Latest Updates
-
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ?
ಮಗಳ ದಿನಾಚರಣೆ: ಮಗಳು ಜನಿಸಿದರೆ ಕುಗ್ಗಬೇಡಿ, ಹೆಮ್ಮೆಯಿಂದ ಹಿಗ್ಗಿ, ಏಕೆ ಗೊತ್ತಾ?
ಪ್ರತಿಯೊಬ್ಬ ಮಹಿಳೆ ಮೊದಲು ಮಗಳಾಗಿರುತ್ತಾಳೆ... ಎಲ್ಲಾ ಹೆಣ್ಮಕ್ಕಳಿಗೆ ಮಗಳ ದಿನದ ಶುಭಾಶಯಗಳು...
ಒಂದು ಹೆಣ್ಣು ಮೊದಲು ನಿರ್ವಹಿಸುವ ಪಾತ್ರವೇ ಮಗಳು. ಕೆಲವರು ತಮಗೆ ಹೆಣ್ಮಕ್ಕಳು ಜನಿಸಿದಾಗ ಲಕ್ಷ್ಮಿಯೇ ಮನೆಗೆ ಬಮದಳು ಎಂದು ರಾಜಕುಮಾರಿಯಂತೆ ಸಾಕುತ್ತಾರೆ. ಆದರೆ ಹೆಣ್ಮು ಮಗು ಜನಿಸಿದಾಗ ಆ ಮಗುವನ್ನು ಕಡೆಗಣಿಸುವವರು ಇನ್ನೂ ನಮ್ಮ ನಡುವೆ ಇದ್ದಾರೆ. ಹೆಣ್ಣು ಯಾವುದಕ್ಕೂ ಕಡಿಮೆಯಿಲ್ಲ, ಮಗಳಾದರೆ ಏನಂತೆ ಮಗನಂತೆ ಸಾಕಿ... ಮಗಳಾಗಿ ಆರೈಕೆ ಮಾಡುತ್ತಾಳೆ, ಮಗನಾಗಿ ನಿಮ್ಮ ರಕ್ಷಣೆ ಮಾಡುತ್ತಾಳೆ.

ಹೆಣ್ಣು ಮಕ್ಕಳ ಅವಶ್ಯಕತೆ ಬಗ್ಗೆ ಜಾಗ್ರತೆ ಮೂಡಿಸಲು ರಾಷ್ಟ್ರೀಯ ಮಗಳ ದಿನವನ್ನು ಆಚರಿಸುತ್ತೇವೆ. ಈಗಾಗಲೇ ನಮ್ಮ ದೇಶದಲ್ಲಿ ಹೆಣ್ಣು-ಗಂಡಿನ ಅನುಪಾತ ತೆಗೆದು ನೋಡಿದರೆ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳ ಜನಸಂಖ್ಯೆ ಕಡಿಮೆಯಾಗಿದೆ. ಭ್ರೂಣದಲ್ಲಿರುವ ಮಗು ಹೆಣ್ಣು ಎಂದು ತಿಳಿದಾಗ ಎಷ್ಟೋ ಜನರು ಆ ಮಗು ಹಣ್ಣು ಬಿಡುವ ಮುನ್ನವೇ ಅದರ ಜೀವ ತೆಗೆದಿದ್ದಾರೆ. ಅದರ ಪರಿಣಾಮ ಇತ್ತೀಚಿನ ವರ್ಷಗಳಲ್ಲಿ ಕಂಡು ಬರುತ್ತಿದೆ. ಬಹುತೇಕ ಪುರುಷರಿಗೆ ಮದುವೆಯಾಗಲು ಹೆಣ್ಮಕ್ಕಳೇ ಸಿಗ್ತಾ ಇಲ್ಲ. ಈಗ ಗರ್ಭದಲ್ಲಿರುವ ಲಿಂಗ ಪತ್ತೆ ಕಾನೂನು ಬಾಹಿರ. ಈ ಕಾರಣಕ್ಕೆ ಎಷ್ಟೋ ಹೆಣ್ಮಕ್ಕಳು ಜನಿಸಿದ ಮೇಲೆ ಹೆಣ್ಣೆಂದು ಕೊಲೆ ಮಾಡುವ ಪಾಪಿಗಳೂ ಇದ್ದಾರೆ.
ಹೆಣ್ಣು ಮಗು ಪೋಷಕರ ಪಾಲಿಗೆ ಎಂಥ ಭಾಗ್ಯಶಾಲಿ ಎಂಬುವುದು ಹೆಣ್ಮಕ್ಕಳಿದ್ದವರಿಗಷ್ಟೇ ಗೊತ್ತಿರುತ್ತದೆ. ಮನೆಯಲ್ಲಿ ಮಗ ನಮ್ಮ ಎಲ್ಲಾ ಜವಾಬ್ದಾರಿ ತೆಗೆದುಕೊಳ್ಳುತ್ತಾನೆ ಎಂದು ಒಂದು ಕಾಲದಲ್ಲಿ ಪೋಷಕರು ಹೇಳುತ್ತಿದ್ದರು, ಆದರೆ ನಮ್ಮ ಮಗಳು ಎಂದಿಗೂ ನಮ್ಮನ್ನು ಬೀದಿಗೆ ಬಿಡಲ್ಲ ಎಂಬ ಭರವಸೆಯನ್ನು ಹೆಣ್ಮಕ್ಕಳು ಮೂಡಿಸುತ್ತಿದ್ದಾರೆ. ಆದ್ದರಿಂದ ಮಗಳ ಜನನವಾದರೆ ಸಂಭ್ರಮಿಸೋಣ.
ಭಾರತದಲ್ಲಿ ಮಗಳ ದಿನಾಚರಣೆಯನ್ನು 2007ರಿಂದ ಆಚರಿಸಲಾಗುವುದು. ಮಗಳು ಎಂಬ ಕಾರಣಕ್ಕೆ ಅವಳನ್ನು ನಿರ್ಲಕ್ಷ್ಯ ಮಾಡಬೇಡಿ ಎಂಬುವುದೇ ಈ ಆಚರಣೆಯ ಉದ್ದೇಶವಾಗಿದೆ. ಇದೀಗ ಕಾಲ ಬದಲಾಗುತ್ತಿರುವುದು ಸಂತೋಷದ ವಿಷಯ...ಹೆಣ್ಣು-ಗಂಡು ಎಂದು ಬೇಧ ಮಾಡುವ ಪೋಷಕರ ಸಂಖ್ಯೆ ಕಡಿಮೆಯಾಗುತ್ತಿದೆ, ಮಗಳಾದರೂ ನಮ್ಮ ಪಾಲಿಗೆ ಅವಳೇ ಮಗ-ಮಗಳು ಎಮದು ಹೇಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ತುಂಬಾನೇ ಅದೃಷ್ಟವಂತರಿಗೆ ಮಾತ್ರ ಮಗಳು ಜನಿಸುತ್ತಾಳೆ ಎಂದು ಹೇಳುತ್ತಾರೆ... ಕಾರಣ ಅವಳಷ್ಟು ತಂದೆ-ತಾಯಿಯ ಮೇಲೆ ಪ್ರಿತಿ ತೋರಿಸಲು ಖಂಡಿತ ಮಗನಿಂದ ಸಾಧ್ಯವಿಲ್ಲ. ಮಗಳು ಜನಿಸಿದರೆ ಕುಗ್ಗಬೇಡಿ, ಹೆಮ್ಮೆಯಿಂದ ಹಿಗ್ಗಿ.. ಅವು ಖಂಡಿತ ನಿಮ್ಮನ್ನು ಕೈ ಬಿಡಲ್ಲ...



Click it and Unblock the Notifications