Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪ್ರೇಮಿಗಳ ದಿನದ ಕುರಿತ 5 ಅಚ್ಚರಿಯ ವಿಚಾರಗಳಿವು..!
ಪ್ರೇಮಿಗಳ ದಿನ ಪ್ರತಿ ವರ್ಷ ಪ್ರೀತಿಸುವವರು ತಮ್ಮ ಪ್ರೀತಿಗಾಗಿ ತಾವು ಮನಸಾರೆ ಪ್ರೀತಿ ಮಾಡುವವರ ಬಳಿ ತಮ್ಮ ನಿವೇದನೆಯನ್ನು ಪ್ರೀತಿಯಿಂದ ಹೇಳಿಕೊಳ್ಳುವ ದಿನ. ಈ ದಿನದಂದು ತಮ್ಮ ಪ್ರೀತಿಯನ್ನು ನಿವೇದನೆ ಮಾಡಿಕೊಂಡರೆ ಅದು ಸಫಲವಾಗುತ್ತದೆ ಎಂಬ ಭಾವನೆ ಈಗಲೂ ಹಲವರಲ್ಲಿದೆ.
ಹಾಗಾದರೆ ಪ್ರೇಮಿಗಳ ದಿನ ಎಂಬುದು ಹುಟ್ಟಿದ್ದು ಹೇಗೆ? ನಿಮಗೆ ಗೊತ್ತಿಲ್ಲದ ಕೆಲವು ಅಚ್ಚರಿಯ ಸಂಗತಿಗಳು ಇಲ್ಲಿವೆ ನೋಡಿ.

1. ಪ್ರಾಚೀನ ಪಗಾನ್ ಹಬ್ಬದಲ್ಲಿ ವ್ಯಾಲೆಂಟೈನ್ಸ್ ಡೇ
ಕೆಲವು ಇತಿಹಾಸ ತಜ್ಞರು ಹೇಳುವ ಹಾಗೆ ವ್ಯಾಲೆಂಟೈನ್ ಎಂಬ ಸಂತ ಫೆಬ್ರವರಿ 14 ರಂದು ಮರಣ ಹೊಂದಿದ ಕಾರಣ ಅಂದಿನಿಂದ ಇಂದಿನವರೆಗೆ ಆ ದಿನವನ್ನು ವ್ಯಾಲೆಂಟೈನ್ಸ್ ಡೇ ಎಂದು ಕರೆಯುತ್ತಾರೆ. ಅಲ್ಲಿನ ಇನ್ನು ಕೆಲವರು ಹೇಳುವ ಹಾಗೆ ಪ್ರಾಚೀನ ಕಾಲದಲ್ಲಿ ರೋಮ್ ದೇಶದಲ್ಲಿ ಫೆಬ್ರವರಿ 15 ರಂದು Lupercalia ಫಲವತ್ತತೆಯ ಹಬ್ಬವನ್ನು ಆಚರಿಸಲಾಗುತ್ತಿತ್ತು. ಈ ಹಬ್ಬದ ಆಚರಣೆಯ ಸಂಭ್ರಮದಲ್ಲಿ ಅಲ್ಲಿನ ಕೃಷಿ ಪದ್ಧತಿಗೆ ಸಂಬಂಧ ಪಟ್ಟಂತೆ Faunus ಎಂಬ ದೈವೀ ಶಕ್ತಿಗೆ ರೋಮ್ ದೇಶದ ಉನ್ನತಿಗೆ ಕಾರಣವಾದ Romulus ಮತ್ತು Remus ಎಂಬುವರು ಪ್ರಾಣಿಗಳನ್ನು ಬಲಿ ಕೊಟ್ಟು ಅವುಗಳ ಚರ್ಮದಿಂದ ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಹೊಡೆಯುತ್ತಿದ್ದರು. ಹೀಗೆ ಮಾಡುವುದರಿಂದ ಮಹಿಳೆಯರ ದೇಹದ ಫಲವತ್ತತೆ ಹೆಚ್ಚಾಗುತ್ತದೆ ಎಂಬುದು ಅವರ ನಂಬಿಕೆ ಆಗಿತ್ತು. ಇದು ಆನಂತರದಲ್ಲಿ ವ್ಯಾಲೆಂಟೈನ್ಸ್ ಡೇ ಆಗಿ ಬದಲಾಯಿತು ಎಂದು ಕೆಲವರು ಹೇಳುತ್ತಾರೆ.
2. ಪ್ರೀತಿಗಾಗಿ 1300ರಲ್ಲಿ ಅಧಿಕೃತವಾಗಿ ಅಂದು ರಜೆ ಘೋಷಣೆ ಮಾಡಲಾಯಿತು
ಕೆಲವು ಮೂಲಗಳು ಹೇಳುವ ಹಾಗೆ 5ನೇ ಶತಮಾನದ ಅಂತ್ಯದಲ್ಲಿ ರೂಮ್ ದೇಶದ ಪಾದ್ರಿ Gelasius ಎನ್ನುವವರು ಫೆಬ್ರವರಿ 14ರಂದು ರಜೆ ಘೋಷಣೆ ಮಾಡಿ ಅದನ್ನು ವ್ಯಾಲೆಂಟೈನ್ಸ್ ಡೇ ಎಂದು ಅಧಿಕೃತವಾಗಿ ಆದೇಶ ಹೊರಡಿಸಿದರು. ಇದರ ನಂತರ ಇದೊಂದು ಸಂಪ್ರದಾಯವಾಗಿ ಬದಲಾಗಿ ಫ್ರಾನ್ಸ್ ಮತ್ತು ಇಂಗ್ಲೆಂಡ್ ದೇಶದಲ್ಲಿ ಮೊದಲ ಬಾರಿಗೆ ಆಚರಣೆ ಮಾಡಿದರು. ಅವರ ಪ್ರಕಾರ ಫೆಬ್ರವರಿ 14 ರ ನಂತರ ಹಕ್ಕಿಗಳು ಸಹ ತಮ್ಮ ಸಂತತಿಯನ್ನು ವೃದ್ಧಿಸಿಕೊಳ್ಳಲು ಪ್ರಯತ್ನ ಮಾಡುತ್ತವೆ ಎಂದು ನಂಬಿದ್ದಾರೆ.
3. ಗ್ರೀನ್ ಪುರಾಣದಲ್ಲಿ ಇರೋದೆ ಬೇರೆ
ವ್ಯಾಲೆಂಟೈನ್ಸ್ ಡೇ ಕಾರ್ಡ್ ಮೇಲೆ ಬಿಲ್ಲು ಮತ್ತು ಬಾಣವನ್ನು ಹಿಡಿದ ಕ್ಯುಪಿಡ್ ಚಿತ್ರ ನಿಮಗೆ ನೋಡಲು ಕಾಣಸಿಗುತ್ತದೆ. ಈ ಚಿತ್ರಕ್ಕೆ ಗ್ರೀಕ್ ಪುರಾಣದ ಇತಿಹಾಸವಿದೆ. ಆದರೆ ನಿಮಗೆಲ್ಲ ಈಗ ಮನಸ್ಸಿನಲ್ಲಿ ಒಂದು ಸಂದೇಹ ಮೂಡಿ ಬರಬಹುದು. ವ್ಯಾಲೆಂಟೈನ್ಸ್ ಡೇ ಕಾರ್ಡ್ ಮೇಲೆ ಕ್ಯುಪಿಡ್ ಚಿತ್ರ ಹಾಕಲು ಕಾರಣವೇನು ಎಂದು. ಇದಕ್ಕೂ ಒಂದು ಕಥೆಯಿದೆ. ಅದೇನೆಂದರೆ 700 BC ನಲ್ಲಿ ಗ್ರೀಕ್ ದೇಶದಲ್ಲಿ Eros ಎಂಬ ಅತ್ಯಂತ ಸುಂದರ ಮನಮೋಹಕ ವ್ಯಕ್ತಿಯನ್ನು ಪ್ರೀತಿಯ ವಿಚಾರದಲ್ಲಿ ದೇವರು ಎಂದು ಪೂಜಿಸುತ್ತಿದ್ದರು. ಈತ ನೋಡಲು ಸುಂದರವಾಗಿರುವುದು ಮಾತ್ರವಲ್ಲದೆ ಈತನ ಸೌಂದರ್ಯಕ್ಕೆ ಮತ್ತು ದೇಹದ ಮೈಕಟ್ಟನ್ನು ನೋಡಿದವರಿಗೆ ತಾವು ಜೀವನದಲ್ಲಿ ಪ್ರೀತಿ ಮಾಡಬೇಕು ಎನಿಸುತ್ತಿತ್ತು. ಆದರೆ ನಾಲ್ಕನೇ ಶತಮಾನದವರೆಗೆ ರೋಮ್ ದೇಶದಲ್ಲಿ ಪ್ರೀತಿಯ ಸಂಕೇತವಾಗಿ ಒಬ್ಬ ಅತ್ಯಂತ ಸುಂದರವಾದ ಚಿಕ್ಕ ಹುಡುಗನ ಚಿತ್ರವನ್ನು ಕಾರ್ಡ್ ಗಳ ಮೇಲೆ ಬಳಕೆ ಮಾಡಲಾಗುತ್ತಿತ್ತು. ಆದರೆ ಆನಂತರದಲ್ಲಿ ಹುಡುಗನ ಬದಲಿಗೆ Eros ನನ್ನು ಕ್ಯುಪಿಡ್ ಎಂದು ನಾಮಕರಣ ಮಾಡಿ ಬಳಸಲು ಪ್ರಾರಂಭ ಮಾಡಿದರು. ಈ ಪದ್ಧತಿ ಅಧಿಕೃತವಾಗಿ 19ನೇ ಶತಮಾನದಲ್ಲಿ ವ್ಯಾಲೆಂಟೈನ್ಸ್ ಡೇ ಸಂಕೇತವಾಗಿ ಬದಲಾಯಿತು.
4. ಗ್ರೀಟಿಂಗ್ ಕಾರ್ಟ್‌ಗಳ ಎಂಟ್ರಿ
17ನೇ ಶತಮಾನದಲ್ಲಿ ಜನರು ತಮ್ಮ ಸ್ನೇಹಿತರಿಗೆ ಮತ್ತು ತಾವು ಪ್ರೀತಿಸುತ್ತಿರುವವರಿಗೆ ವ್ಯಾಲೆಂಟೈನ್ ಡೇ ಕಾರ್ಡ್ ಗಳನ್ನು ಮತ್ತು ತಾವೇ ಸ್ವತಹ ಕೈಯಲ್ಲಿ ಬರೆದ ಪತ್ರಗಳನ್ನು ಕಳುಹಿಸಲು ಮತ್ತು ತೆಗೆದುಕೊಳ್ಳಲು ಪ್ರಾರಂಭ ಮಾಡಿದರು. ಆದರೆ ಇದು ಅಷ್ಟು ಪ್ರಚಲಿತವಾಗಿರಲಿಲ್ಲ. ಆದರೆ 1840 ಇಸವಿಯ ಆಸುಪಾಸಿನಲ್ಲಿ ಅಮೇರಿಕಾದ ತುಂಬೆಲ್ಲ ವ್ಯಾಲೆಂಟೈನ್ಸ್ ಡೇ ಕಾರ್ಡ್ ಗಳು ಮೊಟ್ಟಮೊದಲ ಬಾರಿಗೆ ಅಪಾರ ಪ್ರಮಾಣದಲ್ಲಿ ಒಬ್ಬರಿಂದ ಒಬ್ಬರಿಗೆ ರವಾನೆಯಾಗಲು ಪ್ರಾರಂಭ ಆಯಿತು. ಇದಕ್ಕೆ ಮುಖ್ಯ ಕಾರಣ ಎಂದರೆ ಅಮೇರಿಕಾದ Esther A. Howland ಎಂಬ ಮಹಿಳೆ. ಈಕೆಯನ್ನು ಅಲ್ಲಿನವರು ಅಮೇರಿಕಾದ ವ್ಯಾಲೆಂಟೈನ್ ತಾಯಿ ದೇವತೆ ಎಂದು ಕರೆಯುತ್ತಾರೆ. ವ್ಯಾಲೆಂಟೈನ್ ಡೇ ಕಾರ್ಡ್ ಗಳನ್ನು ವಾಣಿಜ್ಯೀಕರಣ ಮಾಡಿದ ಮೊಟ್ಟ ಮೊದಲ ಮಹಿಳೆ ಎಂಬ ಖ್ಯಾತಿ ಇವರಿಗೆ ಸಲ್ಲುತ್ತದೆ. ಆಕೆಯಲ್ಲಿ ಅತ್ಯದ್ಭುತವಾದ ಕ್ರಿಯಾಶೀಲತೆ ಅಡಗಿತ್ತು. ತಾನೇ ಸ್ವತಃ ಪ್ರತಿಯೊಂದು ವ್ಯಾಲೆಂಟೈನ್ಸ್ ಡೇ ಕಾರ್ಡ್ ಗೆ ಲೇಸ್ ಮತ್ತು ರಿಬ್ಬನ್ ಗಳನ್ನು ಬಳಕೆ ಮಾಡಿ ಅಲಂಕಾರ ಮಾಡುತ್ತಿದ್ದಳು.
5. ಕೆಂಪು ಗುಲಾಬಿ ನೀಡುವ ಪದ್ಧತಿಗೆ 17ನೇ ಶತಮಾನದಲ್ಲಿ ಆರಂಭ
ವ್ಯಾಲೆಂಟೈನ್ಸ್ ಡೇ ದಿನದಂದು ಪ್ರತಿಯೊಬ್ಬ ಪ್ರೇಮಿ ತನ್ನ ಪ್ರಿಯತಮೆಗೆ ಪ್ರೀತಿಯಿಂದ ಗುಲಾಬಿ ಹೂಗಳನ್ನು ನೀಡುತ್ತಾನೆ. ಇದು ಆತ ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು, ತನ್ನ ಸಂಗಾತಿಯನ್ನು ಇಷ್ಟಪಡಲು ಅಥವಾ ಮದುವೆಯಾದ ಬಳಿಕವೂ ತನ್ನ ಪ್ರೀತಿಯ ನಿವೇದನೆಯನ್ನು ಮಾಡಿಕೊಳ್ಳಲು ಈ ಪ್ರಕ್ರಿಯೆಯನ್ನು ಅನುಸರಿಸುತ್ತಾರೆ.
ಇದು ಆನಂತರದಲ್ಲಿ ತುಂಬಾ ಪ್ರಚಲಿತವಾಯಿತು. ಸ್ವೀಡನ್ ದೇಶದ ರಾಜ Charles II ಪರ್ಷಿಯಾ ಗೆ ಪ್ರವಾಸ ಹೊರಟ ಸಂದರ್ಭದಲ್ಲಿ ಈ ಸಂಸ್ಕೃತಿಯನ್ನು ಯುರೋಪ್ ದೇಶದಾದ್ಯಂತ ಪರಿಚಯ ಮಾಡಿದನು. ವಿಕ್ಟೋರಿಯಾ ಕಾಲಮಾನದಲ್ಲಿ ಒಬ್ಬ ವ್ಯಕ್ತಿ ತನ್ನ ಪ್ರಿಯತಮಗೆ ತನ್ನ ಆಳವಾದ ಪ್ರೀತಿಯನ್ನು ವ್ಯಕ್ತಪಡಿಸಲು ಕೆಂಪು ಬಣ್ಣದ ಗುಲಾಬಿಗಳನ್ನು ನೀಡುವುದು ರೂಢಿಯಾಯಿತು.



Click it and Unblock the Notifications
