Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಪ್ರೇಮಿಗಳ ವಾರ ಮಾತ್ರವಲ್ಲ ಬ್ರೇಕ್‌ಅಪ್‌ಗೂ ಇದೇ ವಾರ..! ಯಾವ ದಿನ ಗೊತ್ತಾ?
ಫೆಬ್ರವರಿಯಲ್ಲಿ ಪ್ರೇಮಿಗಳಿಗಾಗಿಯೇ ಮೀಸಲಿಟ್ಟ ದಿನವಿದೆ. ಆ ದಿನದಂದು ಪ್ರೇಮಿಗಳ ದಿನವಾಗಿ ಆಚರಿಸಲ್ಪಡುತ್ತಿದೆ. ಫೆಬ್ರವರಿ 14ಕ್ಕೆ ಪ್ರೇಮಿಗಳ ದಿನಕ್ಕಾಗಿ ಯುವ ಸಮುದಾಯ ಕಾದಿದೆ. ತಮ್ಮ ಪ್ರೀತಿ ಹೇಳಿಕೊಳ್ಳಲು, ತಮ್ಮ ಗೆಳೆಯ ಗೆಳತಿಗೆ ತಮ್ಮ ಮನಸ್ಸಿನ ಮಾತು ಹೇಳಲು ಹಾತೊರೆಯುತ್ತಿದ್ದಾರೆ.
ಈ ಸಂಭ್ರಮ ವಾರದ ಮುಂಚೆಯೇ ಆರಂಭವಾಗುತ್ತದೆ. ಪ್ರಪೋಸ್ ಡೇ, ಲವ್ ಡೇ, ಕಿಸ್ ಡೇ, ಟೆಡ್ಡಿ ಡೇ, ಹಗ್ ಡೇ ಅಂತ ದಿನಾ ಒಂದೊಂದು ದಿನವನ್ನು ಸಡಗರ-ಸಂಭ್ರಮದಿಂದ ಪ್ರೇಮಿಗಳು ಆಚರಿಸುತ್ತಾರೆ. ಆದರೆ ನಾವಿಲ್ಲಿ ಹೇಳ ಹೊರಟಿರೋದು ಪ್ರೇಮಿಗಳ ದಿನದ ಕುರಿತಲ್ಲ ಬದಲಾಗಿ ಲವ್ ಬ್ರೇಕ್‌ಅಪ್ ಡೇ ಆಚರಣೆಯ ಕುರಿತು.

ಹೌದು ಪ್ರೇಮಿಗಳ ದಿನದಂತೆಯೇ ಪ್ರೇಮಕ್ಕೆ ವಿರೋಧವಾದ ದಿನವೂ ಆಚರಣೆ ಮಾಡಲಾಗುತ್ತದೆ. ಅದೂ ಸಹ ಫೆಬ್ರವರಿಯಲ್ಲೇ ಆಚರಿಸಲಾಗುತ್ತದೆ. ಫೆಬ್ರವರಿ 15ಕ್ಕೆ ಪ್ರೀತಿಯ ವಿರೋಧದ ವಾರ ಪ್ರಾರಂಭವಾಗುವುದು. ಹೌದು ಫೆಬ್ರವರಿ 15ರಿಂದ ಕಪಾಳಕ್ಕೆ ಹೊಡೆಯುವ ದಿನದಿಂದ ಶುರುವಾಗಿ ಫೆಬ್ರವರಿ 21ಕ್ಕೆ ಬ್ರೇಕಪ್ ದಿನವಾಗಿ ಆಚರಿಸಲಾಗುತ್ತದೆ. ಆದರೆ ಬ್ರೇಕ್ ಅಪ್ ಅನ್ನು ಯಾರು ತಾನೆ ಆಚರಿಸಿಯಾರು.?
ಪ್ರೀತಿಯ ವಿರೋಧಿಸುವ ವಾರ
- ಫೆಬ್ರವರಿ 15: ಸ್ಲ್ಯಾಪ್ ಡೇ (ಕಪಾಳಕ್ಕೆ ಹೊಡೆಯುವ ದಿನ)
- ಫೆಬ್ರವರಿ 16: ಕಿಕ್ ಡೇ
- ಫೆಬ್ರವರಿ 17: ಪರ್ಫ್ಯೂಮ್ ಡೇ
- ಫೆಬ್ರವರಿ 18: ಫ್ಲರ್ಟ್ ಡೇ
- ಫೆಬ್ರವರಿ 19: ಕನ್‌ಫೆಷನ್ ಡೇ (ತಪ್ಪೊಪ್ಪಿಕೊಳ್ಳುವ ದಿನ)
- ಫೆಬ್ರವರಿ 20: ಮಿಸ್ಸಿಂಗ್ ಡೇ
- ಫೆಬ್ರವರಿ 21: ಬ್ರೇಕಪ್ ಡೇ
ಆಚರಿಸುವುದು ಹೇಗೆ?
ಸ್ಲ್ಯಾಪ್ ಡೇ: ನಿಮಗೆ ನೋವುಂಟು ಮಾಡುತ್ತಿದ್ದರೂ ನಿಮಗೆ ಅವರ ಮೇಲೆ ಸೆಂಟಿಮೆಂಟ್ ಇದ್ದರೆ ಅದನ್ನು ಹೊರದೂಡುವ ದಿನ. ನಿಮ್ಮನ್ನು ಕಾಡುತ್ತಿರುವ ಎಲ್ಲಾ ಕೆಟ್ಟ ಆಲೋಚನೆ ಹಾಗೂ ನೆನಪುಗಳನ್ನು ಹೊ ಹಾಕುವ ದಿನ.
ಕಿಕ್ ಡೇ: ಈ ದಿನ ನಿಮ್ಮ ಎಲ್ಲಾ ಚಿಂತೆಗಳನ್ನು ಒದ್ದು ಹೊರಹಾಕಿ. ನಿಮಗೆ ಪ್ರೀತಿಯಲ್ಲಿ ಯಾರಾದರೂ ಮೋಸ ಮಾಡಿದ್ದರೆ ಅವರ ಎಲ್ಲಾ ನೆನಪುಗಳನ್ನು ನಿಮ್ಮಿಂದ ಒದ್ದು ಹೊರಹಾಕಿ.
ಪರ್ಫ್ಯೂಮ್ ಡೇ: ಈ ದಿನ ನಿಮ್ಮನ್ನು ಕಾಡುತ್ತಿರುವ ಕೆಟ್ಟ ನೆನಪುಗಳನ್ನು ಹೊರದೂಡಿ ಸ್ನಾನ ಮಾಡಿ ಒಳ್ಳೆಯ ಸುಗಂಧದ್ರವ್ಯ ಹಾಕಿ, ಅದರ ಸುವಾಸನೆ ನಿಮ್ಮ ಮನಸ್ಸಿಗೆ ಖುಷಿ ನೀಡುವುದು.
ಫ್ಲರ್ಟ್ ಡೇ: ಈ ದಿನ ಹೊಸ ವ್ಯಕ್ತಿಯನನ್ನು ಭೇಟಿ ಮಾಡಿ, ಅವರೊಂದಿಗೆ ಖುಷಿಯಾಗಿ ಇರುವುದು.
ಕನ್‌ಫೆಷನ್ ಡೇ: ಈ ದಿನ ನಿಮ್ಮಿಂದ ಆದ ತಪ್ಪುಗಳನ್ನು ಹೇಳಿಕೊಂಡು ಕ್ಷಮೆ ಕೇಳುವುದು.
ಮಿಸ್ಸಿಂಗ್ ಡೇ: ನಿಮಗೆ ನಿಮ್ಮ ಪ್ರೇಮಿ ತುಂಬಾ ನೆನಪಾಗುತ್ತಿದ್ದರೆ ಅವರಿಗೆ ನಿಮ್ಮ ನೆನಪಿನ ಉಡುಗೊರೆ ನೀಡುವುದು.
ಬ್ರೇಕಪ್ ಡೇ: ಆ ವ್ಯಕ್ತಿಯ ಪ್ರೀತಿ ನಿಮಗೆ ನಿಜ ಅನಿಸದಿದ್ದರೆ ಅವರಿಂದ ಬ್ರೇಕಪ್ ಆಗುವುದು.
ಮಹತ್ವವೇನು?
ಈ ದಿನ, ಕೆಂಪು ಹೃದಯದ ಆಕಾರದ ಬಲೂನ್ ಬದಲಿಗೆ ಕಪ್ಪು ಬಣ್ಣದ ಬಲೂನ್ ಹಾರಿಸಲಾಗುತ್ತದೆ. ಕೆಲವರು ಸ್ವಯಿಚ್ಛೆಯಿಂದಲೂ ಬ್ರೇಕ್ ಅಪ್ ತೆಗೆದುಕೊಳ್ಳುತ್ತಾರೆ. ಅಂತವರು ಈ ದಿನ ಪಾರ್ಟಿಯಲ್ಲಿ ಭಾಗಿಯಾಗುತ್ತಾರೆ. ಸಂಬಂಧ ಇಷ್ಟವಿಲ್ಲದಿದ್ದರೆ ಇಬ್ಬರು ದೂರ ಆಗಲು ನಿರ್ಧರಿಸಿ ಕೊನೆಯ ಬಾರಿ ಒಟ್ಟಿಗೆ ಕಳೆಯುವ ದಿನವಾಗಿಯೂ ಇದನ್ನು ಆಚರಿಸಲಾಗುತ್ತದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಬ್ರೇಕ್ ಅಪ್ ಡೇಗೆ ಮಹತ್ವವಿದ್ದು, ಪ್ರೀತಿ ಪಾತ್ರರಿಂದ ದೂರವಾಗಲು ಈ ದಿನವನ್ನು ಆಯ್ಕೆ ಮಾಡಿಕೊಳ್ಳಲಾಗಿರುತ್ತದೆ.



Click it and Unblock the Notifications
