Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ನಿಜವಾದ ಸ್ನೇಹಿತನೇ? ಎಂದು ತಿಳಿಯಲು ಅವರಲ್ಲಿ ಈ 5 ಗುಣಗಳಿದ್ದರೆ ಸಾಕು
ಆಗಸ್ಟ್ 6ಕ್ಕೆ ಫ್ರೆಂಡ್‌ಶಿಪ್ ಡೇ..... ನಮ್ಮೆಲ್ಲರ ಬದುಕಿನಲ್ಲಿ ಹಲವಾರು ಫ್ರೆಂಡ್ಸ್ ಇರುತ್ತಾರೆ. ಆದರೆ ನಿಜವಾದ ಸ್ನೇಹಿತರು ಯಾರು ಎಂಬುವುದು ತಿಳಿಯುವುದು ನಮಗೆ ಕಷ್ಟ ಅಂತ ಬಂದಾಗ... ಹಾಗಂತ ನಮ್ಮ ಜೊತೆ ಯಾರು ಸ್ನೇಹಿತರಂತೆ ನಟಿಸುತ್ತಿದ್ದಾರೆ ಅವರು ನಿಜವಾದ ಸ್ನೇಹಿತರಲ್ಲ ಎಂದು ತಿಳಿಯಲು ನಮಗೆ ಕಷ್ಟವೇ ಬರಬೇಕೆಂದೇನಿಲ್ಲ, ಕೆಲವೊಂದು ವರ್ತನೆಗಳ ಮೂಲಕ ಅವರ ಬಗ್ಗೆ ತಿಳಿಯಬಹುದು, ಆವಾಗ ಅವರಿಂದ ದೂರುವಿರುವುದು ಒಳ್ಳೆಯದು:

1. ನಿಮ್ಮನ್ನು ನೀವಿರುವಂತೆಯೇ ಸ್ವೀಕರಿಸುತ್ತಾರೆ
ನಿಜವಾದ ಸ್ನೇಹಿತರು ನಮ್ಮ ಗುಣ ನೋಡಿ ನಮ್ಮ ಸ್ನೇಹ ಬಯಸುತ್ತಾರೆಯೇ ಹೊರತು ನಮ್ಮ ಆಸ್ತಿ, ಅಂದ-ಚೆಂದ ನೋಡಿ ಸ್ನೇಹ ಬಯಸುವುದಿಲ್ಲ. ನಮ್ಮನ್ನು ನಿಜವಾಗಿ ಇಷ್ಟಪಡುವ ಸ್ನೇಹಿತರು ನಾವು ಹೇಗೆಯೇ ಇರಲಿ, ಸದಾ ನಮ್ಮೊಂದಿಗೆ ಇರುತ್ತಾರೆ.
2. ಒಳ್ಳೆಯದರಲ್ಲಿ, ಕೆಟ್ಟದರಲ್ಲಿ ನಮ್ಮ ಜೊತೆ ನಿಲ್ಲುತ್ತಾರೆ
ನಮ್ಮ ನಿಜವಾದ ಸ್ನೇಹಿತರು ನಮ್ಮ ಒಳ್ಳೆಯ ಸಮಯದಲ್ಲಿ ನಮ್ಮೊಂದಿಗೆ ಖುಷಿಯಾಗಿ ಇದ್ದರೆ ನಮ್ಮ ಕೆಟ್ಟ ಸಮಯದಲ್ಲಿ ನಮಗೆ ಆಸರೆಯಾಗುತ್ತಾರೆ. ಕೆಟ್ಟ ಸಂದರ್ಭದಲ್ಲಿ ಅವರಿಗೆ ನಮಗೆ ಆರ್ಥಿಕ ಸಹಕಾರ ಮಾಡಲು ಸಾಧ್ಯವಾಗದೇ ಇದ್ದರೂ ನೈತಿಕ ಬೆಂಬಲಕ್ಕೆ ನಿಂತು ನಮ್ಮಲ್ಲಿ ಮತ್ತೆ ಜೀವನದಲ್ಲಿ ಉತ್ಸಾಹ ಮೂಡಿಸಲು ತಮ್ಮಿಂದಾದ ಸಂಪೂರ್ಣ ಪ್ರಯತ್ನ ಮಾಡುತ್ತಾರೆ.
3. ನಿಜವಾದ ಸ್ನೇಹಿತರಿಗೆ ನಿಮಗೆ ಕೊಡಲು ಸಮಯವಿರುತ್ತದೆ
ಅವರಿಗೆ ಕಷ್ಟ ಬಂದಾಗ ಮಾತ್ರ ನೆನಪಾಗುವುದು ನಂತರ ನಮ್ಮನ್ನು ಮರೆತು ಬಿಡುವ ಸ್ನೇಹಿತರು ನಿಮ್ಮ ಸರ್ಕಲ್‌ನಲ್ಲಿದ್ದರೆ ಅವರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು. ನಿಮಗೆ ಏನಾದರೂ ಅವಶ್ಯಕತೆ ಬಿದ್ದಾಗ ಅವರ ಕೆಲಸವನ್ನು ಬದಿಗಿಟ್ಟು ನಿಮ್ಮ ಜೊತೆ ನಿಲ್ಲುತ್ತಾರೆ.
4. ನಿಮ್ಮ ಗುರಿ ಮುಟ್ಟಲು ಪ್ರೋತ್ಸಾಹ ನೀಡುತ್ತಾರೆ
ನೀವು ಮರೆತರೂ ನಿಮ್ಮ ಗುರಿಯನ್ನು ಮುಟ್ಟಲು ಅವರು ನಿಮ್ಮನ್ನು ನೆನಪಿಸುತ್ತಾರೆ, ಪ್ರೋತ್ಸಾಹಿಸುತ್ತಾರೆ. ನೀವೇನಾದರೂ ಗುರಿ ಮುಟ್ಟಿದರೆ ಅವರೇ ಸಾಧನೆ ಮಾಡಿದಷ್ಟು ಖುಷಿ ಪಡುತ್ತಾರೆ. ನಿಮ್ಮ ಗುರಿ ಸಾಧನೆಗೆ ಏನಾದರೂ ಬೇಕಾದರೆ ಜೊತೆಗೆ ನಿಲ್ಲುತ್ತಾರೆ.
5. ನಿಮ್ಮ ಕಟು ವಿಮರ್ಶಕರೂ ಹೌದು
ನಿಜವಾದ ಸ್ನೇಹಿತರು ನಿಮ್ಮ ಎಲ್ಲಾ ಕಾರ್ಯದಲ್ಲಿ ಜೊತೆಯಾಗಿ ನಿಲ್ಲುವುದಿಲ್ಲ, ನೀವು ದಾರಿ ತಪ್ಪುತ್ತಿದ್ದೀರಾ, ನೀವು ಆಪತ್ತಿನ ದಾರಿಯಲ್ಲಿ ನಡೆಯುತ್ತಿದ್ದೀರಾ ಎಂದಾದರೆ ಅವರು ನಿಮ್ಮನ್ನು ಎಚ್ಚರಿಸುತ್ತಾರೆ, ಕಟು ವಿಮರ್ಶೆ ಮಾಡುತ್ತಾರೆ. ನಿಮಗೆ ಇಷ್ಟವಾಗದಿದ್ದರೂ ಸರಿ ಅವರು ಹೇಳಬೇಕಾಗಿರುವ ವಿಷಯವನ್ನು ನಿಮಗೆ ಹೇಳುತ್ತಾರೆ.



Click it and Unblock the Notifications
