Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
Chanakya Niti: ಚಾಣಕ್ಯ ಪ್ರಕಾರ ಪುರುಷರಿಗೆ ಇಷ್ಟವಾಗುವಂತಹ ಮಹಿಳೆಯ ಗೌಪ್ಯ ಗುಣಗಳಿವು
ಚಾಣಕ್ಯ ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯ, ಯಶಸ್ಸು, ವೃತ್ತಿ ಜೀವನ, ದಾಂಪತ್ಯ, ಸಂಬಂಧ ಹೀಗೆ ಎಲ್ಲಾ ವಿಚಾರಗಳನ್ನು ಸಹ ಹೇಳಿದ್ದಾರೆ. ಈ ಎಲ್ಲಾ ವಿಚಾರಗಳಲ್ಲಿ ಅವರ ದೃಷ್ಟಿಕೋನವು ವ್ಯಕ್ತಿಯೊಬ್ಬನ ಆಂತರಿಕ ಗುಣಗಳಿಂದ ಹಿಡಿದು ಆತನ ಸ್ವಭಾವದ ವರೆಗೂ ಎಲ್ಲವನ್ನು ತೆರೆದಿಡುವ ಒಂದು ಪುಸ್ತಕ. ಹಾಗೆ ಅವರು ಪುರುಷರು ಮತ್ತು ಮಹಿಳೆಯರ ವೈಯಕ್ತಿಕ ಜೀವನ ಕುರಿತಾಗಿಯೂ ಹಲವು ವಿಚಾರಗಳನ್ನು ಮುಂದಿಟ್ಟಿದ್ದಾರೆ.
ನಾವಿಂದು ಅವರು ಹೇಳಿರುವ ಉತ್ತಮ ಮಹಿಳೆಯ ಗುಣಗಳಲ್ಲಿ, ಯಾವೆಲ್ಲಾ ಗುಣಗಳು ಪುರುಷರನ್ನು ಸೆಳೆಯುತ್ತವೆ ಅನ್ನೋದನ್ನು ತಿಳಿದುಕೊಳ್ಳೋಣ. ಒಬ್ಬ ಮಹಿಳೆಯ ಯಾವ ಗುಣಗಳು ಪುರಷರಿಗೆ ಇಷ್ಟವಾಗುತ್ತದೆ ಎಂಬುದರ ಬಗ್ಗೆಯೂ ಹೇಳಿದ್ದಾರೆ. ಹಾಗಾದ್ರೆ ಮಹಿಳೆಯ ಯಾವ ಗುಣವು ಪುರುಷರಿಗೆ ಇಷ್ಟವಾಗುತ್ತೆ. ಅವರು ಏನ್ನು ಗಮನಿಸುತ್ತಾರೆ ಎಂಬೆಲ್ಲಾ ಕುರಿತು ತಿಳಿದುಕೊಳ್ಳಿ.

ಪುರುಷರು ಇಷ್ಟಪಡುವ ಕೆಲವು ಗುಣಗಳನ್ನು ಚಾಣಕ್ಯ ಹೇಳಿದ್ದಾರೆ. ಅವರ ಪ್ರಕಾರ ಮಹಿಳೆಯ ಯಾವೆಲ್ಲಾ ಗುಣಗಳನ್ನು ಪುರುಷರು ಬಹಳ ಇಷ್ಟಪಡುತ್ತಾರೆ ಅನ್ನೋದನ್ನು ತಿಳಿದುಕೊಳ್ಳೋಣ.
ನಗುಮುಖದ ಹಾಸ್ಯಪ್ರಜ್ಞೆ ಮಹಿಳೆ
ಪುರುಷರು ಮುಖ್ಯವಾಗಿ ಧೈರ್ಯವಂತ ಹಾಗೆ ಹಾಸ್ಯ ಪ್ರಜ್ಞೆಯ ಮಹಿಳೆಯರ ಗುಣವನ್ನು ಇಷ್ಟಪಡುತ್ತಾರೆ. ಹಾಸ್ಯಪ್ರಜ್ಞೆಯನ್ನು ಹೊಂದಿರುವ ಮಹಿಳೆಯರಿಂದ ಪುರುಷರು ಹೆಚ್ಚು ಆಕರ್ಷಿತರಾಗುತ್ತಾರೆ. ಕುಟುಂಬದಲ್ಲಿ ಎಷ್ಟೇ ದೊಡ್ಡ ಸಮಸ್ಯೆ ಇದ್ದರೂ, ಅವರ ನಗುಮುಖದಿಂದ ಎಲ್ಲವನ್ನು ಆದಷ್ಟು ಸರಿ ಮಾಡಬಹುದು. ಹಾಗೆ ಇದು ಪುರುಷರಲ್ಲಿ ಯಾವಾಗಲು ಧನಾತ್ಮಕ ಮನೋಭಾವನೆಗೆ ಮಹಿಳೆಯರ ನಗುಮುಖ ಸಹಕಾರಿ. ಹೀಗಾಗಿ ಪುರುಷರು ಹಾಸ್ಯಪ್ರಜ್ಞೆಯ ಗುಣ ಹೊಂದಿರುವ ಮಹಿಳೆಯ ಗುಣ ಇಷ್ಟಪಡುತ್ತಾರೆ. ಯಾವಾಗಲು ಸಿಟ್ಟು ಮುಖ ಹಾಕಿಕೊಂಡಿದ್ದರೆ ಮನೆಗೂ ಲಕ್ಷಣವಲ್ಲ ಎಂಬ ಮಾತಿದೆ.
ಸ್ವಚ್ಛತೆಗೆ ಕಾಳಜಿ ವಹಿಸುವ ಮಹಿಳೆ
ಯಾವ ಮಹಿಳೆಯ ಮನೆಯ ಸ್ವಚ್ಛತೆ, ವೈಯಕ್ತಿಕ ಸ್ವಚ್ಛತೆಗೆ ಹೆಚ್ಚು ಒತ್ತು ನೀಡುವುದು ಹಾಗೆ, ಎಲ್ಲಾ ವಿಚಾರದಲ್ಲೂ ಸ್ವಚ್ಛತೆಗೆ ಆದ್ಯತೆ ನೀಡುವಂತಹ ಗುಣ ಹೊಂದಿರುವ ಮಹಿಳೆಯನ್ನು ಯಾವಾಗಲು ಇಷ್ಟಪಡುವುದು ಹೊಗಳುವುದು ನೋಡಬಹುದು. ಇದು ಪುರುಷರದಲ್ಲಿ ಸುರಕ್ಷಿತ ಮನೋಭಾವನೆಗೆ ಕಾರಣವಾಗುತ್ತದೆ ಎಂದು ಚಾಣಕ್ಯ ಹೇಳುತ್ತಾರೆ.
ಕಡಿಮೆ ಖರ್ಚು ಮಾಡುವ ಮಹಿಳೆ
ಮನೆ ನಿವಾರಣೆ ಅಥವಾ ಕುಟುಂಬ ನಿರ್ವಹಣೆಯಲ್ಲಿ ಖರ್ಚುಗಳು ಬಹಳ ಮುಖ್ಯವಾಗುತ್ತೆ. ಯಾವ ಮಹಿಳೆ ಖರ್ಚುಗಳ ನಿಭಾಯಿಸುವುದು ಅಥವಾ ಕಡಿಮೆ ಖರ್ಚುಗಳಲ್ಲಿ ಕುಟುಂಬ ನಿರ್ವಹಣೆ ಮಾಡುವಂತಹ ಮಹಿಳೆ ಪುರುಷರು ಇಷ್ಟಪಡುತ್ತಾರೆ. ಪ್ರತಿಯೊಂದು ವಿಚಾರದಲ್ಲಿಯೂ ಹೆಚ್ಚುವರಿ ಖರ್ಚುಗಳು, ಮನೆ ನಿವಾರಣೆಗೆ ಅಧಿಕ ಖರ್ಚುಗಳಾದಾಗ ಪುರುಷರಲ್ಲಿ ಒತ್ತಡದ ಭಾವನೆ ಮೂಡಬಹುದು.
ತಾಳ್ಮೆ ಮತ್ತು ಪ್ರೀತಿ
ಯಾವ ಮಹಿಳೆ ತಾಳ್ಮೆಯಿಂದ ಎಲ್ಲಾ ವಿಚಾರದಲ್ಲಿಯೂ ಪ್ರೀತಿ ತೋರುತ್ತಾರೋ ಅಂತಹ ಗುಣ ಇರುವ ಮಹಿಳೆಯನ್ನು ಪುರುಷರು ಹೆಚ್ಚು ಇಷ್ಟಪಡುತ್ತಾರೆ. ಕೌಟುಂಬಿಕ ವಿಚಾರವಾಗಿ ಪುರುಷರಲ್ಲಿ ತಾಳ್ಮೆ ಇಲ್ಲದೆ ಇದ್ದಾಗ ಮಹಿಳೆ ಆ ಜಾಗ ತುಂಬಬೇಕಾಗುತ್ತದೆ. ಆದ್ರೆ ಇಬ್ಬರು ತಾಳ್ಮೆ ಕಳೆದುಕೊಂಡಾಗ ಸಂಬಂಧಗಳು ಹಾಳಾಗುತ್ತವೆ.
ಸಮಸ್ಯೆ ಬಗೆಹರಿಸುವ, ಬೆಂಬಲ ನೀಡುವ ಮಹಿಳೆ
ಮನೆ, ಕುಟುಂಬದಲ್ಲಿ ಎದುರಾಗುವ ಸಣ್ಣಪುಟ್ಟ ಸಮಸ್ಯೆಗಳನ್ನು ಮಹಿಳೆ ಏಕಾಂಗಿಯಾಗಿ ಎದುರಿಸುವಂತಹ ಅಥವಾ ಪುರುಷರ ಕೆಲ ಸಮಸ್ಯೆಗಳನ್ನು ಆಕೆ ಸಹ ಬಗೆಹರಿಸುವ ಗುಣ ಹೊಂದಿರಬೇಕು ಎಂದು ಬಯಸುವುದು ನೋಡಬಹುದು. ಹಾಗೆ ಪುರುಷರಿಗೆ ಎಲ್ಲಾ ವಿಚಾರದಲ್ಲೂ ಬೆಂಬಲ ನೀಡುವುದು ಕೂಡ ಅಷ್ಟೇ ಮುಖ್ಯವಾಗಿರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications