Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ಎರಡು ವರ್ಷದ ಬಳಿಕ ಅಧಿಕೃತವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಧನುಷ್ ಜೋಡಿ
ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ಮತ್ತು ನಟ-ನಿರ್ದೇಶಕ ಧನುಷ್ ಅಧಿಕೃತವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಎರಡು ವರ್ಷದ ಹಿಂದೆ ಇಬ್ಬರೂ ಬೇರೆ ಬೇರೆ ಆಗುವ ಕುರಿತು ಮಾಹಿತಿ ಹಂಚಿಕೊಂಡಿದ್ದ ಅವರು ಇತ್ತೀಚಿಗೆ ಅಧಿಕೃತ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಚೆನ್ನೈ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ - ಸೆಕ್ಷನ್ 13 ಬಿ ಅಡಿಯಲ್ಲಿ ಅವರು ಅರ್ಜಿ ಸಲ್ಲಿಸಿದ್ದಾರೆ ತಿಳಿದುಬಂದಿದೆ. 2022ರ ಜನವರಿಯಲ್ಲಿ ಇಬ್ಬರೂ ಬೇರೆಯಾಗುವ ನಿರ್ಧಾರವನ್ನು ಪ್ರಕಟಿಸಿದ್ದರು.

ಸುಮಾರು ಒಂದೂವರೆ ವರ್ಷದ ನಂತರ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಶೀಘ್ರದಲ್ಲೇ ಅವರ ಪ್ರಕರಣದ ವಿಚಾರಣೆ ನಡೆಯಲಿದೆ. ಕಳೆದ ಎರಡು ವರ್ಷಗಳಿಂದ ಇಬ್ಬರೂ ಬೇರೆ ಬೇರೆಯಾಗಿ ವಾಸವಾಗಿದ್ದರು. ಆದರೆ ಇಬ್ಬರು ಒಟ್ಟಿಗೆ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.
ಒಮ್ಮೆ ಇಬ್ಬರು ತಮ್ಮ ಇಬ್ಬರು ಮಕ್ಕಳಾದ ಯಾತ್ರಾ ಹಾಗೂ ಲಿಂಗಾ ಅವರ ಶಾಲಾ ಕಾರ್ಯಕ್ರಮವೊಂದರಲ್ಲಿ ಮುಖಾಮುಖಿಯಾಗಿದ್ದರು. ಇದನ್ನು ಹೊರತುಪಡಿಸಿ ಇಬ್ಬರು ಎಲ್ಲಿಯೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಜನವರಿ 17, 2022 ರಂದು ಧನುಷ್, ತಾವಿಬ್ಬರು ಬೇರೆ ಬೇರೆ ಆಗುತ್ತಿರುವ ಕುರಿತು ಆಗಿನ ಟ್ವಿಟರ್‌ನಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದರು.
"18 ವರ್ಷಗಳ ಒಟ್ಟಿಗೆ ಸ್ನೇಹಿತರು, ದಂಪತಿ, ಪೋಷಕರು ಮತ್ತು ಪರಸ್ಪರ ಹಿತೈಷಿಗಳು. ಪ್ರಯಾಣವು ಬೆಳವಣಿಗೆ, ತಿಳುವಳಿಕೆ, ಹೊಂದಾಣಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿತ್ತು. ಇಂದು ನಾವು ನಮ್ಮ ಮಾರ್ಗಗಳು ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ. ಐಶ್ವರ್ಯ ಮತ್ತು ನಾನು ನಾವು ದಂಪತಿಗಳಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ'' ಎಂದು ಬರೆದುಕೊಂಡಿದ್ದರು.
ಇದೇ ರೀತಿಯ ಪೋಸ್ಟ್ ಅನ್ನು ಐಶ್ವರ್ಯಾ ತಮ್ಮ ಸಾಮಾಜಿಕ ಮಾಧ್ಯಮ ಪುಟದಲ್ಲಿ ಹಂಚಿಕೊಂಡಿದ್ದರು. ಧನುಷ್ ಮತ್ತು ಐಶ್ವರ್ಯ ಅವರು ಕ್ರಮವಾಗಿ 21 ಮತ್ತು 23 ವರ್ಷದವರಾಗಿದ್ದಾಗ 2004 ರಲ್ಲಿ ಅದ್ಧೂರಿ ವಿವಾಹವಾದರು. ಇಬ್ಬರೂ ಈಗ ಯಾತ್ರಾ ಮತ್ತು ಲಿಂಗ ಎಂಬ ಇಬ್ಬರು ಗಂಡುಮಕ್ಕಳಿಗೆ ತಂದೆ ತಾಯಿಯಾಗಿದ್ದಾರೆ.
ಅವರ ಪ್ರತ್ಯೇಕತೆಯ ನಂತರ, ಧನುಷ್ ಮತ್ತು ಐಶ್ವರ್ಯಾ ತಮ್ಮ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಿದ್ದಾರೆ. ಐಶ್ವರ್ಯ ಅವರು 'ಲಾಲ್ ಸಲಾಮ್' ಮೂಲಕ ನಿರ್ದೇಶಕಿಯಾಗಿ ಮೊದಲ ಸಿನಿಮಾ ನಿರ್ದೇಶಿಸಿದರು. ರಜನಿಕಾಂತ್ ಈ ಸಿನಿಮಾದಲ್ಲಿ ಕಾಣಿಸಿಕೊಂಡರು. ಈ ಚಿತ್ರದ ಕುರಿತು ನಟ ಧನುಷ್ ಸಹ ಪ್ರತಿಕ್ರಿಯಿಸಿದ್ದರು.
ಇತ್ತೀಚೆಗೆ ಅನಿರುದ್ಧ್ ರವಿಚಂದರ್ ವಿಚಾರದ ಬಗ್ಗೆ ಮಾತನಾಡುತ್ತಾ ಧನುಷ್ ಹೆಸರನ್ನು ಐಶ್ವರ್ಯ ಪ್ರಸ್ತಾಪಿಸಿದ್ದರು. ಅನಿರುದ್ಧ್‌ನ ಸಕ್ಸಸ್ ಜರ್ನಿ ನೋಡಿದಾಗ, ನನಗೆ ತುಂಬ ಖುಷಿಯಾಗುತ್ತದೆ. ಆತ ನನ್ನ ಸಂಬಂಧಿ. ಆದರೂ ಆತ ಮ್ಯೂಸಿಕ್ ಡೈರೆಕ್ಟರ್ ಆಗುವುದಕ್ಕೆ ನಾನು ಕಾರಣಳಲ್ಲ. ಅನಿರುದ್ಧ್ ಸಿನಿಮಾರಂಗಕ್ಕೆ ಬಂದಿದ್ದೇ ಧನುಷ್ ಕಡೆಯಿಂದ. ಧನುಷ್‌ಗೆ ಪ್ರತಿಭೆಗಳನ್ನು ಗುರುತಿಸುವುದು ಗೊತ್ತಿದೆ ಎಂದು ಹೊಗಳಿದ್ದರು. ಹೀಗಾಗಿ ಇಬ್ಬರೂ ಮತ್ತೆ ಒಂದಾಗಬೇಕು ಎಂದು ಆಪ್ತರು, ಅಭಿಮಾನಿಗಳು ಬಯಸಿದ್ದರು. ಆದರೆ ಈಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಮಾಹಿತಿ ಬಹಿರಂಗವಾಗಿದೆ.
ಎರಡು ವರ್ಷದಿಂದ ಬೇರೆಯಾಗಿಯೇ ವಾಸವಿದ್ದ ಇವರು ಮತ್ತೆ ಒಂದಾಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ ಅಂತಿಮವಾಗಿ ಇಬ್ಬರೂ ಬೇರೆಯಾಗುವ ನಿರ್ಧಾರ ಮಾಡಿದ್ದಾರೆ.
ಇನ್ನು ಲೇಡಿ ಸೂಪರ್ ಸ್ಟಾರ್ ನಯನತಾರ ಮತ್ತು ವಿಘ್ನೇಶ್ ಶಿವನ್ ಮದುವೆಯಾಗಲು ಸಹ ನಟ ಧನುಷ್ ಕಾರಣವಂತೆ. ನಿರ್ದೇಶಕ ವಿಘ್ನೇಶ್‌ಗೆ ರೌಡಿ ಧಾನ್ ಸಿನಿಮಾ ಕಥೆಯನ್ನು ನಯನತಾರಾ ಅವರಿಗೆ ಹೇಳುವಂತೆ ಧನುಷ್ ಹೇಳಿದ್ದರಂತೆ. ಇಲ್ಲಿಂದಲೇ ಅವರಲ್ಲಿ ಪ್ರೀತಿ ಮೂಡಿ ಇಬ್ಬರು ಬಳಿಕ ಮದುವೆಯಾಗಿದ್ದರು.



Click it and Unblock the Notifications
