Latest Updates
-
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ!
ವಿವಾಹೇತರ ಸಂಬಂಧಗಳು ಹೆಚ್ಚಾಗಿರುವ ಟಾಪ್ ದೇಶಗಳಿವು!
ಹಲವರು ಈ ಜಗತ್ತು ನಿಂತಿರೋದೇ ಪ್ರೀತಿ ಮೇಲೆ ಎನ್ನುತ್ತಾರೆ. ಪ್ರೀತಿ ಇಡೀ ವಿಶ್ವದ ಯಾವುದೇ ಮೂಲೆಗೆ ಹೋದರು ಮಾನವ ನಡುವೆ ನೋಡಲು ಸಿಗುವ ಸಂಬಂಧಗಳಲ್ಲಿ ಒಂದು. ಹಾಗೆ ಈ ಸಂಬಂಧವೂ ಎಂತಹ ಸೇಡನ್ನು ಕೂಡ ಕರಗಿಸುತ್ತದೆ ಎಂದು ಕೂಡ ಹೇಳಲಾಗುತ್ತೆ. ಇನ್ನು ವಿವಾಹ ಕೂಡ ಸ್ವರ್ಗದಲ್ಲಿ ನಿಶ್ಚಯ ಆಗುತ್ತದೆ ಎಂದು ಹಿರಿಯರು ಹೇಳುವುದು ನೀವು ಕೂಡ ಕೇಳಿರಬಹುದು. ಅಂದರೆ ಅದೊಂದು ಪವಿತ್ರ ಬಂಧನ ಎಂಬುದು ಅವರ ವಾದವಾಗಿದೆ.
ಆದ್ರೆ ಇತ್ತೀಚಿನ ದಿನಗಳಲ್ಲಿ ಸಂಬಂಧಗಳಲ್ಲಿ ಗಟ್ಟಿತನ ಎಂಬುದಿಲ್ಲ. ಮದುವೆ ಮುನ್ನ ಬೆಳೆಸುವ ಸಂಬಂಧಗಳು ಮದುವೆ ವರೆಗೂ ಮುಂದುವರೆಯುವುದಿಲ್ಲ. ಹಾಗೆ ಮದುವೆಯಾದ ಜೋಡಿ ಅನ್ಯೋನ್ಯವಾಗಿ ಜೀವನ ನಡೆಸುವುದಿಲ್ಲ. ಹಾಗೆ ಮದುವೆಯ ನಡುವೆಯು ಅಕ್ರಮ ಸಂಬಂಧಗಳು, ಮೋಸ, ವಂಚನೆ ಎಸಗುವ ಹತ್ತು ಹಲವು ಪ್ರಕರಣಗಳನ್ನು ನಾವು ನೋಡುತ್ತಿರುತ್ತೇವೆ.

ಹಾಗೆ ಈ ವಿವಾಹೇತರ ಸಂಬಂಧಗಳು ಯಾವ ದೇಶದಲ್ಲಿ ಹೆಚ್ಚಾಗಿವೆ? ಯಾವ ದೇಶದಲ್ಲಿ ದಾಂಪತ್ಯದಲ್ಲಿ ಮೋಸ ಎಂಬುದನ್ನು ಹೆಚ್ಚಾಗಿ ನೋಡಬಹುದು ಎಂಬುದನ್ನು "ದಿ ರಿಚೆಸ್ಟ್" ವೆಬ್‌ಸೈಟ್ ಡೇಟಿಂಗ್ ಸೈಟ್‌ಗಳ ದತ್ತಾಂಶಗಳ ವಿಶ್ಲೇಷಣೆ ಮಾಡುವ ಮೂಲಕ ವಿವರಿಸಲಾಗಿದೆ. ಹಾಗಾದ್ರೆ ಯಾವ ದೇಶದಲ್ಲಿ ಈ ಪ್ರಕರಣಗಳ ಪ್ರಮಾಣ ಎಷ್ಟಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಥೈಲ್ಯಾಂಡ್
ವಿವಾಹೇತರ ಸಂಬಂಧದಂತಹ ಪ್ರಕರಣಗಳಲ್ಲಿ ಥೈಲ್ಯಾಂಡ್ ದೇಶ ಮೊದಲ ಸ್ಥಾನದಲ್ಲಿದೆ. ಅಲ್ಲಿ ನೆಲೆಸಿರುವ ಜನಸಂಖ್ಯೆಯ ಅರ್ಧದಷ್ಟು ದಂಪತಿಯ ಜೀವನದಲ್ಲಿ ಈ ಅಕ್ರಮ ಸಂಬಂಧದಂತಹ ಪ್ರಕರಣಗಳು ವರದಿಯಾಗುತ್ತದೆ. ಅಂದರೆ ಸುಮಾರು ಶೇ.56ರಷ್ಟು ಮಂದಿ ತಾವು ದಾಂಪತ್ಯದಲ್ಲಿ ದ್ರೋಹ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅದರಲ್ಲೂ ಅಲ್ಲಿನ ಯುವ ಪೀಳಿಗೆಯಲ್ಲೂ ಈ ಸಂಸ್ಕೃತಿ ಬೆಳೆದು ಬಂದಿದೆ ಎಂದು ತಿಳಿದುಬಂದಿದೆ.
ಡೆನ್ಮಾರ್ಕ್
ಈ ಪಟ್ಟಿಯಲ್ಲಿ ಡೆನ್ಮಾರ್ಕ್ ದೇಶವು ಎರಡನೇ ಸ್ಥಾನದಲ್ಲಿದ್ದು, ಅಲ್ಲಿ ಸುಮಾರು ಶೇ. 46ರಷ್ಟು ಇಂತಹ ಪ್ರಕರಣಗಳು ವರದಿಯಾಗುತ್ತವೆ. ಇಲ್ಲಿ ವಾಸಿಸುವ ಮೂವರಲ್ಲಿ ಒಬ್ಬರು ತಮ್ಮ ಸಂಗಾತಿಗೆ ಮೋಸ ಮಾಡುತ್ತಾರೆ ಎಂದು ತಿಳಿದುಬಂದಿದೆ.
ಇಟಲಿ
ಇಟಲಿಯಲ್ಲಿಯೂ ವಿವಾಹೇತರ ಸಂಬಂಧಗಳ ಸಂಖ್ಯೆ ಏರುಗತಿಯಲ್ಲಿದೆ. ಶೇ.45ರಷ್ಟು ದಂಪತಿ ವಿವಾಹೇತರ ಸಂಬಂಧಗಳಲ್ಲಿ ತೊಡಗಿದ್ದಾರೆ. ಇದು ಇಟಲಿಯನ್ನು ಮೂರನೇ ಸ್ಥಾನದಲ್ಲಿರಿಸಿದೆ.
ಫ್ರಾನ್ಸ್
ಫ್ರಾನ್ಸ್ ಎಂದರೆ ಅಲ್ಲಿ ಪ್ರೀತಿ, ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ ಎಂಬ ಭಾವನೆ ಇದೆ. ಆದ್ರೆ ಅಲ್ಲಿ ಶೇ 43ರಷ್ಟು ಮಂದಿ ವಿವಾಹೇತರ ಸಂಬಂಧ ಹೊಂದಿರುತ್ತಾರಂತೆ. ಹಾಗೆ ಅಲ್ಲಿ ವಿವಾಹೇತರ ಸಂಬಂಧ ಹೊಂದಿರುವುದು ತಪ್ಪು ಎಂಬ ಕಲ್ಪನೆ ಕೂಡ ಇಲ್ಲವಂತೆ ಹೀಗಾಗಿ ಈ ಪ್ರಮಾಣ ಹೆಚ್ಚಾಗಿದೆ.
ನಾರ್ವೆ
ಹಲವು ಸೂಚ್ಯಂಕಗಳಲ್ಲಿ ಪಟ್ಟಿಯ ಮೇಲೆ ಸ್ಥಾನ ಪಡೆಯುವ ನಾರ್ವೆ ಈ ವಿವಾಹೇತರ ಸಂಬಂಧದ ಪಟ್ಟಿಯಲ್ಲೂ ಸ್ಥಾನ ಪಡೆದಿದೆ. ಅಲ್ಲಿ ಶೇ.41ರಷ್ಟು ಮಂದಿ ವಿವಾಹೇತರ ಸಂಬಂಧದಲ್ಲಿ ತೊಡಗಿರುತ್ತಾರೆ ಎಂದು ತಿಳಿದುಬಂದಿದೆ.
ಬೆಲ್ಜಿಯಂ
ಬೆಲ್ಜಿಯಂನಲ್ಲಿ ವಿವಾಹೇತರ ಸಂಬಂಧಗಳು ನಿಷಿದ್ಧವಲ್ಲ ಎಂದು ಅಧ್ಯಯನಗಳು ತೋರಿಸುತ್ತವೆ. ಸುಮಾರು ಶೇ. 40 ರಷ್ಟು ವಿವಾಹಿತ ದಂಪತಿ ಒಂದಕ್ಕಿಂತ ಹೆಚ್ಚು ಸಂಗಾತಿಗಳೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾರೆ ಎದು ಕೂಡ ತಿಳಿದುಬರುತ್ತದೆ.
ಸ್ಪೇನ್
ದಕ್ಷಿಣ ಯುರೋಪಿಯನ್ ದೇಶವು ಯುವ ಪೀಳಿಗೆಯಿಂದ ತುಂಬಿದೆ ಹಾಗೆ ಇಲ್ಲಿ ಶೇ. 39ರಷ್ಟು ಮಂದಿ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಈ ದೇಶ ಈ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.
ಫಿನ್‌ಲ್ಯಾಂಡ್
ಫಿನ್‌ಲ್ಯಾಂಡ್ ನೈಸರ್ಗಿಕ ಸಂಪತ್ತನ್ನು ತನ್ನಲ್ಲಿಟ್ಟುಕೊಂಡಿರುವ ದೇಶವಾಗಿದೆ. ಇಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿಯೇ ಇರಲಿದೆ. ಆದರೆ ಅಲ್ಲಿನ ದಾಂಪತ್ಯ ಸಂಬಂಧಗಳಲ್ಲಿ ಅನೈತಿಕ ಸಂಬಂಧಗಳು ಹೆಚ್ಚಾಗುತ್ತಲೇ ಇವೆ. ಅಲ್ಲಿ ಶೇ.36ರಷ್ಟು ದಂಪತಿಯಲ್ಲಿ ವಿವಾಹೇತರ ಸಂಬಂಧ ನೋಡಬಹುದಂತೆ. ಐದು ವಿವಾಹಿತ ಪುರುಷರಲ್ಲಿ ಒಬ್ಬರು ಕನಿಷ್ಠ 10 ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದಾರೆಂದು ಕಂಡುಹಿಡಿದಿದೆ.



Click it and Unblock the Notifications
