Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೆಚ್ಚುತ್ತಿದೆ ಗ್ರೇ ಡಿವೋರ್ಸ್..! ಹೀಗಂದ್ರೆ ಏನು? ಇಳಿ ವಯಸ್ಸಲ್ಲಿ ಕಾಡುವುದೇಕೆ?
ಆಧುನಿಕ ಸಮಾಜದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ ಎಂಬ ಮಾತುಗಳನ್ನು ನಾವು ಪದೇ ಪದೇ ಕೇಳುತ್ತಲೇ ಇರುತ್ತೇವೆ. ಅದ್ರಲ್ಲೂ ಯುವ ಸಮುದಾಯ ತಮ್ಮ ಸಂಬಂಧ ಗಟ್ಟಿಯಾಗಿಸುವಿಕೆಯಲ್ಲಿ ಸೋಲು ಕಾಣುತ್ತಿದೆ ಎಂಬ ದೂರು ಸಹ ಇದೆ. ಅದ್ರಲ್ಲೂ ವಿಚ್ಛೇದನದ ವಿಚಾರದಲ್ಲಿ ಇದು ಮತ್ತಷ್ಟು ಸಾಕ್ಷಿಯಾಗಿದೆ. ಪಾಶ್ಚಿಮಾತ್ಯ ಸಂಸ್ಕೃತಿಯಂತಿದ್ದ ವಿಚ್ಛೇದನ ಈಗ ಪ್ರತಿ ಕುಟುಂಬದ ಸಮಸ್ಯೆಯೂ ಆಗುತ್ತಿದೆ.
ಈಗ ವಿಚ್ಛೇದನ ಎಂಬುದು ಸಾಮಾನ್ಯ ಸಂಗತಿ ಎಂಬುವಷ್ಟು ಬೆಳೆದು ಹೆಮ್ಮರವಾಗಿ ನಿಂತಿದೆ. ಕ್ಷುಲ್ಲಕ ಕಾರಣಗಳಿಗೆ ವಿಚ್ಛೇದನ ಪ್ರಕರಣಗಳು ನಡೆಯುತ್ತಿರುವುದನ್ನು ನಾವು ನೋಡಬಹುದು. ಹಾಗೆ ಈ ಪ್ರಮಾಣವು ದಿನೇ ದಿನೇ ಹೆಚ್ಚುತ್ತಿರುವುದು ಸಹ ಹೊಸ ಆತಂಕಕ್ಕೆ ಕಾರಣವಾಗಿದೆ. ಆದ್ರೆ ಇದು ಯುವ ಸಮುದಾಯದಲ್ಲಿ ಮಾತ್ರ ಉಳಿದಿಲ್ಲ.

ಈಗ ಮದುವೆಯಾಗಿ ಮಕ್ಕಳಾಗಿ ರಿಟೈರ್‌ಮೆಂಟ್ ವಯಸ್ಸು ಎಂದು ಕರೆಯಲಾಗುವ ಮಂದಿ ಸಹ ವಿಚ್ಛೇದನದತ್ತ ಮುಖ ಮಾಡಿರುವುದು ಸಮಾಜದಲ್ಲಿ ಹೊಸ ತಲೆನೋವಿಗೆ ಕಾರಣವಾಗುತ್ತಿದೆ. ಇದನ್ನೇ ಗ್ರೇ ಡಿವೋರ್ಸ್ ಎಂದು ಕರೆಯಲಾಗುತ್ತಿದೆ. ತಲೆ ಕೂದಲು ಬಿಳಿಯಾಗಲು ಆರಂಭಿಸುವ ವಯಸ್ಸಿನಲ್ಲಿ ವಿಚ್ಛೇದನ ಪಡೆಯುತ್ತಿರುವವ ಸಂಖ್ಯೆ ಈಗ ಏರುಗತಿಯಲ್ಲಿದೆ.
ಅಂದರೆ ಸುಮಾರು 30 ರಿಂದ 40 ವರ್ಷಗಳ ಕಾಲ ಒಟ್ಟಿಗೆ ಜೀವನ ನಡೆಸಿ, ಜೀವನದ ಕಷ್ಟಕರವಾದ ಹಾದಿಯನ್ನೇಲ್ಲ ದಾಟಿ ಮಕ್ಕಳು ದುಡಿಮೆ ಮಾಡುತ್ತಿರುವ ಕಾಲದಲ್ಲಿ ಇಳಿ ವಯಸ್ಸಿನ ಮಂದಿ ವಿಚ್ಚೇದನಕ್ಕೆ ಮುಂದಾಗುವ ಪರಿಸ್ಥಿತಿ ಇದಾಗಿದೆ. ಇತ್ತೀಚಿಗೆ ಅಭಿಷೇಕ್ ಬಚ್ಚನ್ ಸಹ ಈ ಗ್ರೇ
ಡಿವೋರ್ಸ್ ಸಂಬಂಧಿಸಿದಂತೆ ಪೋಸ್ಟ್ ವೊಂದನ್ನ ಲೈಕ್ ಮಾಡಿದ್ದ ಕಾರಣದಿಂದಲೇ ಸುದ್ದಿಯಾಗಿದ್ದರು. ಅವರು ಹಾಗೂ ಐಶ್ವರ್ಯ ರೈ ಬಚ್ಚನ್ ವಿಚ್ಛೇದನ ಪಡೆಯಲಿದ್ದಾರೆ ಅಂತಲೇ ರೂಮರ್ಸ್ ಹಬ್ಬಿತ್ತು.
'ಗ್ರೇ ಡೈವೋರ್ಸ್' ಎಂದರೇನು?
ಗ್ರೇ ವಿಚ್ಛೇದನವು 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ದಂಪತಿಗಳು ವಿಚ್ಛೇದನಕ್ಕೆ ನಿರ್ಧರಿಸುವ ವಿದ್ಯಮಾನವನ್ನು ಸೂಚಿಸುತ್ತದೆ. ಪ್ರಮುಖವಾಗಿ ಈ ಪದವು ವ್ಯಕ್ತಿಗಳ ವಯಸ್ಸನ್ನು ಎತ್ತಿ ತೋರಿಸುತ್ತದೆ, ಹೆಚ್ಚಾಗಿ ಬಿಳಿ ಅಥವಾ ಬೂದು ಕೂದಲು ಹೊಂದಿರುವ ಮುಂದಿ ವಿಚ್ಛೇದನಕ್ಕೆ ಮುಂದಾಗುವುದು. ಇತ್ತೀಚಿನ ವರ್ಷಗಳಲ್ಲಿ ಗ್ರೇ ಡಿವೋರ್ಸ್ ಘಟನೆಗಳು ಹೆಚ್ಚಾಗುತ್ತಿವೆ.
ಈ ವಿಚ್ಛೇದನಗಳು ನಿವೃತ್ತಿ ಸ್ವತ್ತುಗಳ ವಿಭಜನೆ, ಆರೋಗ್ಯ ಕಾಳಜಿ ಮತ್ತು ವಯಸ್ಕ ಮಕ್ಕಳ ಮೇಲೆ ಭಾವನಾತ್ಮಕ ಪರಿಣಾಮಗಳನ್ನು ಒಳಗೊಂಡಂತೆ ಹತ್ತು ಹಲವು ಸವಾಲುಗಳ ಮುಂದಿಡುತ್ತಿದೆ.
ಗ್ರೇ ಡಿವೋರ್ಸ್‌ಗೆ ಕಾರಣವಾಗುತ್ತಿರುವುದೇನು?
ಕಷ್ಟದ ದಿನಗಳ ಕಳೆದಿರುವ ಜೋಡಿ ಇಳಿ ವಯಸ್ಸಿನಲ್ಲಿ, ಅದರಲ್ಲೂ ಸಂಗಾತಿಯ ಜೊತೆ ಕೊನೆಯ ದಿನಗಳ ಕಳೆಯಲು ಇಷ್ಟಪಡುವ ದಿನದಲ್ಲಿ ವಿಚ್ಛೇದನ ಪಡೆಯಲು ಮುಂದಾಗುವುದೇ ಅಚ್ಚರಿ ಅಂಶವಾಗಿದೆ. ಆದ್ರೆ ಈ ಗ್ರೇ ಡಿವೋರ್ಸ್‌ಗೆ ನಾವು ಹತ್ತಾರು ಕಾರಣಗಳ ಪಟ್ಟಿ ಮಾಡಬಹುದು. ಅದರಲ್ಲಿ ಕೆಲವೊಂದನ್ನು ಇಲ್ಲಿ ನೀಡಲಾಗಿದೆ ನೋಡಿ.
ಖಾಲಿ ನೆಸ್ಟ್ ಸಿಂಡ್ರೋಮ್ ಅಥವಾ ಖಾಲಿಯಾದ ಮನೆ: ಮಕ್ಕಳು ಮನೆಯಿಂದ ಹೊರಬಂದ ಬಳಿಕ ಪೋಷಕರಲ್ಲಿ ತಮ್ಮ ಜೀವನದ ಗುರಿ ಏನು ಎಂಬುದು ಮರು ಪ್ರಶ್ನೆ ಹಾಕಿಕೊಂಡರೆ ಖಾಲಿಯಾಗಿ ಕಾಣಬಹುದು. ಇದು ತೀವ್ರ ಮನಸ್ಸಿಗೆ ಸಂಬಂಧಿಸಿದ ವಿಚಾರವಾಗಿರುವುದರಿಂದ ಮನಸ್ಥಾಪಗಳ ಹಂಚಿಕೊಳ್ಳಲು ಅವರ ನಡುವಿನ ಭಿನ್ನಾಭಿಪ್ರಾಯಗಳ ಪಟ್ಟಿ ಬೆಳೆದಾಗ ಖಾಲಿ ನೆಸ್ಟ್ ಸಿಂಡ್ರೋಮ್ ಕಾಣಿಸಿಕೊಳ್ಳಲಿದೆ. ಇದು ವಿಚ್ಛೇದನ ಪಡೆಯುವಂತಹ ಕಠಿಣ ನಿರ್ಧಾರಕ್ಕೆ ದಾರಿಯಾಗಲಿದೆ.
ಹಣಕಾಸು ಹಾಗೂ ಆರ್ಥಿಕ ಕಾರಣ: ಇಳಿ ವಯಸ್ಸಿನಲ್ಲಿ ಒಬ್ಬರ ಮೇಲೊಬ್ಬರು ಅವಲಂಬಿತರಾಗಬೇಕಾಗುತ್ತದೆ. ಕೆಲವರಿಗೆ ಪೆನ್ಷನ್, ವೃದ್ಧಾಪ್ಯ ವೇತನ ಹೀಗೆ ಯಾವುದಾದರು ಆರ್ಥಿಕ ಮೂಲ ಇರಬಹುದು. ಆದರೆ ಇದ್ಯಾವುದೂ ಇಲ್ಲದಿದ್ದರೆ ವಿಚ್ಛೇದನ ಪಡೆಯುವ ಸಾಧ್ಯತೆ ಹೆಚ್ಚಾಗಿರುತ್ತದ. ಅವರು ಸ್ವತಂತ್ಯವಾಗಿ ಬದುಕಲು ಇಷ್ಟಪಡಬಹುದು.



Click it and Unblock the Notifications