Latest Updates
-
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು
ನಿಮ್ಮ ಸಂಗಾತಿ ಹೀಗೆ ಕೇಳ್ತಾ ಇದ್ದರೆ ಅವರಿಗೆ ಬೇರೆ ಸಂಬಧವಿದೆ ಎಂದರ್ಥ
ಕಳ್ಳನ ಮನಸ್ಸು ಹುಳ್ಳ-ಹುಳ್ಳಗೆ ಅಂತಾರಲ್ಲ... ಹಾಗೆ ಸಂಗಾತಿ ಅನೈತಿಕ ಸಂಬಂಧದಲ್ಲಿದ್ದರೆ ಅವರು ಅವರ ತಪ್ಪನ್ನು ಮುಚ್ಚಿ ಹಾಕಲು ನಿಮ್ಮನ್ನು ದೂಷಿಸಬಹುದು. ನಿಮ್ಮ ನಿಮ್ಮ ಸಂಶಯ ಪಡುವಂಥ ಯಾವುದೇ ಕಾರ್ಯ ನೀವು ಮಾಡದಿದ್ದರೂ ನಿಮ್ಮನ್ನು ಸಂಶಯಿಸುವುದು ಅಥವಾ ನಿಮ್ಮ ದಿನಚರಿಯ ಮೇಲೆ ಹೆಚ್ಚಿನ ನಿಗಾ ಇಡ್ತಾ ಇದ್ದಾರೆ ಎಂದಾದರೆ ಇದರಿಂದ ನೀವು ವಿಚಲಿತರಾಗಬೇಡಿ, ಇಲ್ಲಿ ನಿಮ್ಮ ತಪ್ಪು ಏನೂ ಇರಲ್ಲ, ಅವರು ಅವರು ಮಾಡುತ್ತಿರುವ ತಪ್ಪು ನಿಮಗೆ ತಿಳಿಯದಿರಲು ಈ ರೀತಿ ವರ್ತಿಸುತ್ತಾರೆ.
ಅಷ್ಟು ಮಾತ್ರವಲ್ಲ ಸಂಗಾತಿಗೆ ಮೋಸ ಮಾಡುವವರು ಕೆಲವೊಂದು ಪ್ರಶ್ನೆಗಳನ್ನು ಕೇಳುತ್ತಾರೆ, ನಿಮ್ಮ ಸಂಗಾತಿ ಆ ರೀತಿ ಕೇಳುತ್ತಿದ್ದರೆ ನಿಮ್ಮ ಸಂಬಂಧದಲ್ಲಿ ಮೂರನೇಯ ವ್ಯಕ್ತಿಯ ಪ್ರವೇಶಿಸವಾಗಿದೆ ಎಂದು ಊಹಿಸಬಹುದು.
ಸಂಗಾತಿ ನಿಮ್ಮಲ್ಲಿ ಈ ರೀತಿಯ ಪ್ರಶ್ನೆಗಳನ್ನು ಪದೇ ಪದೇ ಕೇಳುತ್ತಿದ್ದಾರೆ ಅವರು ಹಾದಿ ತಪ್ಪಿದ್ದಾರೆ ಎಂದು ಸೂಚಿಸುವ ಲಕ್ಷಣವಾಗಿದೆ:

1. ಏಕೆ ವಿಚಿತ್ರವಾಗಿ ಆಡ್ತಾ ಇದ್ದೀಯಾ?
ನಮ್ಮ ವರ್ತನೆಯಲ್ಲಿ ಯಾವುದೇ ಬದಲಾವಣೆಯಾಗಿರಲ್ಲ, ನಾವು ಇದ್ದಂಗೆ ಇರ್ತೀವಿ, ಆದರೆ ಸಂಗಾತಿ ಮಾತ್ರ ನಮ್ಮ ವರ್ತನೆಯಲ್ಲಿ ತಪ್ಪು ಕಂಡು ಹಿಡಿಯುತ್ತಿದ್ದರೆ ಏಕೋ ಅವರಿಗೆ ನಿಮ್ಮ ಸಾಂಗತ್ಯ ಕಿರಿಕಿರಿಯಾಗುತ್ತಿರುತ್ತದೆ. ಆಗ ನೀವು ಏನು ಕೇಳಿದರೂ ಮಾಡಿದರೂ ತಪ್ಪಾಗಿ ಕಾಣಲಾರಂಭಿಸುತ್ತದೆ ಅಲ್ಲದೆ ನಿಮ್ಮನ್ನೇ ವಿಚಿತ್ರವಾಗಿ ಆಡ್ತಾ ಇದ್ದೀಯ ಎಂದು ಹೇಳಿ ಗೊಂದಲಗೊಳಿಸುತ್ತಾರೆ.
ನಿಜ ಹೇಳಬೇಕೆಂದರೆ ಅವರು ನಿಮ್ಮ ಜೊತೆ ಸರಿ ಮಾತನಾಡುತ್ತಿರಲ್ಲ ಅಥವಾ ನಿಮಗೆ ಅವರ ವರ್ತನೆ ವಿಚಿತ್ರ ಅನಿಸುತ್ತಿರುತ್ತದೆ, ಕೇಳಿದರೆ ನಾವೇ ಏನೋ ವಿಚಿತ್ರವಾಗಿ ವರ್ತಿಸುತ್ತಿದ್ದೇವೆ ಎಂಬಂತೆ ಹೇಳುತ್ತಾರೆ.

2. ಎಷ್ಟು ಗಂಟೆಗೆ ಹೋಗ್ತೀಯಾ/ ಬರ್ತಿಯಾ?
ಸಂಗಾತಿ ಹೊರಗಡೆ ಹೋಗುವಾಗ ಎಷ್ಟು ಗಂಟೆಗೆ ಹೋಗ್ತಾರೆ ಅಥವಾ ಬರ್ತಾರೆ ಎಂದು ಪ್ರತಿಯೊಬ್ಬರು ಕೇಳುತ್ತಾರೆ, ಅದರ ಬಗ್ಗೆ ಸಂಗಾತಿಗೆ ಮಾಹಿತಿ ಇರಬೇಕು ಕೂಡ. ಆಫೀಸ್‌ಗೆ ಹೋಗುವುದಾದರೆ ಎಷ್ಟು ಸಮಯಕ್ಕೆ ಬರ್ತೀರಾ ಎಂದು ಕೇಳುವುದು ಸಹಜ. ಆದರೆ ನೀವು ಮನೆಗೆ ಬರುವ ಅಥವಾ ಹೋಗುವ ಸಮಯದ ಬಗ್ಗೆ ತಿಳಿಯಲು ತುಂಬಾ ಉತ್ಸಾಹ ತೋರಿಸುತ್ತಿದ್ದಾರೆ, ನೀವು ಮನೆಯಲ್ಲಿರುವುದು ಇಷ್ಟವಾಗಲ್ಲ ಅದೇ ಹೊರಗಡೆ ಹೋಗ್ತೀನಿ ಎಂದರೆ ಅವರ ಮುಖದಲ್ಲ ಖುಷಿ ಕಂಡರೆ ಆ ಖುಷಿ ಒಳ್ಳೆಯ ಲಕ್ಷಣವಲ್ಲ.

ಬೇರೆಯವರು ಆಕರ್ಷಕವಾಗಿದ್ದೀರಾ ಅಂತ ಕೇಳುವುದು?
ಅವರಿಗೆ ತಾವು ತಪ್ಪು ಮಾಡುತ್ತಿರುವಾಗ ಅದೇ ತಪ್ಪು ಸಂಗಾತಿ ಕೂಡ ಮಾಡಿದರೆ ಎಂಬ ಭಯ ಇರುತ್ತೆ. ಹಾಗಾಗಿ ನಿಮ್ಮ ಆಫೀಸ್‌ನ ಸಹೋದ್ಯೋಗಿ, ಬಾಸ್ , ಪಕ್ಕದ ಮನೆಯವರು, ಸ್ನೇಹಿತ ಹೀಗೆ ಯಾರಾನ್ನಾದರೂ ನಿಮ್ಮ ಜೊತೆ ಕಲ್ಪಿಸಿ ಮಾತನಾಡುವ ಕೆಟ್ಟ ಚಾಳಿ ಬೆಳೆಸಿಕೊಳ್ಳುತ್ತಾರೆ.

ನನಗೆ ಮೋಸ ಮಾಡ್ತಾ ಇದ್ದೀಯಾ? ಎಂದು ಹೇಳುವುದು
ಅವರಿಗೆ ಅವರು ನಿಮಗೆ ಮೋಸ ಮಾಡ್ತಾ ಇದ್ದಾರೆ ಎಂಬುವುದು ಗೊತ್ತಿರುತ್ತದೆ, ಆದರೆ ನೀನು ನನಗೆ ಮೋಸ ಮಾಡ್ತಾ ಇದ್ದೀಯ ಎಂದು ಆಗಾಗ ಹೇಳ್ತಾ ಇರ್ತಾರೆ. ನಮ್ಮನ್ನು ಸದಾ ಸಂಶಯದ ಕಣ್ಣುಗಳಿಂದ ನೋಡ್ತಾ ಇರುತ್ತಾರೆ.
ನನ್ನನ್ನು ಏಕೆ ಕೇಳ್ತೀಯಾ?
ನಿಮಗೆ ಅವರ ಇತ್ತೀಚಿನ ವರ್ತನೆ ನೋಡಿ ಸಂಶಯ ಬಂದು ಏನು ಕೇಳಲು ಹೋದರೂ ನನ್ನನ್ನು ಏಕೆ ಕೇಳ್ತೀಯಾ ಎಂದು ಕಿರುಚಾಡುತ್ತಾರೆ. ಏಕೆಂದರೆ ಅವರಿಗೆ ನಾವು ಯೋಚಿಸುತ್ತಿರುವುದು ತಪ್ಪು ಎಂದು ಸಾಬೀತು ಮಾಡಬೇಕಾಗುತ್ತದೆ ಹಾಗಾಗಿ ನಾನೇನು ಮಾಡಿಲ್ಲ ನನ್ನನ್ನು ಏಕೆ ಕೇಳ್ತೀಯಾ ಎಂದು ಪ್ರಶ್ನಿಸಿ ಕೇಳಬೇಕಾಗಿರುವ ವಿಷಯವನ್ನು ತಡೆಯುತ್ತಾರೆ.
ಈ ರೀತಿಯ ಪ್ರಶ್ನೆಯನ್ನು ಎಲ್ಲರೂ ಕೇಳುತ್ತಾರೆ, ಆದರೆ ಪದೇ-ಪದೇ ಕೇಳುತ್ತಿದ್ದರೆ ನೀವು ಯೋಚಿಸಬೇಕಾಗಿದೆ, ನಿಮ್ಮ ಸಂಬಂಧ ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನ ಮಾಡಬೇಕಾಗುತ್ತದೆ.



Click it and Unblock the Notifications
