳೆಯ ಗೆಳೆಯ ನೆನಪಾಗುತ್ತಾನೆ.

ನಿಮ್ಮನ್ನು ಪರೀಕ್ಷೆ ಮಾಡುತ್ತಿರುತ್ತಾಳೆ

ನಿಮ್ಮನ್ನು ಪರೀಕ್ಷೆ ಮಾಡುತ್ತಿರುತ್ತಾಳೆ

ನೀವು ಮಾಡುವಂತಹ ಪ್ರತಿಯೊಂದು ಕೆಲಸವನ್ನು ಆಕೆ ಗಮನಿಸಿ, ವಿಶ್ಲೇಷಿಸಿ ತೀರ್ಪು ನೀಡುತ್ತಾಳೆ. ಆಕೆ ಯಾವತ್ತೂ ತಿಳಿಯಲು ಬಯಸದ ಯಾವುದೇ ವಿಷಯವನ್ನು ನಿಮ್ಮಲ್ಲಿ ಕೇಳುತ್ತಿದ್ದಾಳೆ ಎಂದರೆ ಆಗ ನೀವು ಅದರ ಬಗ್ಗೆ ಎಚ್ಚರಿಕೆಯಿಂದ ಇರುವುದು ತುಂಬಾ ಅಗತ್ಯ.

ಆಕೆಯ ಕಡೆ ಗಮನವಿಡಬೇಕು

ಆಕೆಯ ಕಡೆ ಗಮನವಿಡಬೇಕು

ಆಕೆಯನ್ನು ಯಾವಾಗಲೂ ಪ್ರೀತಿಸುತ್ತಿರಬೇಕು ಎಂದು ಬಯಸುತ್ತಾಳೆ. ಇದರಿಂದ ಆಕೆಗೆ ಸುರಕ್ಷಿತ ಭಾವನೆ ಉಂಟಾಗುತ್ತದೆ. ಆಕೆ ನಿಮ್ಮ ಕಡೆಗೆ ಯಾವಾಗಲೂ ಗಮನಹರಿಸುವುದು ಕಿರಿಕಿರಿ ಉಂಟು ಮಾಡಬಹುದು. ಆದರೆ ಆಕೆ ತನ್ನ ಭಾವನೆಗಳನ್ನು ವ್ಯಕ್ತಪಡಿಸುವುದು ಇದೇ ರೀತಿ.

 
For Quick Alerts
ALLOW NOTIFICATIONS
For Daily Alerts

    English summary

    Shh! These Are The Secrets Women Hide From Men

    Generally, women are known to be a mysterious set of species and men love to explore and know little things about them, as their mystery factor attracts men from all around. Here, in this article, we are about to share some of the interesting secrets that women hide from men.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more