Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಪ್ರೇಮಿಗಳ ದಿನಕ್ಕಾಗಿ 1 ಸಾವಿರಕ್ಕೆ ಲಭ್ಯವಿದೆ ರೊಮ್ಯಾಂಟಿಕ್ ಗಿಫ್ಟ್‌ಗಳು..! ಯಾವುದು ಗೊತ್ತಾ?
ಪ್ರೇಮಿಗಳ ದಿನ ಹತ್ತಿರವಾಗುತ್ತಿದೆ. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿರುವವರ ಬಳಿ ಪ್ರೇಮ ನಿವೇದನೆ ಮಾಡುವ ದಿನವದು. ಈ ದಿನಕ್ಕಾಗಿ ಎಷ್ಟೋ ಜನರು ಕಾಯುತ್ತಿರುತ್ತಾರೆ. ಈಗಾಗಲೇ ಪ್ರೇಮಿಗಳ ವಾರವು ಆರಂಭಗೊಂಡಿದೆ. ಫೆಬ್ರವರಿ 14ರಂದು ಅದ್ದೂರಿ ಆಚರಣೆಗೆ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.
ಆದರೆ ನಿಮ್ಮ ಗೆಳತಿ ಅಥವಾ ಗೆಳೆಯನಿಗೆ ಯಾವ ಉಡುಗೊರೆ ನೀಡಿ ಮನಸ್ಸನ್ನು ಸೆಳೆಯಬೇಕು ಎಂಬ ಗೊಂದಲ ನಿಮ್ಮಲ್ಲಿಯೂ ಮೂಡಿರುತ್ತದೆ. ಏಕೆಂದರೆ ನಿಮ್ಮ ತಲೆಯಲ್ಲಿ ಎಷ್ಟು ಬೆಲೆಯ ಯಾವ ಗಿಫ್ಟ್ ನೀಡಬೇಕು ಎಂಬ ಕುರಿತು ಗೊಂದಲವಂತು ಇದ್ದೇ ಇರುತ್ತೆ. ಆದರೆ ಇಲ್ಲಿ ನಾವು ಕೇವಲ 1 ಸಾವಿರ ರೂಪಾಯಿಗೆ ಸಿಗುವಂತಹ ಬೆಸ್ಟ್ ಗಿಫ್ಟ್‌ಗಳ ಪಟ್ಟಿ ಮಾಡಿದ್ದೇವೆ. ನೀವೇನಾದರು ನಿಮ್ಮ ಪ್ರೀತಿ ಪಾತ್ರರಿಗೆ ನೀಡಲು ಗಿಫ್ಟ್ ಹುಡುಕುತ್ತಿದ್ದರೆ ಇದರಲ್ಲಿ ಯಾವುದಾದರೊಂದನ್ನು ಸೆಲೆಕ್ಟ್ ಮಾಡಿ.
ಸ್ಕ್ರಾಪ್‌ಬುಕ್
ಇತ್ತೀಚಿಗೆ ಸ್ಕ್ರಾಪ್ ಬುಕ್ ಟ್ರೆಂಡ್ ಹೆಚ್ಚುತ್ತಿದೆ. ನೀವು ಮತ್ತು ನಿಮ್ಮ ಗೆಳೆಯ/ಗೆಳತಿಯ ನೆನಪುಗಳನ್ನು ಒಟ್ಟಿಗೆ ಸಂಗ್ರಹಿಸಿಡಲು ಬಯಸಿದರೆ, ನೀವು ಅವರಿಗೆ ಸ್ಕ್ರಾಪ್‌ಬುಕ್ ಅನ್ನು ಉಡುಗೊರೆಯಾಗಿ ನೀಡಬಹುದು. ಇವು ಆನ್‌ಲೈನ್‌ನಲ್ಲಿ 1 ಸಾವಿರ ರೂಪಾಯಿ ಒಳಗೆ ಲಭ್ಯವಿರುತ್ತದೆ. ಇವುಗಳಲ್ಲಿ ನಿಮ್ಮ ನೆನಪುಗಳನ್ನು ಸಂಗ್ರಹಿಸಬಹುದು. ಈ ಪ್ರೇಮಿಗಳ ದಿನಕ್ಕೆ ಇದೊಂದು ಸುಂದರ ಗಿಫ್ಟ್ ಆಗಿರಲಿದೆ.

ಡೆಸ್ಕ್ ಆರ್ಗನೈಸರ್
ನೀವು ಆಫಿಸ್ ಇಲ್ಲವೆ ಮನೆಯಲ್ಲಿ ನಿಮ್ಮ ಟೇಬಲ್ ಅನ್ನು ವ್ಯವಸ್ಥಿತವಾಗಿಟ್ಟುಕೊಳ್ಳುವುದು ಒಂದು ಸಾಹಸವೇ ಆಗಿರುತ್ತದೆ. ಟೇಬಲ್ ಮೇಲೆ ಎಲ್ಲೆಂದರಲ್ಲಿ ಪೆನ್ನು, ಕನ್ನಡಕ ಚಾರ್ಜರ್ ಇತರೆ ವಸ್ತುಗಳು ಬಿದ್ದಿರುತ್ತವೆ. ಇವುಗಳನ್ನು ಒಂದೇ ಕಡೆ ಇಟ್ಟುಕೊಳ್ಳಲು ಈ ಡೆಸ್ಕ್ ಆರ್ಗನೈಸರ್ ನೆರವಾಗಲಿದೆ. ಇದು ಸಹ ಆನ್‌ಲೈನ್‌ನಲ್ಲಿ 1 ಸಾವಿರದ ಒಳಗೆ ಲಭ್ಯವಿದೆ.
ಗಿಫ್ಟ್ ಹ್ಯಾಂಪರ್
ನಿಮ್ಮ ಗೆಳೆಯನಿಗೆ ಇಲ್ಲವೆ ಗೆಳತಿಗೆ ಕಸ್ಟಮೈಸ್ ಮಾಡಿದ ಗಿಫ್ಟ್ ಹ್ಯಾಂಪರ್ ಅನ್ನು ಉಡುಗೊರೆಯಾಗಿ ನೀಡುವುದಕ್ಕಿಂತ ಹೆಚ್ಚು ವಿಶೇಷವಾದದ್ದೇನೂ ಇಲ್ಲ. ನೀವು ಗ್ರೀಟಿಂಗ್ ಕಾರ್ಡ್, ಮಗ್, ವಾಲೆಟ್, ಹೂಗಳು, ವಾಚ್ ಹೀಗೆ ವಿವಿಧ ವಸ್ತುಗಳನ್ನು ಖರೀದಿಸಬಹುದು ಮತ್ತು ಎಲ್ಲವನ್ನೂ ಒಟ್ಟಿಗೆ ಸೇರಿಸಿ ಮುದ್ದಾದ ಗಿಫ್ಟ್ ಹ್ಯಾಂಪರ್ ಮಾಡಬಹುದು. ನೀವು ಸೇರಿಸುವ ವಿಷಯಗಳನ್ನು ಅವಲಂಬಿಸಿ ಇದರ ಬಜೆಟ್ ಬದಲಾಗಬಹುದು.
ಪರಿಮಳಯುಕ್ತ ಕ್ಯಾಂಡಲ್ ಸೆಟ್
ಪರಿಮಳಯುಕ್ತ ಮೇಣದಬತ್ತಿಗಳು ನಿಮ್ಮ ಗೆಳೆಯ/ಗೆಳತಿಗೆ ನೀಡುವ ಅತ್ಯಂತ ರೋಮ್ಯಾಂಟಿಕ್ ಉಡುಗೊರೆಗಳಾಗಿವೆ. ಈ ಮೇಣದ ಬತ್ತಿಗಳನ್ನು ಹೊತ್ತಿಸಿದಾಗ ಅದರಿಂದ ಹೊರಹೊಮ್ಮುವ ಸುಗಂಧವು ಬೇರೆಯದ್ದೆ ಭಾವನೆಗೆ ನಿಮ್ಮನ್ನು ಕೊಂಡೊಯ್ಯುತ್ತದೆ. ಹಲವರಿಗೆ ಇಂದೊಂದು ಅದ್ಭುತ ಗಿಫ್ಟ್ ಆಗಬಹುದು.
ಕಸ್ಟಮೈಸ್ಡ್ ಕುಶನ್ ಮತ್ತು ಮಗ್
ಈ ಸಮಯದಲ್ಲಿ ನಿಮ್ಮ ಪ್ರೀತಿಯನ್ನು ನಿಮ್ಮ ಗೆಳೆಯ/ಗೆಳತಿಗೆ ನಿಮ್ಮೊಷ್ಟದ ಹೆಸರು ಇರುವ ಬಟ್ಟೆ ಇಲ್ಲವೆ ಕಾಫಿ ಮಗ್ ಅನ್ನು ಗಿಫ್ಟ್ ಆಗಿ ನೀಡಬಹುದು. ಅದರ ಮೇಲೆ ಏನು ಬರೆದಿರಬೇಕು ಎಂಬುದನ್ನು ನೀವು ನಿರ್ಧರಿಸಿ ಅವರಿಗೆ ಸರ್ಪ್ರೈಸ್ ಗಿಫ್ಟ್ ನೀಡಬಹುದು.
ಚಾಕೋಲೆಟ್ ಹ್ಯಾಂಪರ್
ನಿಮ್ಮ ಪ್ರೀತಿ ಪಾತ್ರರಿಗೆ ವಿವಿಧ ರೀತಿಯ ಚಾಕೋಲೆಟ್‌ಗಳನ್ನು ಖರೀದಿಸಿ ಅದನ್ನು ಒಂದೇ ಗಿಫ್ಟ್ ಹ್ಯಾಂಪರ್ ಆಗಿ ಮಾಡಿ ನೀಡಬಹುದು. ನೆನಪಿರಲಿ ಇದು 1 ಸಾವಿರ ರೂಪಾಯಿ ಒಳಗೆ ಸಿಗುವ ಅತ್ಯಂತ ರೊಮ್ಯಾಂಟಿಕ್ ಹಾಗೂ ಮೌಲ್ಯಯುತ ಗಿಫ್ಟ್ ಆಗಿರಲಿದೆ.
ವ್ಯಾಲೆಟ್, ವಾಚ್, ಸನ್‌ಗ್ಲಾಸ್
ನಿಮ್ಮ ಪ್ರೀತಿ ಪಾತ್ರರಿಗೆ ಒಂದು ಗಿಫ್ಟ್ ನೀಡುವುದು ನಿಮಗೆ ಗೊಂದಲವಾದರೆ ಅವರಿಗೆ ವ್ಯಾಲೆಟ್, ವಾಚ್, ಸನ್‌ಗ್ಲಾಸ್ ಮೂರನ್ನೂ ಒಂದೇ ಗಿಫ್ಟ್‌ನಲ್ಲಿ ನೀಡಬಹುದು. ಆನ್‌ಲೈನ್‌ನಲ್ಲಿ ಕೋಂಬೋ ಗಿಫ್ಟ್ ಮೂಲಕ ಈ ಮೂರು ವಸ್ತುಗಳು 1 ಸಾವಿರದೊಳಗೆ ಲಭ್ಯವಿರುತ್ತವೆ. ಆದರೆ ಅದರ ಗುಣಮಟ್ಟದ ಕಡೆಗೂ ಗಮನಕೊಡುವುದು ಒಳಿತು.



Click it and Unblock the Notifications



