ಬ್ರದರ್.. ಮದುವೆಗೂ ಮೊದಲೇ ಹೆಂಡ್ತಿಗೆ ಈ 5 ಪ್ರಶ್ನೆ ಕೇಳಿ! ಆಮೇಲೆ ನೋಡಿ

ಮದುವೆಯು ಜೀವನದಲ್ಲಿ ಒಂದು ದೊಡ್ಡ ಅಧ್ಯಾಯ. 'ನೂರು ಸುಳ್ಳುಗಳನ್ನು ಹೇಳಿದರೂ ಸಹ, ನೀವು ಮದುವೆಯಾಗಬೇಕು' ಎಂಬುದು ಹಳೆಯ ಮಾತು. ಆದರೆ, ತಜ್ಞರು ನೀವು ಯಾವುದೇ ಸುಳ್ಳುಗಳಿಲ್ಲದೆ ಪರಿಶೀಲಿಸಿ ಮದುವೆಯಾಗಬೇಕು ಎಂದಿದ್ದಾರೆ. ಹೌದು, ಮದುವೆಯು (marriage) ಜೀವನದ ಅತ್ಯಂತ ಪ್ರಮುಖ ಮತ್ತು ಸುಂದರವಾದ ಸಂಬಂಧ. ಇದನ್ನು ಕಾಪಾಡಿಕೊಳ್ಳುವುದು ಸುಲಭವಲ್ಲ. ವಿಭಿನ್ನ ಆಲೋಚನೆಗಳು, ಅಭ್ಯಾಸಗಳು ಮತ್ತು ನಿರೀಕ್ಷೆಗಳನ್ನು ಹೊಂದಿರುವ ಇಬ್ಬರು ವ್ಯಕ್ತಿಗಳು ತಮ್ಮ ಜೀವನವನ್ನು ಒಟ್ಟಿಗೆ ಕಳೆಯಲು ನಿರ್ಧರಿಸುತ್ತಾರೆ. ಈ ಪರಿಸ್ಥಿತಿಯಲ್ಲಿ, ಕೆಲವು ಪ್ರಮುಖ ವಿಷಯಗಳನ್ನು ಮೊದಲೇ ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ, ಸಂಬಂಧದಲ್ಲಿ (Relationship) ಸಮಸ್ಯೆಗಳು ಉಂಟಾಗಬಹುದು. ಹೀಗಾಗಿ, ಮದುವೆಗೆ ಮೊದಲೇ ನಿಮ್ಮ ಪ್ರೇಯಸಿಗೆ ಅಥವಾ ಹೆಂಡತಿಗೆ ಈ ಪ್ರಶ್ನೆಗಳನ್ನು ಕೇಳಿ.

ಸಾಮಾನ್ಯವಾಗಿ ಕೆಲವರು ಮದುವೆಗೆ ಮೊದಲು ದೊಡ್ಡ ನಿರ್ಧಾರಗಳನ್ನು ಪ್ರೀತಿ ಅಥವಾ ಭಾವನೆಗಳಿಂದ ತೆಗೆದುಕೊಳ್ಳುತ್ತಾರೆ. ಆದರೆ, ಕೆಲವು ವಿಷಯಗಳನ್ನು ಮೊದಲೇ ತಿಳಿದುಕೊಳ್ಳುವುದು ಬುದ್ಧಿವಂತಿಕೆ. ನಮ್ಮ ಜೀವನವು ಮದುವೆಗೆ ಮೊದಲು ಮತ್ತು ಬಳಿಕ ಬದಲಾಗುತ್ತದೆ. ಇಷ್ಟು ದೊಡ್ಡ ವಿಷಯದಲ್ಲಿ ತೆಗೆದುಕೊಳ್ಳಬೇಕಾದ ಹಲವು ಮುನ್ನೆಚ್ಚರಿಕೆಗಳಿವೆ. ಮದುವೆಯು ಜೀವಮಾನದ ಸಂಬಂಧವಾಗಿದೆ. ಆದ್ದರಿಂದ, ಈ ಜೀವಮಾನದ ಸಂಬಂಧವನ್ನು ರೂಪಿಸುವ ಮೊದಲು, ನಿಮ್ಮ ಸಂಗಾತಿಗೆ ಕೆಲವು ಪ್ರಮುಖ ಪ್ರಶ್ನೆಗಳನ್ನು ಕೇಳುವುದು ಅವಶ್ಯಕ. ನಾವಿಂದು ನಿಮಗಾಗಿ ಅಂತಹ ಪ್ರಮುಖ ಪ್ರಶ್ನೆಗಳ ಬಗ್ಗೆ ಇಲ್ಲಿ ತಿಳಿಸಿದ್ದೇವೆ.

Questions to ask Your Partner before marriage

ಅವರು ನಿನ್ನನ್ನು ಮದುವೆಯಾಗಲು ಬಯಸುತ್ತಾರಾ?

ಮದುವೆಗೆ ಮುನ್ನ, ಅವಳು ಅಥವಾ ನಿಮ್ಮ ಸಂಗಾತಿ ಈ ಸಂಬಂಧವನ್ನು ಬಯಸುತ್ತಾಳೆಯೇ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಬಲವಂತವಾಗಿ ಅಥವಾ ಕುಟುಂಬದ ಒತ್ತಡದಿಂದ ತೆಗೆದುಕೊಂಡ ನಿರ್ಧಾರವು ಬಳಿಕ ಸಮಸ್ಯೆಗೆ ಕಾರಣವಾಗಬಹುದು. ಇದನ್ನು ಮುಕ್ತವಾಗಿ ಚರ್ಚಿಸಿ ಮತ್ತು ಅವಳ ಉತ್ತರವನ್ನು ಅರ್ಥಮಾಡಿಕೊಳ್ಳಿ. ಅವರು ಸಂತೋಷದಿಂದ ಹೌದು ಎಂದು ಹೇಳಿದರೆ, ಮುಂದುವರಿಯಿರಿ.

ನಿಮ್ಮ ಹೆತ್ತವರ ಬಗ್ಗೆ ಅವಳು ಏನು ಯೋಚಿಸುತ್ತಾಳೆ?

ಮದುವೆ ಎಂದರೆ ಕೇವಲ ಇಬ್ಬರು ವ್ಯಕ್ತಿಗಳ ಸಂಗಮವಲ್ಲ. ಬದಲಾಗಿ, ಎರಡು ಕುಟುಂಬಗಳ ಸಂಗಮ. ನಿಮ್ಮ ಹೆತ್ತವರು ಅಥವಾ ಪೋಷಕರು ಮತ್ತು ಕುಟುಂಬದ ಬಗ್ಗೆ ಅವರು ಏನು ಯೋಚಿಸುತ್ತಾರೆ ಎಂದು ಕೇಳಬೇಕು. ಅವಳು ಅವರನ್ನು ಸಹ ಸ್ವೀಕರಿಸಲು ಸಿದ್ಧಳಾಗಿದ್ದರೆ, ನಿಮ್ಮ ಸಂಬಂಧವು ಬಲವಾಗಿರುತ್ತದೆ. ಇಲ್ಲದಿದ್ದರೆ, ಭವಿಷ್ಯದಲ್ಲಿ ಜಗಳ ಉಂಟಾಗಬಹುದು.

ಮದುವೆ ಬಳಿಕ ಜೀವನವನ್ನು ಹೇಗೆ ನಡೆಸಬೇಕು?

ಮದುವೆಯ ಬಳಿಕ ಭವಿಷ್ಯದ ಯೋಜನೆ ಏನು? ಜೀವನವನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ಮುಂಚಿತವಾಗಿ ಒಂದು ಯೋಜನೆ ಹೊಂದಿರುವುದು ಮುಖ್ಯ. ಮಕ್ಕಳು, ವೃತ್ತಿ ಮತ್ತು ಜೀವನಶೈಲಿಯ ಬಗ್ಗೆ ಅವಳು ಏನು ಯೋಚಿಸುತ್ತಾಳೆ ಎಂದು ಕೇಳಬೇಕು. ಇದು ನಿಮ್ಮಿಬ್ಬರ ನಡುವೆ ಸ್ಪಷ್ಟತೆಯನ್ನು ಕಾಪಾಡಿಕೊಳ್ಳುತ್ತದೆ. ವಿಭಿನ್ನ ಆಲೋಚನೆಗಳು ಮದುವೆ ಬಳಿಕ ಸಂಬಂಧದಲ್ಲಿ ಅಂತರ ಉಂಟುಮಾಡಬಹುದು.

ಹಣಕಾಸಿನ ವಿಷಯಗಳಲ್ಲಿ ಭಿನ್ನಾಭಿಪ್ರಾಯ?

ಹಣ ಮತ್ತು ಖರ್ಚುಗಳ ಬಗ್ಗೆ ಅವಳ ಅಭಿಪ್ರಾಯವೇನು? ಹಣಕಾಸಿನ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ದಾಂಪತ್ಯ ಜೀವನದಲ್ಲಿ ದೊಡ್ಡ ಸಮಸ್ಯೆ ಆಗಬಹುದು. ಖರ್ಚು, ಉಳಿತಾಯ ಮತ್ತು ಜವಾಬ್ದಾರಿಗಳ ಬಗ್ಗೆ ಅವಳ ಅಭಿಪ್ರಾಯ ಏನೆಂದು ತಿಳಿದುಕೊಳ್ಳಿ. ನಿಮ್ಮಿಬ್ಬರ ಅಭಿಪ್ರಾಯವೂ ಒಂದೇ ಆಗಿದ್ದರೆ, ಜೀವನ ಸುಲಭವಾಗುತ್ತದೆ. ಇಲ್ಲದಿದ್ದರೆ ಆಗಾಗ್ಗೆ ಜಗಳ ನಡೆಯಬಹುದು.

ನಮ್ಮ ನಡುವೆ ಸಂಘರ್ಷ ಉಂಟಾದರೆ, ಅದನ್ನು ಹೇಗೆ ನಿಭಾಯಿಸುತ್ತೀರಿ?

ಜೀವನದಲ್ಲಿ ಒಟ್ಟಿಗೆ ಬದುಕಲು ನಿರ್ಧರಿಸಿದಾಗ, ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಿದೆ. ಅಂತಹ ಸಂದರ್ಭದಲ್ಲಿ ನೀವು ರಾಜಿ ಮಾಡಿಕೊಂಡರೆ ಮಾತ್ರ, ನೀವು ಬದುಕಿನ ಬಂಡಿಯಲ್ಲಿ ಮುಂದೆ ಪ್ರಯಾಣಿಸುತ್ತೀರಿ. ಸಂಘರ್ಷಗಳು ಇದ್ದಾಗ, ನೀವು ರಾಜಿ ಮಾಡಿಕೊಳ್ಳುತ್ತೀರಾ ಅಥವಾ ಇಲ್ಲವೇ ಎಂದು ನೀವು ಖಂಡಿತವಾಗಿಯೂ ಪ್ರಶ್ನಿಸಬೇಕು.

ಪ್ರೀತಿ ಮತ್ತು ಪ್ರಾಮಾಣಿಕತೆ

ಯಾವುದೇ ಯಶಸ್ವಿ ಸಂಬಂಧದ ಅಡಿಪಾಯ ಪ್ರಾಮಾಣಿಕತೆ ಮತ್ತು ನಿಜವಾದ ಪ್ರೀತಿಯ ಮೇಲೆ ನಿಂತಿದೆ. ಒಬ್ಬ ವ್ಯಕ್ತಿಯು ತನ್ನ ಜೀವನ ಸಂಗಾತಿಯ ಬಗ್ಗೆ ಪ್ರಾಮಾಣಿಕವಾಗಿ ಉಳಿದು, ಯಾವುದೇ ಷರತ್ತುಗಳಿಲ್ಲದೆ ಸಂಬಂಧವನ್ನು ಕಾಪಾಡಿಕೊಂಡರೆ, ಇಬ್ಬರು ಅದ್ಭುತ ಜೀವನವನ್ನು ನಡೆಸಬಹುದು.

English summary

Don't Neglect This! 5 Must Ask Questions for Your Partner Before Marriage

Not Neglect! 5 Questions to Must ask Your Partner before marriage
Story first published: Sunday, June 15, 2025, 15:45 [IST]
X
Desktop Bottom Promotion