Latest Updates
-
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ!
ಪತ್ನಿಯಿಂದ ಹಾರ್ದಿಕ್ ಪಾಂಡ್ಯ ವಿಚ್ಛೇದನ: ಎಷ್ಟಿದೆ ಪಾಂಡ್ಯ ಆಸ್ತಿ ? ಜೀವನಾಂಶ ಎಷ್ಟು ನೀಡಬೇಕು ಗೊತ್ತಾ?
ಭಾರತ ಕ್ರಿಕೆಟ್ ತಂಡ ಆಟಗಾರ ಹಾರ್ದಿಕ್ ಪಾಂಡ್ಯ ದಾಂಪತ್ಯದಲ್ಲಿ ಕೆಲ ತಿಂಗಳ ಹಿಂದೆಯೇ ಬಿರುಕು ಮೂಡಿದ್ದ ಕುರಿತು ಸುದ್ದಿಯಾಗಿತ್ತು. ಪತ್ನಿ ಪತಿ ಇಬ್ಬರೂ ಬೇರೆ ಬೇರೆಯಾಗಿ ಕಾಣಿಸಿಕೊಂಡು ತಮ್ಮ ಹೊಸ ಗರ್ಲ್‌ಫ್ರೆಂಡ್ ಜೊತೆ ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡಿದ್ದರು. ಈ ವೇಳೆ ಇಬ್ಬರು ವಿಚ್ಛೇದನ ಪಡೆಯಲಿದ್ದಾರೆ ಎಂದು ವರದಿಯಾಗಿತ್ತು.
ಆದರೆ ಈವರೆಗೆ ಹಾರ್ದಿಕ್ ಪಾಂಡ್ಯ ಹಾಗೂ ಪತ್ನಿ ನತಾಶ ಈ ಕುರಿತು ಅಧಿಕೃತವಾಗಿ ಘೋಷಣೆ ಮಾಡಿರಲಿಲ್ಲ ಆದರೆ ಈಗ ನಾನು ಮತ್ತು ನತಾಶ ಬೇರೆ ಬೇರೆ ಯಾಗುತ್ತಿದ್ದೇವೆ ಎಂದು ಹಾರ್ದಿಕ್ ಪಾಂಡ್ಯ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಖಚಿತಪಡಿಸಿದ್ದಾರೆ.

ಹಾರ್ದಿಕ್ ಪಾಂಡ್ಯ ಮತ್ತು ನತಾಸಾ ಸ್ಟಾಂಕೋವಿಕ್ ವಿಚ್ಛೇದನದ ಬಗ್ಗೆ ಅನೇಕ ತಿಂಗಳುಗಳಿಂದ ಸುದ್ದಿ ಹರಿದಾಡುತ್ತಿತ್ತು. ಈಗ ದಂಪತಿಗಳು ತಮ್ಮ ನಿರ್ಧಾರವನ್ನು ಪ್ರಕಟಿಸಲು ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಬಳಸಿಕೊಂಡಿದ್ದಾರೆ. 4 ವರ್ಷದ ಬಳಿಕ ಇಬ್ಬರು ಬೇರೆ ಬೇರೆಯಾಗಲು ನಿರ್ಧರಿಸಿದ್ದಾರೆ. 4 ವರ್ಷಗಳ ಒಟ್ಟಿಗೆ ಇದ್ದ ನಂತರ, ನತಾಶಾ ಮತ್ತು ನಾನು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ ಮತ್ತು ನಮ್ಮೆಲ್ಲವನ್ನೂ ನೀಡಿದ್ದೇವೆ ಮತ್ತು ಇದು ಎಂದು ನಾವು ನಂಬುತ್ತೇವೆ. ನಮ್ಮಿಬ್ಬರ ಹಿತದೃಷ್ಟಿಯಿಂದ, ನಾವು ಒಟ್ಟಿಗೆ ಅನುಭವಿಸಿದ ಸಂತೋಷ, ಪರಸ್ಪರ ಗೌರವ ಮತ್ತು ಒಡನಾಟ ಮತ್ತು ನಾವು ಕುಟುಂಬವಾಗಿ ಬೆಳೆದಾಗ ಇದು ನಮಗೆ ಕಠಿಣ ನಿರ್ಧಾರವಾಗಿತ್ತು.
ಪುತ್ರ ಅಗಸ್ತ್ಯನಿಂದ ಆಶೀರ್ವದಿಸಲ್ಪಿಟ್ಟಿದ್ದೇವೆ, ಆತ ನಮ್ಮಿಬ್ಬರ ಜೀವನದ ಮುಂದುವರಿಯುತ್ತಾನೆ ಮತ್ತು ಅವನಿಗೆ ಸಾಧ್ಯವಿರುವ ಎಲ್ಲವನ್ನೂ ನಾವು ನೀಡುವುದನ್ನು ಖಚಿತಪಡಿಸಿಕೊಳ್ಳಲು ನಾವು ಮುಂದೆಯೂ ಪೋಷಕರಾಗಿರುತ್ತೇವೆ. ಈ ಸಮಯದಲ್ಲಿ ನಿಮ್ಮ ಬೆಂಬಲ ನೀಡಲು ನಾವು ಪ್ರಾಮಾಣಿಕವಾಗಿ ವಿನಂತಿಸುತ್ತೇವೆ ಎಂದು ಪೋಸ್ಟ್‌ನಲ್ಲಿ ಅವರು ಹಂಚಿಕೊಂಡಿದ್ದಾರೆ.
ಹಾರ್ದಿಕ್ ಪಾಂಡ್ಯ ಆಸ್ತಿ ಎಷ್ಟು..?
2024 ರಲ್ಲಿ ಹಾರ್ದಿಕ್ ಪಾಂಡ್ಯ ಅವರ ಒಟ್ಟು ಆಸ್ತಿ ಸುಮಾರು 91 ಕೋಟಿ (ಅಂದಾಜು $11 ಮಿಲಿಯನ್) ಎಂದು ಅಂದಾಜಿಸಲಾಗಿದೆ. ಕಳೆದ ವರ್ಷಕ್ಕಿಂತ 1.2 ಕೋಟಿಯ ಗಣನೀಯ ಏರಿಕೆಯೂ ಕಂಡುಬಂದಿದೆ.
ಗ್ರೇಡ್ A ವರ್ಗದ ಅಡಿಯಲ್ಲಿ ಬರುವ ಹಾರ್ದಿಕ ಪಾಂಡ್ಯ ವಾರ್ಷಿಕವಾಗಿ ಬಿಸಿಸಿಐನಿಂದ ಸುಮಾರು 5 ಕೋಟಿ ರೂಪಾಯಿ ವೇತನ ಪಡೆಯುತ್ತಾರೆ. ಇನ್ನು ಇತ್ತೀಚಿಗೆ ಟಿ-20 ವಿಶ್ವಕಪ್ ಗೆಲುವಿನ ಬಳಿಕ ಬಿಸಿಸಿಐ 125 ಕೋಟಿ ರೂಪಾಯಿ ನೀಡುವುದಾಗಿ ಹೇಳಿದ್ದು ಈ ಮೂಲಕ ಪಾಂಡ್ಯ ಅವರ ಆಸ್ತಿಯಲ್ಲಿ ಗಣನೀಯ ಏರಿಕೆ ಕಂಡುಬರಲಿದೆ.
ಹಾರ್ದಿಕ್ ವಡೋದರಾದಲ್ಲಿ ತಮ್ಮ ಸಹೋದರ ಕೃನಾಲ್ ಪಾಂಡ್ಯ ಅವರೊಂದಿಗೆ 6000 ಚದರ ಅಡಿಯ ಅದ್ದೂರಿ ಪೆಂಟ್‌ಹೌಸ್‌ನಲ್ಲಿ ವಾಸಿಸುತ್ತಿದ್ದಾರೆ. ಈ ನಾಲ್ಕು ಬೆಡ್‌ರೂಮ್‌ಗಳ ಪೆಂಟ್‌ಹೌಸ್, ಐಷಾರಾಮಿ ದೀಪಾವಳಿಪುರ ಪ್ರದೇಶದಲ್ಲಿದ್ದು, ಅಂದಾಜು 3.6 ಕೋಟಿ ಮೌಲ್ಯದ್ದಾಗಿದೆ. ಹೆಚ್ಚುವರಿಯಾಗಿ, ಪಾಂಡ್ಯ ಸಹೋದರರು ಮುಂಬೈನ ಬಾಂದ್ರಾ ಖಾರ್ ಪ್ರದೇಶದಲ್ಲಿ ಐಷಾರಾಮಿ 30 ಕೋಟಿಯ ನಿವಾಸವನ್ನು ಹೊಂದಿದ್ದಾರೆ.
ಇಷ್ಟೇ ಅಲ್ಲ ಅವರ ಬರಿ ದುಬಾರಿ ಕಾರಿನ ಕಲೆಕ್ಷನ್ ಇದೆ. ಆಡಿ A6 55.96 ಕೋಟಿ ರೂ. 4 ಕೋಟಿ ಮೌಲ್ಯದ ಲಂಬೋರ್ಘಿನಿ ಹುರಾಕನ್, 2.11 ಕೋಟಿ
ಬೆಲೆಯ ರೇಂಜ್ ರೋವರ್ ವೋಗ್, 17.02 ಲಕ್ಷ ರೂಪಾಯಿಯ ಜೀಪ್ ಕಂಪಾಸ್, ರೋಲ್ಸ್ ರಾಯ್ಸ್, ಪೋರ್ಷೆ ಕೆಯೆನ್ನೆ, ಮರ್ಸಿಡೀಸ್ ಜಿ ವ್ಯಾಗನ್‌ನಂತಹ ಐಷಾರಾಮಿ ಕಾರುಗಳಿವೆ.
ಪಾಂಡ್ಯ ಎಷ್ಟು ಜೀವನಾಂಶ ನೀಡಬೇಕು?
ಜೀವನಾಂಶವನ್ನು ನಿರ್ಧರಿಸುವಾಗ ದಂಪತಿಯ ಆದಾಯ ಮತ್ತು ಆಸ್ತಿಗಳು, ಮದುವೆಯ ಸಮಯದಲ್ಲಿ ಅವರ ಜೀವನ ಮಟ್ಟ, ಅವರ ವಯಸ್ಸು ಮತ್ತು ಆರೋಗ್ಯ, ಮದುವೆಯ ಅವಧಿ ಮತ್ತು ಒಳಗೊಂಡಿರುವ ಯಾವುದೇ ಮಕ್ಕಳ ಪಾಲನೆ ಮತ್ತು ಅಗತ್ಯತೆಗಳು ಸೇರಿದಂತೆ ಹಲವಾರು ನಿರ್ಣಾಯಕ ಅಂಶಗಳನ್ನು ನ್ಯಾಯಾಲಯಗಳು ಪರಿಗಣಿಸುತ್ತವೆ.
ಪತಿ ಪತ್ನಿಯ ಒಪ್ಪಿಗೆಯ ಮೇರೆಗೆ ಜೀವನಾಂಶ ನಿರ್ಧಾರವಾಗುತ್ತದೆ. ಪತ್ನಿ ಜೀವನಾಂಶ ಬೇಡವೆಂದು ತಿರಸ್ಕರಿಸುವ ಹಾಗೂ ಎಷ್ಟು ಪಡೆಯಬೇಕು ಎಂಬುದನ್ನು ತಿಳಿಸುವ ಹಕ್ಕು ಇರಲಿದೆ. ಆದರೆ ಆಕೆ ಬೇಡಿಕೆ ಇಟ್ಟಿರುವಷ್ಟೇ ನೀಡವೇಕು ಎಂಬುದಿಲ್ಲ. ಕೋರ್ಟ್ ಈ ಬಗ್ಗೆ ನಿರ್ಧಾರ ಪ್ರಕಟಿಸಲಿದೆ. ಒಂದು ವೇಳೆ ಪತಿಯ ಆಸ್ತಿಗೆ ಸಮಾನವಾಗಿ, ಇಲ್ಲವೆ ಆತನ ವೇತನಕ್ಕೆ ಸಮಾನವಾಗಿ ಆಕೆಯೂ ಹಣ ಗಳಿಸುತ್ತಿದ್ದರೆ ಅಥವಾ ಆಕೆಯ ನಿವ್ವಳ ಆಸ್ತಿ ಪತಿಯಷ್ಟೇ ಮೌಲ್ಯ ಹೊಂದಿದ್ದರೆ ಜೀವನಾಂಶದ ಪ್ರಮಾಣ ಕಡಿಮೆಯಾಗಬಹುದು. ಇಲ್ಲವೆ ತೆಗೆದುಹಾಕಬಹುದಾದ ಸಂಭವವಿರುತ್ತದೆ. ಆದರೆ ಈ ಕುರಿತು ಕೋರ್ಟ್ ನಿರ್ಧಾರ ಮಾಡಲಿದೆ.



Click it and Unblock the Notifications
