Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇಂಥ ಪ್ರೀತಿ ಸಿಗುವವರೆಗೆ ಸಿಂಗಲ್ ಆಗಿರುವುದರಲ್ಲಿ ತಪ್ಪೇ ಇಲ್ಲ: ನಿಜವಾದ ಪ್ರೀತಿಗೆ ಉದಾಹರಣೆ ಇವರು
ಈಗೀನ ಕಾಲದ ಪ್ರೀತಿಗೆ ಈ ಇಳಿ ಜೀವಗಳ ಪ್ರೀತಿ ದೊಡ್ಡ ಆದರ್ಶವಾಗಬೇಕು, ಪ್ರೀತಿ ಎಂದರೆ ಇಂದು ಹುಟ್ಟಿ ನಾಳೆ ಸಾಯುವಂತಿದ್ದಲ್ಲ, ಅದು ಸಾಯುವವರೆಗೆ ಇರಬೇಕು, ಅಲ್ಲದೆ ಇಂಗ್ಲಿಷ್‌ನಲ್ಲಿ ಒಂದು ಮಾತಿದೆ A great relationship is all about falling in love with the same person over and over again ಅಂದರೆ ಪ್ರೀತಿಸಿದ ವ್ಯಕ್ತಿಯಲ್ಲೇ ಆಗಾಗ ಪ್ರೀತಿಯಲ್ಲಿ ಬೀಳುವುದು, ಇವರನ್ನು ನೋಡಿದಾಗ ಹೀಗೆ ನಾವೂ ಪ್ರೀತಿಯಲ್ಲಿ ಬೀಳಬೇಕು ಎಂದನಿಸದೆ ಇರಲ್ಲ.

ಮೊಮ್ಮಗ ತೆಗೆದ ವೀಡಿಯೋ ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ, ಈ ಇಳಿ ವಯಸ್ಸಿನಲ್ಲಿಯೂ ಅವರಿಬ್ಬರ ನಡುವೆ ಎಂಥ ಪ್ರೀತಿ, ಅದರಲ್ಲೂ ತಮ್ಮ ಪ್ರೀತಿಯನ್ನು ಮತ್ತಷ್ಟು ಸುಂದರವಾಗಿಸಲು ಅವರು ಹಾಕುವ ಪ್ರಯತ್ನವಿದೆಯಲ್ಲಾ ಅದನ್ನು ನೋಡಿ ಈ ಜನರೇಷನ್ ಅವರು ಕಲಿಯಬೇಕು. ಲವ್ ಮ್ಯಾರೇಜ್ ಆದ ಎಷ್ಟೋ ಜೋಡಿಗಳು ಮೊದಲು ತೋರುತ್ತಿದ್ದ ಪ್ರೀತಿ ಈಗ ಇಲ್ಲ ಎಂದು ದೂರುವುದನ್ನು ಕಾಣುತ್ತೇವೆ.
ಪ್ರೀತಿಸುವಾಗ ಅವರಿಗಾಗಿ ಎಂಥ ಸಾಹಸ ಮಾಡಲು, ಅವರಿಗಾಗಿ ಎಷ್ಟು ಸಮಯ ನೀಡಲು ಸಿದ್ಧವಿರುವವರು ಮದುವೆಯಾದ ಬಳಿಕ ಅವರಿಗೆ ಸಂಗಾತಿ ಜೊತೆ ಮಾಡನಾಡಲು ಅಥವಾ ಗಿಫ್ಟ್ಸ್ ನೀಡಲು ಮರೆತು ಹೋಗುತ್ತಾರೆ, ಆದರೆ ಈ ಇಳಿ ಜೀವಗಳು ಈ ವಯಸ್ಸಿನಲ್ಲಿಯೂ ಸರ್‌ಫ್ರೈಸ್ ಗಿಫ್ಟ್ ನೀಡುವುದನ್ನು ಅವರ ಸಂತೋಷ ಮೊಮ್ಮಗ ಸೆರೆ ಹಿಡಿದಿದ್ದು ಅದನ್ನು ನೋಡುವಾಗ ನಮಗೂ ವಾವ್! ಎಷ್ಟೊಂದು ಕ್ಯೂಟ್ ಜೋಡಿ ಎಂದನಿಸದೆ ಇರಲ್ಲ.
ಆ ಹುಡುಗ ನನ್ನ ಅಜ್ಜ-ಅಜ್ಜಿ 60 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗುತ್ತಾರೆ. ಅವರು ಪ್ರತಿವರ್ಷ ಮ್ಯಾರೆಜ್ ಆ್ಯನಿವರ್ಸರಿಯನ್ನು (ಮದುವೆಯ ವಾರ್ಷಿಕೋತ್ಸವ) ತುಂಬಾ ಅದ್ಧೂರಿಯಾಗಿ ಮಾಡುತ್ತಾರೆ. ಆದರೆ ಈ ಬಾರಿ ಅಜ್ಜಿ ಹುಷಾರಿಲ್ಲದೆ ಆಸ್ಪತ್ರೆಯಲ್ಲಿರುತ್ತಾರೆ, ಅಜ್ಜನಿಗೂ ಆರೋಗ್ಯ ಸಮಸ್ಯೆಯಿಂದಾಗಿ ಓಡಾಡಲು ಕಷ್ಟ, ಹಾಗಾಗಿ ಅವರು ಮನೆಯಲ್ಲಿರುತ್ತಾರೆ.
ಆದರೆ ಮದುವೆ ವಾರ್ಷಿಕೋತ್ಸವ ದಿನ ಅಜ್ಜ ಅಜ್ಜಿಗೆ ಒಂದು ಗಿಫ್ಟ್ ಕಳುಹಿಸುತ್ತಾರೆ, ಅಜ್ಜಿಯೂ ಆಸ್ಪತ್ರೆಯಲ್ಲಿ ಇದ್ದರೂ ಗಿಫ್ಟ್ ತರಿಸಿ ಅಜ್ಜನಿಗೆ ನೀಡುತ್ತಾರೆ, ಆ ಗಿಫ್ಟ್ ಅನ್ನು ಓಪನ್ ಮಾಡುವಾಗ ಅವರ ಸಂಭ್ರಮ ನೋಡುವಾಗ ತುಂಬಾನೇ ಖುಷಿಯಾಗುವುದು, ಅಷ್ಟು ಮಾತ್ರವಲ್ಲ 30 ದಿನ ಆಸ್ಪತ್ರೆಯಲ್ಲಿದ್ದು ನಂತರ ಅಜ್ಜಿ ಮನೆಗೆ ಬರುವಾಗ ಅಜ್ಜಿ ಹೊರಗಡೆ ಅಜ್ಜಿಗಾಗಿ ಕಾಯುತ್ತಿರುವುದು, ಅಜ್ಜನನ್ನು ನೋಡಿ ಅಜ್ಜಿ ನಾನು ಈಗ ಸ್ಟ್ರಾಂಗ್ ಆಗಿದ್ದೇನೆ ಎಂದು ಹೇಳಿ ಅಜ್ಜನ ಬಳಿ ಬಂದು ನೀಡುವ ಪ್ರೀತಿಯ ಅಪ್ಪುಗೆ ಇದೆಲ್ಲಾ ನೋಡುವಾಗ ಪ್ರೀತಿಯೆಂದರೆ ಹೀಗಿರಬೇಕು ಅನಿಸುವುದು. ಎಷ್ಟೊಂದು ಗಟ್ಟಿಯಾದ ಪ್ರೀತಿ, ಈ ಇಳಿ ವಯಸ್ಸಿನಲ್ಲಿಯೂ ಅವರಿಬ್ಬರು ಈಗಷ್ಟೆ ಪ್ರೀತಿಯಲ್ಲಿ ಬಿದ್ದಂತೆ ಇದ್ದಾರೆ.
ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ಪ್ರೀತಿ ಉಳಿಯಲು ನಾವು ಪ್ರಯತ್ನ ಮಾಡುತ್ತಲೇ ಇರಬೇಕು, ಆ ಇಳಿ ವಯಸ್ಸಿನಲ್ಲಿ ಅದೂ ಆಸ್ಪತ್ರೆಯ ಬೆಡ್‌ನಲ್ಲಿದ್ದರೂ ಅವರು ತಮ್ಮ ಮದುವೆ ವಾರ್ಷಿಕೋತ್ಸವಕ್ಕೆ ಗಿಫ್ಟ್ ನೀಡುತ್ತಾರೆ, ಅಂದರೆ ನಾವಿಲ್ಲಿ ಪ್ರೀತಿಯೆಂದರೆ ಗಿಫ್ಟ್ಸ್ ಅಂತ ಹೇಳುತ್ತಿಲ್ಲ.
ಆದರೆ ತಮ್ಮ ಪ್ರೇಮಿಗಾಗಿ ನಾವು ಪ್ರೀತಿಯೊಂದು ಮಾಡುವ ಪ್ರತಿಯೊಂದು ವಿಷಯ ತುಂಬಾ ಮುಖ್ಯವಾಗಿರಲಿದೆ. ಇವರ ಪ್ರೀತಿಯನ್ನು ನೋಡಿ ನನಗೆ ಇಂಥ ಪ್ರೀತಿ ಸಿಗುವವರೆಗೆ ನಾನು ಸಿಂಗಲ್ ಆಗಿಯೇ ಇರುತ್ತೇನೆ ಅಂತಾನೆ ಮೊಮ್ಮಗ, ಹೌದು ಯಾರಿಗಾದರೂ ಇಂಥ ಪ್ರೀತಿ ನಮ್ಮ ಬದುಕಿನಲ್ಲೂ ಇರಬೇಕು ಎಂದು ಬಯಸುತ್ತಾರೆ, ಪ್ರೀತಿಯಲ್ಲಿ ಆದರ್ಶವಾಗಿದ್ದಾರೆ ಈ ಜೋಡಿ.



Click it and Unblock the Notifications