Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇದೇ ಮೊದಲ ಬಾರಿಗೆ ಜನರಲ್ಲಿ ಸಹಾಯ ಕೇಳಿದ ರತನ್ ಟಾಟಾ! ಮನಮುಟ್ಟುವ ಕತೆಯಿದು
ಟಾಟಾ ಗುಂಪಿನ ಒಡೆಯ, ಆಗರ್ಭ ಶ್ರೀಮಂತ ರತನ್ ಟಾಟಾ ಉದ್ಯಮವನ್ನು ಬೆಳೆಸುವುದರ ಮೂಲಕ ಮಾತ್ರವಲ್ಲ ಈ ಸಮಾಜಕ್ಕೆ ಸಾಕಷ್ಟು ಕೊಡುಗೆ ಮೂಲಕ ರತನ್ ಟಾಟಾ ಅತ್ಯಂತ ದೊಡ್ಡ ವ್ಯಕ್ತಿಯಾಗಿದ್ದಾರೆ. ಅದರಲ್ಲಿಯೂ ಕೋವಿಡ್ ಸಮಯದಲ್ಲಿ ಸಾವಿರಾರು ಕೋಟಿ ದಾನ ಮಾಡಿದವರು.

ದೇಶನಾ, ಲಾಭನಾ ಅಂತ ಬಂದಾಗ ಅಪ್ಪಟ ದೇಶಪ್ರೇಮಿ, ದೇಶಕ್ಕಾಗಿ ಲಾಭವನ್ನು ಪಕ್ಕಕ್ಕಿಟ್ಟು ದೇಶ ಮೊದಲ ಎನ್ನುತ್ತಾರೆ. ಸದಾ ಸಮಾಜಕ್ಕೆ ನೀಡುವ ರತನ್ ಟಾಟಾ ಅವರು ಇದೇ ಮೊದಲ ಬಾರಿಗೆ ಜನರ ನೆರವು ಕೇಳಿದ್ದಾರೆ, ಅಷ್ಟಕ್ಕೂ ಅವರು ನೆರವು ಕೇಳಿದ್ದು ಏಕೆ ಎಂದು ನೋಡಿದಾಗ ಆ ವ್ಯಕ್ತಿ ನಮ್ಮ ಕಣ್ಣಿನಲ್ಲಿ ಮತ್ತಷ್ಟು ಎತ್ತರದಲ್ಲಿ ನಿಂತಿದ್ದಾರೆ.
ಅವರು ನೆರವು ಕೇಳಿದ್ದು ಬಡಪಾಯಿ ನಾಯಿಮರಿಗಾಗಿ
ರತನ್ ಟಾಟಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇದೇ ಮೊದಲ ಬಾರಿಗೆ ನೆರವು ಕೇಳಿದ್ದಾರೆ. (ನೀವು ಸಹಾಯ ನೀಡಿದ್ದರೆ ಒಳ್ಳೆಯದಿತ್ತು, 7 ತಿಂಗಳ ಈ ನಾಯಿಮರಿಗೆ ರಕ್ತದ ಅವಶ್ಯಕತೆ ಇದೆ, ರಕ್ತಹೀನತೆ ಹಾಗೂ ಲಿವರ್ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ, ಹಾಗಾಗಿ ಮುಂಬೈಯಲ್ಲಿರುವ ತಮ್ಮ ನಾಯಿಯ ರಕ್ತ ದಾನ ನೀಡಿ)I would really really appreciate your help.
This 7 month dog at our animal hospital needs urgent blood transfusion. He is admitted for a suspected tick fever and life threatening anaemia.
We urgently need a dog blood donor in Mumbai
Dog Donor Eligibility Criteria
Clinically healthy and between 1 to 8 years of age
Weighing about 25 kg or above
Completely vaccinated and dewormed
Free from any recent major illness
Free from ticks and fleas and any no history tick fever in atleast last 6months7
ಎಂದು ಪೋಸ್ಟ್ ಮಾಡಿದ್ದೇ ತಡ ಆ ಪೋಸ್ಟ್ ವೈರಲ್ ಆಗಿತ್ತು, ಇವರ ಕೋರಿಕೆಗೆ ಜನ ಸ್ಪಂದಿಸಿದ್ದಾರೆ ಹಾಗಾಗಿ This request has been closed ಎಂದು ಬರೆದಿದ್ದಾರೆ.
ಮನುಷ್ಯರಿಗೆ ನೆರವಾಗದ ಜನರು ಇರುವಾಗ ನಾಯಿಗೆ ನೆರವು ಕೋರಿದ್ದಾರೆ
ಮನುಷ್ಯರು ಮನುಷ್ಯರಿಗೆ ನೆರವು ನೀಡಲು ಹಿಂದೇಟು ಹಾಕುತ್ತಿದ್ದಾರೆ ಆದರೆ ಇವರು ನಾಯಿಗಳ ಆರೈಕೆ ಮಾಡುತ್ತಿದ್ದಾರೆ, ಪ್ರಾಣಿಗಳಿಗಾಗಿಯೇ ಇವರು ಆಸ್ಪತ್ರೆ ಕಟ್ಟಿಸಿದ್ದಾರೆ, ಮುಂಬೈನಲ್ಲಿ ಟಾಟಾ ಟ್ರಸ್ಟ್ ಪ್ರಾಣಿಗಳ ಆಸ್ಪತ್ರೆ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಇವರನ್ನು ಉದ್ಯಮಿ ಎಂದು ಜನರು ಗೌರವ ನೀಡುವುದಕ್ಕಿಂತ ಅವರಲ್ಲಿರುವ ಈ ಮಾನವೀಯ ಗುಣಗಳಿಂದಾಗಿ ಜನರ ಮನಸ್ಸಿನಲ್ಲಿ ಅಷ್ಟೊಂದು ಎತ್ತರಕ್ಕೆ ತಲುಪಿದ್ದಾರೆ. ಈ ಆಸ್ಪತ್ರೆಯಲ್ಲಿ ಬೀದಿ ನಾಯಿಗಳಿಗೂ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ನಾಯಿಗಳ ಕುರಿತು ವಿಶೇಷ ಪ್ರೀತಿ ಹೊಂದಿರು ರತನ್ ಟಾಟಾ, ಐಷಾರಾಮಿ ತಾಜ್ ಹೊಟೆಲ್ ಪಕ್ಕದಲ್ಲಿ, ಒಳಗೆ ಬೀದಿ ನಾಯಿಗಳು ಆಶ್ರಯ ಪಡೆದಿದ್ದರೆ, ಅವುಗಳನ್ನು ಓಡಿಸಬಾರದು ಎಂದು ಸಿಬ್ಬಂದಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.



Click it and Unblock the Notifications











