Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಮಗಳಿಗೆ ಅಪ್ಪನೊಂದಿಗೆ ಇರುವ ಭಾವನಾತ್ಮಕ ಸಂಬಂಧ ಎಂತಹದ್ದು ಗೊತ್ತಾ?
ಹೆಣ್ಣು ಮಕ್ಕಳಿಗೆ ಅವರ ಅಪ್ಪಂದಿರ ಜೊತೆಗೆ ಒಂದು ರೀತಿಯ ಭಾವನಾತ್ಮಕ ಸಂಬಂಧ ಇದ್ದೇ ಇರುತ್ತದೆ. ಅಪ್ಪನೂ ಕೂಡ ತನ್ನ ಹೆಣ್ಣು ಮಗಳನ್ನು ಗಂಡು ಮಕ್ಕಳಿಗಿಂತ ಒಂದು ಕೈ ಮೇಲೂ ಎನ್ನುವ ರೀತಿಯಲ್ಲಿ ಬೆಳೆಸಿರುತ್ತಾರೆ. ಮಗಳು ಎಂತಹದ್ದೇ ಪರಿಸ್ಥಿತಿಯಲ್ಲಿ ಇರಲಿ ಅಪ್ಪ ಆಕೆಗೆ ಹೆಗಲಾಗಿ ನಿಂತು ಶಕ್ತಿ ತುಂಬುತ್ತಾನೆ.
ತಂದೆಗಿಂತ ಶಕ್ತಿಯುತವಾದ ಅಸ್ತ್ರ ಈ ಜಗತ್ತಿನಲ್ಲಿ ಇಲ್ಲ ಅಂತ ಆಕೆ ಅಂದುಕೊಳ್ಳುತ್ತಾಳೆ. ಅವಳು ಜೀವನದಲ್ಲಿ ಎಷ್ಟು ಬಾರಿ ಸೋತರೂ ಕೂಡ ರಾಜ ರೋಷದಿಂದ ನಿಂತು ಅವಳಿಗಾಗಿ ಚಪ್ಪಾಳೆ ಹೊಡೆದು ಪ್ರೋತ್ಸಾಹಿಸುವವನು ಜನ್ಮಕೊಟ್ಟ ತಂದೆ ಮಾತ್ರ. ಅಷ್ಟಕ್ಕು ಅಪ್ಪನೊಂದಿಗೆ ಮಗಳಿಗಿರುವ ಆ ಭಾವನಾತ್ಮಕ ಸಂಬಂಧ ಎಂತಹದ್ದು ಅನ್ನೋದನ್ನು ತಿಳಿಯೋಣ.

1. ಅಪ್ಪ ನನ್ನ ಅಭಿಪ್ರಾಯವನ್ನು ಎಂದಿಗೂ ಕೀಳಾಗಿ ನೋಡೋದಿಲ್ಲ
ಒಬ್ಬ ಹೆಣ್ಣು ಮಗಳಿಗೆ ಆಕೆಯ ಕುಟುಂಬವೇ ಮೊದಲು. ಅದ್ರಲ್ಲೂ ಆಕೆಯ ಅಪ್ಪನನ್ನು ಅವಳು ಅರ್ಥ ಮಾಡಿಕೊಂಡಷ್ಟು ಬೇರ್ಯಾರು ಅರ್ಥ ಮಾಡಿರೋದಕ್ಕೆ ಸಾಧ್ಯವೇ ಇಲ್ಲ. ಯಾವುದೇ ವಿಚಾರದ ಬಗ್ಗೆ ಮಗಳು ಅಭಿಪ್ರಾಯ ಕೊಟ್ಟಾಗ ಅಪ್ಪ ಅದನ್ನು ನಿರಾಕರಿಸೋದಾಗಲಿ, ಕೀಳಾಗಿ ಕಾಣೊದಾಗಲಿ ಮಾಡೋದಿಲ್ಲ. ಬದಲಾಗಿ ಆಕೆಯ ಮಾತಿಗೆ ಸೈ ಎನ್ನುತ್ತಾನೆ. ಯಾರು ತನ್ನ ಮಾತನ್ನು ಕೇಳದಿದ್ದರೂ ಕೂಡ ಅಪ್ಪ ನನ್ನ ಜೊತೆಗೆ ಯಾವಾಗಲೂ ಇರುತ್ತಾನೆ ಅನ್ನೋ ಸತ್ಯ ಆಕೆಗೆ ಚೆನ್ನಾಗಿ ಗೊತ್ತಿರುತ್ತೆ.
2. ಅಪ್ಪ ನನ್ನ ಭವಿಷ್ಯದ ಬಗ್ಗೆ ಉತ್ತಮ ನಿರ್ಧಾರವನ್ನೇ ತೆಗೆದುಕೊಳ್ಳುತ್ತಾರೆ
ಮಗಳ ಮೊದಲ ಹೀರೋ ಹಾಗೂ ಮೊದಲ ಪ್ರೀತಿ ಅಪ್ಪನೇ ಆಗಿರುತ್ತಾನೆ. ಹಾಗೆಯೇ ಮಗಳ ಮೇಲೆ ಅಪ್ಪನಿಗೆ ಇರುವ ಪ್ರೀತಿಗೆ ಕೊನೆಯೇ ಇಲ್ಲ. ಅದು ನಿರಂತರ. ಮಗಳು ಹುಟ್ಟಿದಾಗಲೇ ಆಕೆಯ ಬಗ್ಗೆ ಚಿಂತಿಸುವ ವ್ಯಕ್ತಿ ಅಪ್ಪ. ಪುಟ್ಟ ಮಗುವಿರುವಾಗಲೇ ಆಕೆಯ ಭವಿಷ್ಯದ ಬಗ್ಗೆ ನೂರಾರು ಕನಸು ಕಾಣುತ್ತಾನೆ. ಅವಳ ಭವಿಷ್ಯವನ್ನು ರೂಪಿಸುತ್ತಾನೆ. ಯಾವುದೇ ಕಾರಣಕ್ಕೂ ಅಪ್ಪ ನನ್ನ ಜೀವನದ ಬಗ್ಗೆ ತಪ್ಪು ನಿರ್ಧಾರ ತೆಗೆದುಕೊಳ್ಳುವುದಿಲ್ಲವೆಂದು ಆಕೆಗೆ ಚೆನ್ನಾಗಿ ಗೊತ್ತಿದೆ.
3. ಅಪ್ಪನಲ್ಲಿರುವ ಗುಣಗಳು ಗಂಡನಲ್ಲಿ ಇರಲಿ ಎಂದು ಬಯಸುತ್ತಾರೆ
ಮಗಳಿಗೆ ಮೊದಲ ಪ್ರೀತಿಯಾಗುವುದೇ ಅದು ಅಪ್ಪನ ಮೇಲೆ. ಅಪ್ಪನೇ ಆಕೆಯ ಪ್ರಪಂಚ ಆಗಿರುತ್ತಾನೆ. ಅಪ್ಪನನ್ನು ನೋಡಿಕೊಂಡು ಬೆಳೆದ ಮಗಳಿಗೆ ಪುರುಷರು ಇದೇ ರೀತಿ ಇರುತ್ತಾರೆ ಎನ್ನುವ ಕಲ್ಪನೆ ಇರುತ್ತದೆ. ಅಪ್ಪ ಪ್ರೀತಿ ಮಾಡೋದು, ಕಾಳಜಿ ಮಾಡುವ ರೀತಿ ಆಕೆಗೆ ತುಂಬಾನೇ ಇಷ್ಟ ಆಗಿರುತ್ತದೆ. ತಾನು ಮದುವೆಯಾಗುವ ಗಂಡನೂ ಕೂಡ ಅಪ್ಪನ ಹಾಗೇ ಇರಲಿ ಎಂದು ಆಕೆ ಬಯಸುತ್ತಾಳೆ.
4. ಸಂಕಷ್ಟದಲ್ಲಿ ಜೊತೆಗೆ ನಿಲ್ಲುವವರು ಅಪ್ಪ
ಮಗಳ ಹಾಗೂ ಅಪ್ಪನ ಭಾಂದವ್ಯ ತುಂಬಾನೇ ಆತ್ಮೀಯವಾಗಿರುತ್ತದೆ. ಹೀಗಾಗಿ ಏನೇ ಸಮಸ್ಯೆಯಾದರೂ ಮಗಳು ಮೊದಲಿಗೆ ಓಡಿ ಬರೋದೇ ಅಪ್ಪನ ಬಳಿ. ಯಾಕಂದ್ರೆ ಆ ಸಮಸ್ಯೆಗೆಲ್ಲಾ ಪರಿಹಾರ ಅಪ್ಪನ ಬಳಿ ಇದೆ ಎಂದು ಆಕೆಗೆ ಚೆನ್ನಾಗಿ ಗೊತ್ತಿದೆ. ಕೆಲವೊಂದು ಸಲ ಅಪ್ಪಂದಿರು ಹೆಚ್ಚಾಗಿ ಮಾತನಾಡೋದಿಲ್ಲ. ಆದರೆ ಮಗಳಿಗೆ ಸಮಸ್ಯೆ ಆಯ್ತು ಅಂತ ಗೊತ್ತಾದಾಗ ಆ ಮನಸ್ಸು ಚಡಪಡಿಸುತ್ತದೆ. ಸಮಸ್ಯೆ ಸರಿ ಆಗೋವರೆಗೂ ಮನಸ್ಸಿಗೆ ನಿಮ್ಮದಿ ಇರೋದಿಲ್ಲ
5. ದಯಾಮಯಿ ನನ್ನಪ್ಪ!
ಹೆಚ್ಚಿನ ಮನೆಗಳಲ್ಲಿ ಒಂದು ಸಂಪ್ರದಾಯ ಇರುತ್ತದೆ. ಆ ದಂಪತಿಗಳಿಗೆ ಮಗ ಹಾಗೂ ಮಗಳು ಇದ್ದರೆ ಮನೆಯಲ್ಲಿ ಏನೇ ತಪ್ಪಾದರೂ ಅಪ್ಪ ಮೊದಲಿಗೆ ಬೈಯೋದು ಮಗನಿಗೆ. ಅಪ್ಪಿ-ತಪ್ಪಿಯೂ ಮಗಳನ್ನು ಬೈಯೋದಿಲ್ಲ, ಹೊಡೆಯೋದಿಲ್ಲ. ಕೆಲವೊಂದು ಸಾರಿ ಸುಮ್ಮನೆ ಎಲ್ಲರ ಎದುರು ಆಕೆಗೆ ಬೈದಂತೆ ನಾಟಕವಾಡಿ ಮತ್ತೆ ಮುದ್ದು ಮಾಡುತ್ತಾರೆ. ಅಪ್ಪನಿಗೆ ಮಗಳ ಮೇಲೆ ವಿಶೇಷ ಕಾಳಜಿ, ಅಕ್ಕರೆ, ಪ್ರೀತಿ ಇದ್ದೇ ಇರುತ್ತದೆ.
6. ಅಪ್ಪನೇ ದೊಡ್ಡ ಶಕ್ತಿ ಎಂದು ನಂಬಿರುತ್ತಾಳೆ
ಮಗಳಿಗೆ ಕಷ್ಟ ಎಂದಾಗ ಮೊದಲಿಗೆ ಭುಜ ನೀಡುವವನೇ ಅಪ್ಪ. ಮಗಳು ಬಾಯಿ ಬಿಟ್ಟು ಹೇಳುವ ಮೊದಲೇ ಕಷ್ಟಗಳ ಬಗ್ಗೆ ಅರ್ಥ ಮಾಡಿಕೊಳ್ಳುತ್ತಾನೆ. ಅಪ್ಪನಿಗೆ ಎಷ್ಟೇ ವಯಸ್ಸಾಗಲಿ, ಅವನು ಎಷ್ಟೇ ದುರ್ಬಲನಾಗಿದ್ದರೂ ಕೂಡ ಮಗಳ ಜವಾಬ್ದಾರಿ ನಿಭಾಯಿಸೋದನ್ನು ಆತ ಮರೆಯೋದಿಲ್ಲ. ಕಷ್ಟ ಕಾಲದಲ್ಲಿ ಆಕೆಗೆ ಮಹಾ ಶಕ್ತಿಯಾಗಿ ನಿಲ್ಲುವವನೇ ಅಪ್ಪ.
ಮಗಳಿಗೂ ಕೂಡ ಅಪ್ಪ ಎಂದರೆ ಆಕಾಶ. ಅಪ್ಪನ ಪ್ರೀತಿಗೆ ಬೆಲೆ ಕಟ್ಟೋದಕ್ಕೆ ಸಾಧ್ಯ ಇದ್ಯಾ? ಅದ್ರಲ್ಲಿ ಅಪ್ಪ ಹಾಗೂ ಮಗಳ ಸಂಬಂಧವನ್ನು ಪದಗಳಲ್ಲಿ ಬಣ್ಣಿಸೋದಕ್ಕೆ ಸಾಧ್ಯವಿಲ್ಲ.



Click it and Unblock the Notifications

