Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚೆಲ್ಲಾಟದ ಸಂದೇಶಗಳನ್ನು ಹೀಗೆ ಕಳುಹಿಸಿ!
ಹಿಂದಿನ ಕಾಲದಲ್ಲಿ ಕಾಗದ ಬರೆಯುವಾಗ ಸಿಗುವ ಆನಂದವೇ ಬೇರೆ ಇತ್ತು. ಆದರೆ ಈಗ ಕಾಗದ ಬರೆಯುವಷ್ಟು ಸಮಯ ಯಾರಲ್ಲೂ ಇಲ್ಲ. ಅಂಚೆ ಪೆಟ್ಟಿಗೆಗಳೇ ಮಾಯವಾಗುತ್ತಿದೆ. ಇಂದಿನ ದಿನಗಳಲ್ಲಿ ಏನಿದ್ದರೂ ಅದು ಇಮೇಲ್ ಮತ್ತು ಮೊಬೈಲ್ ಸಂದೇಶ. ಅದರಲ್ಲೂ ಮೊಬೈಲ್ ಸಂದೇಶವೆನ್ನುವುದು ನಮ್ಮ ಜೀವನದ ಒಂದು ಅಂಗವಾಗಿಯೇ ಹೋಗಿದೆ ಎನ್ನುವುದನ್ನು ಕಲ್ಪಿಸಿಕೊಳ್ಳಲು ಕಷ್ಟವಾಗುತ್ತದೆ. ಸಂದೇಶದಲ್ಲಿ ಹಲವಾರು ವಿಷಯಗಳು ನಡೆಯುತ್ತದೆ. ಹಿಂದೆ ಕೇವಲ ಎಸ್ ಎಂಎಸ್ ಸಂದೇಶಗಳು ಮಾತ್ರ ಇದ್ದವು. ಆದರೆ ಇಂದು ಇದು ವಾಯ್ಸ್, ವೀಡಿಯೋ, ಇಮೊಟಿಕಾನ್ ಮತ್ತು ಪದಗಳನ್ನು ಒಳಗೊಂಡಿದೆ. ಇಂದಿನ ದಿನಗಳಲ್ಲಿ ಸಂದೇಶ ಮಾಡುವುದು ತುಂಬಾ ಮೋಜು ಮತ್ತು ಆಸಕ್ತಿಯ ವಿಷಯ. ಹದಿಹರೆಯದವರು ಮಾತ್ರ ಇದನ್ನು ಬಳಸುವುದಲ್ಲ, ವಯಸ್ಕರು ಕೂಡ ಸಂದೇಶ ಕಳುಹಿಸಿ ಇದರ ಮಜಾ ಅನುಭವಿಸುತ್ತಾರೆ.
ವಾಟ್ಸ್ ಆ್ಯಪ್, ಬಿಬಿಎಂ ಮ್ಯಾಸೆಂಜರ್, ವೀಚಾಟ್ ಇತ್ಯಾದಿಗಳು ಜನರಿಗೆ ಭಿನ್ನ ರೀತಿಯಲ್ಲಿ ಸಂಪರ್ಕ ಸಾಧಿಸಲು ಮತ್ತು ಸಂದೇಶ ಕಳುಹಿಸಲು ನೆರವಾಗುತ್ತದೆ. ಇಂತಹ ಆಪ್ ಗಳಿಂದಾಗಿ ದಶಕದ ಮೊದಲು ಊಹಿಸಲು ಸಾಧ್ಯವಿರದ ರೀತಿಯಲ್ಲಿ ಸ್ನೇಹಿತರೊಂದಿಗೆ ಫ್ಲರ್ಟ್ ಮಾಡಬಹುದು. ವ್ಯಕ್ತಿಯೊಂದಿಗೆ ಮಾತನಾಡುವುದು ಮಾತ್ರ ಫ್ಲರ್ಟ್ ಮಾಡುವುದು ಎನ್ನುವ ಜಮಾನ ಈಗ ಹೋಗಿದೆ. ತುಂಬಾ ನಾಚಿಕೆ ಸ್ವಭಾವದ ವ್ಯಕ್ತಿಗಳು ಕೂಡ ಸಂದೇಶಗಳ ಮೂಲಕ ಫ್ಲರ್ಟ್ ಮಾಡಬಹುದು.

ಸಂದೇಶದ ಮೂಲಕ ಫ್ಲರ್ಟ್ ಮಾಡಲು ನಮ್ಮಲ್ಲಿ ಹಲವಾರು ಐಡಿಯಾಗಳಿವೆ. ಕೆಲವೊಂದು ಏಕವಾಕ್ಯ ಸಂದೇಶಗಳು ತುಂಬಾ ಅರ್ಥಗರ್ಭಿತ ಮತ್ತು ಚೆಲ್ಲಾಟದ್ದಾಗಿರುತ್ತದೆ. ಹೆಚ್ಚಿನ ಮನೋರಂಜನೆಗಾಗಿ ಸಂದೇಶಗಳೊಂದಿಗೆ ಕೆಲವೊಂದು ಮೋಜಿನ ಚಿತ್ರಗಳನ್ನು ರವಾನಿಸಬಹುದು. ನಿಮ್ಮದೇ ರೀತಿಯಲ್ಲಿ ಕೆಲವೊಂದು ಕ್ರಿಯಾತ್ಮಕ ಸಂದೇಶಗಳನ್ನು ರಚಿಸಿ ಆ ಮೂಲಕ ನೀವು ಫ್ಲರ್ಟಿಂಗ್ ನಲ್ಲಿ ಇತರರಿಗಿಂತ ಮೇಲುಗೈ ಪಡೆಯಬಹುದು.
ಫರ್ಟ್ ಸಂದೇಶಕ್ಕೆ ಕೆಲವೊಂದು ಐಡಿಯಾಗಳು
ಚೆಲ್ಲಾಟದ ಹಲೋ
ನಿಮ್ಮ ಸಂದೇಶ ಲಯವನ್ನು ಒಂದು ಚೆಲ್ಲಾಟದ ವಿಧದ ಸಂಭಾಷಣೆ ಮೂಲಕ ಆರಂಭಿಸಬಹುದು. ಅತಿಯಾಗಿ ಪ್ರಯತ್ನಿಸಬೇಡಿ ಮತ್ತು ಇದು ಹೆಚ್ಚು ಕಿರಿಕಿರಿ ಮಾಡದಿರಲಿ ಅಥವಾ ಚೆಲ್ಲಾಟದ ಮಿತಿ ದಾಟಿ ಆಕೆ ಸಂಪರ್ಕ ಕಡಿದುಕೊಳ್ಳದಂತಿರಲಿ.
ಆಸಕ್ತಿದಾಯಕ
ಆಕೆಯೊಂದಿಗೆ ಮಾತನಾಡುವಾಗ ನಿಮ್ಮ ಸಂಭಾಷಣೆ ತುಂಬಾ ಆಸಕ್ತಿದಾಯಕವಾಗಿರಲಿ. ಆಕೆ ಸಂಪರ್ಕದಲ್ಲಿರುವಂತೆ ಮಾಡಲು ಫ್ಲರ್ಟಿಂಗ್ ಮತ್ತು ಆಸಕ್ತಿಯ ಸಂದೇಶದ ಮಧ್ಯೆ ಸಮತೋಲನ ಕಾಪಾಡಬೇಕು. ಹೇ, ನಿನ್ನ ದಿನ ಹೇಗಿತ್ತು ಎನ್ನುವುದು ತುಂಬಾ ಆಸಕ್ತಿ ಮೂಡಿಸದು. ದಿನ ಹೇಗೆ ಹೋಯಿತೆಂದು ನಿಮಗೆ ವಿವರಿಸಲು ಆಕೆಗೆ ಆಸಕ್ತಿ ಇರದು.
ಸಣ್ಣ
ನಿಮ್ಮ ವಾಕ್ಯಗಳು ತುಂಬಾ ಸಣ್ಣದಾಗಿರಲಿ. ಹೆಚ್ಚಿನ ಪದಗಳನ್ನು ಓದಲು ಯಾರೂ ಬಯಸುವುದಿಲ್ಲ. ಸಂದೇಶ ತುಂಬಾ ಚೊಕ್ಕದಾಗಿ ಮತ್ತು ಸ್ಪಷ್ಟವಾಗಿರಲಿ. ಕನಿಷ್ಟ ಪದಗಳೊಂದಿಗೆ ಹೆಚ್ಚಿನ ಅರ್ಥ ಬರುವಂತಹ ಸಂದೇಶಗಳು ಚೆಲ್ಲಾಟದ ಒಂದು ವಿಧ. ನೀವು ಕಳುಹಿಸುವ ಪ್ರತಿಯೊಂದು ವಾಕ್ಯದಲ್ಲೂ ಹಾಸ್ಯವಿರಲಿ.
ಪ್ರಶ್ನೆಗಳು
ಆಸಕ್ತಿದಾಯಕ ಪ್ರಶ್ನೆಗಳನ್ನು ಕೇಳಿ. ನಿಮ್ಮ ಪ್ರಶ್ನೆಗಳು ಎಷ್ಟು ಆಸಕ್ತಿದಾಯಕವಾಗಿರುತ್ತದೆ ಎನ್ನುವ ಮೇಲೆ ನಿಮ್ಮಿಬ್ಬರ ಸಂಭಾಷಣೆಯ ಅವಧಿ ನಿರ್ಧರಿತವಾಗುತ್ತದೆ. ನೀನು ಈ ವಾರಾಂತ್ಯದಲ್ಲಿ ನಡೆಯಲಿರುವ ಆ ಪಾರ್ಟಿ ಬಗ್ಗೆ ಕೇಳಿದ್ದೀಯಾ ಅಥವಾ ಹೊಸ ಸಿನೆಮಾ ನೋಡಿದ್ದೀಯಾ ಎನ್ನುವುದು ಆಕೆಯಲ್ಲಿ ಆಸಕ್ತಿ ಮೂಡಿಸಬಹುದು.
ಇಮೊಟಿಕಾನ್ ಗಳು
ಇದನ್ನು ಸಂದೇಶದೊಂದಿಗೆ ಸೇರಿಸುವುದು ಅದ್ಭುತವಾಗಿರುತ್ತದೆ. ಖಾಲಿ ಸಂದೇಶಕ್ಕಿಂತ ಇದರಲ್ಲಿ ಹೆಚ್ಚಿನ ಭಾವನೆಗಳಿರುತ್ತದೆ. ಇಮೊಟಿಕಾನ್ ಗಳು ಸ್ಮೈಲಿ ಕಿಸ್ಸಿಂಗ್, ಕಣ್ಣು ಮಿಟಕಿಸುವುದು, ನಗುವುದು ಇತ್ಯಾದಿ ನಿಮ್ಮ ಸಂದೇಶಕ್ಕೆ ಹೆಚ್ಚಿನ ಮೆರಗು ನೀಡಬಲ್ಲದು. ಕೇವಲ ಇಮೊಟಿಕಾನ್ ಗಳನ್ನು ಕೂಡ ಕೆಲಸ ಮಾಡಬಲ್ಲದು. ನಿಮ್ಮ ಚೆಲ್ಲಾಟದ ಹಾದಿಗೆ ಇದನ್ನು ಸೇರಿಸಿ.
ಅತಿಯಾಗುವುದು ಬೇಡ
ಒಂದರ ಮೇಲೆ ಮತ್ತೊಂದು ಚೆಲ್ಲಾಟವಾಡುವ ಸಂದೇಶಗಳ ಸುರಿಮಳೆಗೈಯುವುದು ಸರಿಯಲ್ಲ. ಚೆಲ್ಲಾಟದ ಸಂದೇಶಗಳೊಂದಿಗೆ ಕೆಲವೊಂದು ಆಸಕ್ತಿದಾಯಕ ವಿಷಯಗಳ ಬಗ್ಗೆ ಕೂಡ ಸಂದೇಶ ಕಳುಹಿಸಿ. ಒಂದು ಮಿತಿ ಇರಲಿ ಮತ್ತು ಆಕೆ ನಿಮ್ಮ ಚೆಲ್ಲಾಟದ ವಾಕ್ಯಗಳಿಗೆ ಉತ್ತರಿಸುತ್ತಿರಲಿ.
ರೇಗಿಸುವುದು
ಹೌದು! ಹುಡುಗಿಯರು ಚೆಲ್ಲಾಟ ಮತ್ತು ಹಾಸ್ಯದ ಮೂಲಕ ರೇಗಿಸುವುದನ್ನು ಇಷ್ಟಪಡುತ್ತಾರೆ. ಇದು ನಿಮಗೆ ಆಕೆಯ ಬಗ್ಗೆ ಆಸಕ್ತಿ ಮತ್ತು ಆಕೆಯ ಬಗ್ಗೆ ಚಿಂತಿಸುತ್ತಿದ್ದೀರಿ ಎಂದು ತೋರಿಸುತ್ತದೆ. ರೇಗಿಸುವುದು ಒಂದು ಮಿತಿಯಲ್ಲಿರಬೇಕು ಮತ್ತು ಇದು ಅತಿಯಾಗಿ ಸಂಪರ್ಕ ಕಡಿಯುವಂತಾಗಬಾರದು.
ಚಿತ್ರ ಮತ್ತು ವೀಡಿಯೋ
ಕೆಲವೊಂದು ಆಸಕ್ತಿದಾಯಕ ಚಿತ್ರಗಳು ಮತ್ತು ಹಾಸ್ಯದ ವೀಡಿಯೋಗಳನ್ನು ನಿಮ್ಮ ಸಂದೇಶಕ್ಕೆ ಸೇರಿಸಿ. ಇದು ಕೆಲವೊಮ್ಮೆ ಅದ್ಭುತವಾಗಿ ಕೆಲಸ ಮಾಡುತ್ತದೆ ಮತ್ತು ಇಬ್ಬರು ಕೂಡ ಇದರ ಬಗ್ಗೆ ಆಸಕ್ತಿಯಿಂದ ಮಾತನಾಡುವಂತಾಗಬಹುದು. ಹಲವಾರು ರೀತಿಯ ವೀಡಿಯೋಗಳು ಹರಿದಾಡುತ್ತಿರುತ್ತದೆ ಮತ್ತು ಸಂದೇಶದ ವೇಳೆ ಇದರಲ್ಲಿ ಒಂದನ್ನು ಕಳುಹಿಸಬಹುದು.
ತುಂಟತನ
ಆಕೆ ನಿಮ್ಮ ಜತೆ ಮಾತನಾಡಲು ಹೆಚ್ಚಿನ ಆಸಕ್ತಿ ತೋರಿಸಲು ಆರಂಭಿಸಿದಾಗ ಸ್ವಲ್ಪ ತುಂಟತನ ಮತ್ತು ನಿಸ್ಸಂಕೋಚವಾಗಿ ಚೆಲ್ಲಾಟವಾಡಿ. ಇದು ಅಶ್ಲೀಲತೆಗೆ ತಿರುಗದಿರಲಿ, ಆದರೆ ನೀನು ಏನು ಧರಿಸಿದ್ದಿ ಅಥವಾ ಏಕಾಂಗಿಯಾಗಿ ಸ್ನಾನ ಮಾಡಲು ತುಂಬಾ ಬೋರ್ ಆಯಿತು ಎನ್ನುವ ಸಂದೇಶ ಒಳ್ಳೆಯದು.



Click it and Unblock the Notifications