Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವ್ಯಾಲೆಂಟೈನ್ಸ್ ಡೇ ಬಳಿಕ ಬ್ರೇಕಪ್, ಸಿಂಗಲ್ ಆದವರಿಗೆ ಇದೆ ಈ 7 ಇಂಟೆರೆಸ್ಟಿಂಗ್ ದಿನಗಳು
ಫೆಬ್ರವರಿ ಒಂಥರಾ ಚೆನ್ನಾಗಿದೆ 7-14ರವರೆಗೆ ಪ್ರೇಮ ಜ್ವರ, ನಂತರ ಬೇಕಾದರೆ ಬ್ರೇಕಪ್ ಮಾಡಿಕೊಳ್ಳಬಹುದಂತೆ.
ಹೌದು ಫೆಬ್ರವರಿ 7ರಿಂದ 14ರವರೆಗೆ ಪ್ರೇಮಿಗಳಿಗಾಗಿಯೇ ರೋಸ್ ಡೇ, ಚಾಕೋಲೇಟ್ ಡೇ, ಪ್ರಪೋಸ್ ಡೇ, ಟೆಡ್ಡಿ ಡೇ, ಹಗ್ ಡೇ, ಕಿಸ್ ಡೇ, ವ್ಯಾಲೆಂಟೈನ್ಸ್ ಡೇ ಹೀಗೆ ಪ್ರೇಮಿಗಳಿಗೆ ಸೆಲೆಬ್ರೇಷನ್, ಆದರೆ ಇದಾದ ಮೇಲೆ ಕೆಲವು ಡೇಗಳಿವೆ, ಅವುಗಳ ಬಗ್ಗೆ ಕೇಳಿದರೆ ಲವ್ ಪ್ರಪೋಸ್ ಇಷ್ಟವಾಗದವರಿಗೆ , ಲವ್ ಇಲ್ಲದವರಿಗೆ ತುಂಬಾನೇ ಇಷ್ಟವಾಗುವುದು ನೋಡಿ...

ವ್ಯಾಲೆಂಟೈನ್ಸ್ ಬಳಿಕ ಇವೆ ಈ ಇಂಟೆರೆಸ್ಟಿಂಗ್ ದಿನಗಳು
ಫೆಬ್ರವರಿ 15: ಕೆನ್ನೆಗೆ ಭಾರಿಸುವ ದಿನ ( Slap Day)
ಫೆಬ್ರವರಿ 16: ಒದ್ದು ಓಡಿಸುವ ದಿನ (Kick Day)
ಫೆಬ್ರವರಿ 17: ಪರ್ಫ್ಯೂಮ್ ದಿನ(ಎಲ್ಲಾ ಸರಿ ಈ ದಿನವೇಕೆ? ಅಲ್ವಾ?)
ಫೆಬ್ರವರಿ 18: ಫ್ಲರ್ಟ್ ಡೇ
ಫೆಬ್ರವರಿ 19: ತಪ್ಪೊಪ್ಪಿಗೆ ( Confession Day)
ಫೆಬ್ರವರಿ 20: ಮಿಸ್ಸಿಂಗ್ ಡೇ
ಫೆಬ್ರವರಿ 21: ಬ್ರೇಕ್‌ಅಪ್ ಡೇ
ಏನಪ್ಪಾ ಈ ದಿನಗಳ ವಿಶೇಷ ಎಂದು ವಿವರವಾಗಿ ನೋಡುವುದಾದರೆ
ಕೆನ್ನೆಗೆ ಬಾರಿಸುವ ದಿನ: ಪ್ರೀತಿಸಿ ವಂಚಿಸಿದ ಪ್ರೇಮಿ ಕೆನ್ನೆಗೆ ಬಾರಿಸುವ ದಿನವಂತೆ. ಅದಕ್ಕೆಲ್ಲಾ ಈ ದಿನದವರೆಗೆ ಕಾಯಬೇಕೆ? ವಂಚಿಸಿದರು ಎಂದು ಗೊತ್ತಾದ ದಿನವೇ ನನ್ನ ಬದುಕು ನಾಶ ಮಾಡಲು ನಿನಗೆ ಯಾರು ಅಧಿಕಾರ ಕೊಟ್ಟವರು ಎಂದು ಕೆನ್ನೆಗೆ ಬಾರಿಸಿ ಹೋಗಬೇಕು ಅಲ್ವಾ?
ಕಿಕ್ ಡೇ: ಇದೇನು ಸ್ಲ್ಯಾಪ್ ಡೇಗಿಂತ ಭಿನ್ನವಲ್ಲ, ನಮ್ಮನ್ನು ಪ್ರೀತಿಸಿ ವಂಚಿಸಿದವರನ್ನು ನಮ್ಮ ಬದುಕಿನಿಂದ ಒದ್ದು ಓಡಿಸಬೇಕು. ಅದಕ್ಕೂ ಈ ದಿನದವರೆಗೆ ಕಾಯಬೇಕಾಗಿಲ್ಲ ಅಲ್ವಾ? ಏಕೆಂದರೆ ಮೋಸ ಮಾಡುವವರೆಗೆ ನಾವು ನಮ್ಮ ಪ್ರಾಣ, ಸಮಯ ಎರಡೂ ನಷ್ಟ ಮಾಡಬಾರದು, ನಮ್ಮ ಬದುಕಿನಲ್ಲಿ ಅವರಿಗಿರುವ ಯೋಗ್ಯತೆ ಇಲ್ಲ ಎಂದು ಅವರನ್ನು ನಮ್ಮ ಬದುಕಿನಲ್ಲಿ ಮತ್ತೆ ನುಸಳಲು ಅವಕಾಶ ನೀಡದೆ ಅವರಿಂದ ದೂರಾಗಬೇಕು.
ಪರ್ಫ್ಯೂಮ್ ದಿನ
ಈ ದಿನ ಪರ್ಫ್ಯೂಮ್ ನಿಮ್ಮ ಪ್ರೇಮಿಗೆ ನೀಡುವುದಕ್ಕೆ ಅಲ್ಲ, ನಿಮಗಾಗಿ ನೀವು ಖರೀದಿಸುವುದು, ಯಾವುದೇ ಪ್ರೀತಿ-ಪ್ರೇಮವಿಲ್ಲ, ಆದರೂ ನಾವು ಖುಷಿಯಾಗಿದ್ದೇವೆ ಎಂದು ತೋರಿಸುವ ದಿನ.
ಫ್ಲರ್ಟ್ ದಿನ
ಈ ದಿನ ಪ್ರೀತಿಸದವರು ಮಾತ್ರವಲ್ಲ, ಪ್ರೀತಿಸುತ್ತಿರುವವರು ಮಾಡುತ್ತಾರೆ, ಫ್ಲರ್ಟ್ ಲಿಮಿಟ್‌ನಲ್ಲಿ ಇದ್ದರೆ ಒಕೆ, ನಮ್ಮ ಪ್ಲರ್ಟ್ ಬೇರೆಯವರಿಗೆ ನೋವಾಗದಂತೆ ಎಚ್ಚರವಹಿಸಿ.
ತಪ್ಪೊಪ್ಪಿಗೆ ದಿನ:
ನಿಮ್ಮಿಂದ ಯಾವುದೋ ತಪ್ಪಾಗಿದ್ದರೆ ಅದನ್ನು ಹೇಳಿ ಕ್ಷಮೆ ಕೇಳುವ ದಿನ... ಅವರ ಮನಸ್ಸಿಗೆ ನೋವುಂಟು ಮಾಡಿದ್ದಕ್ಕೆ ಕ್ಷಮೆ ಕೇಳಿ ಇನ್ನೆಂದೂ ಆ ತಪ್ಪು ಮಾಡಲ್ಲ ಅಂತ ಹೇಳುವ ದಿನ.
ಮಿಸ್ಸಿಂಗ್ ದಿನ
ಯಾವುದೋ ಕಾರಣಕ್ಕೆ ಅವರಿಂದ ದೂರಾಗಿದ್ದರೆ, ಅವರನ್ನು ತುಂಬಾ ಮಿಸ್ ಮಾಡಿದ್ದರೆ ಅದನ್ನು ಹೇಳಿಕೊಂಡು ಮತ್ತೆ ಒಂದಾಗಲು ಇರುವ ದಿನ.
ಬ್ರೇಕ್‌ಅಪ್ ದಿನ: ಪ್ರೀತಿಯಲ್ಲಿ ಬಿದ್ದ ಮೇಲೆ ಈ ಸಂಬಂಧ ವರ್ಕ್ ಆಗಲ್ಲ ಎಂದುಕೆಲವರಿಗೆ ಅನಿಸುವುದು, ಏಕೆಂದರೆ ಅವರು ಅಂದುಕೊಂಡಂತೆ ಇರಲ್ಲ, ಅವರಿಂದ ದೂರಾಗಬೇಕು ಎಂದನಿಸಿದಾಗ ಅದನ್ನು ಹೇಳಲು ಇರುವ ದಿನ.
ಹೀಗೆ ಈ ಫೆಬ್ರವರಿ ತಿಂಗಳು ತುಂಬಾ ಸ್ವಾರಸ್ಯರವಾಗಿದೆ ಅಲ್ವಾ? ಪ್ರೀತಿಯಲ್ಲಿ ಬೀಳುವಾಗ ಅವಸರ ಅಲ್ಲದು, ನಂತರ ಚಿಕ್ಕ ಕಾರಣಕ್ಕೆ ದೂರ ಆಗಲೂ ಬಾರದು. ಅಲ್ಲದೆ ಪ್ರೀತಿಯಲ್ಲಿ ಮೋಸ ಮಾಡುವ ಮನಸ್ಸು ಯಾರಲ್ಲಿಯೂ ಇರಬಾರದು ಅಲ್ವಾ?
ಪ್ರೀತಿ ಎಂಬುವುದು ಕುರುಡು ಅಂತಾರೆ, ಆದರೆ ಕುರುಡು ಪ್ರೀತಿಯ ಬದಲು ಆ ವ್ಯಕ್ತಿ ನಮ್ಮನ್ನು ನಿಜವಾಗಲೂ ಪ್ರೀತಿಸುತ್ತಿದ್ದಾರಾ ಎಂದು ತಿಳಿದುಕೋಳ್ಳಬೇಕು, ಬಣ್ಣದ ಮಾತುಗಳಿಗೆ ಮರುಳಾಗಬಾರದು, ಪ್ರೀತಿಯಲ್ಲಿ ವಂಚನೆ ಮಾಡಿದವರಿಗೆ ಅಳಬಾರದು..



Click it and Unblock the Notifications
