Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಈ ದೇಶದಲ್ಲಿ ಬಾಡಿಗೆ ಪತ್ನಿ ಸಿಗ್ತಾರೆ..! ಇಷ್ಟವಾದರೆ ಮದುವೆ ಆಗಬಹುದು.! ಎಲ್ಲಿದೆ ಈ ಸ್ಥಳ
ವ್ಯಕ್ತಿಗಳು ಜೀವನದಲ್ಲಿ ಹಲವು ರೀತಿಯ ಸಂಬಂಧಗಳಿಗೆ ಒಳಗಾಗುವುದು, ಹಲವು ಜವಾಬ್ದಾರಿಗಳ ಹೊರಬೇಕಾಗುತ್ತದೆ. ಅದ್ರಲ್ಲೂ ಮುಖ್ಯವಾಗಿ ಪತಿ ಅಥವಾ ಪತ್ನಿಯ ಜಬಾವ್ದಾರಿಯನ್ನು ಆತ ಅಥವಾ ಆಕೆ ನಿರ್ವಹಿಸಬೇಕಾಗುತ್ತದೆ. ಹಿಂದೂ ಆಚರಣೆಗಳಲ್ಲಿ ಈ ದಾಂಪತ್ಯ ಜೀವನಕ್ಕೆ ಬಹುಮುಖ್ಯ ಸ್ಥಾನ ನೀಡಲಾಗುತ್ತದೆ. ಹಾಗೆ ವಿವಾಹವನ್ನು ಪಂಚಭೂತಗಳ ಸಾಕ್ಷಿಯಾಗಿ ನೆರವೇರಿಸುವುದು ನೋಡಬಹುದು.
ಆದ್ರೆ ಇಲ್ಲೊಂದು ಕಡೆ ಪತ್ನಿಯನ್ನು ನೀವು ಬಾಡಿಗೆ ಪಡೆಯಬಹುದು. ಈ ದೇಶದ ವಿಚಿತ್ರ ಆಚರಣೆ ಕುರಿತಾದ ದೊಡ್ಡ ಚಚೆ ಹಾಗೂ ಈ ಕುರಿತು ಬರೆಯಲಾಗಿರುವ ಪುಸ್ತಕ ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಈ ದೇಶವು ಈಗ ಈ ವಿಚಿತ್ರ ಆಚರಣೆಯ ಕುರಿತಾಗಿ ಸುದ್ದಿಯಾಗಿದೆ.

ನೈಟ್ ಲೈಫ್‌ಗೆ ಫೇಮಸ್ ಆಗಿರುವ ಥೈಲ್ಯಾಂಡ್‌ನಲ್ಲಿ ಇಂತಹದೊಂದು ವಿಚಿತ್ರ ಆಚರಣೆಯ ಕುರಿತಾದ ವಿಚಾರ ಪುಸ್ತಕದಲ್ಲಿ ದಾಖಲಾಗಿದೆ. ಇದು ಪ್ರವಾಸಿಗರಲ್ಲಿ ಹೊಸ ರೀತಿಯ ಅಲೆ ಎಬ್ಬಿಸಿದೆ. ಬಾಡಿಗೆ ಪತ್ನಿ ದಶಕಗಳ ಹಿಂದೆ ಜಪಾನ್‌ನಲ್ಲಿ ಆರಂಭವಾದ ವಿಚಿತ್ರ ಸಂಪ್ರದಾಯವು ನಂತರ ಥೈಲ್ಯಾಂಡ್‌ನಲ್ಲಿ ಅಲೆ ಎಬ್ಬಿಸಿದೆ.
ಈ ವಿದ್ಯಮಾನವು ಜಪಾನ್‌ನಲ್ಲಿ 1990ರ ದಶಕಗಳಲ್ಲಿ ಆರಂಭಗೊಂಡಿತ್ತು ಎಂದು ಹೇಳಲಾಗಿದೆ. ಅಲ್ಲಿನ ನಗರವಾಸಿಗಳಲ್ಲಿ ಬಹುತೇಕ ಕುಟುಂಬಗಳಲ್ಲಿ ಒಬ್ಬರು ಇಲ್ಲವೆ ಇಬ್ಬರು ಪಾತ್ರವೇ ವಾಸವಿದ್ದರು. ಹೀಗಾಗಿ ಮನೆಯಲ್ಲಿ ಜೊತೆಗಿರಲು ಹಣ ನೀಡಿ ಅಥಿತಿಗಳಂತೆ ಮನೆಯಲ್ಲಿ ನೆಲೆಸುತ್ತಿದ್ದರಂತೆ. ಇದು ಬಾಡಿಗೆ ಕುಟುಂಬ ಎಂಬ ಅಲ್ಪಾವಧಿಯ ವ್ಯವಸ್ಥೆ ಎಂದು ಹೇಳಲಾಗಿದೆ. ಸದ್ಯಕ್ಕೆ ಇದೆ ಪ್ರವೃತ್ತಿ ಈಗ ಥೈಲ್ಯಾಂಡ್‌ನಲ್ಲಿ ಹುಟ್ಟುಕೊಂಡಿದೆ.
ಆದ್ರೆ ಥೈಲ್ಯಾಂಡ್‌ನಲ್ಲಿ ಸ್ವಲ್ಪ ಭಿನ್ನವಾಗಿ ಹರಡಿದೆ. ಅಲ್ಲಿ ಪತ್ನಿಯನ್ನು ಬಾಡಿಗೆಗೆ ಪಡೆದುಕೊಳ್ಳಬಹುದು. ಇದೊಂದು ಉದ್ಯಮವಾಗಿ ಈಗ ಬೆಳೆದಿದೆ ಎಂದು ಹೇಳಲಾಗಿದೆ. ಅಲ್ಪಾವಧಿಯ ಬಾಡಿಗೆ ಹೆಂಡತಿ ವ್ಯವಸ್ಥೆಯು $500-$4,000 ರಿಂದ ಪ್ರಾರಂಭವಾಗಬಹುದು, ಆದರೆ ದೀರ್ಘಾವಧಿಯ ಒಪ್ಪಂದಗಳಿಗೆ ಬರೋಬ್ಬರಿ 100,000 ಡಾಲರ್ ಶುಲ್ಕ ವಿಧಿಸಬಹುದು.
ಲಾ ವೆರಿಟೆ ಎಮ್ಯಾನುಯೆಲ್ ಬರೆದಿರುವ ಥೈಲ್ಯಾಂಡ್ಸ್ ಟ್ಯಾಬೂ: ದಿ ರೈಸ್ ಆಫ್ ವೈಫ್ ರೆಂಟಲ್ ಇನ್ ಮಾಡರ್ನ್ ಸೊಸೈಟಿ ಎಂಬ ಪುಸ್ತಕದಲ್ಲಿ ಈ ಕುರಿತು ಅವರು ಬರೆದಿದ್ದಾರೆ. ಥೈಲ್ಯಾಂಡ್‌ನಲ್ಲಿ ಹೆಂಡತಿಯನ್ನು ಬಾಡಿಗೆಗೆ ಪಡೆಯುವ ವಿವಾದಾತ್ಮಕ ಅಭ್ಯಾಸವು ಹೇಗೆ ವೇಗವಾಗಿ ಬೆಳೆಯುತ್ತಿದೆ ಮತ್ತು ಆದಾಯದ ಪ್ರಮುಖ ಮೂಲವಾಗುತ್ತಿದೆ ಎಂಬುದನ್ನು ಈ ಪುಸ್ತಕ ಹೇಳುತ್ತದೆ. ಇದು ಅಲ್ಲಿನ ಮಹಿಳೆಯರಿಗೆ ಜೀವನೋಪಾಯದ ಹೊಸ ಮಾರ್ಗವಾಗಿ ಬದಲಾಗಿದೆ.
ಹೆಚ್ಚಿನ ಸಂಖ್ಯೆಯ ವಿದೇಶಿ ಪ್ರವಾಸಿಗರು ಥೈಲ್ಯಾಂಡ್‌ಗೆ ಆಗಮಿಸುತ್ತಾರೆ. ಈ ಸಮಯದಲ್ಲಿ ಥೈಲ್ಯಾಂಡ್‌ನ ಗ್ರಾಮೀಣ ಭಾಗದ ಮಹಿಳೆಯರು ಈ ಬಾಡಿಗೆ ಪತ್ನಿಯಾಗಿ ದುಡಿಮೆಗೆ ಇಳಿಯುತ್ತಾರೆ. ಅದ್ರಲ್ಲೂ ಪಟ್ಟಾಯದ ಬಾರ್, ನೈಟ್ ಕ್ಲಬ್‌ನಂತಹ ಪ್ರದೇಶದಲ್ಲಿ ಈ ವ್ಯವಹಾರಗಳು ನಡೆಯುತ್ತವೆ. ಇದು ಔಪಚಾರಿಕ ವಿವಾಹವಲ್ಲ ಬದಲಿಗೆ ಇಂದೊಂದು ತಾತ್ಕಾಲಿಕ ಒಪ್ಪಂದವಾಗಿ ನಡೆಯಲಿದೆ. ಇದು ಕೆಲವು ದಿನಗಳಿಂದ ಹಿಡಿದು ತಿಂಗಳ ಕಾಲ ಒಪ್ಪಂದ ಏರ್ಪಡಬಹುದು. ಮಹಿಳೆಯರು ಜೀವನ ನಿರ್ವಹಣೆಗೆ ಇಂತಹ ಮಾರ್ಗ ಕಂಡುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಬಾಡಿಗೆ ಪತ್ನಿಯಾಗುವ ಮಹಿಳೆಯ ಸೌಂದರ್ಯ, ಶಿಕ್ಷಣ, ಸಮಯ, ವಯಸ್ಸು ಈ ರೀತಿಯ ಅಂಶಗಳ ಪರಿಗಣಿಸಿ ಆಕೆಯ ಶುಲ್ಕ ಕೂಡ ನಿಗದಿಯಾಗುತ್ತದೆ. 1600 ಡಾಲರ್‌ನಿಂದ ಪ್ರಾರಂಭಗೊಂಡು 11,600 ಡಾಲರ್ ವರೆಗೂ ಈ ದರ ನಿಗದಿಯಾಗುತ್ತದೆ. ಈ ವ್ಯವಹಾರ ಸಂಬಂಧವಾಗಿ ಥೈಲ್ಯಾಂಡ್‌ನಲ್ಲಿ ಯಾವುದೇ ನಿಯಮ, ಕಾನೂನು ಎಂಬುದಿಲ್ಲ. ಸದ್ಯ ಈ ಸಂಪ್ರದಾಯ ಕುರಿತಾಗಿ ಈಗ ಬಹಳ ಚರ್ಚೆ ಆರಂಭಗೊಂಡಿದೆ. ಥೈಲ್ಯಾಂಡ್‌ನ ಹಲವು ಭಾಗದಲ್ಲಿ ಈಗ ಈ ವ್ಯವಹಾರ ಜೋರಾಗಿ ಸದ್ದು ಮಾಡುತ್ತಿದೆ.



Click it and Unblock the Notifications
