Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಪ್ರೇಮಿಗಳಿಗಾಗಿ 7 ವಿಶೇಷ ದಿನಗಳ ವಿಶೇಷತೆ
ಕಣ್ಣು ಮುಚ್ಚಿ ತೆರೆದ ಕೂಡಲೇ ಬಂದಿತು ಫೆಬ್ರವರಿ ತಿಂಗಳು. ಪ್ರತಿಯೊಬ್ಬ ಜೋಡಿಯೂ ತಿಂಗಳಿನ ಪ್ರತೀ ದಿನವನ್ನು ವಿಶೇಷವಾಗಿಸಿಕೊಳ್ಳುತ್ತಾರೆ. ಈ ತಿಂಗಳು ಅವರಿಗೆ ಪುಳಕವಾಗಿರುವ ಸಂದರ್ಭಗಳು. ವರ್ಷದ ಎಲ್ಲಾ ತಿಂಗಳುಗಳಿಗಿಂತ ಭಿನ್ನವಾಗಿರುವುದು ಫೆಬ್ರವರಿ ತಿಂಗಳು ಈ ತಿಂಗಳಂದು ಬರುವ ಪ್ರೇಮಿಗಳ ಹಬ್ಬಕ್ಕೆ ನಾವು ಋಣಿಯಾಗಿರಬೇಕು.
ಪ್ರೇಮಿಗಳ ಸಡಗರ ಉಲ್ಲಾಸಕ್ಕೆ ನಾಂದಿಯಾಗುವ ಈ ತಿಂಗಳು ಲೆಕ್ಕವಿಲ್ಲದಷ್ಟು ಶುಭಾಶಯ ಪತ್ರಗಳು ಉಡುಗೊರೆಗಳು ಭರಾಟೆಯಲ್ಲಿ ಅಂಗಡಿಗಳಿಗೆ ಮುನ್ನಗ್ಗುತ್ತವೆ. ಪ್ರೇಮಿಗಳ ದಿನ ಇನ್ನೇನು ಬಂದೇ ಬಿಟ್ಟಿತು ಎನ್ನುವಾಗಲೇ ಪ್ರೇಮಿಗಳ ಉತ್ಸಾಹ ಮುಗಿಲು ಮುಟ್ಟುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ವ್ಯಾಲೆಂಟೈನ್ಸ್ ಡೇ ರೋಸ್ ಡೇಯಿಂದ ಪ್ರಾರಂಭ
ಅವರ ಸಂಭ್ರಮಕ್ಕೆ ಕೊನೆ ಎಂಬುದೇ ಇರುವುದಿಲ್ಲ. ತಮ್ಮ ಸಂಗಾತಿಗಳನ್ನು ಜೊತೆಗಾರರನ್ನು ಸಂತೋಷವಾಗಿರಿಸಬೇಕೆಂಬುದು ಪ್ರತಿಯೊಬ್ಬ ಜೋಡಿಯ ಮನದಾಳದ ಬಯಕೆಯಾಗಿರುತ್ತದೆ. ವ್ಯಾಲಂಟೈನ್ ಅಥವಾ ಪ್ರೇಮಿಗಳ ದಿನದ 7 ವಾರವೂ ಆ ಫೆಬ್ರವರಿ ತಿಂಗಳೂ ಕೂಡ ಪ್ರೇಮಿಗಳ ದಿನವೇ ಆಗಿರುತ್ತದೆ. ಈ ದಿನಗಳನ್ನು ಇನ್ನಷ್ಟು ಅಮೋಘಗೊಳಿಸುವುದು ಹೇಗೆಂದು ನೋಡೋಣ ಬನ್ನಿ
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಲವ್ ಇಲ್ಲದವರಾ ನೀವು? ಚಿಂತೆ ಬಿಡಿ...

ಫೆಬ್ರವರಿ 7, ಗುಲಾಬಿ ದಿನ:
ಪ್ರೇಮಿಗಳ ದಿನ ಪ್ರಾರಂಭವಾಗುವುದು ಗುಲಾಬಿಗಳೊಂದಿಗೆ. ಇದೊಂದು ಸರಳ ವಿಧಾನವಾಗಿದೆ. ನಿಮ್ಮ ಮನದ ಕನ್ಯೆಯನ್ನು ಗುಲಾಬಿಗಳ ಬೊಕೆ ನೀಡುವುದರೊಂದಿಗೆ ಸಂತೋಷಪಡಿಸಿ.

ಫೆಬ್ರವರಿ 8, ಪ್ರಪೋಸ್ ದಿನ:
ನಿಮ್ಮ ಬಾಳ ದೋಣಿಯ ಸಂಗಾತಿಯ ಆಯ್ಕೆಯ ದಿನ ಯಶಸ್ಸು ನಿಮ್ಮದಾಗಿರಲಿ.

ಫೆಬ್ರವರಿ 9, ಚಾಕಲೇಟ್ ದಿನ:
ನಿಮ್ಮ ಪ್ರೇಮಕ್ಕೆ ಸಿಹಿ ತುಂಬುವಂತಹ ಚಾಕಲೇಟ್ ದಿನವನ್ನು ನಿಮ್ಮದಾಗಿಸಿಕೊಳ್ಳಿ. ಕೆಲವು ಚಾಕಲೇಟ್‌ನೊಂದಿಗೆ ಈ ದಿನವನ್ನು ಸಂಭ್ರಮದಿಂದ ಕಳೆಯಿರಿ.

ಫೆಬ್ರವರಿ 10 ಟೆಡ್ಡಿ ದಿನ:
ಈ ದಿನ ಮಹಿಳೆಯರಿಗೆ ಹೆಚ್ಚು ಪ್ರಿಯವಾಗಿರುತ್ತದೆ. ನಿಮ್ಮ ಮನದ ಕನ್ಯೆಯನ್ನು ಒಲಿಸಬೇಕೆಂಬುದು ನಿಮ್ಮ ಬಯಕೆಯಾಗಿದ್ದರೆ ಟೆಡ್ಡಿಯನ್ನು ಅವರಿಗೆ ಉಡುಗೊರೆ ನೀಡಿ.

ಫೆಬ್ರವರಿ 11, ಪ್ರಾಮಿಸ್ ದಿನ:
ಈ ದಿನ ಪ್ರತಿಯೋರ್ವ ಪ್ರೇಮಿಗೂ ಬಹಳ ವಿಶೇಷವಾದುದು. ಇಬ್ಬರೂ ತಮ್ಮ ಬಾಂಧವ್ಯವನ್ನು ಉತ್ತಮಗೊಳಿಸುವ ಭಾಷೆಗಳನ್ನು ತೆಗೆದುಕೊಂಡು ಅದರಂತೆ ನಡೆಯಲು ತೀರ್ಮಾನಿಸಿ.

ಫೆಬ್ರವರಿ 12 ಹಗ್ ದಿನ:
ನಿಮ್ಮನ್ನು ಕಂಗೆಡೆಸುವ ಧೃತಿಗೆಡಿಸುವ ಆಲೋಚನೆಗಳಿಂದ ಹೊರಬರಲು ಹಗ್ ಮಾಡುವುದು (ಅಪ್ಪಿಕೊಳ್ಳುವುದು) ಸಹಕಾರಿಯಾಗಿದೆ. ಬಲವಾದ ಹಗ್ ಅನ್ನು ನಿಮ್ಮ ಪ್ರೀತಿ ಪಾತ್ರರೊಂದಿಗೆ ಮಾಡಿಕೊಂಡು ಬಾಂಧವ್ಯವನ್ನು ಮಧುರಗೊಳಿಸಿ.

ಫೆಬ್ರವರಿ 13 ಕಿಸ್ ದಿನ:
ನಿಮ್ಮ ಬಾಂಧವ್ಯವನ್ನು ಸ್ವಲ್ಪ ಮುಂದೆ ತೆಗೆದುಕೊಂಡು ಹೋಗುವ ಸನ್ನಿವೇಶ ಕಿಸ್ ದಿನದ್ದಾಗಿದೆ. ಸರಿಯಾದ ಸಮಯ ಮತ್ತು ಪರಿಸರದಲ್ಲಿ ನಿಮ್ಮ ಕಿಸ್ಸಿಂಗ್ ನಡೆಯಲಿ.

ಫೆಬ್ರವರಿ 14 ಪ್ರೇಮಿಗಳ ದಿನ:
ನಿಮ್ಮ ಪ್ರೇಮವನ್ನು ಬಿಚ್ಚು ಮನಸ್ಸಿನಿಂದ ಆನಂದಿಸಿ ಸಡಗರಪಡಿ. ಜಗವೇ ನಿಮ್ಮದೆಂಬ ಹೆಮ್ಮೆ ನಿಮ್ಮದಾಗಲಿ. ನಿಮ್ಮ ಈ ದಿನವನ್ನು ವಿಶೇಷ ಮತ್ತು ರೊಮ್ಯಾಂಟಿಕ್ ಆಗಿಸಲು ನೋಡಿ.



Click it and Unblock the Notifications
