Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸಂಗೀತ ಮಾಂತ್ರಿಕ ಎ ಆರ್ ರಹಮಾನ್ 57ನೇ ವಯಸ್ಸಿನಲ್ಲಿ ವಿಚ್ಛೇದನದ ಬಿರುಗಾಳಿ: ಈ ಬಗ್ಗೆ ರಹಮಾನ್ ಎಮೋಷನಲ್ ಆಗಿ ಹೇಳಿದ್ದು ಹೀ
ಸಂಗೀತ ಮಾಂತ್ರಿಕ ಎ ಆರ್ ರಹಮಾನ್ ಬಾಳಿನಲ್ಲಿಯೂ ವಿಚ್ಛೇದನದ ಬಿರುಗಾಳಿ, ಅದರಲ್ಲಿ ಐದಲ್ಲ, ಹತ್ತಲ್ಲ ಬರೋಬರಿ 29 ವರ್ಷದ ದಾಂಪತ್ಯಕ್ಕೆ ಇತಿಶ್ರೀ ಹಾಡಿದ್ದಾರೆ, ವೃತ್ತಿ ಬದುಕಿನಲ್ಲಿ ಯಶಸ್ವಿನ ಉತ್ತುಂಗದಲ್ಲಿರುವ ಆಸ್ಕರ್ ಪ್ರಶಸ್ತಿ ವಿಜೇತ ಎ ಆರ್ ರಹಮಾನ್ ವೈವಾಹಿಕ ಬದುಕು ಎಲ್ಲರು ಅಂದುಕೊಂಡಂತೆ ಸುಂದರ ಸಂಸಾರವಾಗಿರಲಿಲ್ಲ ಎಂಬುವುದು ಈ ವಿಚ್ಛೇದನ ಹೇಳುತ್ತಿದೆ. ಅವರ ಪತ್ನಿ ಸೈರಾ ತಾನು ಪತಿಯಿಂದ ಬೇರೆಯಾಗುತ್ತಿರುವುದಾಗಿ ಅಧಿಕೃತವಾಗಿ ತಿಳಿಸಿದ್ದಾರೆ.
ನಮ್ಮ ನಡುವೆ ಪ್ರೀತಿ ಇದ್ದರೂ ಹೊಂದಾಣಿಕೆ ಇರಲಿಲ್ಲ ತುಂಬಾನೇ ಅಂತರ ಉಂಟಾಗಿದೆ, ನಮ್ಮಿಬ್ಬರ ಸಂಬಂಧ ದುರ್ಬಲವಾಗಿದೆ, ಇದರಿಂದ ಇಬ್ಬರಿಗೂ ನೆಮ್ಮದಿಯಿಲ್ಲ, ಹೀಗಾಗಿ ತುಂಬಾ ನೋವಿನಿಂದ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಯ್ತು ಎಂದು ಹೇಳಿದ್ದಾರೆ.

57 ವರ್ಷದ ರಹಮಾನ್ ಬದುಕಿನಲ್ಲಿ ವಿಚ್ಛೇದನದ ಬಿರುಗಾಳಿ ಎದ್ದಿರುವುದು ಅಚ್ಚರಿಯೇ ಸರಿ
ಯೌವನ ಪ್ರಾಯದ ಜೋಡಿಗಳು ವಿಚ್ಛೇದನ ಪಡೆದರೆ ಏಕೋ ಹೊಂದಾಣಿಕೆ ಬಂದಿಲ್ಲ ಎಂದು ಭಾವಸಬಹುದು,ಆದರೆ ಎ ಆರ್ ರಹಮಾನ್ ವಯಸ್ಸು 57, 60 ವಯಸ್ಸು ಕೆಲಸದಲ್ಲಿ ಇರುವವರಿಗೆ ನಿವೃತ್ತಿಯ ಪ್ರಾಯ, ಮಕ್ಕಳು, ಮೊಮ್ಮಕ್ಕಳು ಎಂದು ತಮ್ಮ ನಿವೃತ್ತಿ ಬದುಕು ಕಳೆಯುವ ಸಮಯ. ಅಲ್ಲೆ ಅವರು ಮದುವೆಯಾಗಿ 29 ವರ್ಷ ಇಬ್ಬರು ಜೊತೆಯಾಗಿ ಜೀವನ ನಡೆಸಿದ್ದಾರೆ. ಎ. ಆರ್ ರಹಮಾನ್ನ ಬದುಕಿನ ಕಷ್ಟ ಸುಖದ ಹಂತದಲ್ಲಿ ಜೊತೆಯಾಗಿ ನಿಂತಿದ್ದಾರೆ ಸೈರಾ. ಇವರ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಖತೀಜಾ ರಹಮಾನ್, ರಹೀಮಾ ರಹಮಾನ್ ಎಂಬ ಇಬ್ಬರು ಹೆಣ್ಮಕ್ಕಳು ಹಾಗೂ ಎ ಆರ್ ಅಮೀನ್ ಎಂಬ ಮಗನಿದ್ದಾನೆ, ಎಲ್ಲರೂ ಯೌವನ ಪ್ರಾಯದಲ್ಲಿರುವ ಮಕ್ಕಳು. ಹೀಗಿರುವಾಗ ಈ ವಯಸ್ಸಿನಲ್ಲಿ ವಿಚ್ಛೇದನ ಪಡೆಯುತ್ತಿದ್ದಾರೆ, ಇಷ್ಟು ವರ್ಷ ಜೊತೆಯಾಗಿ ಬದುಕಿದ್ದ ಈ ಜೋಡಿ ಈಗ ಇಂಥ ನಿರ್ಧಾರ ತೆಗೆದುಕೊಂಡಿರುವುದೇಕೆ ಎಂಬುವುದೇ ಅಚ್ಚರಿಗೆ ಕಾರಣವಾಗಿದೆ.
ಅರೇಂಜ್ ಮ್ಯಾರೇಜ್ ಆಗಿದ್ದ ಎ ಆರ್ ರಹಮಾನ್
ಎ ಆರ್ ರಹಮಾನ್ 1995ರಲ್ಲಿ ಸೈರಾಭಾನು ಎಂಬುವವರನ್ನು ಅರೇಂಜ್ ಮ್ಯಾರೇಜ್ ಆಗಿದ್ದರು, ರಹಮಾನ್ ತಾಯಿ ನೋಡಿ ಮಗನಿಗೆ ಮದುವೆ ಮಾಡಿಸಿದ್ದರು, ಸಂಗೀತ ಲೋಕದಲ್ಲಿ ತನ್ನದೇ ಛಾಪು ಮೂಡಿಸುತ್ತಿದ್ದ ರಹಮಾನ್ ತುಂಬಾನೇ ಬ್ಯುಸಿ ಇದ್ದ ಕಾರಣ ಅವರಿಗೆ ತಮಗೆ ಹುಡುಗಿ ಹುಡುಕಲು ಸಾಧ್ಯವಾಗಿರಲಿಲ್ಲ, ತಾಯಿ ನೋಡಿದ ಹುಡುಗಿಯನ್ನು ಒಪ್ಪಿ ಮದುವೆಯಾದರು. ಇಬ್ಬರು ಇಲ್ಲಿಯವರೆಗೆ ಯಾವುದೇ ವಿವಾದ ಮಾಡಿಕೊಳ್ಳದೆ ಚೆನ್ನಾಗಿಯೇ ಜೀವನ ಮಾಡುತ್ತಾ ಬಂದಿದ್ದರು, ಆದರೆ ಅವರ ನಡುವೆ ಸಂಬಂಧದಲ್ಲಿ ಬಿಡುಕು, ಅಂತರ ಉಂಟಾಗಿ ಆ ಭಿನ್ನಾಭಿಪ್ರಾಯ ಹೆಚ್ಚಾಗಿ ನಿವೃತ್ತಿಯ ವಯಸ್ಸಿನಲ್ಲಿ ವಿಚ್ಛೇದನ ಪಡೆದಿದ್ದಾರೆ.
ಏನಾಗುತ್ತಿದೆ ಸೆಲೆಬ್ರಿಟಿಗಳ ಬದುಕಿನಲ್ಲಿ?
ಹಣವಿದೆ, ಕೀರ್ತಿಯಿದೆ ಇದೆಲ್ಲವೂ ಇದ್ದು ಕುಟುಂಬ ಬದುಕಿನಲ್ಲಿ ಏಕೆ ಹೀಗಾಗುತ್ತಿದೆ? ಇತ್ತೀಚೆಗೆ ವಿಚ್ಛೇದನ ಪಡೆಯುತ್ತಿರುವ ಸೆಲೆಬ್ರಿಟಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದೆಲ್ಲಾ ನೋಡುವಾಗ ಅನಿಸುವುದು ಬ್ಯುಸಿಲೈಫ್ ಸಂಸಾರದಲ್ಲಿ ಅಂತರ ಹೆಚ್ಚಿಸುತ್ತಿದೆಯೇ?
ಜೊತೆಯಲ್ಲಿರುವಾಗ ಏನೇ ಅಂತರ ಬಂದರೂ ಅದನ್ನು ಸರಿಪಡಿಸಿಕೊಂಡು ಹೋಗುತ್ತಾರೆ, ಆದರೆ ತುಂಬಾ ಬ್ಯುಸಿಯಿದ್ದರೆ ಸಂಗಾತಿಗೆ ಸಮಯ ನೀಡಲು ಸಾಧ್ಯವಾಗದೇ ಇದ್ದಾಗ ಈ ರೀತಿ ಅಂತರ ಹೆಚ್ಚಾಗುತ್ತಿದೆಯೇ?
“We had hoped to reach the grand thirty, but all things, it seems, carry an unseen end. Even the throne of God might tremble at the weight of broken hearts. Yet, in this shattering, we seek meaning, though the pieces may not find their place again. To our friends, thank you for…
— A.R.Rahman (@arrahman) November 19, 2024



Click it and Unblock the Notifications
