Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
ಮಾರುಕಟ್ಟೆಗೆ ಬಂದೇ ಬಿಡ್ತು ಮುತ್ತು ಕೊಡುವ ಯಂತ್ರ! ಇದು ಹೇಗೆ ಕೆಲಸ ಮಾಡುತ್ತೆ ಗೊತ್ತಾ?
ಚೀನಿಯರು ಕೈ ಹಾಕದೇ ಇರೋ ಕ್ಷೇತ್ರವಿಲ್ಲ. ಮಾರ್ಕೆಟ್‌ಗೆ ಯಾವುದಾದರು ಒಂದು ಪ್ರಾಡಕ್ಟ್ ಬಂದ್ರೆ ಸಾಕು. ಅದೇ ರೀತಿಯ ತದ್ರೂಪಿ ಪ್ರಾಡಕ್ಟ್ ಅನ್ನು ಸೃಷ್ಟಿಸಿ ಅತೀ ಕಡಿಮೆ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದಿಸೋ ಚಾಲಕಿ ಗುಣ ಇರೋರೇ ಈ ಚೀನಿಯರು.
ಇದೀಗ ಒಂದು ಹೆಜ್ಜೆ ಮುಂದೆ ಹೋಗಿರೋ ಚೀನಿಯರು ಲಾಂಗ್ ಡಿಸ್ಟೆನ್ಸ್ ಕಿಸ್ಸಿಂಗ್ ಯಂತ್ರವೊಂದನ್ನು ಸೃಷ್ಟಿಸಿದ್ದಾರೆ. ಈ ರೀತಿಯ ವಿಚಿತ್ರ ಅನ್ವೇಷಣೆಗಳು ಚೀನಿಯರಿಗೆ ಹೊಸತೇನಲ್ಲ. ಆದ್ರೆ ಈ ಲಾಂಗ್ ಡಿಸ್ಟೆನ್ಸ್ ಕಿಸ್ಸಿಂಗ್ ಯಂತ್ರ ಮಾತ್ರ ಎಲ್ಲರನ್ನೂ ಬೆರಗಾಗುವಂತೆ ಮಾಡಿದಂತೂ ಸುಳ್ಳಲ್ಲ.

ಹಾಗಾದ್ರೆ ಏನಿದು ಲಾಂಗ್ ಡಿಸ್ಟೆನ್ಸ್ ಕಿಸ್ಸಿಂಗ್ ಯಂತ್ರ? ಇದು ಯಾವ ರೀತಿ ಕೆಲಸ ಮಾಡುತ್ತೆ? ಇದರ ವಿಶೇಷತೆಗಳು ಏನು ಅನ್ನೋದನ್ನ ತಿಳಿಯೋಣ.
ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ನೀಡುತ್ತೆ ಈ ಯಂತ್ರ
ಚೀನಾದ ಸ್ಟಾರ್ಟ್‌ಅಪ್ ಒಂದು ಈ ಮುತ್ತು ಕೊಡುವ ಯಂತ್ರವನ್ನು ಅಭಿವೃದ್ಧಿಪಡಿಸಿದೆ. ಈ ಯಂತ್ರದಲ್ಲಿ ಸಿಲಿಕಾನ್ ತುಟಿಗಳಿದ್ದು ಯಾವುದಾದರೂ ವ್ಯಕ್ತಿ ಈ ಯಂತ್ರದಲ್ಲಿರುವ ತುಟಿಗಳಿಗೆ ಮುತ್ತು ಕೊಡಲು ಆರಂಭಿಸಿದಾಗ ಇದು ಪ್ರತಿಕ್ರಿಯೆಯನ್ನು ನೀಡುತ್ತದೆ. ಇನ್ನೂ ಜನ ಮತ್ತುಕೊಡುವಾಗ ಮಾಡುವ ಶಬ್ಧಗಳನ್ನು ಈ ಯಂತ್ರ ಸೆರೆಹಿಡಿದು ಅದಕ್ಕೆ ಮರು ಪ್ರತಿಕ್ರಿಯೆಯನ್ನು ನೀಡುತ್ತದೆ. ಇದಿಷ್ಟೇ ಅಲ್ಲ, ಮುತ್ತು ಕೊಡುವ ಸಮಯದಲ್ಲಿ ಈ ಯಂತ್ರದಲ್ಲಿರುವ ತುಟಿಗಳು ಕೊಂಚ ಬೆಚ್ಚಗಾಗಲಿದ್ದು ಮುತ್ತು ಕೊಡುವ ವ್ಯಕ್ತಿಗಳಿಗೆ ನಿಜವಾದ ಅನುಭವವನ್ನು ನೀಡುತ್ತಂತೆ.
ಈ ಯಂತ್ರ ಸೃಷ್ಟಿಸಲು ಲಾಕ್‌ಡೌನ್ ಪ್ರೇರಣೆಯಾಯ್ತಾ?
ಹೌದು, ಈ ಮುತ್ತು ಕೊಡುವ ಯಂತ್ರವನ್ನು ನೀವು ಬಳಸಬೇಕೆಂದರೆ ಇವರ ಅಪ್ಲಿಕೇಶನ್ ಕೂಡ ಡೌನ್‌ಲೋಡ್ ಮಾಡುವುದು ತುಂಬಾನೇ ಮುಖ್ಯವಾಗುತ್ತದೆ. ಈ ಮೂಲಕ ಇತರ ಬಳಕೆದಾರರು ದಾಖಲಿಸಿದ ಮುತ್ತಿನ ಡೇಟಾಗಳನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು. ಲಾಕ್‌ಡೌನ್ ಸಮಯದಲ್ಲಿ ಇಡೀ ವಿಶ್ವದಾದ್ಯಂತ ಕಟ್ಟು ನಿಟ್ಟಿನ ನಿಯಮಗಳನ್ನು ಪಾಲನೆ ಮಾಡಲಾಗಿತ್ತು. ಈ ವೇಳೆ ಚೀನಾದಲ್ಲೂ ಕೂಡ ಕಟ್ಟುನಿಟ್ಟಿನ ಲಾಕ್‌ಡೌನ್ ನಿಯಮಗಳನ್ನು ಪಾಲನೆ ಮಾಡಲಾಗಿತ್ತು. ಹೀಗಾಗಿ ತಮ್ಮ ಪ್ರಿಯತಮ ಹಾಗೂ ಪ್ರೇಯಸಿಯನ್ನು ಭೇಟಿಯಾಗೋದು ಕಷ್ಟವಾಗಿತ್ತು. ಹೀಗಾಗಿ ಇದರಿಂದ ಪ್ರೇರಣೆ ಪಡೆದು ಈ ಯಂತ್ರವನ್ನು ಅಭಿವೃದ್ಧಿ ಪಡಿಸಲಾಗಿದ್ಯಂತೆ.
ಈ ಯಂತ್ರದ ಸಂಶೋಧಕರಾದ ಜಾವೋ ಜಿಯಾನ್ಬೋ ಅವರು ನಾನು ಲಾಕ್‌ಡೌನ್ ಸಮಯದಲ್ಲಿ ಪ್ರೀತಿಸುತ್ತಿದ್ದ ಹುಡುಗಿಯನ್ನು ಭೇಟಿಯಾಗುವುದು ಕಷ್ಟವಾಗಿತ್ತು. ಹೀಗಾಗಿ ಈ ಯಂತ್ರ ಸೃಷ್ಟಿಸುವ ಆಲೋಚನೆ ಬಂತು ಎಂದು ಹೇಳಿದ್ದಾರೆ.
ಈ ಯಂತ್ರದ ಬೆಲೆ ಎಷ್ಟು?
ಬೀಜಿಂಗ್‌ನ ಫಿಲ್ಮ್ ಅಕಾಡಮಿಯೊಂದರಲ್ಲಿ ವಿದ್ಯಾರ್ಥಿಯಾಗಿದ್ದ ಜಾವೋ ಅವರು ವಿಡಿಯೋ ಕಾಲ್‌ನಲ್ಲಿ ಉಂಟಾಗುವ ದೈಹಿಕ ಅನ್ಯೋನ್ಯತೆಯ ಕೊರತೆಯ ಬಗ್ಗೆ ಪ್ರಾಜೆಕ್ಟ್‌ವೊಂದನ್ನು ಮಾಡಲು ನಿರ್ಧಾರ ಮಾಡುತ್ತಾರೆ. ಅದರಂತೆ ಈ ಯಂತ್ರವನ್ನು ಸೃಷ್ಟಿಸ್ತಾರೆ. ಇದು ಈತ ತಯಾರಿಸಿದ ಮೊದಲ ಪ್ರಾಡಕ್ಟ್ ಆಗಿದ್ದು ಜನವರಿ 22 ರಂದು ಮೊದಲ ಬಾರಿಗೆ ಇದನ್ನು ಬಿಡುಗಡೆ ಮಾಡಲಾಗುತ್ತದೆ. ಇನ್ನೂ ಈ ಮುತ್ತು ಕೊಡುವ ಯಂತ್ರದ ಬೆಲೆ 260 ಯೂಅನ್. ಅಂದ್ರೆ ಭಾರತೀಯ ಬೆಲೆಯಲ್ಲಿ 3,109.97 ರೂಪಾಯಿ.
ಸಿಕ್ಕಾಪಟ್ಟೆ ಮಾರಾಟವಾಗುತ್ತಿರೋ ಕಿಸ್ಸಿಂಗ್ ಮೆಷಿನ್!
ಈ ಯಂತ್ರ ಮಾರುಕಟ್ಟೆಗೆ ಬಂದ ಎರಡೇ ವಾರದಲ್ಲಿ 3,000 ಮೆಷಿನ್‌ಗಳು ಮಾರಾಟವಾಗಿದೆ. ಇದಿಷ್ಟೇ ಅಲ್ಲ, ಬರೋಬ್ಬರಿ 20,000 ಆರ್ಡರ್ ಕೂಡ ಬಂದಿದ್ಯಂತೆ.
ಈ ಯಂತ್ರವು ಮೊಬೈಲ್ ಸ್ಟಾಂಡ್‌ನಂತಿದ್ದು ಅದರ ಮುಂಭಾಗದಲ್ಲಿ ಸಿಲಿಕಾನ್‌ನ ತುಟಿಗಳಿದೆ. ಇದನ್ನು ಬಳಸಲು ಪ್ರೇಮಿಗಳು ಆಪ್ ಡೌನ್‌ಲೋಡ್ ಮಾಡಿ ಮತ್ತು ಚುಂಬನ ಯಂತ್ರವನ್ನು ಮೊಬೈಲ್‌ಗೆ ಜೋಡನೆ ಮಾಡಬೇಕು. ಹಾಗೂ ನೀವು ಈ ಯಂತ್ರಕ್ಕೆ ಮುತ್ತು ಕೊಟ್ಟಾಗ ಅದು ನಿಮಗೆ ಪ್ರತಿಕ್ರಿಯೆ ನೀಡುತ್ತದೆ.
ಜನರ ಪ್ರತಿಕ್ರಿಯೆ ಹೇಗಿದೆ?
ಈ ಚುಂಬನ ಯಂತ್ರವು ವಿವಿಧ ಬಣ್ಣದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇನ್ನೂ ಈ ಯಂತ್ರಕ್ಕೆ ಸಂಬಂಧಿಸಿದಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕೆಲವರು ಈ ಯಂತ್ರ ಚೆನ್ನಾಗಿದೆ ಎಂದರೆ ಇನ್ನೂ ಕೆಲವರು ಇದರಿಂದ ಕಿರಿಕಿರಿ ಉಂಟಾಗುತ್ತಿದೆ ಎಂದು ದೂರಿದ್ದಾರೆ. ಇನ್ನೂ ಈ ಯಂತ್ರಕ್ಕೆ ನಾಲಗೆ ಇಲ್ಲದಿರೋದ್ರಿಂದ ಸಹಜ ಅನುಭವ ಪಡೆಯೋದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.
ಹೀಗೆ ಮನುಷ್ಯನ ಅವಿಷ್ಕಾರಗಳಿಗೆ ಕೊನೆಯೇ ಇಲ್ಲದಂತಾಗಿದೆ. ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ ದುಡ್ಡು ಕೊಟ್ಟರೆ ಸಾಕು ಎಲ್ಲಾ ವಸ್ತುಗಳು ನಮಗೆ ಸುಲಭವಾಗಿ ಲಭ್ಯವಾಗುತ್ತಿದೆ. ಇಂತಹ ಮೆಷಿನ್‌ಗಳಿಂದಾಗಿ ನೈತಿಕತೆ ಅನ್ನೋದು ನಾಶವಾದಂತೆ ಭಾಸವಾಗುತ್ತಿರೋದಂತೂ ಸುಳ್ಳಲ್ಲ.



Click it and Unblock the Notifications

