Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ತಪ್ಪು ತಿಳಿಯಬೇಡಿ, ನಲ್ಲನ ಮೌನವನ್ನು ಸೈಲೆಂಟಾಗಿ ಅರಿಯಿರಿ
ನಿಮ್ಮ ಹುಡುಗನು ನಿಮ್ಮನ್ನು ಗೆಳತಿಯಾಗಿ ಸ್ವೀಕರಿಸಲು ಒಪ್ಪುತ್ತಿಲ್ಲದಿರುವ ಬಗ್ಗೆ ನಿಮ್ಮಲ್ಲಿ ಚಿಂತೆ ಕಾಡುತ್ತಿದೆಯೇ? ಅದರಲ್ಲೂ ಕೆಲವು ಹುಡುಗಿಯರಿಗೆ ತನ್ನ ಹುಡುಗನು ಹೆಚ್ಚು ಆಕೆಯತ್ತ ಗಮನಹರಿಸಬೇಕು, ತನ್ನನ್ನು ಗೆಳತಿಯೆಂದು ಸ್ವೀಕರಿಸಿ ಆತನ ಭಾವನೆಗಳನ್ನು ಹಂಚಿಕೊಳ್ಳಬೇಕೆಂಬ ಬಯಕೆ ಇರುತ್ತದೆ. ಆದರೆ ಈಗಿನ ಒತ್ತಡದ ಬದುಕಿನಲ್ಲಿ ಹುಡುಗರು ಈ ನಿಟ್ಟಿನಲ್ಲಿ ಯೋಚಿಸುವುದು ತುಂಬಾ ಕಡಿಮೆ. ಕೆಲವು ಹುಡುಗರಂತೂ ಗೆಳೆತನದ ಹೆಸರಿನಲ್ಲಿ ಮೋಜಿನ ಆಟವಾಡಲು ಬಯಸುತ್ತಾರೆ. ಈ ಸಂಬಂಧದಲ್ಲಿ ನೀವು ಕೆಲವು ಸೂಕ್ಷ್ಮ ವಿಚಾರಗಳನ್ನು ಅರಿಯಲು ಮೊದಲು ಪ್ರಯತ್ನಿಸಬೇಕು.
ನಿಮ್ಮ ಹುಡುಗನು ನಿಮ್ಮನ್ನು ತನ್ನ ಗೆಳತಿಯಾಗಿ ಸ್ವೀಕರಿಸಲು ಹಿಂಜರಿಯುತ್ತಿರುವುದಕ್ಕೆ ತಪ್ಪು ತಿಳುವಳಿಕೆಯಿಂದ ನಿರಾಸೆಗೊಳಗಾಗದೇ ಆತನಿಗಿರುವ ನಿಜವಾದ ಕಾರಣವನ್ನು ಅರಿಯಲು ಮೊದಲು ಪ್ರಯತ್ನಿಸಿ. ಏಕೆಂದರೆ ತಪ್ಪು ತಿಳುವಳಿಕೆಗಳು ನಿಮ್ಮ ಜೀವನದಲ್ಲಿ ಬಹುದೊಡ್ಡ ನಷ್ಟವನ್ನುಂಟು ಮಾಡುತ್ತವೆ. ನಿಮ್ಮ ಹುಡುಗನ ಜೊತೆ ಒಂದು ತಿಂಗಳ ಕಾಲ ಗಂಭೀರವಾಗಿ ಡೇಟಿಂಗ್ ಮಾಡಿದ್ದರೂ ಸಹ ಆತನು ಮೊದಲು ಹೇಗಿದ್ದನೋ ಹಾಗೆಯೇ ಇರುವುದನ್ನು ನೀವು ಗಮನಿದ್ದು, ನಿಮ್ಮ ಹುಡುಗನು ನಿಮ್ಮನ್ನು ಗೆಳತಿಯೆಂದು ಇನ್ನೂ ಸ್ವೀಕರಿಸುತ್ತಿಲ್ಲದಿರುವ ಬಗ್ಗೆ ಹೆಚ್ಚು ಚಿಂತಿಸದಿರಿ.

ಇದು ತುರ್ತಾಗಿ ಆಗುವ ಕೆಲಸವಲ್ಲ. ಈ ಸಂಬಂಧವನ್ನು ಬಹು ದೂರ ಕೊಂಡೊಯ್ಯಲು ಆತ ಬಯಸಿರಬಹುದು. ಅದಕ್ಕೆ ಆತ ಸಮಯ ತೆಗೆದುಕೊಳ್ಳುತ್ತಿರಬಹುದು. ನೀವು ಹೆಚ್ಚಿನ ಕಾಲ ಡೇಟಿಂಗ್ ಮಾಡಿದ್ದರೂ ಸಹ ನಿಮ್ಮ ಹುಡುಗನು ನಿಮ್ಮನ್ನು ಗೆಳತಿಯೆಂದು ಒಪ್ಪಿಕೊಳ್ಳುತ್ತಿಲ್ಲದಿರುವುದಕ್ಕೆ ಅನೇಕ ಕಾರಣಗಳಿವೆ. ಈ ಕಾರಣಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲ ಏಕೆಂದರೆ ಅವುಗಳು ನಿಮ್ಮ ಸಂಬಂಧಕ್ಕೆ ಯಾವುದೇ ಅಡ್ಡಿ ಮಾಡಲಾರವು.
ಕೆಲವೊಂದು ಬಾರಿ, ನಿಮ್ಮ ಸಂಬಂಧದಲ್ಲಿ ಏನೋ ತೊಡಕಿದೆ ಎಂಬುದನ್ನು ಅರಿಯಲೂ ಸಹ ಆತನಿಗೆ ಅರಿವಿಲ್ಲದಿರುವ ಅನೇಕ ಸಂದರ್ಭಗಳಿವೆ. ಆತನಿಗಿರುವ ಕೆಲಸದ ಒತ್ತಡ ಮತ್ತು ಇತರೆ ತೊಂದರೆಗಳಿಂದ ನಿಮ್ಮ ಸಂಬಂಧಕ್ಕೆ ಹೆಚ್ಚಿನ ಸಮಯ ಅಥವಾ ಪ್ರಾಮುಖ್ಯತೆ ನೀಡಲು ಆತನಿಗೆ ಸಾಧ್ಯವಾಗದೇ ಇರಬಹುದು.
ಆತನ ಮೌನವನ್ನು ನೀವು ಅಪಾರ್ಥ ಮಾಡಿಕೊಂಡು ತಪ್ಪು ತಿಳಿಯಬೇಡಿ. ಆದರೆ, ನೀವು ಮೊದಲು ಆತ ನಿಮ್ಮನ್ನು ಗೆಳತಿಯೆಂದು ಒಪ್ಪಿಕೊಳ್ಳಲು ಆತನಿಗೆ ನಿಜವಾಗಲೂ ಆಗುತ್ತಿರುವ ಭಯವಾದರೂ ಏನು ಎಂಬುದನ್ನು ತಿಳಿಯಲು ಪ್ರಯತ್ನಿಸಿ. ನಿಮ್ಮ ಹುಡುಗ ನಿಮ್ಮನ್ನು ಗೆಳತಿಯೆಂದು ಒಪ್ಪಿಕೊಳ್ಳದಿರುವ ಬಗ್ಗೆ ಕೆಲವು ಕಾರಣಗಳನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಾಗಿದೆ. ಈ ಕಾರಣಗಳನ್ನು ಒಮ್ಮೆ ಅವಲೋಕಿಸಿ..
ಆತನಿಗಿರುವ ನಾಚಿಕೆಯ ಸ್ವಭಾವ
ಆತನಿಗಿರುವ ನಾಚಿಕೆಯ ಸ್ವಭಾವದಿಂದ ನಿಮ್ಮನ್ನು ಗೆಳತಿಯೆಂದು ಕರೆಯಲು ಹಿಂಜರಿಕೆಯಿರಬಹುದು. ಸಾಮಾನ್ಯವಾಗಿ ಪುರುಷರಲ್ಲಿ ತಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಗುಣ ಕಡಿಮೆ ಇರುತ್ತದೆ. ಯುವಕರು ತಮ್ಮ ಪ್ರೀತಿಯನ್ನು ಮುಕ್ತವಾಗಿ ಹಂಚಿಕೊಂಡಲ್ಲಿ ಅವರ ಪೌರುಷತ್ವ ಕಡಿಮೆಯಾಗಲಿದೆ ಎಂದು ಹೆಚ್ಚಿನ ಹುಡುಗರು ಭಾವಿಸುತ್ತಾರೆ.
ಆತನಿಗಿರುವ ಹೆದರಿಕೆ
ನಿಮ್ಮ ಸಂಬಂಧದಲ್ಲಿ ಏನೇ ಇರಲಿ, ಎಷ್ಟೇ ಸಲಿಗೆ ಇರಲಿ ಪುರುಷರು ತಮ್ಮ ಪ್ರೀತಿಯ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಕೊಂಚ ಭೀತಿಗೊಳಗಾಗುತ್ತಾರೆ. ತಮ್ಮ ಪ್ರೀತಿಯನ್ನು ಹಂಚಿಕೊಂಡಲ್ಲಿ ತಮ್ಮ ಪ್ರೀತಿಯು ಎಲ್ಲಿ ದೂರವಾಗುವುದೋ ಅಥವಾ ಗೆಳತಿಯೇ ದೂರವಾಗುವಳೋ ಎಂಬ ಭಯ ಅವರಲ್ಲಿ ಆವರಿಸಿರುತ್ತದೆ. ನಿಮ್ಮನ್ನು ಗೆಳತಿಯೆಂದು ಒಪ್ಪಿಕೊಂಡಲ್ಲಿ ನಿಮ್ಮ ಸಂಬಂಧದಲ್ಲಿನ ಸಮೀಕರಣವು ಎಲ್ಲಿ ಬದಲಾಗುವುದೋ ಎಂದೂ ಸಹ ಹೆಚ್ಚಿನವರು ಭಾವಿಸುತ್ತಾರೆ.
ಆತನು ನಿಮ್ಮೊಂದಿಗೆ ಸುಮ್ಮನೆ ಚೆಲ್ಲಾಟವಾಡುತ್ತಿದ್ದಾನೆ
ಕೊನೆಯ ಕಾರಣವಾದರೂ ಇದನ್ನು ಕಡೆಗಣಿಸುವಂತಿಲ್ಲ. ನಿಮ್ಮ ಸಂಬಂಧವನ್ನು ಗಂಭೀರವಾಗಿ ತೆಗೆದುಕೊಳ್ಳದೇ ನಿಮ್ಮೊಂದಿಗೆ ಕೇವಲ ಮೋಜಿಗಾಗಿ ಮಾತ್ರ ಆತ ಇರಬಹುದು. ಇದು ನಿಮಗೆ ಎಚ್ಚರಿಕೆಯ ಸಂಕೇತವೂ ಹೌದು. ನಿಮ್ಮ ಹಾಗೆಯೇ ಬೇರೆ ಹುಡುಗಿಯರೊಂದಿಗೂ ಆತ ಒಂದೇ ದೋಣಿಯಲ್ಲಿ ಪ್ರಯಾಣಿಸುತ್ತಿರಬಹುದು. ಆದ್ದರಿಂದ ಇದನ್ನು ಒಮ್ಮೆ ಅವಲೋಕಿಸಿ ಜಾಗೃತರಾಗಿರಿ.



Click it and Unblock the Notifications

