Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ಅನುಮಾನದ ಸಂಬಂಧಕ್ಕಿಂತ ಒಂಟಿಯಾಗಿರುವುದೇ ಲೇಸು
ಒಂದು ಸುಂದರ ಸಂಬಂಧ ಬರಿ ಪ್ರೀತಿ ಮೇಲೆ ನಿಂತಿಲ್ಲ, ಅಲ್ಲಿ ಪ್ರೀತಿಯಷ್ಟೇ ನಂಬಿಕೆ ಕೂಡ ಮುಖ್ಯವಾಗಿರುತ್ತದೆ,ನಮ್ಮನ್ನು ಹೆಚ್ಚಾಗಿ ಪ್ರೀತೊಸದೇ ಇರುವ ವ್ಯಕ್ತಿ ಜೊತೆ ಬಾಳಬಹುದು, ಆದರೆ ನಮ್ಮನ್ನು ತುಂಬಾನೇ ಪ್ರೀತಿಸುವ ಆದರೆ ಸದಾ ಅನುಮಾನದಿಂದ ನಮ್ಮನ್ನು ಕಾಣುವ ವ್ಯಕ್ತಿ ಜೊತೆ ಬದುಕುವುದು ತುಂಬಾನೇ ಕಷ್ಟ ಅಲ್ಲದೆ ಆ ಬದುಕು ಅಕ್ಷರಶಃ ನರಕವಾಗಿರುತ್ತದೆ.

ಸಂಶಯ ಎಂಬುವುದಕ್ಕೆ ಪೊಸೆಸಿವ್‌ನೆಸ್ ಲೇಪನ ಬೇಡ
ಸಂಶಯ ರೋಗಕ್ಕೆ ಕೆಲವರು ಪೊಸೆಸಿವ್‌ನೆಸ್ ಲೇಪನ ಮಾಡುತ್ತಾರೆ, ತಾನು ಪ್ರೀತಿಸುವ ವ್ಯಕ್ತಿ ನನ್ನ ಸ್ವಂತ ಎಂಬ ಪೊಸೆಸಿವ್‌ನೆಸ್ ಎಲ್ಲರಲ್ಲಿಯೂ ಇರುತ್ತೆ, ಆದರೆ ಸಂಶಯ ಬೇರೆ-ಪೊಸೆಸಿವ್‌ನೆಸ್ ಬೇರೆ, ಆದರೆ ಎಷ್ಟೋ ಜನರು ತಮ್ಮ ವರ್ತನೆಗೆ ಪೊಸೆಸಿವ್ ಎಂಬ ಲೇಪನ ನೀಡಲು ಯತ್ನಿಸುತ್ತಾರೆ. ಈ ಸಂಶಯ ಎಂಬುವುದು ಆ ವ್ಯಕ್ತಿ ಮೇಲೆ ಇರುವ ಪ್ರೀತಿಯಲ್ಲ, ಬದಲಿಗೆ ಅಪನಂಬಿಕೆ. ತನ್ನ ಸಂಗಾತಿ ಏನೇ ಮಾಡಲಿ ಅದನ್ನು ಸದಾ ಸಂಶಯ ಕಣ್ಣಿನಿಂದ ಕಾಣುವುದು.
ಸಂಬಂಧದಲ್ಲಿ ಸಂಶಯ ಮೂಡುವುದಕ್ಕೆ ಕಾರಣಗಳೇನು?
ನಾನಾ ಕಾರಣಗಳಿಂದ ವ್ಯಕ್ತಿಯಲ್ಲಿ ಈ ಸಂಶಯ ಪಡುವ ಗುಣ ಬರುತ್ತದೆ
ತಾನು ನಂಬಿದ್ದ ವ್ಯಕ್ತಿ ತನಗೆ ದ್ರೋಹ ಮಾಡಿದಾಗ: ತಾನು ತಂಬಿದ್ದ ವ್ಯಕ್ತಿ ತನ್ನನ್ನು ದ್ರೋಹ ಮಾಡಿದಾಗ ಮತ್ತೆ ಯಾವುದೇ ಕಾರಣಕ್ಕೆ ಅವರನ್ನು ನಂಬಲು ಮನಸ್ಸು ಸಿದ್ಧವಿರಲ್ಲ
ತಾನು ನೋಡಿದ ಅಥವಾ ಕೇಳಿದ ಘಟನೆಗಳಿಂದ ಪ್ರಭಾವಿತನಾಗಿ: ತನ್ನ ಕುಟುಂಬದಲ್ಲಿ ಅಥವಾ ತನ್ನ ಸ್ನೇಹಿತರು ಹೇಳಿದಂಥ ಕತೆಗಳನ್ನು ಕೇಳಿ ಪ್ರಭಾವಿತನಾಗಿ ತನ್ನ ಸಂಗಾತಿ ಮೇಲೆ ಸುಮ್ಮನೆ ಸಂಶಯ ಪಡುವವರು ಇದ್ದಾರೆ.
ತಾನು ಸರಿಯಿಲ್ಲದೆ ತನ್ನ ಸಂಗಾತಿಯೂ ಅದೇ ರೀತಿ ಎಂದು ಭಾವಿಸುವುದು: ತಾನು ತನ್ನ ಸಂಗಾತಿಗೆ ದ್ರೋಹ ಮಾಡುತ್ತಿದ್ದು, ನನ್ನಂತೆಯೇ ಅವರು ಕೂಡ ದ್ರೋಹ ಮಾಡುತ್ತಿರಬಹುದು ಎಂದು ಸಂಶಯ ಪಡುವುದು
ತನ್ನ ಬಗ್ಗೆ ಇರುವ ಕೀಳೆರಿಮೆ: ನಾನು ಚೆನ್ನಾಗಿಲ್ಲ, ನನ್ನ ಸಂಗಾತಿಗೆ ಸೌಂದರ್ಯವಿದ ಎಂಬ ಕೀಳೆರಿಮೆಯಿಂದ ಕೂಡ ಸಂಶಯ ಉಂಟಾಗುವುದು.
ಸಂಬಂಧದಲ್ಲಿ ಸಂಶಯ ಬರುವುದನ್ನು ತಡೆಯಲು ಏನು ಮಾಡಬೇಕು?
ಗಂಡ-ಹೆಮಡತಿ ನಡುವೆ ಯಾವುದೇ ವಿಷಯಕ್ಕೆ ಮುಚ್ಚುಮರೆ ಇರಬಾರದು ಅಲ್ಲದೆ ಸಂಗಾತಿಯನ್ನು ಸುಮ್ಮನೆ ಸಂಶಯ ಪಡಲು ಕೂಡ ಹೋಗಬಾರದು. ಒಂದು ವೇಳೆ ಇತ್ತೀಚೆಗೆ ನಿಮ್ಮ ಸಂಗಾತಿಯ ನಡವಳಿಕೆ ಬದಲಾಗಿದೆ ಎಂದು ನಮಗನಿಸಿದರೆ ಅದಕ್ಕೆ ಕಾರಣ ನಿಖರವಾಗಿ ತಿಳಿಯುವವರೆಗೆ ನೀವು ಸಂಶಯಪಟ್ಟು ಜಗಳ ಮಾಡುವುದು ಮಾಡಲು ಹೋಗಬಾರದು.
ಸಂಬಂಧದಲ್ಲಿ ತುಂಬಾನೇ ಮುಖ್ಯ ನಂಬಿಕೆ
ಹೌದು ನಂಬಿಕೆಗೆ ದ್ರೋಹವಾಗದಂತೆ ಇಬ್ಬರು ಕೂಡ ನಡೆದುಕೊಳ್ಳಬೇಕಾಗುತ್ತದೆ, ನಂಬಿಕೆಯಿದ್ದರೆ ಅವರು ಎಂಥದ್ದೇ ಸಮಸ್ಯೆ ಬರಲಿ ಜೊತೆಯಾಗಿ ಸಮಸ್ಯೆಗಳನ್ನು ಎದುರಿಸಿ ಒಂದು ಸುಂದರ ಬದುಕು ಕಟ್ಟಿಕೊಳ್ಳುತ್ತಾರೆ, ಹಾಗಾಗಿ ಸಂಬಂಧದಲ್ಲಿ ಬರಿ ಪ್ರೀತಿಯಿದ್ದರೆ ಸಾಲದು ನಂಬಿಕೆ ತುಂಬಾನೇ ಮುಖ್ಯವಾಗಿದೆ.
ಸಂಶಯದ ವ್ಯಕ್ತಿ ಜೊತೆ ಬಾಳುವ ಬದಲಿಗೆ ಒಂಟಿಯಾಗಿರುವುದೇ ಒಳ್ಳೆಯದು
ಸದಾ ಸಂಶಯ ಪಡುವ ವ್ಯಕ್ತಿ ಯಾವತ್ತಿಗೂ ನೆಮ್ಮದಿ ಎಂಬುವುದು ನೀಡುವುದಿಲ್ಲ, ಅಂಥ ವ್ಯಕ್ತಿ ಜೊತೆ ಬಾಳುವುದಕ್ಕಿಂತ ಒಂಟಿಯಾಗಿದ್ದರೆ ಮಾತ್ರ ಖುಷಿಯಿಂದ ಬದುಕಲು ಸಾಧ್ಯವಾಗುವುದು ಅಲ್ಲದೆ ಸಂಶಯ ಪಡುವ ವ್ಯಕ್ತಿಯಿಂದ ನಮ್ಮ ಪ್ರಾಣಕ್ಕೆ ಕೂಡ ಅಪಾಯವಿದೆ, ಹಾಗಾಗಿ ತುಂಬಾ ಸಂಶಯ ಪಡುವ ವ್ಯಕ್ತಿ ಏನೇ ಮಾಡಿದರೂ ಬದಲಾಗಲ್ಲ ಎಂದ ಮೇಲೆ ಬಿಟ್ಟು ದೂರ ನಡೆಯುವುದೇ ವಾಸಿ.



Click it and Unblock the Notifications
