Latest Updates
-
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ
ಹೊಸ ಹುಡುಗನೊಂದಿಗೆ ಹೀಗೆ ಮಾತುಕತೆ ಆರಂಭಿಸಿ
ಕೆಲವೊಮ್ಮೆ ನಿಮ್ಮೆದುರಿಗೆ ಇರುವ ಅಪರಿಚಿತ ಹುಡುಗ ತುಂಬಾ ಆಕರ್ಷಕ ಹಾಗೂ ಜಾಣನಂತೆ ಕಂಡುಬಂದರೆ ಆತನೊಂದಿಗೆ ಒಮ್ಮೆ ಮಾತನಾಡಬೇಕೆಂದಿನಿಸುತ್ತದೆ. ಆತನೊಂದಿಗೆ ಯಾವ ರೀತಿ ಮತ್ತು ಹೇಗೆ ಮಾತುಕತೆ ಆರಂಭಿಸಬೇಕೆಂದು ನಿಮಗೆ ತಿಳಿಯುವುದಿಲ್ಲ. ನಿಮಗೆ ಆತನೊಂದಿಗೆ ಮಾತುಕತೆ ಆರಂಭಿಸಲು ಸಾಧ್ಯವಾಗದ ಕಾರಣ ಎಷ್ಟೋ ಮಂದಿ ಆಕರ್ಷಕ ಹುಡುಗರನ್ನು ನೀವು ಕಳಕೊಂಡಿರಬಹುದು. ಮೊದಲ ಸಲ ಹುಡುಗಿಯರು ಮಾತನಾಡಿಸಿದರೆ ಹುಡುಗರು ಅದನ್ನು ಮೆಚ್ಚುತ್ತಾರೆ. ನೀವು ಮೆಚ್ಚುವಂತಹ ಹುಡುಗನೊಂದಿಗೆ ಮಾತುಕತೆ ಆರಂಭಿಸುವುದು ತುಂಬಾ ಜಾಣ್ಮೆಯ ನಡೆ. ಇದರಿಂದಾಗಿ ನೀವು ಹುಡುಗನಿಂದ ಗುರುತಿಸಲ್ಪಡಬಹುದು.
ಅಪರಿಚಿತ ಹುಡುಗನೊಂದಿಗೆ ಮಾತುಕತೆ ಆರಂಭಿಸಲು ಕೆಲವೊಂದು ವಿಧಾನಗಳಿವೆ. ನಿಮ್ಮ ಮಾತುಕತೆ ಆರಂಭ ಆಕರ್ಷಕವಾಗಿರದಿದ್ದರೆ ಹುಡುಗ ನಿಮ್ಮ ಹತ್ತಿರಕ್ಕೆ ಬರಲ್ಲ. ಸುಂದರವಾಗಿರುವ ಹುಡುಗಿಯರು ಸ್ವಲ್ಪ ಜಾಣರಾಗಿಬೇಕೆಂದು ಹುಡುಗರು ಇಷ್ಟಪಡುತ್ತಾರೆ. ನೀವು ಹುಡುಗನೊಂದಿಗೆ ಮಾತುಕತೆ ಆರಂಭಿಸಿದರೆ ಆಗ ನೀವು ತುಂಬಾ ಆತ್ಮವಿಶ್ವಾಸ ಮತ್ತು ನಿಸ್ಸಂಕೋಚವಾಗಿ ಇದ್ದೀರಿ ಎಂದರ್ಥ. ನೀವು ಮಾತುಕತೆ ಆರಂಭಿಸುವಾಗ ತುಂಬಾ ಎಚ್ಚರಿಕೆಯಿಂದಿರಬೇಕು. ಮಾತುಕತೆಯ ಆರಂಭವನ್ನು ಕ್ಲಿಷೆಯಾಗಿರಬಾರದು. ಯಾವುದೇ ಹೊಸ ಹುಡುಗನೊಂದಿಗೆ ನೀವು ಮಾತುಕತೆ ಆರಂಭಿಸಲು ಕೆಲವೊಂದು ಒಳ್ಳೆಯ ವಿಧಾನಗಳಿವೆ.
ಅಪರಿಚಿತ ಹುಡುಗನೊಂದಿಗೆ ಹುಡುಗಿಯರು ಮಾತುಕತೆ ಆರಂಭಿಸುವುದು ಹೇಗೆಂದು ಇಲ್ಲಿ ನೀಡಲಾಗಿದೆ. ಈ ಡೇಟಿಂಗ್ ಟಿಪ್ಸ್ ಗಳು ಹುಡುಗನ ಗಮನಸೆಳೆಯಲು ಖಂಡಿತವಾಗಿಯೂ ನೆರವಾಗಲಿದೆ.

1. ತೊಂದರೆಯಲ್ಲಿರುವ ಯುವತಿ
ತೊಂದರೆಯಲ್ಲಿರುವ ಪ್ರತಿಯೊಬ್ಬ ಯುವತಿಗೆ ಹುಡುಗನು ಹೀರೊ ಆಗಿ ಕಾಣಿಸುತ್ತಾನೆ. ಯಾವುದಾದರೂ ಸಣ್ಣ ಕೆಲಸಕ್ಕೆ ನೆರವು ಕೇಳಿ ನೀವು ಹುಡುಗನನ್ನು ಆಕರ್ಷಿಸಬಹುದು. ಈ ಕೆಲಸಗಳಲ್ಲಿ ಕೆಲವು ಬ್ಯಾಗ್ ಗಳನ್ನು ಎತ್ತಿಕೊಳ್ಳಲು ಹೇಳುವುದು, ಯಾವುದೇ ಸ್ಥಳಕ್ಕೆ ದಾರಿ ತೋರಿಸಲು, ಕೈಕೊಟ್ಟ ವಾಹನ ಅಥವಾ ಬೇರೆ ಯಾವುದೇ ಕೆಲಸಗಳಿಗೆ ನೀವು ಕಾರಣ ಹುಡುಕಬಹುದು. ಒಂದು ಮಹತ್ವದ ಡೇಟಿಂಗ್ ಸಲಹೆಯೆಂದರೆ ನೀವು ನೆರವು ಕೇಳಿದಾಗ ಅದು ತುಂಬಾ ಒರಟಾಗಿರಬಾರದು.

2. ಒಂದ ಮಾರ್ಟಿನಿ
ಬಾರ್ ನಲ್ಲಿರುವಾಗ ಹೊಸ ಹುಡುಗಿಯೊಂದಿಗೆ ನೀವು ಮೊದಲ ಸಲ ಮಾತುಕತೆ ಆರಂಭಿಸಲು ನಿರ್ಧರಿಸಿದರೆ ಆಗ ನೀವು ಒಂದು ಮಾರ್ಟಿನಿ ಕಳುಹಿಸಿ. ಒಳ್ಳೆಯ ಪಾನೀಯ ನಿಜವಾಗಿಯೂ ನಿಮಗೆ ನೆರವಾಗಲಿದೆ. ಇದು ಮೊದಲ ಸಲ ಮಾತುಕತೆ ಆರಂಭಿಸಲು ಒಳ್ಳೆಯ ದಾರಿಯಾಗಲಿದೆ. ಇದು ಮಹಿಳೆಯರಿಗೂ ಮಾತುಕತೆ ಆರಂಭಿಸಲು ಒಳ್ಳೆಯ ವಿಧಾನ. ನೀವು ಪಾನೀಯ ಕಳುಹಿಸುವ ಹುಡುಗ ಏಕಾಂಗಿಯಾಗಿದ್ದಾನೆಯಾ ಅಥವಾ ಸ್ನೇಹಿತರೊಂದಿಗೆ ಇದ್ದಾನೆಯಾ ಎಂದು ಮೊದಲು ನೋಡಿಕೊಳ್ಳಿ. ನಿಮ್ಮಿಂದಾಗಿ ಯಾವುದೇ ಜೋಡಿ ಜಗಳ ಮಾಡಬಾರದು.

3. ಮನಬಂದಂತೆ ಪ್ರಾರಂಭಿಸಿ
ಅಪರಿಚಿತ ಹುಡುಗನೊಂದಿಗೆ ನೀವು ಮೊದಲ ಸಲ ಮಾತುಕತೆ ಆರಂಭಿಸುವಾಗ ಸುತ್ತಲಿನ ಜನರು ಅಥವಾ ಪರಿಸ್ಥಿತಿ ಬಗ್ಗೆ ಮನಬಂದಂತೆ ಮಾತನಾಡಿ. ನಿಮ್ಮ ಬಸ್ ನಲ್ಲಿ ಬದಿಯ ಸೀಟ್ ನಲ್ಲಿರುವ ಹುಡುಗನೊಂದಿಗೆ ಟ್ರಾಫಿಕ್ ಬಗ್ಗೆ ಮಾತನಾಡಬಹುದು. ಈ ಮಾತುಕತೆಯ ಆರಂಭವು ತುಂಬಾ ಸ್ವಾಭಾವಿಕ ಹಾಗೂ ಸ್ವಯಂಪ್ರೇರಿತವಾಗಿಸಲಿದೆ. ಮಹಿಳೆಯರಿಗೆ ಮಾತುಕತೆ ಆರಂಭಕ್ಕೆ ಇದು ಒಳ್ಳೆಯ ವಿಧಾನ.

4. ಸಾಮಾನ್ಯ ಆಸಕ್ತಿ
ಮಹಿಳೆಯರಿಗೆ ಮಾತುಕತೆ ಆರಂಭಿಸಲು ಒಳ್ಳೆಯ ಡೇಟಿಂಗ್ ಟಿಪ್ಸ್ ಎಂದರೆ ಸಾಮಾನ್ಯ ಆಸಕ್ತಿಯ ವಿಷಯದ ಬಗ್ಗೆ ಮಾತನಾಡುವುದು. ಆತ ಧರಿಸಿರುವ ಬಟ್ಟೆಯ ಬ್ರಾಂಡ್, ಹಾಕಿರುವ ಪರ್ಫ್ಯೂಮ್ ಅಥವಾ ಆತನ ಬಳಿಯಿರುವ ಪುಸ್ತಕದ ಬಗ್ಗೆ ಮಾತನಾಡಬಹುದು. ನಿಮ್ಮಿಬ್ಬರ ಮಧ್ಯೆ ತುಂಬಾ ಸಾಮಾನ್ಯವಾಗಿರುವ ವಿಷಯವನ್ನು ನೀವು ಗುರುತಿಸಿ. ಇಂತಹ ಯಾವುದೇ ವಿಷಯದಿಂದ ನೀವು ಮಾತುಕತೆ ಆರಂಭಿಸಿ.

5. ಗ್ಯಾಜೆಟ್ ಗಳು
ಇಂದಿನ ದಿನಗಳಲ್ಲಿ ಹೆಚ್ಚಿನ ಹುಡುಗರು ಗ್ಯಾಜೆಟ್ ಗಳ ಮೋಹ ಹೊಂದಿರುತ್ತಾರೆ. ಹೊಸ ಹುಡುಗನೊಂದಿಗೆ ಮಾತುಕತೆ ಆರಂಭಿಸಲು ನೀವು ಗ್ಯಾಜೆಟ್ ವಿಷಯವನ್ನು ಬಳಸಬಹುದು. ನೀವು ಮೂಕರಾಗಬೇಕಾಗಿರುವಂತಹ ಯಾವುದೇ ಪ್ರಶ್ನೆಗಳನ್ನು ಕೇಳಬೇಡಿ. ನಿಮಗೆ ಖಚಿತತೆ ಇರುವ ಗ್ಯಾಜೆಟ್ ಗಳ ಬಗ್ಗೆ ಚರ್ಚಿಸಿ.



Click it and Unblock the Notifications
