Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸ್ತ್ರೀಯರ ದಿಲ್ ಕದಿಯಲು ಈ ಗುಣಗಳು ಸಾಕು! ಚಾಣಕ್ಯ ಹೇಳಿದ ಸೀಕ್ರೆಟ್
ಮಹಿಳೆಯರು ಇಷ್ಟಪಡುವ ಪುರುಷರ ಗುಣಗಳಿವು! ಈ ಗುಣಗಳಿದ್ದರೆ ಮಹಿಳೆಯರು ನಿಮ್ಮತ್ತ ಆಕರ್ಷಿತರಾಗುತ್ತಾರೆ: ಚಾಣಕ್ಯ ಹೇಳಿದ ರಹಸ್ಯ! ಹೌದು, ಚಾಣಕ್ಯರ (Chanakya niti) ಪ್ರಕಾರ, ಒಂದು ಯಶಸ್ವಿ ಸಂಬಂಧಕ್ಕೆ ಬಾಹ್ಯ ಸೌಂದರ್ಯಕ್ಕಿಂತ ಒಬ್ಬ ವ್ಯಕ್ತಿಯ ಆಂತರಿಕ ಗುಣಗಳು, ನಂಬಿಕೆ ಮತ್ತು ಪರಸ್ಪರ ಗೌರವ ಮುಖ್ಯ. ಈ ಗುಣಗಳುಳ್ಳ ಪುರುಷರು ತಮ್ಮ ಜೀವನ ಸಂಗಾತಿಯ ಹೃದಯವನ್ನು ಗೆಲ್ಲುತ್ತಾರೆ. ಮಹಿಳೆಯರನ್ನು ಆಕರ್ಷಿಸುವ ಮತ್ತು ಸಂತೋಷಪಡಿಸುವ ಪುರುಷರ (how men attract women) ಕೆಲವು ಪ್ರಮುಖ ಗುಣಗಳು ಇಲ್ಲಿವೆ.
ಆಚಾರ್ಯ ಚಾಣಕ್ಯರು ತಮ್ಮ ನೀತೀಶಾಸ್ತ್ರ ಮತ್ತು ಅರ್ಥಶಾಸ್ತ್ರಗಳಲ್ಲಿ ಜೀವನದ ಎಲ್ಲಾ ಕ್ಷೇತ್ರಗಳ ಬಗ್ಗೆ ವಿವರವಾಗಿ ವಿಶ್ಲೇಷಿಸಿದ್ದಾರೆ. ವೈವಾಹಿಕ ಜೀವನ, ವೃತ್ತಿ, ಹಣಕಾಸು ಸೇರಿದಂತೆ ಪ್ರತಿಯೊಂದು ವಿಷಯದಲ್ಲೂ ಅವರ ತತ್ವಗಳು ಮಾರ್ಗದರ್ಶನ ನೀಡುತ್ತವೆ. ಅದರಲ್ಲೂ ವಿಶೇಷವಾಗಿ, ಒಂದು ಸಂಬಂಧದಲ್ಲಿ ಅಥವಾ ವೈವಾಹಿಕ ಜೀವನದಲ್ಲಿ ಮಹಿಳೆಯರು ಪುರುಷನತ್ತ ಆಕರ್ಷಿತರಾಗಲು ಯಾವ ಗುಣಗಳು ಕಾರಣವಾಗುತ್ತವೆ ಎಂಬುದನ್ನು ಚಾಣಕ್ಯರು ಸ್ಪಷ್ಟವಾಗಿ ವಿವರಿಸಿದ್ದಾರೆ. ಹೊರಗಿನ ಸೌಂದರ್ಯಕ್ಕಿಂತ ಆಂತರಿಕ ಗುಣಗಳು (qualities) ಹೆಚ್ಚು ಮುಖ್ಯ ಎಂದು ಅವರು ಒತ್ತಿ ಹೇಳುತ್ತಾರೆ.

ಸ್ತ್ರೀಯರ ಮನ ಗೆಲ್ಲಲು ಬೇಕಾದ ಗುಣಗಳು
1. ಪ್ರಾಮಾಣಿಕತೆ ಮತ್ತು ಸತ್ಯಸಂಧತೆ
ಚಾಣಕ್ಯರ ಪ್ರಕಾರ, ಮಹಿಳೆಯರನ್ನು ಆಕರ್ಷಿಸುವ ಅತ್ಯಂತ ಪ್ರಮುಖ ಅಂಶವೆಂದರೆ, ಪುರುಷನಲ್ಲಿರುವ ಪ್ರಾಮಾಣಿಕತೆ ಮತ್ತು ಸತ್ಯಸಂಧತೆ. ತಮ್ಮ ಸಂಗಾತಿಯೊಂದಿಗೆ ನ್ಯಾಯಯುತವಾಗಿ ವರ್ತಿಸುವ ಮತ್ತು ವಿಷಯಗಳನ್ನು ಸತ್ಯವಾಗಿ ಪ್ರಸ್ತುತಪಡಿಸುವ ಪುರುಷರನ್ನು ಮಹಿಳೆಯರು ಯಾವಾಗಲೂ ಇಷ್ಟಪಡುತ್ತಾರೆ ಮತ್ತು ಗೌರವಿಸುತ್ತಾರೆ. ಇಂತಹ ಗುಣಗಳು ದಾಂಪತ್ಯದ ಯಶಸ್ಸಿಗೆ ಕಾರಣವಾಗುತ್ತವೆ. ಸಂಬಂಧವನ್ನು ಇನ್ನಷ್ಟು ಸುಂದರವಾಗಿಸುತ್ತವೆ. ಪ್ರಾಮಾಣಿಕ ಪುರುಷರೊಂದಿಗೆ ತಮ್ಮ ಜೀವನವನ್ನು ಕಳೆಯಲು ಮಹಿಳೆಯರು ಹೆಚ್ಚು ಬಯಸುತ್ತಾರೆ ಎಂದು ಚಾಣಕ್ಯ ಹೇಳುತ್ತಾನೆ.
2. ಸಂಗಾತಿಯ ಮಾತನ್ನು ಆಲಿಸುವ ಗುಣ
ಮಹಿಳೆಯರ ಅಭಿಪ್ರಾಯಗಳನ್ನು ಗಮನವಿಟ್ಟು ಕೇಳುವ ಪುರುಷರತ್ತ ಅವರು ಹೆಚ್ಚು ಆಕರ್ಷಿತರಾಗುತ್ತಾರೆ. ಸಂಗಾತಿಯ ಅಭಿಪ್ರಾಯಗಳಿಗೆ ಬೆಲೆ ಕೊಟ್ಟು, ಅವುಗಳಿಗೆ ಪ್ರಾಮುಖ್ಯತೆ ನೀಡಿದರೆ ಆ ದಾಂಪತ್ಯ ಜೀವನ ಸುಂದರವಾಗಿರುತ್ತದೆ. ಮಹಿಳೆಯರು ಸಂತೋಷವಾಗಿರಲು, ಅಂತಹ ಪುರುಷರನ್ನು ಹೆಚ್ಚು ಪ್ರೀತಿಸಲು ಮತ್ತು ಜೀವನಪೂರ್ತಿ ಅವರ ಜೊತೆಯಲ್ಲೇ ಇರಲು ಬಯಸುತ್ತಾರೆ. ಅವರ ಮನಸ್ಸಿನ ಮಾತುಗಳನ್ನು ಕೇಳಿಸಿಕೊಂಡು ಬೆಂಬಲಿಸುವ ಗುಣವು ಮಹಿಳೆಯರಿಗೆ ಸುರಕ್ಷಿತ ಭಾವನೆಯನ್ನು ನೀಡುತ್ತದೆ.
3. ಉತ್ತಮ ವ್ಯಕ್ತಿತ್ವ
ಮಹಿಳೆಯರು ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವನ್ನು ಹೆಚ್ಚು ಆದ್ಯತೆ ನೀಡುತ್ತಾರೆ. ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳುವ ಮನಸ್ಸು, ದೃಢವಾದ ವ್ಯಕ್ತಿತ್ವ ಮತ್ತು ಶಾಂತ ಸ್ವಭಾವದ ಪುರುಷರನ್ನು ಅವರು ಇಷ್ಟಪಡುತ್ತಾರೆ. ಇಂತಹ ಗುಣಗಳುಳ್ಳ ವ್ಯಕ್ತಿಗಳು ಜೀವನದಲ್ಲಿ ಯಶಸ್ಸು ಮತ್ತು ಸಾಧನೆಗಳನ್ನು ಸುಲಭವಾಗಿ ಪಡೆಯುತ್ತಾರೆ. ಅಂತಹ ಪುರುಷರ ಜೊತೆ ಜೀವನ ಕಳೆಯಲು ಮಹಿಳೆಯರು ಹೆಚ್ಚು ಬಯಸುತ್ತಾರೆ. ವ್ಯಕ್ತಿತ್ವವು ಒಬ್ಬ ವ್ಯಕ್ತಿಯ ಒಳಿತು-ಕೆಡುಕುಗಳನ್ನು ಪ್ರತಿಬಿಂಬಿಸುತ್ತದೆ.
4. ಗೌರವ ಮತ್ತು ಪ್ರೀತಿ
ತಾವು ನೀಡುವಷ್ಟೇ ಗೌರವ ಮತ್ತು ಪ್ರೀತಿ ತಮಗೂ ಮರಳಿ ಸಿಗುವ ಸಂಬಂಧಗಳತ್ತ ಮಹಿಳೆಯರು ಆಕರ್ಷಿತರಾಗುತ್ತಾರೆ. ತಮ್ಮ ಸಂಗಾತಿಯಿಂದ ಗೌರವ ಮತ್ತು ಮನ್ನಣೆ ಸಿಕ್ಕಾಗ, ಆ ಸಂಬಂಧವು ಇನ್ನಷ್ಟು ಉತ್ತಮವಾಗುತ್ತದೆ. ಸಂಗಾತಿಯಲ್ಲಿನ ಸಣ್ಣ ಬದಲಾವಣೆಗಳನ್ನೂ ಗಮನಿಸಿ, ಅವರ ನಿರ್ಧಾರಗಳಲ್ಲಿ ಬೆಂಬಲ ನೀಡುವ ಪುರುಷರತ್ತ ಮಹಿಳೆಯರು ಬೇಗನೆ ಆಕರ್ಷಿತರಾಗುತ್ತಾರೆ. ಅಂತಹ ಪುರುಷರನ್ನು ಮಹಿಳೆಯರು ಯಾವಾಗಲೂ ಗೌರವದಿಂದ ಕಾಣುತ್ತಾರೆ.
5. ಗೌಪ್ಯತೆ ಕಾಪಾಡುವ ಗುಣ
ತಮ್ಮ ವೈಯಕ್ತಿಕ ಜೀವನದ ರಹಸ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳದೆ ಗೌಪ್ಯತೆ ಕಾಪಾಡುವ ಮತ್ತು ಅದನ್ನು ಗೌರವಿಸುವ ಪುರುಷರತ್ತ ಮಹಿಳೆಯರು ಆಕರ್ಷಿತರಾಗುತ್ತಾರೆ. ಅಂತಹ ಪುರುಷರನ್ನು ಅವರು ಎಂದಿಗೂ ಕೈಬಿಡುವುದಿಲ್ಲ. ಅವರೊಂದಿಗೆ ಹೆಚ್ಚು ಕಾಲ ಬದುಕಲು ಬಯಸುತ್ತಾರೆ. ಇದರ ಜೊತೆಗೆ, ತಮ್ಮ ಸಂಗಾತಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವ ಮತ್ತು ಅದನ್ನು ತಡೆಯದ ಪುರುಷರನ್ನು ಸಹ ಮಹಿಳೆಯರು ಇಷ್ಟಪಡುತ್ತಾರೆ. ಏಕೆಂದರೆ ಇದು ಪರಸ್ಪರ ನಂಬಿಕೆ ಮತ್ತು ಗೌರವದ ಸಂಕೇತವಾಗಿದೆ.



Click it and Unblock the Notifications

