Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಅಮೀರ್ ಖಾನ್ ಜೊತೆ 3ನೇ ವಿವಾಹ ಆಗ್ತಾರಾ ಬೆಂಗಳೂರು ಮೂಲದ ಗೌರಿ..! ಯಾರು ಈಕೆ ಗೊತ್ತಾ?
ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಮದುವೆಯ ಸುದ್ದಿ ಈಗ ಹರಿದಾಡುತ್ತಿದೆ. ಈಗಾಗಲೆ ಮದುವೆಯಾಗಿ ಮಕ್ಕಳನ್ನು ಹೊಂದಿರುವ ಅವರು ಈಗ 3ನೇ ಮದುವೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಂಗಳೂರು ಮೂಲದ ಗೌರಿ ಸ್ಪ್ರಾಟ್ ಎಂಬಾಕೆಯ ಜೊತೆಗೆ ಕೆಲ ವರ್ಷದಿಂದ ಅವರು ಸುತ್ತಾಡಿಕೊಂಡಿದ್ದರು. ಹಾಗೆ 18 ತಿಂಗಳಿಂದ ಇಬ್ಬರು ಡೇಟಿಂಗ್ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಇಬ್ಬರಿಗೂ ಹಲವು ವರ್ಷದಿಂದ ಪರಿಚಯವಿದ್ದರೂ ಒಟ್ಟಿಗೆ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದ್ರೆ ಇತ್ತೀಚಿಗೆ ಅಮೀರ್ ಖಾನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಗೆಳತಿ ಗೌರಿ ಸ್ಪ್ರಾಟ್ ಅವರನ್ನು ಪರಿಚಯಿಸಿದ್ದರು. ಅಮೀರ್ ಖಾನ್ ಅವರ ಈ ನಡೆ ಎಲ್ಲರಿಗೂ ಅಚ್ಚರಿ ತಂದಿತ್ತು. ಹಾಗೆ ಗೌರಿ ಅವರ ಕುರಿತು ಅಮೀರ್ ಖಾನ್ ಮುಕ್ತವಾಗಿ ಮಾತನಾಡಿದ್ದರು, ಆಕೆಯ ಜೊತೆಗೆ ಭವಿಷ್ಯದ ದಿನಗಳು ಹೇಗಿರಲಿದೆ ಎಂಬುದನ್ನು ಕೂಡ ಹಂಚಿಕೊಂಡಿದ್ದರು.

ಇದು ಅಮೀರ್ ಖಾನ್ ಅಭಿಮಾನಿಗಳಲ್ಲಿ ಅಚ್ಚರಿಗೆ ಕಾರಣವಾಗಿತ್ತು. ಹಾಗೆ ಸಿನಿಮಾ ಪ್ರಮೋಷನ್, ಶೂಟಿಂಗ್ ಕೆಲಸದ ನಡುವೆಯೂ ಆಗಾಗ ಗೌರಿ ಸ್ಪ್ರಾಟ್ ಅವರೊಂದಿಗೆ ಅಮೀರ್ ಖಾನ್ ಕಾಣಿಸಿಕೊಂಡಿದ್ದರು.
ಯಾರು ಈ ಬೆಂಗಳೂರಿನ ಗೌರಿ ಸ್ಪ್ರಾಟ್?
ಗೌರಿ ಸ್ಪ್ರಾಟ್ ಬೆಂಗಳೂರಿನವರು. ಇಲ್ಲಿಯೇ ನೆಲೆಸಿದ್ದು ಬೆಂಗಳೂರಿನಲ್ಲಿ ಪದವಿ ಮುಗಿಸಿ ಇಲ್ಲಿಯೇ ಬ್ಯುಸಿನೆಸ್‌ನಲ್ಲಿ ತೊಡಗಿದ್ದಾರೆ. ರೀಟಾ ಸ್ಪ್ರಾಟ್ ಎಂಬಾಕೆಯ ಮಗಳಾಗಿದ್ದು, ರೀಟಾ ಬೆಂಗಳೂರಿನಲ್ಲಕಿ ಅತ್ಯಾಧುನಿಕ ಸಲೂನ್ ಶಾಪ್ ನಡೆಸುತ್ತಿದ್ದಾರೆ. ಗೌರಿ ಲಂಡನ್ ಕಲಾ ವಿಶ್ವವಿದ್ಯಾಲಯದಲ್ಲಿ ಸ್ಟೈಲಿಂಗ್ ಹಾಗೂ ಛಾಯಾಗ್ರಹಣ ಪ್ಯಾಷನ್ ಕೋರ್ಸ್ ಮುಗಿಸಿದ್ದು ಅವರು ಕೂಡ ತಾಯಿಯ ಬ್ಯುಸಿನೆಸ್‌ನಲ್ಲೂ ತೊಡಗಿಸಿಕೊಂಡಿದ್ದಾರೆ. ಹಾಗೆ ಈಗ ಮುಂಬೈನಲ್ಲಿ ದೊಡ್ಡ BBlunt ಸಲೂನ್ ಎಂಬ ದೊಡ್ಡದಾದ ಫ್ಯಾಷನ್ ಸಲೂನ್ ಸಹ ತೆರೆದಿದ್ದಾರೆ. ಆದ್ರೆ ಬಹುತೇಕ ಸಮಯ ಅವರು ಬೆಂಗಳೂರಿನಲ್ಲೇ ಕಳೆಯುತ್ತಾರೆ.
ಗೌರಿ ಸ್ಪ್ರಾಟ್‌ಗೂ ಇದು ಎರಡನೇ ಮದುವೆ
ಅಮೀರ್ ಖಾನ್ ಜೊತೆ ಕಾಣಿಸಿಕೊಂಡಿರುವ ಬೆಂಗಳೂರಿನ ಈ ಗೌರಿ ಸ್ಪ್ರಾಟ್ ಅವರಿಗೆ ಈ ಮೊದಲೆ ಮದುವೆ ಆಗಿದೆ. ಅವರಿಗೆ 6 ವರ್ಷದ ಮಗುವಿದೆ. ಆದರೆ ಆಕೆಯ ಮೊದಲ ಪತಿ ಕುರಿತಂತೆ ಯಾವುದೇ ಮಾಹಿತಿ ಲಭ್ಯವಿಲ್ಲ. ಇನ್ನೊಂದು ಕಡೆ ನಟ ಅಮೀರ್ ಖಾನ್ ಅವರಿಗೆ ಇದು 3ನೇ ವಿವಾಹವಾಗಿದೆ.
ಆಮಿರ್ ಖಾನ್ ಮತ್ತು ಗೌರಿ ಸ್ಪ್ರಾಟ್ ಸುಮಾರು 25 ವರ್ಷಗಳಿಂದ ಪರಿಚಿತರು ಆದರೆ ಅವರು ಸುಮಾರು 18 ತಿಂಗಳ ಹಿಂದೆ ಡೇಟಿಂಗ್ ಆರಂಭಿಸಿರುವುದಾಗಿ ಹೇಳಿಕೊಂಡಿದ್ದಾರೆ. ಹಾಗೆ ಇಬ್ಬರು ಪರಸ್ಪರ ಮಾತನಾಡುವ ಬಳಿಕ ತಮ್ಮ ಸಂಬಂಧವನ್ನು ಬಹಿರಂಗಪಡಿಸಲು ಮುಂದಾಗಿರುವುದಾಗಿ ಅಮೀರ್ ಖಾನ್ ಹೇಳಿಕೊಂಡಿದ್ದಾರೆ.
ಇಬ್ಬರ ಮದುವೆ ಕುರಿತು ಅಮೀರ್ ಖಾನ್ ಹೇಳಿದ್ದೇನು?
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾಗುತ್ತೀರಾ ಎಂಬ ಪ್ರಶ್ನೆ ಕೇಳಿದಾಗ ಈ ಬಗ್ಗೆ ಯೋಚಿಸಿಲ್ಲ ಎಂದಿದ್ದಾರೆ. ನನಗೀಗ 60 ವರ್ಷ ಈ ವಯಸ್ಸಿನಲ್ಲಿ ಮದುವೆಯ ಬಗ್ಗೆ ಆಲೋಚಿಸುವುದು ಸರಿಹೊಂದುವುದಿಲ್ಲ, ನೋಡೋಣ ಎಂದಿದ್ದಾರೆ. ಗೌರಿಗೆ ಅಮೀರ್ ಅವರ ಕುಟುಂಬ ಮತ್ತು ಸಹ ನಟ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಸೇರಿದಂತೆ ಆಪ್ತ ಸ್ನೇಹಿತರು ಪರಿಚಯವಾಗಿದ್ದಾರೆ. ಅಮೀರ್ ಖಾನ್ ಮಕ್ಕಳು ಕೂಡ ಗೌರಿಯನ್ನು ಭೇಟಿಯಾಗಿದ್ದಾರೆ. ಇಬ್ಬರ ಕುಟುಂಬಸ್ಥರು ಕೂಡ ಪರಸ್ಪರ ಪರಿಚಯವಾಗಿದ್ದಾರೆ. ಸದ್ಯ ಅಮೀರ್ ಖಾನ್ ಅವರ ಸಿನಿಮಾ ತಯಾರಿಕಾ ಸಂಸ್ಥೆ ಅಮೀರ್ ಖಾನ್ ಪ್ರೊಡಕ್ಷನ್ ಹೌಸ್ ಜೊತೆಗೂ ಕೂಡ ಗೌರಿ ಸ್ಪ್ರಾಟ್ ಕೆಲಸ ಮಾಡುತ್ತಿದ್ದಾರೆ. ಈಗ ಇಬ್ಬರು ಸಾರ್ವಜನಿಕವಾಗಿಯೂ ಕಾಣಿಸಿಕೊಳ್ಳುತ್ತಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.



Click it and Unblock the Notifications
