Latest Updates
-
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ! -
ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು! -
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು! -
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ! -
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ!
ಗಂಡಸರು ಯಾಕೆ ಆಲಿಸುವುದಿಲ್ಲ?
ಗಂಡಸರು ಯಾವಾಗಲೂ ಗಂಡಸರು. ಈ ಜನಪ್ರಿಯ ನುಡಿ ಹಲವಾರು ವಿಧಗಳಿಂದ ಸತ್ಯ. ಗಂಡಸರು ಕೇಳಿಸಿಕೊಳ್ಳುವುದಿಲ್ಲ ಎನ್ನುವುದು ಇದರಲ್ಲಿ ಸೇರಿದೆ. ಇದು ಅಹಂ ಅಥವಾ ವಂಶವಾಹಿನಿಯ ಪ್ರಭಾವವಾಗಿರಬಹುದು. ಹೆಚ್ಚಿನ ಗಂಡಸರು ಆಲಿಸುವುದು ಕಡಿಮೆ ಮತ್ತು ಇತರ ಕೆಲವರು ಸಲಹೆಗಳನ್ನು ಸ್ವೀಕರಿಸುವುದಿಲ್ಲ. ಗಂಡಸರನ್ನು ಬದಲಾಯಿಸಿ, ಆಲಿಸುವುವಂತೆ ಮಾಡಲು ಪ್ರಯತ್ನಿಸಿ ಫಲವಿಲ್ಲ. ಜನಪ್ರಿಯ ನಾಣ್ನುಡಿಯಂತೆ ಕುದುರೆಯನ್ನು ನದಿತೀರದ ತನಕ ಕರೆದೊಯ್ಯಬಹುದು. ಆದರೆ ನೀರು ಕುಡಿಯುವಂತೆ ಮಾಡಲು ಸಾಧ್ಯವಿಲ್ಲ.
ಕೆಲವು ಮಹಿಳೆಯರಿಗೆ ಇದು ಕಿರಿಕಿರಿಯಾದರೆ ಮತ್ತೆ ಕೆಲವರು ಪ್ರಯತ್ನಿಸಿ ಬಿಟ್ಟು ತಮ್ಮ ಗಂಡಸರು ಹೇಗಿದ್ದಾರೋ ಹಾಗೆಯೇ ಸ್ವೀಕರಿಸುತ್ತಾರೆ. ಕ್ರೀಡೆ ಮತ್ತು ರಾಜಕೀಯದಂತಹ ವಿಷಯಗಳ ಬಗ್ಗೆ ಮಹಿಳೆಯರು ಮಾತನಾಡಿದರೆ ಗಂಡಸರು ಕೇಳಬಹುದು. ಆದರೆ ಸಾಮಾನ್ಯ ವಿಷಯಗಳನ್ನಲ್ಲ. ಕೆಲವರು ಆಲಿಸುವಂತೆ ನಟಿಸುತ್ತಾರೆ. ಆದರೆ ಆಲಿಸುವುದಿಲ್ಲ. ಯಾವುದೇ ಕೆಲಸವಿಲ್ಲದೆ ಇದ್ದಾಗ ಮಾತ್ರ ಕೆಲವು ಗಂಡಸರು ತಮ್ಮ ಕಿವಿ ನಿಮಿರಿಸಿ ಕೇಳುತ್ತಾರೆ. ಧೋನಿಯ ಬ್ಯಾಟಿಂಗ್ ನೋಡುವುದರಲ್ಲಿ ಮುಳುಗಿರುವಾಗ ಒಳ್ಳೆಯ ಆಲಿಸುವವನ ಜತೆ ಮಾತನಾಡಲು ಪ್ರಯತ್ನಿಸಿ. ಇದರಿಂದ ನಿರಾಶರಾದರೆ ಅಚ್ಚರಿಗೊಳ್ಳಬೇಡಿ.
ಹೆಚ್ಚಿನ ಗಂಡಸರ ಮನಸ್ಸು ಮತ್ತು ಕೈಯಲ್ಲಿ ಅತಿಯಾದ ಕೆಲಸವಿರುತ್ತದೆ. ಯಾಕೆಂದರೆ ಮುಗಿಸದ ಕೆಲಸವಿರಬಹುದು ಮತ್ತು ಮುಂದೆ ಏನು ಎನ್ನುವ ಬಗ್ಗೆ ಚಿಂತಿಸುತ್ತಿರಬಹುದು. ಕೆಲವು ಮಂದಿ ತಮ್ಮ ಭವಿಷ್ಯವನ್ನು ಭದ್ರಪಡಿಸುವ ಬಗ್ಗೆ ಯೋಚಿಸಿದರೆ, ಮತ್ತೆ ಕೆಲವರು ತಮ್ಮ ಮೊಬೈಲ್ ನಲ್ಲಿ ಬಾಕಿ ಉಳಿದಿರುವ ಗೇಮ್ ನ್ನು ಪೂರ್ತಿಗೊಳಿಸಲು ಸಮಯ ಸಿಗಲಿ ಎಂದು ಕಾಯುತ್ತಿರಬಹುದು. ಆಲಿಸದಿರುವುದಕ್ಕೆ ಕಾರಣ ಏನೇ ಆಗಿದ್ದರೂ ಗಂಡಸರಲ್ಲಿರುವ ಇಂತಹ ಮೂಲ ಗುಣವು ಬಹುತೇಕ ಮಹಿಳೆಯರನ್ನು ಚಿಂತೆಗೀಡು ಮಾಡುತ್ತದೆ.

1. ಪ್ರಾಮುಖ್ಯತೆ
ಗಂಡಸರು ಆಲಿಸುವ ಪ್ರಾಮುಖ್ಯತೆ ಅರ್ಥಮಾಡಿಕೊಳ್ಳಲಿಕ್ಕಿಲ್ಲ. ಒಂದು ನಿರ್ದಿಷ್ಟ ವಯಸ್ಸಿನ ಬಳಿಕ ತಮ್ಮ ಪೋಷಕರು ಅಥವಾ ಗರ್ಲ್ ಫ್ರೆಂಡ್ ಮತ್ತು ಪತ್ನಿಯ ಮಾತನ್ನು ಆಲಿಸದೇ ಇರಬಹುದು. ಸಾಮಾನ್ಯವಾಗಿ ಹೇಳುವುದಾದರೆ ಉತ್ತಮ ಆಲಿಸುವ ಗುಣ ಗಂಡಸರಲಿಲ್ಲ.

2. ತಪ್ಪುಗ್ರಹಿಕೆ
ಮಹಿಳೆಯರು, ಹಿರಿಯರು ಮತ್ತು ಪೋಷಕರು ಪುರುಷರು ಆಲಿಸುವುದಿಲ್ಲವೆಂದು ಭಾವಿಸುತ್ತಾರೆ. ಇದನ್ನು ಒಪ್ಪಿಕೊಳ್ಳಬೇಕು. ಹೆಚ್ಚಿನ ಸಮಯದಲ್ಲಿ ಪುರುಷರು ಆಲಿಸುತ್ತಾರಾದರೂ ಇದನ್ನು ಒಪ್ಪಿಕೊಳ್ಳುವುದಿಲ್ಲ. ಸತ್ಯವನ್ನು ಒಪ್ಪದಿರುವುದು ಇತರರಿಗೆ ಇರಿಸುಮುರಿಸು ಉಂಟುಮಾಡಬಹುದು.

3. ಭಾವನೆಗಳು
ಮಹಿಳೆಯರು ಸಾಮಾನ್ಯವಾಗಿ ಭಾವನಾತ್ಮಕವಾಗಿರುತ್ತಾರೆ. ಅವರು ತಮ್ಮ ಮಾತಿಗೆ ಭಾವನೆಗಳನ್ನು ಬೆಸೆಯುತ್ತಾರೆ. ತಮ್ಮ ಮಾತಿನಲ್ಲಿ ಮಹಿಳೆ ವ್ಯಕ್ತಪಡಿಸುವ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಗಂಡಸರು ವಿಫಲರಾಗುತ್ತಾರೆ. ಗಂಡಸರು ಆಲಿಸುವುದಿಲ್ಲ ಎನ್ನುವ ಬಗ್ಗೆ ಮಹಿಳೆಯರ ದೊಡ್ಡ ತಪ್ಪುಗ್ರಹಿಕೆ ಇದಾಗಿದೆ.

4. ಟೀಕೆ
ಪುರುಷ ಅಥವಾ ಮಹಿಳೆಯಾಗಿರಲಿ ಸಾಮಾನ್ಯವಾಗಿ ಟೀಕೆಗೊಳಪಡುವುದನ್ನು ಯಾರೂ ಇಷ್ಟಪಡುವುದಿಲ್ಲ. ಗಂಡಸರ ವಿಚಾರದಲ್ಲಿ ಇದು ಸತ್ಯ. ಗಂಡಸರ ತಮ್ಮ ವೈಫಲ್ಯಗಳನ್ನು ಸ್ವೀಕರಿಸುವುದಿಲ್ಲ ಮತ್ತು ಟೀಕೆಗಳನ್ನು ಆಲಿಸುವುದಿಲ್ಲ.

5. ಸರಿಪಡಿಸುವುದನ್ನು ಬಯಸುವುದಿಲ್ಲ
ಈ ಒಂದು ಅಹಂ ಹೆಚ್ಚಿನ ಪುರುಷರಲ್ಲಿ ಇರುತ್ತದೆ. ಹೆಚ್ಚಿನ ಗಂಡಸರು ಸರಿಪಡಿಸಿಕೊಳ್ಳುವುದನ್ನು ಬಯಸುವುದಿಲ್ಲ. ಕಠಿಣ ವಿಧಾನದಿಂದ ಕಲಿಯಲು ಗಂಡಸರು ಬಯಸುತ್ತಾರೆ. ಬೈಕ್ ಕಲಿಯುವಾಗ ಇತರರ ಸಲಹೆ ಕೇಳುವ ಬದಲು ಹಲವಾರು ಸಲ ಕೆಳಗೆ ಬಿದ್ದು ಬೈಕ್ ಓಡಿಸುವ ಸಾಮರ್ಥ್ಯವನ್ನು ಸರಿಪಡಿಸಿಕೊಳ್ಳಲು ಗಂಡಸರು ಬಯಸುತ್ತಾರೆ.

6. ಅಧಿಕಾರದ ಸಮಸ್ಯೆ
ಗಂಡಸರಿಗೆ ಆಲಿಸುವುದೆಂದರೆ ಆದೇಶ ಅಥವಾ ವೈಫಲ್ಯ ಸ್ವೀಕರಿಸಿದಂತೆ. ಗಂಡಸರ ಅಹಂ ಮಾತನಾಡಲು ಬಯಸುತ್ತದೆಯೇ ಹೊರತು ಆಲಿಸಲು ಅಲ್ಲ. ಯಾವುದೇ ಹಂತದಲ್ಲೂ ಆಲಿಸಿದರೆ ಅವರು ತಮ್ಮ ಅಧಿಕಾರ ಬಿಟ್ಟುಕೊಟ್ಟಂತಾಗುತ್ತದೆ.

7. ವಿವೇಚನಾಶೀಲತೆ
ಮಹಿಳೆಯರ ಎಲ್ಲಾ ಮಾತುಗಳಲ್ಲಿ ವಿವೇಚನಾಶೀಲತೆ ಇರುವುದಿಲ್ಲ. ವಿವೇಚನಾಶೀಲತೆ ಇಲ್ಲದ ಮಾತುಗಳನ್ನು ಗಂಡಸರು ಸಹಿಸಿಕೊಳ್ಳುವುದಿಲ್ಲ. ಇದರಿಂದ ತಮ್ಮ ಜತೆಗಾರರ ಮಾತನ್ನು ಆಲಿಸುವುದಿಲ್ಲ. ಒಂದು ಹಂತದ ಬಳಿಕ ಇಂತಹ ಮಾತನ್ನು ಗಂಡಸರು ಆಲಿಸುವುದನ್ನು ನಿಲ್ಲಿಸುತ್ತಾರೆ.

8. ಫಲಿತಾಂಶ
ಗಂಡಸರು ಫಲಿತಾಂಶ ಮತ್ತು ತಮ್ಮ ಕಾರ್ಯಗಳಿಗೆ ಪ್ರತಿಫಲ ಬಯಸುತ್ತಾರೆ. ಗಂಡಸರು ಯಾವುದೇ ವಿಷಯ ಆಲಿಸುತ್ತಿದ್ದರೆ ಆಗ ಅವರ ಮನಸ್ಸು ಇದನ್ನು ಹೆಚ್ಚಿಗೆ ಕೇಳುವುದರಿಂದ ಯಾವುದೇ ಲಾಭವಿದೆಯಾ ಎಂದು ಯೋಚಿಸುತ್ತಿರುತ್ತದೆ. ಮಾತು ಹೆಚ್ಚು ಭಾವನಾತ್ಮಕ ಮತ್ತು ಭಾವನೆಗಳನ್ನು ಹಂಚಿಕೊಳ್ಳುವ ಬಗ್ಗೆ ಇದ್ದರೆ ಗಂಡಸರು ಆಲಿಸುವುದನ್ನು ನಿಲ್ಲಿಸುತ್ತಾರೆ.

9. ಬುದ್ದಿ ಇಲ್ಲದಿರುವುದು
ಸುಂದರ ಮಹಿಳೆಯರಿಗೆ ಬುದ್ದಿ ಇಲ್ಲವೆಂದು ಸಾಮಾನ್ಯವಾಗಿ ಗಂಡಸರು ಭಾವಿಸಿರುತ್ತಾರೆ. ಇದರಿಂದ ಅವರ ಗಂಭೀರ ಮಾತುಗಳನ್ನು ಕಡೆಗಣಿಸುತ್ತಾರೆ ಮತ್ತು ಸಲಹೆಗಳನ್ನು ಪಡೆಯುವುದು ತುಂಬಾ ಕಡಿಮೆ. ಇಂತಹ ಮಹಿಳೆಯರ ಮಾತನ್ನು ಕಡೆಗಣಿಸಬೇಕು ಅಥವಾ ಕೇಳುವಂತೆ ನಟಿಸಬೇಕು. ಆದರೆ ಗಂಡಸರು ಆಲಿಸುವುದಿಲ್ಲ.



Click it and Unblock the Notifications











