Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಪತಿಯ ಬಳಿ ನೀವೆಂದು ಈ ವಿಚಾರ ಪ್ರಸ್ತಾಪಿಸಬೇಡಿ..! ಆತನ ಮನದಲ್ಲಿ ಇದು ಕಾಡುತ್ತಲೇ ಇರಲಿದೆ!!
ಸಂಬಂಧಗಳಲ್ಲಿ ಪ್ರೀತಿ, ಕೋಪ, ಮನಸ್ತಾಪ, ಗಲಾಟೆ, ಮುನಿಸು, ಸರಸ ಇದೆಲ್ಲವು ಸಾಮಾನ್ಯ. ಈ ಎಲ್ಲಾ ಅಂಶದಿಂದಾಗಿಯೆ ಸಂಬಂಧಗಳು ಬಿಗಿಯಾಗುವುದು ಅದು ಸುಂದರವಾಗುವುದು, ಆದ್ರೆ ಕೆಲವೊಮ್ಮೆ ನಿಮ್ಮ ಸಂಬಂಧಗಳು ದೀರ್ಘಕಾಲದ ಅಸಮಾಧಾನಕ್ಕೂ, ಮನಸ್ತಾಪಕ್ಕೂ, ನೋವಿಗೂ ಕಾರಣವಾಗಬಹುದು. ಅದರಲ್ಲೂ ಪತಿ ಪತ್ನಿಯ ಸಂಬಂಧ ಅನ್ನೋದು ಯಾವಾಗಲು ಇಂತಹ ಏರಿಳಿತದಿಂದಲೇ ಕೂಡಿರುವುದು ನೋಡಬಹುದು.
ದಾಂಪತ್ಯ ಸಂಬಂಧ ಎಲ್ಲ ಸಂಬಂಧಗಿಂತ ವಿಶೇಷ ಎನ್ನಬಹುದು. ಬಹುತೇಕ ಈ ಸಂಬಂಧವು ದೀರ್ಘಕಾಲ ಉಳಿಯಬಹುದಾದ ಸಂಬಂಧ ಆಗಿರುವುದರಿಂದ ಯಾವಾಗಲು ಸುಂದರವಾಗಿ, ಹೂವಿನ ಹಾಸಿಗೆಯಂತೆ ಇರಬೇಕು ಎಂಬ ಬಯಕೆ ಎಲ್ಲರಲ್ಲೂ ಇರುವುದು ಸಹಜ. ಆದ್ರೆ ಈ ಸಂಬಂಧ ಅತ್ಯಂತ ಸೂಕ್ಷ್ಮ ಭಾವನೆಗಳು, ಕಾಳಜಿಯ ಮೇಲೆ ರೂಪುಗೊಂಡಿರುತ್ತೆ.

ಪತಿ-ಪತ್ನಿಯ ಸಂಬಂಧ ಅನ್ನೋದು ಎಲ್ಲಾ ಸಂಬಂಧಗಳಿಗಿಂತ ಉತ್ತಮ ಎಂದು ಹೇಳಲಾಗುತ್ತೆ, ಅಲ್ಲಿ ಪರಸ್ಪರ ಪ್ರೀತಿ, ಬಾಂಧವ್ಯ, ಕಾಳಜಿ, ಆರೈಕೆ ಎಲ್ಲವೂ ಒಂದೇ ಕಡೆ ಸೇರುವ ವಿಶೇಷ ಅನುಬಂಧವಾಗಿರುತ್ತೆ. ಆದ್ರೆ ಕೆಲವೊಮ್ಮೆ ಈ ಸಂಬಂಧ ಕೆಡಲು ಕೆಲವೇ ಕೆಲವು ಮಾತುಗಳು ಕಾರಣವಾಗಿಬಿಡುತ್ತೆ. ಅದರಲ್ಲೂ ಪುರುಷರು ತನ್ನ ಬಾಳಸಂಗಾತಿಯ ಕುರಿತು ಒಂದಿಷ್ಟು ಭಾವನೆ ಹೊಂದಿರುತ್ತಾರೆ, ಆಕೆಯ ಕೆಲವು ಮಾತುಗಳು ಆತನಲ್ಲಿ ಆಳವಾಗಿ ಹಾನಿ ಮಾಡುತ್ತವೆ, ಹಾಗೆ ಸಂಬಂಧದಲ್ಲಿ ವೈಮನಸ್ಸಿಗೆ ಕಾರಣವಾಗಬಹುದು.
ಹಾಗಾದ್ರೆ ಪತ್ನಿಯ ಯಾವೆಲ್ಲಾ ಮಾತುಗಳು, ಆಕೆಯ ಯಾವ ರೀತಿಯ ವರ್ತನೆ ಪತಿಯಲ್ಲಿ ಆಳವಾಗಿ ಕಾಡಬಹುದು. ಯಾವ ಮಾತುಗಳಿಂದ ಆತನಿಗೆ ಅತೀ ಹೆಚ್ಚು ನೋವು ಕಾಡಬಹುದು ಎಂಬುದನ್ನು ಈ ಮೂಲಕ ತಿಳಿದುಕೊಳ್ಳೋಣ.
ಪರ ಪುರುಷನ ಹೊಗಳಿಕೆ
ನಿಮ್ಮ ಪತಿ ಎಷ್ಟೇ ಮುಕ್ತ ಮನಸ್ಸಿನ ಹಾಗೆ ಸ್ನೇಹ ಜೀವಿಯಾಗಿದ್ದರೂ ಕೂಡ ಅವರ ಎದುರು ಮತ್ತೋರ್ವ ಪುರುಷನ ಹೊಗಳುವುದು ಅವರಿಗೆ ಹಿಡಿಸುವುದಿಲ್ಲ. ಅದರಲ್ಲೂ ಮತ್ತೋರ್ವನ ಕುರಿತಂತೆ, ಅವರ ಸೌಂದರ್ಯ ಕುರಿತು, ಹಾಗೆ ಆರ್ಥಿಕ ಸ್ಥಿತಿಯ ಕುರಿತು ಹೊಗಳಿಕೆಯ ಮಾತನಾಡುವುದು ಆಳವಾದ ಪರಿಣಾಮ ಉಂಟು ಮಾಡಲಿದೆ. ಈ ಕುರಿತಂತೆ ನಿಮ್ಮ ಎದುರಿನಲ್ಲಿ ಪುರುಷರು ಯಾವ ವಿಚಾರವನ್ನು ಪ್ರಸ್ತಾಪಿಸದಿದ್ದರೂ ಈ ಮಾತುಗಳ ಕುರಿತು ಅವರು ಸದಾ ನೆನಪಿನಲ್ಲಿಡುತ್ತಾರೆ, ಹಾಗೆ ನಿಮ್ಮ ಕುರಿತಂತೆ ಅವರಲ್ಲಿ ಸಂಕುಚಿತ ಮನೋಭಾವ ಬೆಳೆಯಬಹುದು.
ಹೋಲಿಕೆ ಮಾಡಿ ಮಾತನಾಡುವುದು
ನಿಮ್ಮ ಪತಿಯ ಕುರಿತು ಹೊಗಳಿಕೆ ಮಾತನಾಡದಿದ್ದರೂ ಅವರಿಗೆ ಯಾವ ಬೇಸರವು ಇರುವುದಿಲ್ಲ, ಆದ್ರೆ ಎಂದಿಗೂ ಅವರನ್ನು ಮತ್ತೋರ್ವರ ಕುರಿತು ಹೋಲಿಕೆ ಮಾಡಿ ಮಾತನಾಡಬೇಡಿ. ಹೋಲಿಕೆ ಮಾಡುವುದರಿಂದ ಅವರ ಮನದಲ್ಲೂ ನಿಮ್ಮ ಕುರಿತಾಗಿ ಆಲಸ್ಯ ಮೂಡಬಹುದು, ಇದು ನಿಮ್ಮ ಸಂಬಂಧ ಹಾಳು ಮಾಡಲು ಸಾಕಾಗುತ್ತದೆ. ಹಾಗೆ ಹೋಲಿಕೆಯ ವೇಳೆ ನೀವು ಹೇಳಿರುವ ಒಂದೊಂದು ಮಾತುಗಳು ಕೂಡ ಅವರ ನೆನಪಿನಲ್ಲಿ ಉಳಿಯುತ್ತದೆ. ಇದರಿಂದ ಸಂಬಂಧಗಳು ಹಾಳಾಗುವ ಸಂಭವ ಹೆಚ್ಚು. ಅದರಲ್ಲೂ ನೀವು ಪತಿ ಹಾಗೂ ಮತ್ತೋರ್ವರ ಆರ್ಥಿಕ ಸ್ಥಿತಿ, ವಸ್ತುಗಳು, ಅವರ ಕುಟುಂಬ ಕುರಿತಂತೆ ಹೋಲಿಕೆ ಮಾಡಿ ಮಾತನಾಡುವುದು ಅವರಿಗೆ ಹಿಡಿಸುವುದಿಲ್ಲ.
ಬೇರೆಯವರ ಕುರಿತು ಪತಿ ಬಳಿಯೇ ಮಾಹಿತಿ ಪಡೆಯುವುದು
ಯಾವುದಾದರು ವಿಚಾರವಾಗಿ ಅಥವಾ ನಿಮ್ಮ ಹತ್ತಿರದ ಸಂಬಂಧಿಗಳು, ಸ್ನೇಹಿತರ ಕುರಿತಂತೆ ಪತಿಯ ಬಳಿ ಮಾಹಿತಿ ಪಡೆಯುವುದು. ಪುರುಷರು ತನ್ನ ಪತ್ನಿ ಮತ್ತೋರ್ವರ ಕುರಿತು ಮಾಹಿತಿ ಕೇಳಿ ಪಡೆಯುವುದನ್ನು ಸಹಿಸುವುದಿಲ್ಲವಂತೆ. ಇದರಿಂದ ನಿಮ್ಮ ಸಂಬಂಧದಲ್ಲಿ ಬಿರುಕು ಕೂಡ ಉಂಟಾಗಬಹುದು, ಹಾಗೆ ಈ ರೀತಿ ಬೇರೆಯವರ ಕುರಿತು ಏಕೆ ಮಾಹಿತಿ ಕಲೆಹಾಕುತ್ತಿದ್ದೀರಿ ಎಂಬುದನ್ನು ರಹಸ್ಯವಾಗಿ ಪತ್ತೆ ಮಾಡಲು ಮುಂದಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಇದು ಅವರ ಮನದಲ್ಲಿ ಆಳವಾಗಿ ಕಾಡಲು ಆರಂಭಿಸುತ್ತದೆ.



Click it and Unblock the Notifications
