Latest Updates
-
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ!
ಮಹಿಳೆಯರು ಮೋಸ-ದ್ರೋಹ ಎಸಗಲು 9 ಕಾರಣಗಳಿವು..!
ಸಂಬಂಧಗಳಲ್ಲಿ ಅತ್ಯಂತ ಮಧುರವಾದ ಹಾಗೆ ಸುಖಮಯವಾಗಿರುವ ಸಂಬಂಧ ಎಂದು ದಾಂಪತ್ಯವನ್ನು ಕರೆಯಲಾಗಿದೆ. ದಾಂಪತ್ಯ ಒಬ್ಬ ವ್ಯಕ್ತಿ ಅಥವಾ ಮಹಿಳೆಯ ಜೀವನದ ಬಹುಮುಖ್ಯ ಸಂಬಂಧದಲ್ಲಿ ಒಂದು. ನೀವು ಅತ್ಯಧಿಕ ಸಮಯವನ್ನು ಈ ಸಂಬಂಧದಲ್ಲಿ ಕಳೆಯಲಿದ್ದೀರಿ. ಇದು ಪ್ರೀತಿ, ಪ್ರಣಯ, ಜಗಳ, ಕೋಪ, ಮೋಹದ ಪ್ರತೀಕವಾಗಿದೆ. ಈ ಸಂಬಂಧದಲ್ಲಿ ಪ್ರತಿಯೊಬ್ಬರು ಉತ್ಕೃಷ್ಟ ಜೀವನ ಮಟ್ಟ ಹೊಂದುತ್ತಾರೆ ಎನ್ನಲಾಗಿದೆ.
ಹಾಗೆ ಮದುವೆ ಎಂಬ ಬಂಧದಲ್ಲಿ ವ್ಯಕ್ತಿಯ ನಂಬಿಕೆ, ಭಾವನಾತ್ಮಕ ಸಂಪರ್ಕ, ಮಾಧುರ್ಯತೆ, ವಾತ್ಸಲ್ಯ ಹೀಗೆ ಹಲವು ರೀತಿಯ ಬಾಂಧವ್ಯಕ್ಕೆ ಕಾರಣವಾಗುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಮದುವೆ ಹಾಗೂ ಬಾಂಧವ್ಯಗಳು ಹಿಂದಿನಂತೆ ಬಲಿಷ್ಟವಾಗಿ ಉಳಿದಿಲ್ಲ. ಬದಲಿಗೆ ಈಗ ಮದುವೆ ಸಂಬಂಧಗಳು ಸಣ್ಣ ಪುಟ್ಟ ವಿಚಾರಗಳಿಂದ ಹಾಳಾಗುವುದು ನೋಡಬಹುದು.

ಅಲ್ಲದೆ ಭಾರತೀಯ ಸಮಾಜದಲ್ಲಿಯೂ ಕೂಡ ಇತ್ತಿಚಿಗೆ ವಿಚ್ಛೆಗಳ ಸಂಖ್ಯೆ ಏರಿಕೆಯಾಗಿರುವುದು ಹಾಗೆ ಅನೈತಿಕ ಸಂಬಂಧದಂತಹ ಹಲವು ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ. ಭಾರತದಲ್ಲಿ ಶೇ.1ರಷ್ಟು ವಿಚ್ಛೇದನ ಪ್ರಮಾಣವಿದೆ. ಆದ್ರೆ ಈ ಪ್ರಮಾಣ ಜನಸಂಖ್ಯೆಗೆ ಹೋಲಿಸಿದರೆ ಆ ಸಂಖ್ಯೆ ಹೆಚ್ಚಾಗಿದೆ. ಇತ್ತಿಚಿಗೆ ಕುಟುಂಬದಲ್ಲಿ ಅಶಾಂತಿ ಪ್ರಕರಣಗಳು, ಕುಟುಂಬದಲ್ಲಿ ಒಡಕು, ಗಲಾಟೆಗಳು, ಕಾನೂನಾತ್ಮಕ ಸಮಸ್ಯೆಗಳು ಹೆಚ್ಚಾಗಿರುವುದು ಸಹ ನೋಡುತ್ತಿದ್ದೇವೆ.
ಹಾಗೆ ಇತ್ತೀಚಿಗೆ ದಂಪತಿ ಪರಸ್ಪರ ವಿಶ್ವಾಸ, ನಂಬಿಕೆ ದ್ರೋಹದಂತಹ ಪ್ರಕರಣದಲ್ಲಿ ಭಾಗಿಯಾಗುವುದು ನೋಡಬಹುದು. ಈ ಪ್ರಕರಣಗಳ ಏರಿಕೆ ಕೂಡ ನೋಡಿತ್ತಿದ್ದೇವೆ. ಹೀಗಾಗಿ ನಾವಿಂದು ಸಂಬಂಧದಲ್ಲಿ ದ್ರೋಹ ಹಾಗೂ ಮೋಸಕ್ಕೆ ಒಳಗಾಗುವುದು ಸ್ತ್ರೀ ಮತ್ತು ಪುರುಷರ ಸಂಖ್ಯೆ ಸಮಾನ ಪ್ರಮಾಣದಲ್ಲಿದೆ. ಆದ್ರೆ ನಾವಿಂದು ಮಹಿಳೆಯರು ಯಾವ ಕಾರಣಕ್ಕಾಗಿ ಸಂಬಂಧದಲ್ಲಿ ದ್ರೋಹ ಅಥವಾ ಮೋಸಕ್ಕೆ ಮುಂದಾಗುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ.
ಆದ್ರೆ 2022ರಲ್ಲಿ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ನಡೆಸಿದ ಜಾಗತಿಕ ಸಮೀಕ್ಷೆಯೂ ಈ ಸಂಬಂಧಗಳಲ್ಲಿ ವಿಶ್ವಾಸ ದ್ರೋಹ ಅಥವಾ ಮೋಸದಂತಹ ಹೆಜ್ಜೆ ಇಡಲು ಕಾರಣವಾಗುತ್ತಿರುವ ಅಂಶಗಳನ್ನು ಪಟ್ಟಿ ಮಾಡಲಾಗಿತ್ತು. ಅದರಲ್ಲೂ ಮಹಿಳೆಯರು ಯಾವ ಕಾರಣದಿಂದಾಗಿ ದ್ರೋಹ ಎಸಗುತ್ತಾರೆ ಎಂಬುದನ್ನು ಕೂಡ ವಿವರಿಸಲಾಗಿದೆ.
ಜೀವನ ನಿರ್ವಹಣೆಯ ಒತ್ತಡ
ಪ್ಯೂ ಸಂಶೋಧನಾ ಕೇಂದ್ರದ 2023ರ ವರದಿಯು ಪುರುಷರು ಹಾಗೂ ಮಹಿಳೆಯರು ಸಮಾನ ಕೆಲಸ ಹಾಗೂ ಒತ್ತಡ ಎದುರಿಸುತ್ತಾರೆ ಎಂದಿದೆ, ಆದರೆ ಜೀವನ ನಿರ್ವಹಣೆಯಲ್ಲಿನ ಒತ್ತಡವು ಮಹಿಳೆಯರಲ್ಲಿ ದಾಂಪತ್ಯ ಜೀವನ ಅಂತ್ಯಗೊಳಿಸಲು ಅಥವಾ ದ್ರೋಹ ಎಸಗಲು ಕಾರಣವಾಗುತ್ತಿದೆ ಎಂದು ಗುರುತಿಸಲಾಗಿದೆ. ಪುರುಷರಷ್ಟೇ ಸಮಾನ ದುಡಿತದಲ್ಲಿದ್ದರೂ ಮನೆ ಹಾಗೂ ಕುಟುಂಬಸ ನಿರ್ವಹಣೆಯ ವಿಚಾರದಲ್ಲಿ ಅವರು ಹೆಚ್ಚು ಒತ್ತಡ ಎದುರಿಸಬೇಕಾಗುತ್ತದೆ. ಇದರಿಂದ ಹೊರಬರುವುದು ಹಾಗೂ ಪತಿಯ ಔದ್ಯೋಗಿಕ ವಿಚಾರವಾಗಿ ಅವರಲ್ಲಿರುವ ಭಾವನೆಯಿಂದ ಮೋಸದಂತಹ ಕೆಲಸಕ್ಕೆ ಕೈ ಹಾಕುತ್ತಾರೆ ಎಂದಿದೆ.
ಸಂಬಂಧದಲ್ಲಿ ಅತೃಪ್ತಿ
ದಾಂಪತ್ಯದಲ್ಲಿ ಮೋಸ ಮಾಡುವ ಉದ್ದೇಶ ಅಲ್ಲದಿದ್ದರೂ ಸಂಬಂಧದಲ್ಲಿನ ಅತೃಪ್ತಿಯು ಮಹಿಳೆಯರನ್ನು ಈ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುತ್ತದೆ ಎಂದು ತಿಳಿದುಬಂದಿದೆ. ಪತಿ ತನ್ನ ಪತ್ನಿ ಬಗ್ಗೆ ಆಲಸ್ಯದಲ್ಲಿದ್ದರೆ, ಆಕೆಯ ಕುರಿತು ಕಾಳಜಿ, ಪ್ರೀತಿ ಹೊಂದಿರದೇ ಇರುವ ಸಂದರ್ಭದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುವುದು ನೋಡಬಹುದು.
ಅಸುರಕ್ಷಿತ ಭಾವನೆ
ಮಹಿಳೆಯು ತನ್ನ ಪತಿಯ ಜೊತೆಗಿದ್ದಾಗಲೇ ಅಸುರಕ್ಷಿತ ಭಾವನೆಯಲ್ಲಿದ್ದರೆ ಆಕೆ ದ್ರೋಹ ಅಥವಾ ಮೋಸದಂತಹ ಕೆಲಸಕ್ಕೆ ಮುಂದಾಗುವ ಸಾಧ್ಯತೆ ಹೆಚ್ಚು ಎನ್ನಬಹುದು. ಆಕೆ ಹೆಚ್ಚು ರಕ್ಷಣೆಯನ್ನು ಬಯಸುವಾಗ ಪತಿ ಅದನ್ನು ನೀಡದೇ ಇದ್ದರೆ ಆ ಸಂಬಂಧ ಹೆಚ್ಚು ಸಮಯ ಗಟ್ಟಿಯಾಗಿ ನಿಲ್ಲುವುದಿಲ್ಲ. ಹಾಗೆ ಇದರಿಂದ ಆಕೆಯಲ್ಲೂ ಸಂಬಂಧ ಉಳಿಸಿಕೊಳ್ಳುವ ಭಾವನೆ ಹೆಚ್ಚು ಸಮಯ ಉಳಿಯುವುದಿಲ್ಲ.
ಜಗಳ ಹಾಗೂ ಕಾಳಜಿ ಕೊರತೆ
ಪತಿಯಿಂದ ಪತ್ನಿ ಬಯಸುವ ಕೆಲವೇ ಕೆಲವು ಅಂಶದಲ್ಲಿ ಪ್ರೀತಿಯೂ ಒಂದಾಗಿರಲಿದೆ. ಆದ್ರೆ ಯಾವ ಪತಿ ಆಕೆಯೊಂದಿಗೆ ಇದ್ದಾಗ ಪ್ರೀತಿ ಬಯಸದೆ ಸದಾ ಕಾಲ ಜಗಳಕ್ಕೆ ನಿಲ್ಲುವುದು ಮುನಿಸು, ಕೋಪ ತಾಳುವುದು ಪತ್ನಿಯನ್ನು ಕೆರಳಿಸುತ್ತದೆ. ಹಾಗೆ ಕಾಳಜಿ ತೋರದೆ ಇರುವುದು ಕೂಡ ಆತನಿಂದ ದೂರಾಗಲು ಬಹುಮುಖ್ಯ ಕಾರಣವಾಗಲಿದೆಯಂತೆ. ಆಕೆ ಇದೆಲ್ಲವನ್ನು ಸಹಿಸಿಕೊಳ್ಳಲಾಗದೆ ತನ್ನ ಸಂಬಂಧದಲ್ಲಿ ದ್ರೋಹ ಅಥವಾ ಮೋಸಕ್ಕೆ ಮುಂದಾಗಬಹುದು.
ಕಡಿಮೆ ಸ್ವಾಭಿಮಾನ
ಒಬ್ಬ ಮಹಿಳೆ ಕಡಿಮೆ ಸ್ವಾಭಿಮಾನದಿಂದ ಬಳಲುತ್ತಿರುವಾಗ ಆಕೆ ಬಾಹ್ಯ ಮೂಲಗಳ ಕಡೆಗೆ ಗಮನ ಕೊಡುವಳು. ಯಾವ ಸ್ಥಳದಲ್ಲಿ ಆಕೆಯ ಸ್ವಾಭಿಮಾನಕ್ಕೆ ಪೆಟ್ಟುಬಿದ್ದರೆ ಖಂಡಿತ ಆ ಸಂಬಂಧದಲ್ಲಿ ಆಕೆ ಮುಂದವರೆಯಲು ಇಚ್ಛಿಸಿದೆ ಹೊರಬರಲು ಮುಂದಾಗಬಹುದು. ಅಥವಾ ಸಂಬಂಧದಲ್ಲಿದ್ದಾಗಲೇ ಬೇರೊಂದು ಮೂಲದಲ್ಲಿ ಆಕೆಯ ಸ್ವಾಭಿಮಾನ ಹೆಚ್ಚಿಸುವಂತ ಸಂಬಂಧಗಳು ವೃದ್ಧಿಸಿದರೆ ಪತಿಗೆ ದ್ರೋಹ ಬಗೆಯಲು ಮುಂದಾಗಬಹುದು.
ಲೈಂಗಿಕ ಅತೃಪ್ತಿ
ಮಹಿಳೆಯೊಬ್ಬಳು ತನ್ನ ಸಂಬಂಧದಲ್ಲಿ ದ್ರೋಹ ಹಾಗೂ ಮೋಸದಂತಹ ಪ್ರಕರಣಲ್ಲಿ ಭಾಗಿಯಾಗುವುದರ ಹಿಂದೆ ಬಹುತೇಕ ಈ ಕಾರಣವನ್ನು ಪಟ್ಟಿ ಮಾಡಬಹುದು. ಆಕೆ ಲೈಂಗಿಕತೆಯಲ್ಲಿನ ಅತೃಪ್ತಿಯು ಮತ್ತೊಂದು ಮೂಲದ ಹುಡುಕಾಟಕ್ಕೆ ಪ್ರೇರೇಪಿಸಲಿದೆ. ಹಾಗೆ ತನ್ನ ಬಯಕೆಯ ಈಡೇರಿಸಿಕೊಳ್ಳಲು ಆಕೆ ಮುಂದಾದಾಗ ಸಮಾಜದ ದೃಷ್ಟಿಯಿಂದ ಹಾಗೂ ಕೌಟುಂಬಿಕ ನ್ಯಾಯದ ಮೂಲಕ ನೋಡಿದರೆ ಮೋಸ ಹಾಗೂ ದ್ರೋಹವಾಗುತ್ತದೆ.
ಭಾವನಾತ್ಮಕ ಹಸಿವು
ಎಲ್ಲಾ ಮೋಸ ಅಥವಾ ದ್ರೋಹದ ಪ್ರಕರಣದಲ್ಲಿ ಮಹಿಳೆಯು ಲೈಂಗಿಕ ತೃಪ್ತಿಗಾಗಿ ಎಸಗಿರುವುದಿಲ್ಲ. ಆಕೆಯ ಭಾವನಾತ್ಮಕ ಹಸಿವು ಕೂಡ ಕಾರಣವಾಗಿರುತ್ತದೆ. ಆಕೆಯ ದೈಹಿಕ ಆಸಕ್ತಿಯ ತೃಪ್ತಿಯಂತೆ, ಮಾನಸಿಕ ಹಾಗೂ ಭಾವನಾತ್ಮಕ ಹಸಿವನ್ನು ಕೂಡ ನೀಗಿಸಬೇಕಿರುತ್ತದೆ. ಆಕೆಯ ಮನದಲ್ಲಿನ ಭಾವನೆಗಳ ಅರ್ಥ ಮಾಡಿಕೊಳ್ಳದಾತನ ಜೊತೆಗಿರುವ ಬದಲಾಗಿದೆ ಆಕೆಯಲ್ಲಿ ಬದಲಾವಣೆ ಕಡೆ ಚಲಿಸಲು ಆರಂಭಿಸಬಹುದು. ಹಾಗೆ ಯಾರಲ್ಲಿ ಆಕೆಯ ಭಾವನೆಗಳಿಗೆ ಬೆಲೆ ಸಿಗುತ್ತವೆಯೋ ಅಂತಹ ಕಡೆ ಒಲವು ಹೆಚ್ಚಾಗುತ್ತದೆ.
ಒಂಟಿತನ
ಇತ್ತಿಚಿನ ದಿನಗಳಲ್ಲಿ ಈ ಒಂಟಿತನ ಎಂಬುದು ಸಂಬಂಧಗಳ್ಳಿ ಬಿರುಕು ತರಲು ಕಾರಣವಾಗುತ್ತಿದೆ. ಆಕೆ ಒಬ್ಬಳೆ ಮನೆಯಲ್ಲಿರುವುದು ಪತಿ ದುಡಿಯುವ ಉದ್ದೇಶದಿಂದಾಗಿ ಆಕೆ ಒಂಟಿಯಾಗುವುದು ಕೂಡ ಸಂಬಂಧಗಳ ಹಾಳು ಮಾಡಲು ಕಾರಣವಾಗುತ್ತಿದೆ. ಅದರಲ್ಲೂ ಆಕೆ ಗೃಹಿಣಿಯಾಗಿ ಮನೆಯಲ್ಲಿ ಬಹುತೇಕ ಸಮಯ ಒಂಟಿಯಾಗಿಯೇ ಕಳೆಯುತ್ತಿದ್ದರೆ ಆಕೆಗೂ ಅನ್ಯ ಮೂಲಗಳ ಕಡೆಗೆ ಒಲುವು ಮೂಡಬಹುದು. ಆಕೆಯಲ್ಲಿ ಒಂಟಿತನ ಕಾಡುವುದರಿಂದ ದ್ರೋಹ ಎಸಗಬಹುದು.
ಮಧ್ಯವಯಸ್ಸಿನ ಬಿಕ್ಕಟ್ಟು
ಮಧ್ಯವಯಸ್ಸಿನ ಬಿಕ್ಕಟ್ಟುಗಳು ಸಾಮಾನ್ಯವಾಗಿ 35 ರಿಂದ 60 ವರ್ಷ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುತ್ತವೆಯಾದರೂ, ಈ ಘಟನೆಯು ವಯಸ್ಸಿನೊಂದಿಗೆ ಕಡಿಮೆ ಸಂಬಂಧ ಹೊಂದಿದೆ. ಈ ಸಮಯದಲ್ಲಿ ಆಕೆಯಲ್ಲಾಗುವ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಹಾಗೆ ಮಹಿಳೆ ತನ್ನ ಎಲ್ಲಾ ಬಯಕೆಗಳ ಈಡೇರಿಸಿಕೊಳ್ಳದೆ ಇದ್ದರೆ ಈ ಸಮಯದಲ್ಲಿ ಆಕೆಗೆ ಅದು ಹೆಚ್ಚು ಕಾಡಬಹುದು. ಇದರಿಂದ ದ್ರೋಹ ಹಾಗೂ ಮೋಸದಂತಹ ವಿಚಾರಗಳು ಹೆಚ್ಚಾಗಿ ಕಾಡಬಹುದು.



Click it and Unblock the Notifications











