Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ರಹಮಾನ್ 'ಜೆಮ್ ಆಫ್ ದಿ ಪರ್ಸನ್'ಎಂದ ಸೈರಾ ರಹಮನ್: ವಿಚ್ಛೇದನ ಬಗ್ಗೆ ಅವರು ಹೇಳಿದ್ದು ಹೀಗೆ
ಈ ಎರಡು ವರ್ಷದಲ್ಲಿ ವಿಚ್ಛೇದನ ಪಡೆದ ಸೆಲೆಬ್ರಿಟಿಗಳ ಪಟ್ಟಿ ಹೆಚ್ಚುತ್ತಲೇ ಇದೆ.ಆದರೆ ಈ ಜೋಡಿಗಳಲ್ಲಿ ತುಂಬಾನೇ ಅಚ್ಚರಿ ಮೂಡಿಸಿದ ಜೋಡಿಯೆಂದರೆ ಎ ಆರ್ ರಹಮಾನ್ ಮತ್ತು ಸೈರಾ ಭಾನು ಜೋಡಿ. ಇತ್ತೀಚೆಗೆ ವಿಚ್ಛೇದನ ಪಡೆದ ಸೆಲೆಬ್ರಿಟಿ ಜೋಡಿಗಳಂತೆ ಅಲ್ಲ ಈ ಜೋಡಿ. 29 ವರ್ಷ ಜೊತೆಯಾಗಿ ಬಾಳಿದವರು, ಮೂವರು ಮಕ್ಕಳು, ಒಬ್ಬ ಮಗಳಿಗೆ ಮದುವೆಯಾಗಿದೆ, ಮದುವೆ ಪ್ರಾಯದ ಮತ್ತೊಬ್ಬ ಮಗಳು ಹಾಗೂ ಮಗ ಇದ್ದಾರೆ, ಈ ವಯಸ್ಸಿನಲ್ಲಿ ಸೈರಾ ವಿಚ್ಛೇದನ ಘೋಷಿಸಿದ್ದು ತುಂಬಾನೇ ಶಾಕ್ ಉಂಟು ಮಾಡಿತ್ತು.

ಇಷ್ಟು ಸುದೀರ್ಘ ವೃತ್ತಿ ಬದುಕಿನಲ್ಲಿ ತಮ್ಮ ಹೆಸರಿಗೆ ಕಳಂಕ ಬರಲು ಅವಕಾಶ ನೀಡಿರಲಿಲ್ಲ ರಹಮಾನ್
ಸಂಗೀತ ಮಾಂತ್ರಿಕ ರಹಮಾನ್ ಮೃದು ಮಾತು, ಡೌನ್ ಟು ಅರ್ಥ್(ಅಹಂಕಾರವಿಲ್ಲ) ಸ್ವಭಾವದವರು. ಚಿಕ್ಕ ಪ್ರಾಯದಲ್ಲಿಯೇ ದೊಡ್ಡ ಹೆಸರು ಮಡಿದವರು, ಇವರು ಮದುವೆಯಾಗುವಾಗಲೇ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದರು, ಕೆಲಸವಾಯ್ತು-ತನ್ನ ಮನೆಯಾಯ್ತು ಎಂದು ಬದುಕುತ್ತಿರುವ ವ್ಯಕ್ತಿ, ರಹಮಾನ್ ಅವರ ಹೆಸರು ಯಾವುದೇ ಗಾಸಿಪ್ ಕಾಲಂನಲ್ಲಿ ಬಂದಿರಲಿಲ್ಲ, ಯಾವುದೇ ಪಾರ್ಟಿಯಲ್ಲಿ ಭಾಗಿಯಾಗುತ್ತಿರಲಿಲ್ಲ. ಅವಾರ್ಡ್ ಫಂಕ್ಷನ್‌ನಲ್ಲಿ ತನ್ನ ಸಾಧನೆಗೆ ಫುಲ್ ಕ್ರೆಡಿಟ್ ಪತ್ನಿಗೆ ಕೊಡುತ್ತಿದ್ದರು.
ಸೈರಾ ಹಲವಾರು ಫಂಕ್ಷನ್‌ನಲ್ಲಿ ಅವರ ಹಾಡುಗಳೆಂದರೆ ನನಗೆ ತುಂಬಾನೇ ಇಷ್ಟ ಎಂದು ಹೇಳುವಾಗ ಅವರ ಕಣ್ಣುಗಳಲ್ಲಿ ಗಂಡನ ಬಗ್ಗೆ ಪ್ರೀತಿ, ಹೆಮ್ಮೆ ತುಂಬಿ ತುಳುಕುತ್ತಿತ್ತು. 2022ರ ಅವಾರ್ಡ್ ಸಮಾರಂಭದಲ್ಲಿಯೂ ಪತಿ ಪತ್ನಿ ಜೊತೆಯಾಗಿ ಬಂದು ಅವಾರ್ಡ್ ಸ್ವೀಕರಿಸಿ ಒಬ್ಬರನ್ನೊಬ್ಬರು ಹೊಗಳಿ ಮಾತನಾಡಿದ್ದರು. ಒಂದೇ ವರ್ಷದಲ್ಲಿ ಅವರ ಬದುಕಿನಲ್ಲಿ ಏನಾಯ್ತು ಎಂಬುವುದು ಯಾರಿಗೂ ಗೊತ್ತಿಲ್ಲ, ಇದ್ದಕ್ಕಿದ್ದಂತೆ ಸೈರಾ ವಿಚ್ಛೇದನ ನೀಡುವುದಾಗಿ ಘೋಷಿಸಿದರು, ಪತತ್ನಿ ಹೀಗೆ ಮಾಡ್ತಾರೆ ಅಂತ ರಹಮಾನ್ ಅವರಿಗೆ ಯಾವ ಐಡಿಯಾನೂ ಇರಲಿಲ್ಲ ಎಂದು ಅವರನ್ನು ತುಂಬಾ ಚೆನ್ನಾಗಿ ಬಲ್ಲವರು ಹೇಳುತ್ತಿದ್ದಾರೆ.
ವಿಚ್ಛೇದನ ಬಳಿಕ ರಹಮಾನ್‌ರ ಹೆಸರಿಗೆ ಕಳಂಕ ತರುವ ಸುದ್ದಿಗಳು ಪ್ರಕಟವಾಗಲಾರಂಭಿಸಿದರು
ರಹಮಾನ್ ಅವರಿಗೆ ಅವರ ಪತ್ನಿ ಸೈರಾ ವಿಚ್ಛೇದನ ಘೋಷಿಸಿದ ಬೆನ್ನಲ್ಲೇ ರಹಮಾನ್ ಮ್ಯೂಸಿಕ್ ಟೀಂ ಗಿಟಾರ್ ನುಡಿಸುವವರಾದ ಮೋಹಿನಿ ಡೇ ತಮ್ಮ ಪತಿಯಿಂದ ಬೇರ್ಪಡುವುದಾಗಿ ಹೇಳಿದಾಗ ಅನೇಕ ಊಹಾಪೋಹಾ ಸುದ್ದಿಗಳು ಬರಲಾರಭಿಸಿದರು.
ಕಾನೂನು ಪ್ರಕಾರ ನಾವು ಇನ್ನೂ ಬೇರೆ ಆಗಿಲ್ಲ ಎಂದ ಸೈರಾ ರಹಮಾನ್
ಸೈರಾ ಅವರು ಯೂಟ್ಯೂಬರ್‌ಗಳು ಹಾಗೂ ಮಾಧ್ಯಮದವರನ್ನು ಉದ್ದೇಶಿಸಿಸಿ ವಾಯ್ಸ್ ಮೆಸೇಜ್ ನೀಡಿದ್ದು ಅದರಲ್ಲಿ ನಾನು ಸೈರಾ ರಹಮಾನ್ ಎಂದೇ ಅವರ ಹೆಸರನ್ನು ಹೇಳಿದ್ದಾರೆ, ಅಲ್ಲದೆ ರಹಮಾನ್ ಅವರ ಬಗ್ಗೆ ಊಹಾಪೋಹಾ ಸುದ್ದಿಗಳನ್ನು ಹರಡಬೇಡಿ, ಅವರು ದಿ ಗ್ರೇಟ್ ಮ್ಯಾನ್, ಅವರು ಜೆಮ್ ಆಫ್ ದಿ ಪರ್ಸನ್, ನಾನು ಆರೋಗ್ಯ ಸಮಸ್ಯೆಯಿಂದಾಗಿ ಚೆನ್ನೈಯಿಂದ ಮುಂಬೈಗೆ ಬಂದಿರುವೆ, ಈಗ ಚಿಕಿತ್ಸೆ ಪಡೆಯುತ್ತಿರುವೆ, ಚಿಕಿತ್ಸೆ ಬಳಿಕ ಚೆನ್ನೈಗೆ ಬರುತ್ತೇನೆ, ನಾವಿನ್ನೂ ಕಾನೂನು ಬದ್ಧವಾಗಿ ವಿಚ್ಛೇದನ ಪಡೆದಿಲ್ಲ ಎಂದು ಹೇಳುವ ಮೂಲಕ ರಹಮಾನ್ ಬಗ್ಗೆ ಸುಮ್ಮನೆ ಸುದ್ದಿ ಬರೆಯಬೇಡಿ ಎಂದು ಪತಿಯ ಬೆಂಬಲಕ್ಕೆ ನಿಂತಿದ್ದಾರೆ.
ಸೈರಾ ರಹಮಾನ್ ಅವರೇ ವಿಚ್ಛೇದನ ನೀಡುವುದಾಗಿ ಹೇಳಿ ಈಗ ನಾವಿನ್ನೂ ಕಾನೂನು ಪರಕಾರ ಬೇರೆಯಾಗಿಲ್ಲ ಎಂದು ಹೇಳಿರುವುದರಿಂದ ಮುಂದೆ ಈ ಜೋಡಿ ಒಂದಾದರು ಒಂದಾಗಬಹುದು ಎಂಬ ಸೂಚನೆ ನೀಡಿದಂತಿದೆ. ಎಲ್ಲರ ದಾಂಪತ್ಯ ಜೀವನದಲ್ಲಿ ಒಂದಲ್ಲಾ ಒಂದು ಸಮಸ್ಯೆ ಇರುತ್ತದೆ, ಕೆಲವರು ಹೊಂದಾಣಿಕೆ ಮಾಡಿಕೊಂಡು ಸಾಗಿದರೆ ಜೊತೆಗೆ ಇದ್ದಾಗ ನೆಮ್ಮದಿ ಇಲ್ಲ ಬೇರೆಯಾಗುವುದೇ ಒಳ್ಳೆಯದು ಎಂದು ವಿಚ್ಛೇದನ ಪಡೆಯುತ್ತಾರೆ, ಆದರೆ ಮಧ್ಯ ವಯಸ್ಸು ದಾಟಿದ ಮೇಲೆ ಈ ರೀತಿಯ ನಿರ್ಧಾರ ತೆಗೆದುಕೊಳ್ಳುವವರು ತುಂಬಾ ಕಡಿಮೆ, ಇಬ್ಬರು ಪರಸ್ಪರ ಮಾತನಾಡೆ ಒಂದೇ ಮನೆಯಲ್ಲಿ ವಾಸಿಸುವವರು ಇದ್ದಾರೆ. ಎರಡು ಮಕ್ಕಳಿದ್ದರೆ ಒಂದು ಮಗನ ಮನೆಯಲ್ಲಿ ಒಬ್ಬರು ಮತ್ತೊಂದು ಮಗನ ಮನೆಯಲ್ಲಿ ಮತ್ತೊಬ್ಬರು ವಾಸಿಸುವವರು ಇದ್ದಾರೆ. ಆದರೆ ಈ ರೀತಿ ವಿಚ್ಛೇದನದ ಬಗ್ಗೆ ಘೋಷಿಸಲು ಭಾರತದಲ್ಲಿ ಹಿಂದೆ ಮುಂದೆ ನೋಡುತ್ತಾರೆ.
ಮುರಿದ ಕನ್ನಡ ಜೋಡಿಸಿದರೂ ಅದು ಎಂದಿಗೂ ಸರಿಯಾಗಲ್ಲ ಎಂಬರ್ಥದಲ್ಲಿ ರಹಮಾನ್ ಕೂಡ ಪೋಸ್ಟ್ ಮಾಡಿದ್ದಾರೆ, ಎಲ್ಲರಿಗೂ ಆದರ್ಶವಾಗಿದ್ದ ಜೋಡಿ ಈ ರೀತಿ ಬೇರೆಯಾದಾಗ ಅವರ ಅಭಿಮಾನಿಗಳಿಗೆ, ಅವರ ಆಪ್ತ ವಲಯದವರಿಗೆ ದೊಡ್ಡ ಶಾಕ್ ತಂದಿದೆ ಎಂಬುವುದಂತು ಸತ್ಯ.



Click it and Unblock the Notifications