Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ನಟಿ ಊರ್ಮಿಳಾ-ಮೊಹ್ಸಿನ್ ವಿಚ್ಛೇದನ: ಯಾರಿಗೂ ಹೇಳದೆ ಮದುವೆಯಾಗಿದ್ದ ಜೋಡಿ!
ಬಾಲಿವುಡ್‌ನಲ್ಲಿ ವಿಚ್ಛೇದನ ಸಾಮಾನ್ಯ ಎನ್ನುವಂತಾಗಿದೆ. ಯುವ ದಂಪತಿಯಿಂದ ಹಿಡಿದು ಹಲವು ದಶಕ ಜೊತೆಗಿದ್ದವರು ಈಗ ವಿಚ್ಛೇದನ ಪಡೆಯುತ್ತಿರುವುದು ನೋಡಬಹುದು. ಈಗ ನಟಿ ಊರ್ಮಿಳಾ ಮಾತೋಂಡ್ಕರ್ ಮತ್ತು ಅವರ ಪತಿ ಮೊಹ್ಸಿನ್ ಅಖ್ತರ್ ಮಿರ್ ವಿಚ್ಛೇದನ ಪಡೆಯಲು ಮುಂದಾಗಿರುವುದಾಗಿ ತಿಳಿದುಬಂದಿದೆ.
ಬಾಲಿವುಡ್‌ನಲ್ಲಿ ಹಲವು ನಟರ ಜೊತೆಗೆ ನಟಿಸಿದ್ದ ಅವರು ಮದುವೆಯಾಗಿ 8 ವರ್ಷವಾಗಿದೆ. ಆಗಿದೆ ಆದರೆ ಈಗ ದಿಢೀರ್ ವಿಚ್ಛೇದನ ನೀಡುವುದಾಗಿ ಹೇಳಿ ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾರೆ. ಅದರಲ್ಲೂ 8 ವರ್ಷದ ಸುಂದರ ದಾಂಪತ್ಯಕ್ಕೆ ದಿಢೀರ್ ಅಂತ್ಯ ಹಾಡಿದ್ದು ಹಲವರ ಅಚ್ಚರಿಗೆ ಕಾರಣವಾಗಿದೆ.

ಊರ್ಮಿಳಾ ಅವರು 2016 ರಲ್ಲಿ ಅಚ್ಚರಿಯ ರೀತಿ ಮದುವೆಯಾಗಿದ್ದರು. ಯಾರಿಗೂ ತಿಳಿಸದೆ ಅವರು ಮದುವೆಯಾಗಿದ್ದರು. ಸಂಬಂಧಿಕರು, ಸ್ನೇಹಿತರು ಕೂಡ ನಿಬ್ಬೆರಗಾಗಿದ್ದರು. ಏಕೆಂದರೆ ಅವರಿಬ್ಬರದ್ದು ಅಂತರ್ ಧರ್ಮೀಯ ವಿವಾಹವಾಗಿತ್ತು, ಹೀಗಾಗಿ ಅವರಿಬ್ಬರು ಹೆಚ್ಚು ಜನರಿಗೆ ತಿಳಿಸದೆ ಮದುವೆಯಾಗಿದ್ದರು. ಇಬ್ಬರ ನಡುವೆ 10 ವರ್ಷಗಳ ಅಂತರ ಕೂಡ ಇದ್ದಿದ್ದು ಆಕೆಯ ಮದುವೆ ಕುರಿತ ಅಚ್ಚರಿ ಹೆಚ್ಚಾಗಲು ಕಾರಣವಾಗಿತ್ತು.
ಮೊಹ್ಸಿನ್ ಅಖ್ತರ್ ಮೀರ್ ಯಾರು?
ಮೊಹ್ಸಿನ್ ಮೂಲತಃ ಕಾಶ್ಮೀರದವರಾಗಿದ್ದು ಮಾಡೆಲ್ ಮತ್ತು ಉದ್ಯಮಿಯಾಗಿದ್ದಾರೆ. 21ನೇ ವಯಸ್ಸಿನಲ್ಲಿ, ಅವರು ಮಾಡೆಲಿಂಗ್ ಮತ್ತು ನಟನೆಗಾಗಿ ಅವರು ಮುಂಬೈಗೆ ಬಂದಿದ್ದರು. 2007 ರಲ್ಲಿ ನಡೆದ ಮಿಸ್ಟರ್ ಇಂಡಿಯಾ ಸ್ಪರ್ಧೆಯಲ್ಲಿ ಮೊಹ್ಸಿನ್ ಎರಡನೇ ರನ್ನರ್ ಅಪ್ ಆಗಿದ್ದರು. ಪ್ರೀತಿ ಜಿಂಟಾ ಜೊತೆಯಲ್ಲಿ ಮೊಹ್ಸಿನ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಇದು ಅವರ ಜೀವನದಲ್ಲಿ ದೊಡ್ಡ ತಿರುವು ನೀಡಿತ್ತು. ಬಳಿಕ 2009ರಲ್ಲಿ ಇಟ್ಸ್ ಎಮ ಮ್ಯಾನ್ಸ್ ವರ್ಲ್ಡ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
ಬಾಲಿವುಡ್‌ನಲ್ಲಿ ಹೆಚ್ಚು ಕೆಲಸ ಮಾಡದಿದ್ದರೂ ಫೇಮಸ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಜೊತೆ ಗುರುತಿಸಿಕೊಂಡರು. ಹಲವು ಡಿಸೈನರ್ ವರ್ಕ್‌ನ ಹಿಂದೆ ಇವರ ಕೈ ಕೆಲಸ ಕಾಣುತ್ತಿತ್ತು. ಹೆಸರು ಸಹ ಮಾಡಿದ್ದರು.
ಊರ್ಮಿಳಾ ಮತ್ತು ಮೊಹ್ಸಿನ್ ಭೇಟಿಯಾಗಿದ್ದು ಹೇಗೆ?
2014 ರಲ್ಲಿ ಮನೀಶ್ ಮಲ್ಹೋತ್ರಾ ಅವರ ಸೋದರ ಸೊಸೆ ರಿದ್ಧಿ ಮಲ್ಹೋತ್ರಾ ಅವರ ಮದುವೆಯಲ್ಲಿ ಊರ್ಮಿಳಾ ಮೊಹ್ಸಿನ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದಾರೆ ಎಂದು ವರದಿಯಾಗಿದೆ. ನಂತರ ಇಬ್ಬರು ಪ್ರೀತಿಸುತ್ತಿದ್ದರು, ಆದರೆ ಈ ವಿಚಾರ ಎಲ್ಲಿಯೂ ಹೊರಗೆ ಬಂದಿರಲಿಲ್ಲ. ಇಬ್ಬರು ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಇಬ್ಬರ ಕುರಿತು ಎಲ್ಲಿಯೂ ಗುಸು ಗುಸು ಸಹ ಇರಲಿಲ್ಲ. ಆದ್ರೆ ದಿಢೀರ್ ಇಬ್ಬರು ಮದುವೆಯಾಗಿದ್ದು ಅಚ್ಚರಿಗೆ ಕಾರಣವಾಗಿತ್ತು.
ಆನ್‌ಲೈನ್‌ನಲ್ಲಿ ಹರಡಿತ್ತು ದ್ವೇಷ
ಇಬ್ಬರ ಮದುವೆಯ ಸುದ್ದಿ ಹರಡಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಊರ್ಮಿಳಾ ಮತ್ತು ಮೊಹ್ಸಿನ್ ಅವರ ವಿವಾಹದ ನಂತರ, ಮೊಹ್ಸಿನ್ ಅವರ ಅಂತರ-ಧರ್ಮೀಯ ವಿವಾಹಕ್ಕಾಗಿ ಟೀಕೆ ಕೇಳಿಬಂದಿತ್ತು. ಅವನನ್ನು ಭಯೋತ್ಪಾದಕ, ಪಾಕಿಸ್ತಾನಿ ಎಂದು ಕರೆಯಲಾಗುತ್ತಿತ್ತು. ಎಲ್ಲದಕ್ಕೂ ಮಿಗಿಲಾಗಿ, ನನ್ನ ಪತಿ ಕೇವಲ ಯಾವುದೇ ಮುಸ್ಲಿಂ ಅಲ್ಲ, ಆದರೆ ಕಾಶ್ಮೀರಿ ಮುಸ್ಲಿಂ. ನಾವಿಬ್ಬರೂ ನಮ್ಮ ಧರ್ಮವನ್ನು ನಮ್ಮದೇ ಆದ ರೀತಿಯಲ್ಲಿ ಅನುಸರಿಸುತ್ತೇವೆ ಮತ್ತು ಅದು ನನ್ನನ್ನು ಟ್ರೋಲ್ ಮಾಡಲು ಅವರಿಗೆ ದೊಡ್ಡ ವೇದಿಕೆಯನ್ನು ನೀಡಿತು. ಅದು ಎಲ್ಲಿಗೆ ಹೋಗಬೇಕು ಎಂಬುದಕ್ಕೆ ಮಿತಿ ಇದೆ ಎಂದು ಊರ್ಮಿಳಾ ಹಿಂದೊಮ್ಮೆ ಹತಾಶೆ ಹೊರಹಾಕಿದ್ದರು.
ಜೂನ್ 2023 ರಲ್ಲಿ ಈದ್ ಸಂದರ್ಭದಲ್ಲಿ ಊರ್ಮಿಳಾ ತನ್ನ ಪತಿಯೊಂದಿಗೆ ಕೊನೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಕಳೆದ ಒಂದು ವರ್ಷದಲ್ಲಿ, ಇಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರ ಫೋಟೋಗನ್ನು ಹಂಚಿಕೊಂಡಿರಲಿಲ್ಲ. ಹಾಗೆ ಇಬ್ಬರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯದ ಸುದ್ದಿ ಸಹ ಹರಡಿರಲಿಲ್ಲ. ಸದ್ಯ ಈಗ ಇವರಿಬ್ಬರ ವಿಚ್ಛೇದನಕ್ಕೆ ಕಾರಣ ತಿಳಿದುಬಂದಿಲ್ಲ.



Click it and Unblock the Notifications