Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಫೇಸ್ ಬುಕ್ ತಪ್ಪುಗಳು ಸಂಬಂಧ ಬಾಡಿಸದಿರಲಿ
ಆನ್ ಲೈನ್ ಸಾಮಾಜಿಕ ಮಾಧ್ಯಮಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಇದು ನಮ್ಮ ಸ್ನೇಹಿತರು, ಕುಟುಂಬ ಮತ್ತು ನಾವು ಪ್ರೀತಿಸುವ ಜನರ ಸಂಪರ್ಕದಲ್ಲಿರುವಂತೆ ಮಾಡುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ಫೇಸ್ ಬುಕ್ ವಿಶ್ವದೆಲ್ಲೆಡೆ ಕೋಟ್ಯಂತರ ಬಳಕೆದಾರರನ್ನು ಹೊಂದಿದ್ದು, ಹೆಚ್ಚು ಜನಪ್ರಿಯವಾಗಿದೆ. ಫೇಸ್ ಬುಕ್ ಗೆ ದಿನದಲ್ಲಿ ಒಮ್ಮೆ ಲಾಗಿನ್ ಆಗದಿರುವುದು ತುಂಬಾ ಕಷ್ಟ. ಇದರಿಂದ ನೀವು ಸಂಪರ್ಕದಲ್ಲಿರ ಬಯಸುವ ವ್ಯಕ್ತಿಗಳೊಂದಿಗೆ ಚಾಟ್ ಮಾಡಲು ಮತ್ತು ಅಪ್ ಲೋಡ್ ಮಾಡಬಹುದು. ಫೇಸ್ ಬುಕ್ ನಲ್ಲಿ ನಿಮ್ಮ ಖಾತೆ ಇಲ್ಲದಿದ್ದರೆ ನಿಮ್ಮನ್ನು ಒಬ್ಬ ಅಸ್ಪೃಶ್ಯನಂತೆ ನೋಡಬಹುದು.
ಆದಾಗ್ಯೂ ಸಾಮಾಜಿಕ ಮಾಧ್ಯಮಗಳ ಲಾಭಗಳು ತುಂಬಾ ಇದ್ದರೂ ಅದರಿಂದ ಆಗುವ ಸಂಘರ್ಷ ಮತ್ತು ಸಮಸ್ಯೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ನೀವು ಯಾವುದೇ ಸಂಬಂಧ ಅಥವಾ ಮದುವೆ ಸಂಬಂಧದಲ್ಲಿದ್ದರೆ ಈ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು. ಫೇಸ್ ಬುಕ್ ನಲ್ಲಿ ನೀವು ಏನಾದರೂ ಮಾಡಿದರೆ ಅದು ನಿಮ್ಮ ಸಂಬಂಧ ಗಟ್ಟಿಯಾಗಲು ಮತ್ತೆ ಕೆಲವು ಸಲ ಸಂಬಂಧ ಮುರಿಯಲು ಕಾರಣವಾಗಬಹುದು. ಫೇಸ್ ಬುಕ್ ಇಂದು ಕೇವಲ ಸಂಪರ್ಕ ಸಾಧನವಾಗಿ ಉಳಿದಿಲ್ಲ. ಇದು ನಮ್ಮ ಸಾಮಾಜಿಕ ಜೀವನದಲ್ಲಿ ಗಟ್ಟಿಯಾಗಿ ಬೇರೂರಿದೆ. ಜನರು ನಿಮ್ಮನ್ನು ವೈಯಕ್ತಿಕವಾಗಿ ನೋಡಿ ತಿಳಿದುಕೊಳ್ಳುವುದಕ್ಕಿಂತ ಹೆಚ್ಚಾಗಿ ಫೇಸ್ ಬುಕ್ ಪ್ರೊಪೈಲ್ ನೋಡಿ ಅರ್ಥಮಾಡಿಕೊಳ್ಳಬಹುದು.
ನೀವು ಯಾವುದಾದರೂ ಸಂಬಂಧಕ್ಕೆ ಬದ್ಧರಾಗಿದ್ದರೆ ಆಗ ಕೆಲವೊಂದು ಫೇಸ್ ಬುಕ್ ತಪ್ಪುಗಳನ್ನು ಕಡೆಗಣಿಸಬೇಕು. ನಿಮ್ಮ ಗರ್ಲ್ ಫ್ರೆಂಡ್ ಪ್ರೊಫೈಲ್ ನ್ನು ಗೌಪ್ಯವಾಗಿ ನೋಡುವುದು, ಆಕೆಯ ಪ್ರೊಫೈಲ್ ಹ್ಯಾಕ್ ಮಾಡುವುದು, ಆಕೆಗೆ ತಿಳಿಯದಂತೆ ಆಕೆಯ ಗೆಳತಿಯರೊಂದಿಗೆ ಸ್ನೇಹ ಸಂಪಾದಿಸುವುದು ಇತ್ಯಾದಿ. ಫೇಸ್ ಬುಕ್ ನಲ್ಲಿ ನಿಮ್ಮ ಚಟುವಟಿಕೆ ನಿಮ್ಮ ಜೊತೆಗಾರ್ತಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ನೀವಿಬ್ಬರು ತುಂಬಾ ಖಾಸಗಿಯಾಗಿ ತೆಗೆದಿರುವಂತಹ ಕೆಲವೊಂದು ಫೋಟೊಗಳನ್ನು ಪೋಸ್ಟ್ ಮಾಡುವುದರಿಂದ ನಿಮ್ಮಿಬ್ಬರ ನಡುವೆ ಬಿರುಕಿಗೆ ಕಾರಣವಾಗಬಹುದು ಮತ್ತು ಇದು ಎಂದಿಗೂ ಸರಿಯಾಗದಿರಬಹುದು.
ಸಂಬಂಧದಲ್ಲಿರುವಾಗ ಮಾಡಬಾರದ ಕೆಲವೊಂದು ಫೇಸ್ ಬುಕ್ ತಪ್ಪುಗಳುಗಳನ್ನು ಪಟ್ಟಿ ಮಾಡಲಾಗಿದೆ.
1. ಅನ್ವೇಷಣೆ
ನಿಮ್ಮ ಸಂಗಾತಿಯ ಫೇಸ್ ಬುಕ್ ಪ್ರೊಫೈಲ್ ನ್ನು ಶೋಧಿಸಬೇಡಿ. ವಾಸ್ತವಿಕ ಪ್ರಪಂಚವಾದರೂ ಇದು ಆಕೆಯ ಖಾಸಗಿತನ ಉಲ್ಲಂಘಿಸುತ್ತದೆ. ಫೇಸ್ ಬುಕ್ ಇಂದಿನ ದಿನಗಳಲ್ಲಿ ಜನರ ಎರಡನೇ ವಾಸ್ತವ ಜಗತ್ತಾಗಿ ಉಳಿದಿಲ್ಲ. ಇದು ಅವರ ಸ್ವಂತ ಜೀವನದ ಭಾಗವಿದ್ದಂತೆ.
2. ಆಕೆಯ ಪ್ರೊಫೈಲ್ ಹ್ಯಾಕ್ ಮಾಡುವುದು
ಕೆಲವರು ಮನೋರಂಜನೆಗಾಗಿ, ತಮ್ಮ ಸಾಮರ್ಥ್ಯ ತೋರಿಸಲು ಅಥವಾ ಯಾವುದೇ ಗಂಭೀರ ಪರಿಣಾಮ ಬೀರದೆಂದು ನಂಬಿ ಇಂತಹ ಸಣ್ಣ ತಪ್ಪು ಮಾಡುತ್ತಾರೆ. ನಿಮ್ಮ ಸಂಗಾತಿಗೆ ಎಷ್ಟೇ ಹತ್ತಿರವಾಗಿದ್ದರೂ ಆಕೆಯ ಪ್ರೊಫೈಲ್ ನ್ನು ಯಾವುದೇ ಕಾರಣಕ್ಕೂ ಹ್ಯಾಕ್ ಮಾಡುವ ಹಕ್ಕು ನಿಮಗಿಲ್ಲ.
3. ಆಕೆಯ ಗೆಳತಿಯರಿಗೆ ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸುವುದು
ನಿಮಗೆ ತಿಳಿದಿರುವ ಮತ್ತು ಪರಿಚಯವಿರುವ ಆಕೆಯ ಗೆಳತಿಯರಿಗೆ ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿದರೆ ಯಾವುದೇ ಚಿಂತೆಯಿಲ್ಲ. ಆಕೆಯ ಫ್ರೆಂಡ್ಸ್ ಲಿಸ್ಟ್ ನಲ್ಲಿರುವ ಯಾವುದಾದರೂ ಸುಂದರ ಹುಡುಗಿಗೆ ನೀವು ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿದರೆ ಆಗ ನಿಮ್ಮ ಸಂಬಂಧ ಖಂಡಿತವಾಗಿಯೂ ಸಮಸ್ಯೆಗೀಡಾಗುತ್ತದೆ.
4. ಅಪಡೇಟ್ ಕಡೆಗಣಿಸುವುದು
ನೀವು ಫೇಸ್ ಬುಕ್ ನ ನಿಯಮಿತ ಬಳಕೆದಾರರಾಗಿದ್ದರೆ ನೀವು ಅಪ್ ಡೇಟ್ ಗಳನ್ನು ಪರಿಶೀಲಿಸುತ್ತಾ ಇರಬೇಕು. ಆಕೆಯ ಅಪಡೇಟ್ ನ್ನು ಕಡೆಗಣಿಸದಿರುವುದು ತುಂಬಾ ಮುಖ್ಯ. ನೀವು ಲಾಗ್ ಇನ್ ಆಗಿ ಆಕೆಯ ಅಪ್ ಡೇಟ್ ನ್ನು ಲೈಕ್ ಮಾಡದಿದ್ದರೆ ಆಗ ದೊಡ್ಡ ಸಮಸ್ಯೆಯಾಗಬಹುದು.
5. ಅವಮಾನಕಾರಿ ವಿಷಯ ಪೋಸ್ಟ್ ಮಾಡುವುದು
ನೀವು ಯಾವುದೇ ಸಂಬಂಧದಲ್ಲಿದ್ದರೆ ಮತ್ತು ಆಕೆಯ ಪರಿಚಯ ಫೇಸ್ ಬುಕ್ ನಲ್ಲಿ ಆಗಿದ್ದರೆ ಆಗ ಯಾವುದೇ ರೀತಿಯ ಅವಮಾನಕಾರಿ ಅಥವಾ ಮಾನಹಾನಿಕಾರಿ ವಿಷಯ ಪೋಸ್ಟ್ ಮಾಡಬೇಡಿ. ಇದನ್ನು ಆಕೆಯ ಹೆಚ್ಚಿನ ಗೆಳೆಯ ಗೆಳತಿಯರು ನೋಡಬಹುದು. ಇದು ಆಕೆಗೆ ತುಂಬಾ ಕಠಿಣವಾಗಬಹುದು.
6. ಆತ್ಮೀಯ ಚಿತ್ರಗಳನ್ನು ಅಪ್ ಲೋಡ್ ಮಾಡಬೇಡಿ
ನೀವು ಗೆಳತಿಯೊಂದಿಗೆ ತುಂಬಾ ಖಾಸಗಿಯಾಗಿ ಕಳೆಯುವ ಕೆಲವೊಂದು ಚಿತ್ರಗಳು ಖಾಸಗಿಯಾಗಿಯೇ ಇರಲಿ. ನಿಮ್ಮ ಗೆಳೆಯರ ಬಳಗದಲ್ಲಿ ಜನಪ್ರಿಯತೆ ಪಡೆಯಲು ಇಂತಹ ಚಿತ್ರಗಳನ್ನು ಫೇಸ್ ಬುಕ್ ಗೆ ಅಪ್ ಲೋಡ್ ಮಾಡಬೇಡಿ. ಇದು ನಿಮ್ಮ ಸಂಗಾತಿಯ ಖಾಸಗಿತನ ಮತ್ತು ಭಾವನೆಗಳಿಗೆ ಧಕ್ಕೆಯುಂಟು ಮಾಡಬಹುದು.
7. ನೆಗೆಟಿವ್ ಕಮೆಂಟ್
ಆಕೆಯ ಪ್ರತಿಯೊಂದು ಪೋಸ್ಟ್ ಗಳಿಗೆ ನೀವು ಕಮೆಂಟ್ ಮಾಡಬೇಕು. ಇದರಿಂದ ಆಕೆಯ ಕಡೆ ನೀವು ಗಮನಹರಿಸುತ್ತಿದ್ದೀರಿ ಎಂದು ಗೊತ್ತಾಗುತ್ತದೆ. ಆಕೆಯನ್ನು ಅಥವಾ ಆಕೆಯ ಪೋಸ್ಟ್ ನ್ನು ಟೀಕಿಸಿ ನೆಗೆಟಿವ್ ಅಥವಾ ಅವಮಾನಕಾರಿ ಕಮೆಂಟ್ ಎಂದಿಗೂ ಹಾಕಬೇಡಿ.



Click it and Unblock the Notifications
