Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಲವ್ ಸ್ಟ್ರಾಂಗ್ ಆಗಬೇಕಾ? 777 ರೂಲ್ ಪಾಲಿಸಿ.. ಏನಿದು ನಿಯಮ? ಸಕ್ಸಸ್ ಹೇಗೆ ಸಿಗುತ್ತೆ?
ನಿಮ್ಮ ಸಂಬಂಧ ಗಟ್ಟಿಯಾಗ್ಬೇಕಾ? ಡೇಟಿಂಗ್‌ನ 7-7-7 ನಿಯಮ (777 Rule in Dating) ಅರ್ಥಮಾಡಿಕೊಳ್ಳಿ. ಇದನ್ನು ಹೇಗೆ ಅಳವಡಿಸಿಕೊಳ್ಳಬೇಕು? ಇಂದಿನ ವೇಗದ ಜಗತ್ತಿನಲ್ಲಿ, ಲವ್ ಸಹ ಅಷ್ಟೇ ವೇಗವಾಗಿ ಪ್ರಾರಂಭವಾಗಿ, ಕೆಲವೊಮ್ಮೆ ಅಷ್ಟೇ ವೇಗವಾಗಿ ಮುರಿದು ಬೀಳುತ್ತೆ. ಸೋಶಿಯಲ್ ಮೀಡಿಯಾಗಳು ಮತ್ತು ಡೇಟಿಂಗ್ ಅಪ್ಲಿಕೇಶನ್‌ಗಳು ಹೊಸ ಜನರ ಭೇಟಿಗೆ ಸಹಕಾರಿಯಾಗಿದ್ದರೂ, ಆಳವಾದ ಮತ್ತು ಅರ್ಥಪೂರ್ಣ ಸಂಬಂಧಗಳನ್ನು ಬೆಳೆಸುವುದು ಸವಾಲಾಗಿದೆ. ಪ್ರಸ್ತುತ ಡೇಟಿಂಗ್ ಪ್ರಕ್ರಿಯೆಗಳು ಸಾಕಷ್ಟು ಬದಲಾವಣೆಗಳನ್ನು ಕಂಡಿವೆ. ಈ ಹಿನ್ನೆಲೆಯಲ್ಲಿ, ಡೇಟಿಂಗ್ ಮಾಡುವಾಗ ಕೆಲವು ನಿರ್ದಿಷ್ಟ ನಿಯಮಗಳನ್ನು ಅನುಸರಿಸುವುದು ಸಂಬಂಧ ಗಟ್ಟಿಯಾಗುತ್ತದೆ.
ಸದ್ಯ '7-7-7 ನಿಯಮ' (777 Rule) ಎಂಬುದು ಡೇಟಿಂಗ್ ಜಗತ್ತಿನಲ್ಲಿ ಹೊಸ ಸಂಚಲನವನ್ನು ಸೃಷ್ಟಿಸುತ್ತಿದೆ. ಇದು ಕೇವಲ ಒಂದು ಟ್ರೆಂಡ್ ಅಲ್ಲ, ಬದಲಿಗೆ ಹೊಸ ಸಂಬಂಧವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ಸಹಾಯ ಮಾಡುವ ಒಂದು ಪ್ರಾಯೋಗಿಕ ಮಾರ್ಗವಾಗಿದೆ. ಬಹುಶಃ ಹೆಚ್ಚಿನ ಜನರಿಗೆ ಇದರ ಬಗ್ಗೆ ತಿಳಿದಿಲ್ಲ. ಈ ನಿಯಮದ ಪ್ರಕಾರ, ಹೊಸ ಸಂಬಂಧವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು, ಮೊದಲ 7 ದಿನಗಳು, ನಂತರ 7 ವಾರಗಳು ಮತ್ತು ನಂತರ 7 ತಿಂಗಳುಗಳವರೆಗೆ ಸಂಬಂಧವನ್ನು ಅರ್ಥ ಮಾಡಿಕೊಳ್ಳಬೇಕು.

7-7-7 ನಿಯಮ ಎಂದರೇನು?
7-7-7 ನಿಯಮವು ಹೊಸ ಸಂಬಂಧದಲ್ಲಿ ಮೂರು ನಿರ್ದಿಷ್ಟ ಹಂತಗಳಲ್ಲಿ ಗಮನ ಹರಿಸುವಂತೆ ಸೂಚಿಸುತ್ತದೆ. ಪ್ರತಿಯೊಂದು '7' ಒಂದು ನಿರ್ದಿಷ್ಟ ಸಮಯದ ಅವಧಿಯನ್ನು ಮತ್ತು ಆ ಅವಧಿಯಲ್ಲಿ ಏನು ಮಾಡಬೇಕು ಎಂಬುದನ್ನು ಪ್ರತಿನಿಧಿಸುತ್ತದೆ.
ಮೊದಲ 7 ದಿನಗಳು
ಲವ್ ಅಥವಾ ಸಂಬಂಧ ಪ್ರಾರಂಭವಾದ ಮೊದಲ 7 ದಿನಗಳು (First 7 Days) ಅತ್ಯಂತ ನಿರ್ಣಾಯಕ. ಈ ಸಮಯದಲ್ಲಿ, ನಿಮ್ಮ ಸಂಗಾತಿಯ ಮಾತು, ವರ್ತನೆ (ನಡವಳಿಕೆ) ಮತ್ತು ಬಾಡಿ ಲಾಂಗ್ವೇಜ್ (ದೇಹ ಭಾಷೆ) ಅನ್ನು ಗಮನಿಸಬೇಕು. ಅವರು ಹೇಗೆ ಮಾತನಾಡುತ್ತಾರೆ, ಜನರೊಂದಿಗೆ ಹೇಗೆ ವರ್ತಿಸುತ್ತಾರೆ, ಒತ್ತಡದ ಸಂದರ್ಭಗಳಲ್ಲಿ ಹೇಗೆ ಪ್ರತಿಕ್ರಿಯಿಸುತ್ತಾರೆ ಮತ್ತು ಅವರ ಸಾಮಾನ್ಯ ಮನೋಭಾವ ಹೇಗಿರುತ್ತದೆ ಎಂಬುದನ್ನು ಗಮನಿಸಿ. ಉದಾಹರಣೆಗೆ, ಅವರು ಸಮಯಕ್ಕೆ ಸರಿಯಾಗಿ ಬರುತ್ತಾರೆಯೇ, ಇತರರ ಬಗ್ಗೆ ಹೇಗೆ ಮಾತನಾಡುತ್ತಾರೆ, ಸಾರ್ವಜನಿಕ ಸ್ಥಳಗಳಲ್ಲಿ ಅವರ ವರ್ತನೆ ಹೇಗಿರುತ್ತದೆ ಎಂಬುದನ್ನು ಗಮನಿಸಿ. ಇದು ಪರಸ್ಪರರ ಪ್ರಾಥಮಿಕ ಹೊಂದಾಣಿಕೆಯನ್ನು ಅಳೆಯುವ ಹಂತವಾಗಿದೆ.
ಮುಂದಿನ 7 ವಾರಗಳು
ಮೊದಲ 7 ದಿನಗಳ ನಂತರ, ಮುಂದಿನ 7 ವಾರಗಳು (Next 7 Weeks) ಪರಸ್ಪರರನ್ನು ಸ್ವಲ್ಪಮಟ್ಟಿಗೆ ತಿಳಿದುಕೊಳ್ಳಲು ಮೀಸಲಾಗಿರಬೇಕು. ಈ ಸಮಯದಲ್ಲಿ ನೀವು ಸಂಗಾತಿಯ ಹವ್ಯಾಸಗಳು, ಆಸಕ್ತಿಗಳು, ಮೌಲ್ಯಗಳು, ಜೀವನದ ಗುರಿಗಳು, ಮತ್ತು ಹಿಂದಿನ ಅನುಭವಗಳ ಬಗ್ಗೆ ತಿಳಿದುಕೊಳ್ಳಲು ಟ್ರೈ ಮಾಡಿ. ವಿವಿಧ ಚಟುವಟಿಕೆಗಳಲ್ಲಿ ಒಟ್ಟಾಗಿ ಪಾಲ್ಗೊಳ್ಳಿ. ಸಿನಿಮಾ ನೋಡುವುದು, ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡುವುದು, ಹವ್ಯಾಸಗಳನ್ನು ಹಂಚಿಕೊಳ್ಳುವುದು. ಸಂಗಾತಿಯ ಕುಟುಂಬ, ಸ್ನೇಹಿತರು ಮತ್ತು ವೃತ್ತಿಜೀವನದ ಬಗ್ಗೆ ತಿಳಿದುಕೊಳ್ಳಿ. ಈ ಸಮಯದಲ್ಲಿ ನೀವು ಪರಸ್ಪರರ ಹೊಂದಾಣಿಕೆಯನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿ. ಇದರಿಂದ ನೀವು ಅವರೊಂದೊಗೆ ಮುಂದುವರೆಯಲು ಯೋಗ್ಯವೇ? ಎಂದು ನಿರ್ಧರಿಸಬಹುದು. ಈ ಹಂತವು ಸಂಬಂಧದ ಅಡಿಪಾಯವನ್ನು ಬಲಪಡಿಸುತ್ತದೆ.
7 ತಿಂಗಳ ನಂತರ
ನಿಮ್ಮ ಸಂಬಂಧವು 7 ತಿಂಗಳು (After 7 Months) ತಲುಪಿದ ನಂತರ, ನೀವು ಇನ್ನಷ್ಟು ಆಳವಾದ ಸಂಪರ್ಕವನ್ನು ಬೆಳೆಸಿಕೊಂಡಿರುತ್ತೀರಿ. ಈ ಹಂತದಲ್ಲಿ ನೀವು ಒಟ್ಟಾಗಿ ಒಂದು ಸುಂದರವಾದ ಸ್ಥಳಕ್ಕೆ ಹೋಗಬಹುದು. ಇದು ನಿಮ್ಮಿಬ್ಬರ ನಡುವಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಹೊಸ ಪರಿಸರದಲ್ಲಿ, ಒತ್ತಡವಿಲ್ಲದ ಸಂದರ್ಭಗಳಲ್ಲಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ರಜೆ ಅಥವಾ ಪ್ರವಾಸವು ಸಂಬಂಧದಲ್ಲಿ ಹೊಸ ಉತ್ಸಾಹವನ್ನು ತರುತ್ತದೆ. ಇಬ್ಬರು ಒಟ್ಟಿಗೆ ಹೆಚ್ಚು ಸಮಯವನ್ನು ಕಳೆಯಲು ಅವಕಾಶ ನೀಡುತ್ತದೆ. ಭವಿಷ್ಯದ ಬಗ್ಗೆ ಯೋಚಿಸಲು ಅವಕಾಶ ಸಿಗುತ್ತದೆ. ಈ ಹಂತದಲ್ಲಿ, ನಿಮ್ಮ ಸಂಬಂಧವು ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತದೆ.
7-7-7 ನಿಯಮ ಏಕೆ ಮುಖ್ಯ?
ಡೇಟಿಂಗ್‌ನಲ್ಲಿ ತಕ್ಷಣದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ತಪ್ಪು. ಭಾವನಾತ್ಮಕವಾಗಿ ಅವಸರ ಮಾಡುವುದು ಭವಿಷ್ಯದಲ್ಲಿ ಸಮಸ್ಯೆಗಳನ್ನು ಸೃಷ್ಟಿಸಬಹುದು. ಸುಳ್ಳು ಭರವಸೆಗಳು ಮತ್ತು ತಪ್ಪು ತಿಳುವಳಿಕೆಗಳು ಸಂಬಂಧಗಳನ್ನು ಹಾಳುಮಾಡುತ್ತವೆ. 7-7-7 ನಿಯಮವು ನಿಮಗೆ ಎಚ್ಚರಿಕೆಯಿಂದ ಯೋಚಿಸಲು, ಪರಸ್ಪರರನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಮತ್ತು ಆತುರದ ತಪ್ಪುಗಳನ್ನು ಮಾಡುವುದನ್ನು ತಪ್ಪಿಸಲು ಅವಕಾಶ ನೀಡುತ್ತದೆ. ಇದು ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡಲು ಸಹಕಾರಿ. ಬಲವಾದ, ದೀರ್ಘಕಾಲೀನ ಸಂಬಂಧವನ್ನು ಹೊಂದಲು ಸಹಾಯ ಮಾಡುತ್ತದೆ.
ಒಟ್ಟಾರೆಯಾಗಿ, ಪ್ರತಿಯೊಂದು ಸಂಬಂಧವು ವಿಭಿನ್ನವಾಗಿರುತ್ತದೆ. ಆಧುನಿಕ ಡೇಟಿಂಗ್ ಜಗತ್ತಿನಲ್ಲಿ, 7-7-7 ನಿಯಮವು ಪ್ರೀತಿಯನ್ನು ಹುಡುಕುವವರಿಗೆ ಒಂದು ಅಮೂಲ್ಯ ಮಾರ್ಗದರ್ಶಿ ಎನ್ನಬಹುದು.



Click it and Unblock the Notifications














