Latest Updates
-
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು
ಪ್ರೀವೆಡ್ಡಿಂಗ್ ಫೋಟೋಶೂಟ್ ಅಪಾಯಕಾರಿಯೇ? ಇದನ್ನ ಬ್ಯಾನ್ ಮಾಡ್ಬೇಕೆನ್ನುತ್ತಿದೆ ಮಹಿಳಾ ಆಯೋಗ
5-6 ವರ್ಷಗಳಿಗೆ ಮೊದಲು ಈ ಪ್ರೀ ವೆಡ್ಡಿಂಗ್ ಫೋಟೋಶೂಟ್ ಅಂತ ಇದ್ದರೂ ಇಷ್ಟೊಂದು ಟ್ರೆಂಡ್ ಆಗಿರಲಿಲ್ಲ. ಅದ್ಧೂರಿಯಾಗಿ ಮದುವೆ ಮಾಡಿಸುವವರಷ್ಟೇ ಮಾಡಿಸುತ್ತಿದ್ದರು. ಆದರೆ ಇತ್ತೀಚಿನ ಮದುವೆಗಳಲ್ಲಿ ಪ್ರೀವೆಡ್ಡಿಂಗ್ ಫೋಟೋಶೂಟ್ ಎಂಬುವುದು ಟ್ರೆಂಡ್ ಆಗಿದೆ. ಹುಡುಗ -ಹುಡುಗಿ ಒಂದಿಷ್ಟು ಫ್ರೆಂಡ್ಸ್, ಫೋಟೋಗ್ರಾಫರ್ ಸೇರಿ ತುಂಬಾ ಸುಂದರ ತಾಣಗಳಿಗೆ ಹೋಗಿ ತುಂಬಾ ರೊಮ್ಯಾಂಟಿಕ್ ಆಗಿ ಸಿನಿಮಾ ಶೈಲಿಯಲ್ಲಿ ಫೋಟೋಗಳನ್ನು ತೆಗಿಸಿಕೊಳ್ಳುತ್ತಾರೆ. ನಂತರ ಆ ವಿಡಿಯೋ, ಫೋಟೋಗಳನ್ನು ಮದುವೆ ದಿನ ಡಿಸ್‌ಪ್ಲೇ ಮಾಡುವುದು ಈಗೀನ ಟ್ರೆಂಡ್.

ಪ್ರೀವೆಡ್ಡಿಂಗ್ ಫೋಟೋಶೂಟ್ ಮದುವೆಯ ಫೋಟೋಗಳಿಗಿಂತ ಭಿನ್ನವಾಗಿರುತ್ತದೆ ಅಲ್ಲದೆ ಇಬ್ಬರು ಲವ್ ಬರ್ಡ್ಸ್ ರೀತಿ ಕುಣಿದಾಡುತ್ತಾ ಆ ಫೋಟೋಗಳನ್ನು ತೆಗಿಸಿಕೊಂಡಿರುತ್ತಾರೆ. ಕೆಲವೊಂದು ಪ್ರೀ ವೆಡ್ಡಿಂಗ್ ಫೋಟೋ-ವೀಡಿಯೋಗಳನ್ನು ನೋಡಿದಾಗ ನೋಡುವವರು ನಾಚಿ ನೀರಾಗುವುದುಂಟು, ಅಷ್ಟೊಂದು ರೊಮ್ಯಾಂಟಿ ಆಗಿ ತೆಗಿಸಿಕೊಂಡಿರುತ್ತಾರೆ. ಅವರು ತೆಗಿಸಿಕೊಂಡಿದ್ದು ಅನ್ನುವುದಕ್ಕಿಂತಲೂ ಈ ಪ್ರೀ ವೆಡ್ಡಿಂಗ್ ಫೋಟೋಗ್ರಾಫರ್ಸ್ ಇದ್ದಾರಲ್ಲ, ಅವರು ತಾವೆ ನಿರ್ದೇಶಕರ ಪಾತ್ರವರನ್ನೂ ಮಾಡಿ ಅಭಿನಯಿಸಿ ತೋರಿಸಿ, ಆ ಜೋಡಿಯ ಸುಂದರ ಫೋಟೋವನ್ನು ಕ್ಲಿಕ್ಕಿಸಿಕೊಂಡಿರುತ್ತಾರೆ. ಆದರೆ ಇಂಥ ಫೋಟೋಗಳೇ ಹೆಣ್ಮಕ್ಕಳ ಭವಿಷ್ಯಕ್ಕೆ ಹಾನಿಯಾಗಬಹುದು, ಆದ್ದರಿಂದ ಪ್ರೀ ವೆಡ್ಡಿಂಗ್ ಫೋಟೋಶೂಟ್ ಬ್ಯಾನ್ ಮಾಡುವುದು ಒಳ್ಳೆಯದು ಎಂದು ಛತ್ತೀಸ್‌ಗಡದ ಮಹಿಳಾ ಆಯೋಗ ಹೇಳುತ್ತಿದ್ದೆ. ಅಷ್ಟಕ್ಕೂ ಈ ರೀತಿ ಹೇಳಲು ಕಾರಣವೇನು?
ಗೊತ್ತಾದ ಮದುವೆ ಒಂದು ವೇಳೆ ನಿಂತು ಹೋದರೆ ಕಷ್ಟ
ಇತ್ತೀಚೆಗೆ ಗೊತ್ತಾದ ಮದುವೆ ನಿಂತು ಹೋಗಿ, ಹುಡುಗಿ ಹಾಗೂ ಹುಡುಗಿ ಮನೆಯವರು ಮಹಿಳಾ ಆಯೋಗದ ಮೊರೆ ಹೋಗಿ ಪ್ರೀ ವೆಡ್ಡಿಂಗ್ ಫೋಟೋಗಳನ್ನು ಡಿಲೀಟ್ ಮಾಡಿಸಿದ್ದರು. ಈ ಪ್ರಕರಣ ಒಂದೇಯಲ್ಲ, ಇಂಥ ಕೆಲ ಪ್ರಕರಣವನ್ನು ಉದಾಹರಣೆಯಾಗಿ ನೀಡುತ್ತಾ ಪ್ರೀವೆಡ್ಡಿಂಗ್ ಫೋಟೊಶೂಟ್ ಎಂಬುವುದು ಹೆಣ್ಮಕ್ಕಳ ಭವಿಷ್ಯದ ಸುರಕ್ಷತೆಯದ ದೃಷ್ಟಿಯಿಂದ ಒಳ್ಳೆಯದಲ್ಲ, ಮುಂದೆ ಈ ಫೋಟೋಗಳೇ ಅವಳ ಬದುಕಿನಲ್ಲಿ ವಿಲನ್ ಆಗಬಹುದು ಎಂಬುವುದು ಒಂದಿಷ್ಟು ಜನರ ವಾದವಾಗಿದೆ.
ಪ್ರೀವೆಡ್ಡಿಂಗ್ ಫೋಟೋಶೂಟ್ ಮಾಡಿಸುವುದರಿಂದ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆ ನೋಡುವುದಾದರೆ
ಗೊತ್ತಾದ ಮದುವೆ ನಿಂತು ಹೋದರೆ ಕಷ್ಟ
ಎಷ್ಟೋ ಮದುವೆಗಳು ಮದುವೆಗೆ ಕೆಲವೇ ದಿನಗಳಿರುವಾಗ ನಿಂತು ಹೋಗುತ್ತವೆ. ಮದುವೆ ಹಲವಾರು ಕಾರಣಗಳಿಂದಾಗಿ ನಿಂತು ಹೋಗಬಹುದು. ಹೀಗೆ ನಿಂತು ಹೋದಾಗ ಮದುವೆಗೆ ಅಷ್ಟೊಂದು ಸಿದ್ಧತೆ ಮಾಡಿಕೊಂಡ ಹಣ ವ್ಯರ್ಥವಾಗುವುದು ಮಾತ್ರವಲ್ಲ ಹೆಣ್ಣು ಹಾಗೂ ಗಂಡಿನ ಮೇಲೆ ಮಾನಸಿಕವಾಗಿಯೂ ಪರಿಣಾಮ ಬೀರುವುದು. ಮದುವೆವರೆಗೆ ಬಂದ ಮದುವೆ ನಿಂತು ಹೋದಾಗ ತುಂಬಾನೇ ಬೇಸರ ಉಂಟಾಗುತ್ತದೆ. ಮದುವೆ ನಿಂತು ಹೋಗಲು ಒಂದು ಬಲವಾದ ಕಾರಣ ಇದ್ದೇ ಇರುತ್ತದೆ, ಈ ಕಾರಣಕ್ಕೆ ಸಮಧಾನ ಮಾಡಿಕೊಂಡು ಸದ್ಯ ಮದುವೆಗೆ ಮೊದಲೇ ಈ ಮದುವೆ ನಿಂತು ಹೋಯ್ತು, ಇಲ್ಲದಿದ್ದರೆ ಬಾಳೇ ಹಾಳಾಗುತ್ತಿತ್ತು ಎಂದು ಅಂದುಕೊಂಡು ಇನ್ನು ಕೆಲವು ತಿಂಗಳು ಅಥವಾ ವರ್ಷಗಳಲ್ಲಿ ತಮಗೆ ಸೂಕ್ತವಾದ ಬೇರೆಂದು ಸಂಬಂಧ ನೋಡಿ ಮದುವೆಯಾಗುತ್ತಾರೆ.'
ಆದರೆ ಪ್ರೀವೆಡ್ಡಿಂಗ್ ಫೋಟೋಶೂಟ್‌ಗಳು ತರಬಹುದು ಆಪತ್ತು
ಪ್ರೀವೆಡ್ಡಿಂಗ್ ಫೋಟೋಶೂಟ್ ಮಾಡಿಸುವಾಗ ಸಾಮಾನ್ಯವಾಗಿ ಪೋಷಕರು ಜೊತೆಗೆ ಹೋಗುವುದಿಲ್ಲ.ಹುಡುಗ-ಹುಡುಗಿ ಹಾಗೂ ಫೋಟೋಗ್ರಾಫರ್ಸ್ ಅಷ್ಟೇ ಹೋಗಿ ತಮಗೆ ಬೇಕಾದಂತೆ ಫೋಟೋಶೂಟ್ ಮಾಡಿಸಿಕೊಂಡು ಬಂದಿರುತ್ತಾರೆ. ಇನ್ನೇನು ನಾವು ಮದುವೆಯಾಗುವವರು ತಾನೆ ಎಂಬ ನಂಬಿಕೆಯಲ್ಲಿ ತುಂಬಾ ಕ್ಲೋಸ್ ಅನಿಸುವ ಫೋಟೋಗಳನ್ನೂ ತೆಗಿಸಿಕೊಳ್ಳುತ್ತಾರೆ.
ಆದರೆ ಮದುವೆ ನಿಂತು ಹೋಗಿ ಕೆಲವು ಸಮಯದ ನಂತರ ಬೇರೆಂದು ಮದುವೆ ಗೊತ್ತಾದರೆ ಆವಾಗ ಈ ಫೋಟೋಗಳು ನಮ್ಮನ್ನು ಮದುವೆಯಾಗಲಿರುವ ಅಥವಾ ಮದುವೆಯಾದ ಸಂಗಾತಿ ಕಣ್ಣಿಗೆ ಬಿದ್ದರೆ ಖಂಡಿತ ಇದ್ದರಿಂದಾಗಿ ಸಮಸ್ಯೆಗಳು ಉಂಟಾಗುವುದು. ಗೊತ್ತಾದ ಮದುವೆ ನಿಂತು ಹೋಗಿತ್ತು ಎಂದು ಹೇಳಿದರೆ ಮದುವೆಯಾಗಲು ಬರುವವರು ಅದನ್ನು ದೊಡ್ಡದಾಗಿ ತೆಗೆದುಕೊಳ್ಳುವುದಿಲ್ಲ, ಆದರೆ ಮೊದಲು ಗೊತ್ತಾದ ಹುಡುಗನ ಜೊತೆಗಿನ ಕ್ಲೋಸ್ ಫೋಟೋಗಳು ಸಿಕ್ಕರೆ ಸಮಸ್ಯೆ ಉಂಟಾಗಬಹುದು ಎಂಬ ಕಾರಣಕ್ಕೆ ಈ ಪ್ರೀವೆಡ್ಡಿಂಗ್ ಬ್ಯಾನ್ ಮಾಡಬೇಕು ಎಂದು ಹೇಳಲಾಗುತ್ತದೆ.
ಪ್ರೀವೆಡ್ಡಿಂಗ್ ಫೋಟೋಶೂಟ್ ಆರ್ಥಿಕವಾಗಿಯೂ ಹೊರೆಯಾಗುತ್ತಿದೆ
ಮಧ್ಯಮವರ್ಗದ ಕುಟುಂಬದವರಿಗೆ ಮಗಳ ಮದುವೆ ಮಾಡಿ ಕಳುಹಿಸುವುದು ಸುಲಭದ ವಿಷಯವಾಗಿರುವುದಿಲ್ಲ. ಮಗಳ ಮದುವೆ ಖರ್ಚಿಗೆ ಹಣ ಹೊಂದಿಸುವುದೇ ದೊಡ್ಡವಿಷಯವಾಗಿರುತ್ತದೆ. ಆದರೆ ಈಗ ಪ್ರೀವೆಡ್ಡಿಂಗ್ ಟ್ರೆಂಡ್ ಇರುವುದರಿಂದ ಎಲ್ಲಾ ಹೆಣ್ಮಕ್ಕಳು ಪ್ರೀವೆಡ್ಡಿಂಗ್ ಫೋಟೋಶೂಟ್ ಮಾಡಿಸಲು ಆಸೆ ಪಡುತ್ತಿದ್ದಾರೆ. ಪ್ರೀವೆಡ್ಡಿಂಗ್ ಫೋಟೋಶೂಟ್‌ಗಾಗಿಯೇ ಒಂದಿಷ್ಟು ಡ್ರೆಸ್‌ಗಳನ್ನು ಖರ್ಚು ಮಾಡುತ್ತಾರೆ, ಜೊತೆಗೆ ಫೋಟೋಗ್ರಾಫರ್ಸ್ ಖರ್ಚು, ಎಲ್ಲಾ ಸೇರಿದಾಗ ಇದು ಸಾಧಾರಣ ಕುಟುಂಬಕ್ಕೆ ಆರ್ಥಿಕ ಹೊರೆ ಕೂಡ ಹೆಚ್ಚಿಸುತ್ತಿದೆ.
ಹಾಗಂತ ಪ್ರಿವೆಡ್ಡಿಂಗ್ ಫೋಟೋಶೂಟ್ ಮಾಡಿಸಲೇಬಾರದೇ? ಎಂದು ಕೇಳುವುದಾದರೆ ಆದಷ್ಟು ಸೇಫರ್ ಸೈಡ್‌ನಿಂದ ಫೋಟೋಗಳನ್ನು ತೆಗಿಸಿಕೊಳ್ಳುವುದೇ ಒಳ್ಳೆಯದು, ಮದುವೆ ನಂತರ ಹನಿಮೂನ್‌ನಲ್ಲಿ ನೀವು ಬಯಸಿದ ರೀತಿ ರೊಮ್ಯಾಂಟಿಕ್ ಫೋಟೋಗಳನ್ನು ಮಾಡಿಸಿಕೊಳ್ಳಬಹುದು ಅಲ್ವಾ? ಈ ಕುರಿತು ನಿಮ್ಮ ಅಭಿಪ್ರಾಯವೇನು ಕಮೆಂಟ್ ಮಾಡಿ...



Click it and Unblock the Notifications
