Latest Updates
-
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ!
ಇವರು ಕಣ್ರೀ ನಿಜವಾದ ವ್ಯಾಲೆಂಟೈನ್ಸ್ ಅಂತಿದ್ದಾರೆ ನೆಟ್ಟಿಗರು: ಕ್ಯೂಟ್ ವಿಡಿಯೋ ವೈರಲ್
ವ್ಯಾಲೆಂಟೈನ್ಸ್ ಡೇ ಸಂಭ್ರಮ ಮುಗಿದಿದೆ ಅಷ್ಟೇ, ಆದರೆ ನಿಜವಾದ ವ್ಯಾಲೈಂಟೈನ್ಸ್ ಅಂದರೆ ಎಷ್ಟೇ ವರ್ಷಗಳು ಕಳೆದರೂ ಮೊದಲಿನ ಪ್ರೀತಿ ಉಳಿದಿರುವುದು, ಆ ಪ್ರೀತಿ ಮತ್ತಷ್ಟು ಹೆಚ್ಚಾಗುವುದು, ಅಂಥದ್ದೊಂದು ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ.
ಪ್ರೀತಿಯೆಂದರೆ ಖುಷಿಯಾಗಿರುವಾಗ ಜೊತೆಗಿದ್ದು ನಂತರ ಬೇರೆಯಾಗುವುದಲ್ಲ, ಎಂಥದ್ದೇ ಕಷ್ಟ-ಸುಖವಿರಲಿ ಇಬ್ಬರೂ ಅರ್ಥ ಮಾಡಿಕೊಂಡು ಬಾಳುವುದು, ಈ ವೀಡಿಯೋ ಕೂಡ ಅಂಥದ್ದೇ ಸಾರಾಂಶ ನೀಡುತ್ತದೆ.

ದಂಪತಿ ಬೈಕ್‌ನಲ್ಲಿ ಹೋಗುವಾಗ ಕಾರಿನಲ್ಲಿ ಹೋಗುತ್ತಿರುವವರು ಈ ವೀಡಿಯೋ ಚಿತ್ರೀಕರಿಸಿರಬಹುದು, ಏಕೆಂದರೆ ಅವರ ರಿಯಾಕ್ಷನ್ ಆಗಿದೆ. ಅವರು ಮನೆಯಲ್ಲಿರುವ ದನಕ್ಕೆ ಮೇವು ಬೈಕ್‌ನಲ್ಲಿ ತರುತ್ತಿದ್ದರು, ಹೀಗಾಗಿ ಬೈಕ್‌ನ ಹಿಂದೆ ಕೂರಲು ಸಾಧ್ಯವಿರಲಿಲ್ಲ, ಹೀಗಾಗಿ ಆತ ತನ್ನ ಮುದ್ದಿನ ಮಡದಿಯನ್ನು ಪ್ರೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿಕೊಂಡು ಕರೆದುಕೊಂಡು ಹೋಗುತ್ತಿದ್ದಾರೆ, ಈ ವೀಡಿಯೋ ತುಂಬಾನೇ ರೊಮ್ಯಾಂಟಿಕ್, ಜೋಡಿ ಅಂದರೆ ಹೀಗಿರಬೇಕು ಎನ್ನುವಂತಿದ್ದಾರೆ, ಅವರಿಬ್ಬರ ಪ್ರೀತಿಗೆ ಯಾರ ಕಣ್ಣೂ ಬೀಳದಿರಲಿ.
ಹೀಗಿನ ಪೀಳಿಗೆ ಇಂಥವರನ್ನು ನೋಡಿ ಕಲಿಯಬೇಕಾಗಿದೆ
ಈಗ ಪ್ರೀತಿ, ಮದುವೆ, ವಿಚ್ಛೇದನ ಎಲ್ಲವೂ ಬೇಗನೆ ಮುಗಿಯುತ್ತದೆ, ಅದರಲ್ಲೂ ಎಷ್ಟೋ ವಿಚ್ಛೇದನಗಳು ಯಾವಯದೋ ಚಿಕ್ಕ ವಿಷಯಕ್ಕೆ ಆಗಿರುತ್ತದೆ, ಲವ್ ಅಂದರೆ ಫ್ಯಾಂಟಸಿ ಅಲ್ಲ, ಈಗ ಬೇಕಾದರೆ ಫೋಟೋಶೂಟ್ ಮಾಡಿಸಲು ಪೆಟ್ರೋಲ್ ಟ್ಯಾಂಕ್ ಮೇಲೆ ಕೂರುತ್ತಾರೆ, ಆದರೆ ನಿಜವಾಗಿ ಈ ರೀತಿ ಕರೆದುಕೊಂಡು ಹೋದರೆ ಮಾತ್ರ ನಾನು ಬರಲ್ಲ, ಆಟೋ ಮಾಡು ಅಂತ ಹೇಳಬಹುದು, ಆದರೆ ಈಕೆಗೆ ಗಂಡನ ಕಷ್ಟ, ಗಂಡನ ಪ್ರೀತಿ ಎರಡೂ ಗೊತ್ತಿದೆ, ಹೀಗಾಗಿ ಕಷ್ಟದಲ್ಲಿಯೂ ಗಂಡನಿಗೆ ಸಾಥ್ ನೀಡಿದ್ದಾಳೆ, ಸಂಸಾರದ ನೊಗ ಇಬ್ಬರು ಎಳೆಯಬೇಕು, ಆಗ ಮಾತ್ರ ಆ ಸಂಸಾರ ಚೆನ್ನಾಗಿರುತ್ತದೆ.
ಎಲ್ಲಿ ನಿಜವಾದ ಪ್ರೀತಿ ಇರುತ್ತದೆಯೋ ಅಲ್ಲಿ ಹೊಂದಿಕೊಂಡು ಹೋಗುವ ಗುಣವಿರುತ್ತದೆ
ಪ್ರೀತಿಯಲ್ಲಿ ಎಲ್ಲವೂ ಪರ್ಫೆಕ್ಟ್ ಆಗಿ ಇರಬೇಕು ಎಂದು ಬಯಸುವುದು ತಪ್ಪ, ಹೊಂದಾಣಿಕೆ ಮುಖ್ಯ, ಅವರಲ್ಲಿರುವ ಮೈನಸ್ ಬಗ್ಗೆ ಹೆಚ್ಚು ಗಮನ ನೀಡುವ ಬದಲಿಗೆ ಅವರ ಪ್ಲಸ್ ಬಗ್ಗೆ, ಅವರು ನಮ್ಮನ್ನು ಎಷ್ಟು ಪ್ರೀತಿಸುತ್ತಿದ್ದಾರೆ ಎಂಬುವುದರ ಕಡೆಗೆ ಗಮನಹರಿಸಬೇಕು, ಆವಾಗ ಜೀವನ ತುಂಬಾ ಚೆನ್ನಾಗಿರುತ್ತದೆ.
ಸುಂದರ ಸಂಸಾರಕ್ಕೆ ಸೂತ್ರಗಳು
ಸಂವಹನ: ಇಬ್ಬರ ನಡುವೆ ಸಂವಹನ ಚೆನ್ನಾಗಿರಬೇಕು, ಯಾವುದೇ ವಿಷಯದಲ್ಲಿ ಮುಚ್ಚುಮರೆ ಇರಬಾರದು, ಇಬ್ಬರು ತಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು, ಒಬ್ಬರು ಮತ್ತೊಬ್ಬರ ಭಾವನೆಗಳನ್ನು ಗೌರವಿಸಬೇಕು.
ಇಬ್ಬರು ಜೊತೆಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಿ
ನಿಮ್ಮ ಜೀವನದ ನಿರ್ಧಾರವನ್ನು ಒಬ್ಬರೇ ತೆಗೆದುಕೊಳ್ಳುವುದಲ್ಲ, ಇಬ್ಬರು ಜೊತೆಯಾಗಿ ತೆಗೆದುಕೊಳ್ಳಬೇಕು. ಇಬ್ಬರು ಕೂತು ಮಾತನಾಡಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.
ಇಬ್ಬರು ನಿಮಗಾಗಿ ಸಮಯ ತೆಗೆದುಕೊಳ್ಳಿ
ಮಕ್ಕಳು, ಕುಟುಂಬ ಎಲ್ಲವೂ ಇರುತ್ತದೆ, ಆದರೆ ನೀವು ನಿಮಗಾಗಿ ಸಮಯ ತೆಗೆದುಕೊಳ್ಳಿ, ನೀವಿಬ್ಬರು ಪ್ಲ್ಯಾನ್ ಮಾಡಿ ಚಿಕ್ಕ ಟ್ರಿಪ್ ಹೋಗಿ ಬನ್ನಿ, ಜೊತೆಯಾಗಿ ರೆಸ್ಟೋರೆಂಟ್‌ಗೆ ಹೀಗಿ ಬನ್ನಿ.
ಕೆಲವೊಂದು ವಿಚಾರಗಳಿಗೆ ನಾಟ್ ಒಕೆ ಅನ್ನಿ
ಹೊಂದಾಣಿಕೆಯೆಂದರೆ ಎಲ್ಲಾ ತಪ್ಪುಗಳನ್ನು ಸಹಿಸಿಕೊಂಡು ಹೋಗಬೇಕೆಂದು ಅಲ್ಲ, ಅವರ ಪ್ರವೃತ್ತಿ ನಿಮ್ಮ ಸಂಸಾರಕ್ಕೆ ಹಾನಿ ಮಾಡುತ್ತದೆ ಎಂದರೆ ನಾಟ್ ಒಕೆ ಎಂಬುವುದನ್ನು ಧೈರ್ಯವಾಗಿ ಹೇಳಿ.
ನಂಬಿಕೆ ಮುಖ್ಯ
ಒಂದು ಗಟ್ಟಿ ಸಂಬಂಧದಲ್ಲಿ ನಂಬಿಕೆ ತುಂಬಾನೇ ಮುಖ್ಯ, ನಂಬಿಕೆಯಿಲ್ಲದಿದ್ದರೆ ಆ ಸಂಬಂಧ ಬಾಳಲ್ಲ, ಆದರೆ ನಂಬಿಕೆಯಿಂದಿರಬೇಕು, ನಂಬಿಕೆ ಉಳಿಸಿಕೊಳ್ಳಬೇಕು.
ಕ್ಷಮಿಸಿ
ಚಿಕ್ಕ-ಪುಟ್ಟ ತಪ್ಪುಗಳನ್ನು ದೊಡ್ಡದು ಮಾಡಬೇಡಿ, ಕ್ಷಮಿಸಿ, ಹೀಗೆ ಮಾಡುವುದರಿಂದ ದಾಂಪತ್ಯ ಚೆನ್ನಾಗಿರುತ್ತದೆ.



Click it and Unblock the Notifications
