Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ರೀಲ್ಸ್ ಕಪಲ್ ನೋಡಿ ನಿಮ್ಮ ಪ್ರೀತಿಯನ್ನು ಹೋಲಿಸುತ್ತಿದ್ದೀರಾ? ಟಾಕ್ಸಿಕ್ ರಿಲೇಷನ್‌ಶಿಪ್‌ನಿಂದ ಹೊರಬರುವುದು ಹೇಗೆ?
ಪ್ರೇಮಿಗಳಿಗೆ ಈ ದಿನ ಸಂಭ್ರವೋ ಸಂಭ್ರಮ, ಶಾಪ್‌ಗಳಲ್ಲಿ, ರೆಸ್ಟೋರೆಂಟ್‌ಗಳಲ್ಲಿ ಹಾರ್ಟ್ ಶೇಪ್ ಬಲೂನ್‌ಗಳಿಂದ ಅಲಂಕರಿಸಲಾಗುವುದು, ಹಾರ್ಟ್ ಶೇಪ್‌ನ ಗ್ರೀಟಿಂಗ್ ಕಾರ್ಡ್‌ಗಳು ರಾರಾಜಿಸುತ್ತಿರುತ್ತವೆ. ಸೋಷಿಯಲ್ ಮೀಡಿಯಾದಲ್ಲಿ ಹಾರ್ಟ್ ಶೇಪ್‌ನ ಸಿಂಬಲ್‌ಗಳು, ಗ್ರೀಟಿಂಗ್ಸ್, ಇಮೋಜಿಗಳನ್ನು ಕಾಣಬಹುದು, ಈ ಪ್ರೀತಿ ಎಂಬುವುದು ಮೆದುಳಿಗೆ ಸಂಬಂಧ ಪಟ್ಟಿದ್ದಾ? ಹೃದಯಕ್ಕೆ ಸಂಬಂಧ ಪಟ್ಟಿದ್ದಾ? ಪ್ರಸಿದ್ಧ ಕೌನ್ಸಿಲರ್ ಪ್ರೀತಿ ಶರೀರದ ಮೇಲೆ ಬೀರುವ ಪ್ರಭಾವದ ಬಗ್ಗೆ ಹೇಳಿದ್ದಾರೆ.
ಈ ಪ್ರೀತಿ ಎಂಬುವುದು ಬರಿ ದೈಹಿಕ ಆಸಕ್ತಿಯಲ್ಲ, ಮನುಷ್ಯನನ್ನು ಸಮಾಜದ ಚೌಕಟ್ಟಿನೊಳಗೆ ತರುವ ವಿಷಯವೂ ಹೌದು, ಪ್ರೀತಿ ಎಂಬ ಬಂಧವಿರದಿದ್ದರೆ ಈ ಸಮಾಜ ಎಂಬುವುದು ಹೀಗೆ ಇರ್ತಾ ಇರಲಿಲ್ಲ, ಈ ಪ್ರೀತಿಗೂ ಮೆದುಳಿಗೂ ಇರುವ ಸಂಬಂಧವೇನು? ಪ್ರೀತಿಗೂ ಹೃದಯಕ್ಕೂ ಇರುವ ಸಂಬಂಧವೇನು? ಇದರ ಬಗ್ಗೆ ಕೌನ್ಸಿಲರ್ ಸುಭಾಷ್ ಹೆಚ್‌ಜಿ, ವಾಸವಿ ಹಾಸ್ಪೆಟಲ್ ತುಂಬಾ ಸುಂದರವಾಗಿ ವಿವರಿಸಿದ್ದಾರೆ ನೋಡಿ:

ಪ್ರೀತಿ ಮನುಷ್ಯರನ್ನು ಸಮಾಜದ ಚೌಕಟ್ಟಿನೊಳಗೆ ತರುತ್ತದೆ
ಪ್ರೀತಿ ಎಂಬುವುದು ಬರಿ ರೊಮ್ಯಾಂಟಿಕ್ ಬಾಂಧವ್ಯ ಮಾತ್ರವಲ್ಲ, ಅದು ಇಬ್ಬರು ವ್ಯಕ್ತಿಯನ್ನು ಸಂಸಾರ ಎಂಬ ಬಾಂಧವ್ಯದ ಒಳಗೆ ತರುತ್ತದೆ. ಅಲೆಮಾರಿಯಾಗಿ ತಿರುಗುತ್ತಿರುವ ವ್ಯಕ್ತಿಗಳನ್ನು ಕುಟುಂಬ ಬದುಕಿನ ಒಳಗೆ ತರುವ ಶಕ್ತಿಯೇ ಪ್ರೀತಿ. ಪ್ರೀತಿ ಇಲ್ಲದಿದ್ದರೆ ಏನಾಗುತ್ತಿತ್ತು ಎಂದು ಹೇಳಲು ಸಾಧ್ಯವಿಲ್ಲ. ಪ್ರೀತಿ ಮೂಡಿದಾಗ ಅವರಿಬ್ಬರು ಜೊತೆಯಾಗಿ ಬಾಳಲು ಬಯಸುತ್ತಾರೆ, ಅವರಿಬ್ಬರ ಕುಟುಂಬವಾಗಿತ್ತದೆ, ಅವರಿಗೆ ಕುಟುಂಬ,ಮಕ್ಕಳು ತುಂಬಾ ಜವಾಬ್ದಾರಿ ಹೆಚ್ಚಾಗುತ್ತದೆ. ಸಾಮಾಜಿಕ ಬಾಂಧವ್ಯ ಗಟ್ಟಿಯಾಗುತ್ತದೆ, ಇದರನ್ನು ಕಮ್ಯೂನಿಟಿ, ನಾಗರಿಕತೆ ಎಂಬುವುದು ಬೆಳೆಯುತ್ತದೆ.
ಪ್ರೀತಿಗೂ ಹೃದಯಕ್ಕೂ-ಮೆದುಳಿಗೂ ಇರುವ ಸಂಬಂಧವೇನು?
ಪ್ರೀತಿ ಶುರುವಾಗ ಆ ಪ್ರೀತಿ ತುಂಬಾ ವಿಶೇಷ ಅನುಭವ ಬರುತ್ತದೆ, ಪ್ರೀತಿಯಲ್ಲಿ ಇರುವವರು ಹೇಳುವುದನ್ನು ಕೇಳಬಹುದು, ಪ್ರೀತಿಯಲ್ಲಿದ್ದಾಗ ನಮ್ಮ ಹೃದಯ ಬಡಿತ ಹೆಚ್ಚಾಗುವುದು, ಮನಸ್ಸಿಗೆ ಏನೋ ಖುಷಿ ಉಂಟಾಗುವುದು. ನಾವು ನಮ್ಮ ಇಷ್ಟದ ವ್ಯಕ್ತಿಯನ್ನು ಭೇಟಿಯಾದಾಗ ಮನಸ್ಸಿಗೆ ತುಂಬಾನೇ ಖುಷಿಯಾಗುತ್ತದೆ, ಆದರೆ ನಮ್ಮ ಮೆದುಳು ನಮಗೆ ಆ ವ್ಯಕ್ತಿ ಏಕೆ ಇಷ್ಟವಾಯ್ತು, ಯಾವ ಕಾರಣಕ್ಕೆ ತುಂಬಾ ಹಚ್ಚಿಕೊಂಡಿದ್ದೇವೆ ಎಂಬುವುದನ್ನು ಆಲೋಚನೆ ಮಾಡಲಾರಂಭಿಸುತ್ತದೆ, ಅಲ್ಲದೆ ನಮ್ಮ ದೇಹದಲ್ಲಿ ಡೊಪೋಮೈನ್ ಎಂಬ ಹಾರ್ಮೋನ್ ಉತ್ಪತ್ತಿ ಮಾಡುತ್ತದೆ, ಅಲ್ಲದೆ ಆ ಸಂಬಂಧದಲ್ಲಿ ಇರುವಂತೆ, ಆ ವ್ಯಕ್ತಿಯನ್ನು ಹೆಚ್ಚು ಪ್ರೀತಿ ಮಾಡುವಂತೆ ಉತ್ತೇಜಿಸುವ ಕಾರ್ಯವನ್ನು ಮೆದುಳು ಮಾಡುತ್ತದೆ. ಅಲ್ಲದೆ ಪ್ರೀತಿಯಲ್ಲಿನ ಅಪ್ಪುಗೆ, ಕಿಸ್ ಇಂಥ ಸ್ಪರ್ಶಗಳು ಕೂಡ ಮನುಷ್ಯನಿಗೆ ಖುಷಿ ನೀಡುತ್ತದೆ ಅಲ್ಲದೆ ಆ ವ್ಯಕ್ತಿ ಮತ್ತೆ ಮತ್ತೆ ಬೇಕು ಎಂದು ಬಯಸುವಂತೆ ಮಾಡುತ್ತದೆ. ಹೀಗಾಗಿ ಪ್ರೀತಿಯ ವ್ಯಕ್ತಿಯನ್ನು ನೋಡಿದಾಗ ಹೃದಯದ ಬಡಿತ ಹೆಚ್ಚಾಗುವುದು. ಮನಸ್ಸಿಗೆ ಖುಷಿಯಾದಾಗ ಮೆದುಳು ಲವ್ ಹಾರ್ಮೋನ್, ಇದು ಖುಷಿಯ ಹಾರ್ಮೋನ್ ಬಿಡುಗಡೆ ಮಾಡುತ್ತದೆ.
ಅದೇ ರೀತ ಸುಭಾಷ್‌ರವರು ಹೇಳುತ್ತಾರೆ ಬ್ರೇಕಪ್ ಆದಾಗ ಕೂಡ ಮನಸ್ಸಿಗೆ ತುಂಬಾ ನೋವುಂಟಾಗುವುದು, ಆವಾಗ ಒತ್ತಡದ ಹಾರ್ಮೋನ್ ಉತ್ಪತ್ತಿ ಮಾಡುತ್ತದೆ, ಇದರಿಂದಾಗಿ ಮನುಷ್ಯ ತುಂಬಾನೇ ದುಃಖ ಅನುಭವಿಸುತ್ತಾರೆ, ಆಸಕ್ತಿ ಕಳೆದುಕೊಳ್ಳುತ್ತಾರೆ, ತುಂಬಾನೇ ಬೇಸರದಿಂದ ಇರುತ್ತಾರೆ.
ಸೋಷಿಯಲ್ ಮೀಡಿಯಾ ಸಂಬಂಧದ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರುತ್ತದೆ
ಮೊದಲು ಈ ರಿತಿ ಇರಲಿಲ್ಲ, ಆದರೆ ಈಗ ಜನ ಸೋಷಿಯಲ್ ಮೀಡಿಯಾ, ಯು ಟ್ಯೂಬ್ ಅಂತ ಬ್ರೌಸ್ ಮಾಡ್ತಾರೆ, ಅಲ್ಲಿ ಕಾಣುವ ಜೋಡಿಗಳನ್ನು ತಮ್ಮ ಬದುಕಿನ ಜೊತೆ ಹೋಲಿಕೆ ಮಾಡಿಕೊಳ್ಳುತ್ತಿದ್ದಾರೆ. ಅವರು ನಿಜ ಜೀವನದಲ್ಲಿ ಹೇಗೆ ಇದ್ದಾರೆ ಎಂಬುವುದು ನಮಗೆ ಗೊತ್ತಿರುವುದಿಲ್ಲ, ಆದರೆ ಅವರು ನೀಡುವ ರೊಮ್ಯಾಂಟಿಕ್ ಗಿಫ್ಟ್ಸ್, ರೊಮ್ಯಾಂಟಿಕ್ ಡ್ಯಾನ್ಸ್ ಇವುಗಳನ್ನು ನೋಡಿ ತಮ್ಮ ಬದುಕು ಹಾಗೆ ಇಲ್ಲ ಎಂದು ಕೊರಗುವವರು ಹೆಚ್ಚಾಗಿದ್ದಾರೆ, ಈ ರೀತಿಯ ಹೋಲಿಕೆಯಿಂದಾಗಿ ತಮ್ಮ ಬದುಕಿನ ಖುಷಿ ಕಳೆದುಕೊಳ್ಳುತ್ತಿದ್ದಾರೆ. ಇದು ತುಂಬಾನೇ ಅಪಾಯಕಾರಿ. ನಿಮ್ಮ ಬದುಕನ್ನು ಇತರರ ಜೊತೆಗೆ ಹೋಲಿಕೆ ಮಾಡಲು ಹೋಗಲೇಬೇಡಿ ಅಂತಾರೆ ಸುಭಾಷ್.
ಟಾಕ್ಸಿಕ್ ರಿಲೇಷನ್‌ಶಿಪ್‌ನಲ್ಲಿರುವವರು ತಮ್ಮ ಶರೀರದ ಮೇಲೆ ಗಮನ ಹರಿಸುವುದಿಲ್ಲ
ಲವ್ ಬ್ರೇಕ್‌ಅಪ್ ಆದರೆ, ವಿಚ್ಛೇದನವಾದರೆ, ಟಾಕ್ಸಿಕ್ ರಿಲೇಷನ್‌ಶಿಪ್‌ನಲ್ಲಿದ್ದರೆ ಜನರು ತಮ್ಮ ಆರೈಕೆ ಕಡೆಗೆ ಗಮನಹರಿಸುವುದು ಕಡಿಮೆ ಮಾಡುತ್ತಾರೆ. ತಮ್ಮ ಆರೈಕೆ, ಆಹಾರ ಸೇವನೆ, ಸ್ಟೈಲ್ ಯಾವುದರ ಕಡೆ ಗಮನಹರಿಸುವುದಿಲ್ಲ. ಸಂಬಂಧದಲ್ಲಿ ಸಮಸ್ಯೆ ಉಂಟಾದಾಗ ಈ ರೀತಿ ಮಾಡದೆ ಅದರಿಂದ ಹೊರಬನ್ನಿ, ನಿಮ್ಮ ಆರೈಕೆ ಕಡೆಗೆ, ನಿಮ್ಮ ಆಸಕ್ತಿ ಕಡೆಗೆ ಹೆಚ್ಚು ಗಮನಹರಿಸಿ ಎಂದು ಕೌನ್ಸಿಲರ್ ಸಲಹೆ ನೀಡಿದ್ದಾರೆ.



Click it and Unblock the Notifications
