Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಸ್ನೇಹಿತರ ದಿನ: ಎಂದೆಂದಿಗೂ ಅವರೇ ನನ್ನ ವಾಕೀಸ್ ಟಾಕೀಸ್, ಅವರ ಬಗ್ಗೆ ಕೆಲ ಸಾಲುಗಳು
ಎಲ್ಲರ ಬಾಳಲ್ಲಿ ಗೆಳೆಯರಿಗೆ ಮಹತ್ವದ ಸ್ಥಾನವಿರುತ್ತದೆ, ಅದರೆ ನಮ್ಮ ಗೆಳೆತನವನ್ನು ನಾವು ತುಂಬಾನೇ ಎಂಜಾಯ್ ಮಾಡುವ ಸಮಯವೆಂದರೆ ಅದು ಕಾಲೇಜು ದಿನಗಳು, ಕಾಲೇಜಿನ ಫ್ರೆಂಡ್ಸ್ ಎಂದೆಂದಿಗೂ ನಮ್ಮ ನೆನಪಿನಲ್ಲಿ ಇರುತ್ತಾರೆ.
ನಂತರ ಕೆಲಸ, ಮದುವೆ ಮಕ್ಕಳು ಅಂತ ಬ್ಯುಸಿ ಆದ ಮೇಲೆ ಕೂಡ ಇವರು ನಮ್ಮ ನೆನಪಿನಲ್ಲಿ ಕಾಡುತ್ತಲೇ ಇರುತ್ತಾರೆ. ಈಗ ಸೋಷಿಯಲ್ ಮೀಡಿಯಾ ಇರುವುದರಿಂದ 10 ವರ್ಷದ ಹಿಂದೆ ನಮ್ಮ ಜೊತೆ ಕಲಿತವರನ್ನು ಹುಡುಕಿ, ನಂತರ ಅವರ ಬಳಿ ಆ ದಿನಗಳನ್ನು ಮೆಲುಕಿ ಹಾಕಿ ನಗುತ್ತಾರೆ. ಗೆಳೆತನವೇ ಹಾಗೆ, ಬಲು ಸುಂದರ.
ಇಲ್ಲೊಬ್ಬ ವಿದ್ಯಾರ್ಥಿನಿ ಗೆಳೆಯತನದ ಬಗ್ಗೆ ನಮ್ಮ ಜೊತೆ ಹಂಚಿಕೊಂಡ ಸುಂದರ ಸಾಲುಗಳು

ಮೈ ಫೋರೆವೆರ್ "ವಾಕೀಸ್ ಟಾಕೀಸ್ "
ಗೆಳೆತನ, ಈ ಒಂದು ಪದ ಎಲ್ಲರ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಅದೇ ರೀತಿ ನನ್ನ ಜೀವನದಲ್ಲಿಯು.ಸಣ್ಣ ವಯಸ್ಸಿನಿಂದ ತಂದೆ ತಾಯಿ ಹಾಗೂ ನನ್ನ ಅಕ್ಕನನ್ನು ಬಿಟ್ಟು ಯಾರೊಂದಿಗೂ ಅಷ್ಟೊಂದು ಬೆರೆಯದ ನಾನು ಎಂದಿಗೂ ಅಂದುಕೊಳ್ಳಲಿಲ್ಲ ನನ್ನ ಈ ಪುಟ್ಟ ಮನಕ್ಕೆ ಒಂಬತ್ತು ಜೀವದ ಗೆಳೆಯರು ಸಿಗುತ್ತಾರೆ ಎಂದು. ನಮ್ಮೆಲ್ಲರ ಜೀವನ ಶೈಲಿ ಬೇರೆ, ಆಲೋಚನೆಗಳು ಬೇರೆ, ಎಷ್ಟೊಂದು ವಿಚಾರಗಳಿಗೆ ಜಗಳಗಳು ಆಗಿವೆ. ಆದರೆ ಗೆಳೆತನದಲ್ಲಿ ಇದು ಮಾಮೂಲಿ.ಇವರುಗಳೇ ನನ್ನ ಪ್ರೀತಿಯ "ವಾಕೀಸ್ ಟಾಕೀಸ್ ", ಕನ್ಫ್ಯೂಸ್ ಆಗಬೇಡಿ ಇದು ನಮ್ಮ ಗ್ರೂಪ್ನ ಹೆಸರು.
ನಾನು ಆಗಲೇ ಹೇಳಿದ ಹಾಗೇ ಒಂಬತ್ತು ಜನ ಒಂಬತ್ತು ರೀತಿ.ನಮ್ಮ ಗೆಳೆತನ ಯಾವಾಗ ಶುರುವಾಯಿತು? ಅದು ಹೇಗೆ? ಅಂತ ನಮಗೆ ತಿಳಿದಿಲ್ಲ. ಕಾಲೇಜಿನಲ್ಲಿ ವಿವಿಧ ಕಾಂಬಿನೇಶನ್ ಅಲ್ಲಿರೋ ನಾವುಗಳು ದಿನದಲ್ಲಿ ಒಂದು ಬಾರಿ ಆದ್ರೂ ಮಾತಾಡದೆ ಇರ್ತಾನೆ ಇರ್ಲಿಲ್ಲ, ಕಾಲೇಜಿನಲ್ಲಿ ಬ್ಯುಸಿ ಇದ್ದರೆ ನಮ್ಮ ವಾಟ್ಸಾಪ್ ಗ್ರೂಪ್ನಲ್ಲಿ ಆದ್ರೂ ಹರಟೆ ಹೊಡಿತಿದ್ದ ಹೆಮ್ಮೆ ನಮ್ಮದು. ಆದರೆ ಕಳೆದ ಒಂದು ತಿಂಗಳಿಂದ ನಮ್ಮ ಮಧ್ಯೆ ಮಾತು ಕಮ್ಮಿ, ಮಾತಾಡಿದ್ರೆ ಅದು ಜಗಳಕ್ಕೆ ತಿರುಗುತ್ತಿದೆ. ಖುಷಿ, ದುಃಖ, ಸಂಕಟ, ಅಳು ಎಲ್ಲವನ್ನು ಇವರೊಡನೆ ಹಂಚಿಕೊಳ್ಳುತಿದ್ದ ನನಗೆ, ಈಗ ಆ ವಿಚಾರಗಳನ್ನು ಅವರಲ್ಲಿ ಹೇಳಲು ಸಾಧ್ಯ ಆಗದ ಪರಿಸ್ಥಿತಿ. ಆದರೆ ಅಷ್ಟೆಲ್ಲ ಇದ್ದರು ಮರೆಯಲ್ಲಿ ಒಬ್ಬೊಬ್ಬರ ಬಗ್ಗೆ ಕಾಳಜಿ, ಪ್ರೀತಿ ತೋರಿಸೋದು ಮಾತ್ರ ಏನೇ ಮಾಡಿದರು ಎದ್ದು ಕಾಣುತ್ತಿದೆ. ಇದೀಗ ಅಂತಿಮ ವಿಭಾಗದಲ್ಲಿರುವ ನನಗೆ ಈ ತಿಂಗಳಿನ ಈ ಗೆಳೆತನದ ದಿನದಂದು ಅವರಿಗೆ ನಾನು ಈ ಅಂಕಣದ ಮೂಲಕ ಹೇಳುವುದು ಒಂದೇ.
ಬಣ್ಣವಿಲ್ಲದ ಈ ನನ್ನ ಜೀವನಕ್ಕೆ
ಗೆಳೆತನದ ಬಣ್ಣ ತುಂಬಿದವರು ನೀವು
ಈ ಬಣ್ಣ ತುಂಬಿದ ಕಲಾವಿದರನ್ನು ಕಳೆದುಕೊಳ್ಳಲು ನನ್ನ ಮನಸ್ಸಿಗೆ ಇಷ್ಟವಿಲ್ಲ
ಒಂದು ಸ್ಮೈಲ್ ಕೊಟ್ಟು, ಪ್ರೀತಿಯ ಅಪ್ಪುಗೆಯ ನೀಡಿ ಮತೊಮ್ಮೆ ಈ ಗೆಳೆತನದ ಹೊಸ ಅಧ್ಯಾಯವ ಪ್ರಾರಂಭ ಮಾಡುವ, ಮತ್ತೆ ಒಟ್ಟಿಗೆ ಅಳುವ, ನಗುವ, "ಮೈ ವಾಕೀಸ್ ಟಾಕೀಸ್ "
ಹರ್ಷಿತಾ ಎಂ.ಕೆ
ಎಸ್. ಡಿ. ಎಂ ಡಿಗ್ರಿ ಕಾಲೇಜು, ಉಜಿರೆ



Click it and Unblock the Notifications
