Latest Updates
-
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ -
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ
ಜಗಳದಿಂದ ಮನೆ ರಣರಂಗವಾದೀತು,,,ಜೋಕೆ!
ಜಗಳ, ಕಲಹ, ಕದನಗಳು ಒಳ್ಳೆಯದಲ್ಲ ಎಂದು ಎಲ್ಲರೂ ಹೇಳುತ್ತಾರೆ. ಆದರೆ ನಾಲ್ಕು ಜನರಿರುವಲ್ಲಿ ಜಗಳ, ಕದನ, ಕಲಹ, ವಾಗ್ವಾದ ಇದ್ದೇ ಇರುತ್ತದೆ. ಒಂದೇ ವಿಷಯದ ಬಗ್ಗೆ ಇಬ್ಬರು ವ್ಯಕ್ತಿಗಳಲ್ಲಿರುವ ಭಿನ್ನಾಭಿಪ್ರಾಯ ಮತ್ತು ತಮ್ಮದೇ ಅಭಿಪ್ರಾಯ ಸರಿ ಎಂದು ವಾದಿಸಲು ತೊಡಗುವುದೇ ಜಗಳಕ್ಕೆ ಮುಖ್ಯ ಕಾರಣ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಈ ಜಗಳವನ್ನು ತಡೆಗಟ್ಟಬಹುದು. ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆಮಾತಿನಂತೆ ಜಗಳಕ್ಕೆ ಕಾರಣವಾದ ವಿಷಯವನ್ನು ಹುಡುಕಿ ಅದನ್ನು ಅಲ್ಲಿಯೇ ಇತ್ಯರ್ಥಗೊಳಿಸುವುದು ಜಾಣರ ಲಕ್ಷಣ.
ದಂಪತಿಗಳ ನಡುವೆಯೂ ನೂರಾರು ವಿಷಯಗಳನ್ನು ಕುರಿತು ಕೋಳಿಜಗಳ ನಡೆಯುತ್ತಲೇ ಇರುತ್ತದೆ, ಮತ್ತು ಇರಬೇಕು ಸಹಾ. ಸುಖದಾಂಪತ್ಯಕ್ಕೆ ಚಿಕ್ಕ ಪುಟ್ಟ ಕಲಹವಿದ್ದರೆ ಊಟದಲ್ಲಿ ಉಪ್ಪಿನಕಾಯಿಯಂತೆ ಜೀವನ ಸುಂದರವಾಗಿರುತ್ತದೆ. ಆದರೆ ಒಂದು ವೇಳೆ ಈ ಜಗಳ ಉಂಡು ಮಲಗಿದ ಬಳಿಕವೂ ಮುಂದುವರೆದರೆ ಮಾತ್ರ ಜಗಳ ಕಲಹಕ್ಕೆ ತಿರುಗಿ, ಕಲಹ ಕದನಕ್ಕೆ ತಿರುಗಿ ಕದನ ವಿರಹದವರೆಗೂ ಮುಂದುವರೆಯಬಹುದು.
ಅಷ್ಟೇ ಅಲ್ಲದೆ ಇಂತಹ ಕೆಲವೊಂದು ಚಿಕ್ಕ ಪುಟ್ಟ ವಿಷಯಗಳುಗಣನೆಗೆ ಬಾರದೇ ಬಳಿಕ ಗೋಜಲಾಗಿ ಸಂಬಂಧಗಳನ್ನೇ ಅಲ್ಲಾಡಿಸುತ್ತವೆ. ಇಂತಹ ಕಲವೊಂದು ವಿಷಯಗಳ ಮೇಲೆ ಇಲ್ಲಿ ಬೆಳಕು ಚೆಲ್ಲಲಾಗಿದೆ. ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ನಿಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗಿ ದೀರ್ಘಕಾಲ ಬಾಳಲು, ಸುಖಮಯ ಜೀವನ ನಡೆಸಲು ಸಹಕಾರಿಯಾಗಿವೆ.

ಜಗಳದ ಮೂಲಕ ಗೆಲುವು ಸಾಧಿಸಲು ಯತ್ನಿಸಬೇಡಿ
ಜಗಳ ಮೇಲೇರುತ್ತಿದ್ದಂತೆಯೇ ತಮ್ಮ ವಾದವನ್ನು ಸತ್ಯವೆಂದು ನಿರೂಪಿಸುವ ಭರದಲ್ಲಿ ಜಗಳ ಇನ್ನಷ್ಟು ಹೆಚ್ಚುತ್ತದೆ. ಒಂದು ರೀತಿಯಲ್ಲಿ ಸೀಮೆ ಎಣ್ಣೆ ಸುರಿದು ಬೆಂಕಿಯನ್ನು ಆರಿಸಲು ಯತ್ನಿಸಿದಂತೆ. ಬದಲಿಗೆ ಆಯಿತು,ನನ್ನದೇ ತಪ್ಪು, ಇದಕ್ಕೆ ಪರಿಹಾರ ಹೇಗೆ ಎಂದು ಶರಣಾಗತರಾಗಿಬಿಡಿ. ಗಂಡ ಹೆಂಡಿರ ನಡುವಣ ಜಗಳಗಳು ಈ ಮಾತು ಬರುತ್ತಿದ್ದಂತೆಯೇ ಥಟ್ಟನೇ ಮುಗಿದು ಪರಸ್ಪರ ಆಲಂಗಿಸಿಕೊಂಡ ಪ್ರಕರಣಗಳು ಲಕ್ಷಾಂತರ ಇವೆ. ನೆನಪಿಡಿ, ಜಗಳವನ್ನು ಮುಂದುವರೆಸದೇ ಸೋಲುವುದೇ ನಿಜವಾದ ಗೆಲುವು.

ನ೦ಜಿನ ಮಾತುಗಳಿಗೆ ಅವಕಾಶ ನೀಡಬೇಡಿ
ನಿಮ್ಮ ಸ೦ಗಾತಿಯ ನ೦ಜಿನ ಮಾತುಗಳಿಗೆ ನೀವು ಋಣಾತ್ಮಕವಾಗಿ ಪ್ರತಿಕ್ರಿಯಿಸಲು ಮು೦ದಾಗುವ ಲಕ್ಷಣವಿದ್ದಲ್ಲಿ, ನಿಮ್ಮ ಮು೦ದಿನ ನಡವಳಿಕೆಯ ಕುರಿತು ತತ್‌ಕ್ಷಣವೇ ನೀವೇ ಎಚ್ಚರಗೊಳ್ಳಿರಿ ಹಾಗೂ ಅ೦ತಹ ನಾಟಕೀಯ ಸನ್ನಿವೇಶವು ನಿಮ್ಮಿ೦ದಲೇ ಆರ೦ಭಗೊಳ್ಳುತ್ತಿದೆಯೆ೦ಬ ಅರಿವು ನಿಮಗೆ ಒಡನೆಯೇ ಉ೦ಟಾದಲ್ಲಿ, ಅದನ್ನು ತಪ್ಪಿಸಲು ಬದಲೀ ಮಾರ್ಗೋಪಾಯದತ್ತ ಯೋಚಿಸಿರಿ. ಒ೦ದು ವೇಳೆ ನಿಮ್ಮ ಸ೦ಗಾತಿಗೆ ಅ೦ತಹ ನಾಟಕೀಯ ಸನ್ನಿವೇಶವನ್ನು ಸೃಷ್ಟಿಸುವ ಹವ್ಯಾಸವಿದ್ದಲ್ಲಿ, ಅವಳು ಅಥವಾ ಅವನು ಇನ್ನೇನು ಭಾವನಾತ್ಮಕ ಬಿರುಗಾಳಿಯನ್ನು ಎಬ್ಬಿಸಲಿದ್ದಾನೆ/ಳೆ ಎ೦ಬ ಲಕ್ಷಣಗಳು ಕಾಣಿಸಿಕೊಳ್ಳಲಾರ೦ಭಿಸಿದ ಕೂಡಲೇ ಅಂತಹ ಸಮಸ್ಯೆಯನ್ನು ಕೂದಲೇ ನಿಲ್ಲಿಸಲು ಪ್ರಯತ್ನಿಸಿ.

ತಪ್ಪನ್ನು ಕ್ಷಮಿಸಿ ಮುನ್ನಡೆಯಿರಿ
ಒಬ್ಬರ ತಪ್ಪನ್ನು ಮತ್ತೊಬ್ಬರು ಕ್ಷಮಿಸುವಂತಹ ದಂಪತಿಗಳು ತುಂಬಾ ದೀರ್ಘಕಾಲ ಜೊತೆಯಾಗಿರುತ್ತಾರೆ. ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಬ್ಬನು ಪರಿಪೂರ್ಣನಲ್ಲ ಎಂಬುದನ್ನು ಮರೆಯಬಾರದು. ದಾಂಪತ್ಯದಲ್ಲಿ ಇಬ್ಬರು ತಪ್ಪುಗಳನ್ನು ಮಾಡುತ್ತೀರಿ, ಕ್ಷಮಿಸುವ ದೊಡ್ಡತನವನ್ನು ಮಾಡಿ. ಕಳೆದು ಹೋದದ್ದು, ಕಳೆದು ಹೋಯಿತು ಎಂಬುದನ್ನು ಮೊದಲು ಅರಿಯಿರಿ. ಒಬ್ಬರನ್ನೊಬ್ಬರು ವಿಶ್ವಾಸಕ್ಕೆ ತೆಗೆದುಕೊಳ್ಳಿ, ನಿಮ್ಮ ಸಂಗಾತಿಯ ಎಲ್ಲಾ ನ್ಯೂನತೆಗಳ ಜೊತೆಗೆ ಅವರನ್ನು ಒಪ್ಪಿಕೊಳ್ಳಿ. ಒಂದು ವೇಳೆ ನೀವು ಹಿಂದಿನ ಕೆಲವು ತಪ್ಪುಗಳನ್ನು ನಿಮ್ಮ ಆಯುಧಗಳಾಗಿ ಹಿಡಿದುಕೊಂಡರೆ, ನಿಮ್ಮ ಈಗಿನ ಪ್ರೀತಿಯು ಬೆಂದು ಹೋಗುತ್ತದೆ. ಅದಕ್ಕಾಗಿ ಪ್ರೀತಿಯನ್ನು ಅನುಭವಿಸಲು ಹಳೆಯ ತಪ್ಪುಗಳನ್ನು ಕ್ಷಮಿಸಿಬಿಡಿ. ಕ್ಷಮಿಸುವುದಕ್ಕಿಂತ ದೊಡ್ಡ ಶಿಕ್ಷೆಯಿಲ್ಲ

ಉಡುಗೆಯ ವಿಷಯದಲ್ಲಿ
ಪತಿಯರು ಸಮಾಜದಲ್ಲಿ ಎಂತಹ ಉಡುಗೆಗಳನ್ನು ಉಟ್ಟಿರುವ ಮಹಿಳೆಯರನ್ನೂ ಗಮನಿಸುತ್ತಾರಾದರೂ ತಮ್ಮ ಪತ್ನಿ ಮಾತ್ರ ಅತಿ ಸಭ್ಯ ಉಡುಗೆಯನ್ನೇ ತೊಡಬೇಕೆಂದು ಬಯಸುತ್ತಾರೆ. ಆದ್ದರಿಂದ ವಿವಾಹವಾದ ಪ್ರಾರಂಭದ ದಿನಗಳಿಂದಲೇ ನಿಮ್ಮಿಬ್ಬರಿಗೂ ಇಷ್ಟವಾಗುವ ಉಡುಗೆಗಳು ಯಾವುದೆಂದು ಕಂಡುಕೊಳ್ಳಿ ಹಾಗೂ ಆ ಪ್ರಕಾರ ಸಭ್ಯ ಉಡುಗೆಗಳನ್ನೇ ತೊಡಿರಿ. ಈ ವಿಷಯದಲ್ಲಿ ಇಬ್ಬರೂ, ಸರಿಯಾದ ಸಂವಹನ ನಡೆಸಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಿ

ಸಂಸಾರದಲ್ಲಿ ಮತ್ಸರ ಭಾವ ಬಾರದಿರಲಿ
ನೀವು ನಿಮ್ಮ ಬಾಳಸ೦ಗಾತಿಯ ಕುರಿತ೦ತೆ ಮತ್ಸರ ಭಾವವನ್ನು ತಳೆಯತೊಡಗಿದಲ್ಲಿ, ಅಥವಾ ನಿಮ್ಮ ಬಾಳಸ೦ಗಾತಿಯು ನಿಮ್ಮ ಮಿತ್ರರನ್ನು ಹಾಗೂ ಅವರೊ೦ದಿಗಿನ ಮೈತ್ರಿಯನ್ನು ಸ್ವೀಕರಿಸದೇ ಹೋದಲ್ಲಿ, ಈ ಕುರಿತು ಅತೀ ಕೂಡಲೇ ಮಾತುಕತೆಗೆ ತೊಡಗಿಕೊಳ್ಳುವುದರ ಮೂಲಕ ಅ೦ತಹ ತಕರಾರುಗಳಿಗೆ ಅತೀ ಶೀಘ್ರವಾಗಿ ಇತಿಶ್ರೀ ಹಾಡಬೇಕು. ಏಕೆ೦ದರೆ ಅ೦ತಹ ತಗಾದೆಗಳು ನಿಮ್ಮೀರ್ವರ ನಡುವಿನ ಸ೦ಬ೦ಧದ ಮೇಲೆ ಪ್ರತಿಕೂಲ ಪರಿಣಾಮವನ್ನು೦ಟು ಮಾಡುವುದರ ಮೂಲಕ ಸ೦ಬ೦ಧವನ್ನು ಶಾಶ್ವತವಾಗಿ ಹಾಳುಗೆಡವಬಲ್ಲದು. ಹೀಗಾಗಿ ಪರಸ್ಪರರ ಕುರಿತ೦ತೆ ಮತ್ಸರವನ್ನು ಆದಷ್ಟು ಶೀಘ್ರವಾಗಿ ತೊಡೆದುಹಾಕಬೇಕು.



Click it and Unblock the Notifications











