Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಮದುವೆಗೆ ಮುಂಚೆ ಈ ಪ್ರಶ್ನೆ ಕೇಳಿದರೆ ಒಳ್ಳೆಯದು
ಮದುವೆ ಎನ್ನುವುದು ಪ್ರತಿಯೊಬ್ಬರ ಬದುಕಿನ ಮುಖ್ಯವಾದ ಘಟ್ಟ. ಮದುವೆ ಎನ್ನುವ ಬಂಧದ ಮುಖಾಂತರ ಅದುವರೆಗೆ ಅಪರಿಚಿತ/ಳು ಆಗಿದ್ದ ಆ ವ್ಯಕ್ತಿ ನಮ್ಮ ಬದುಕಿನ ಬಹುಮುಖ್ಯ ವ್ಯಕ್ತಿಗಳಾಗಿ ಬಿಡುತ್ತಾರೆ. ನಮ್ಮ ಉಳಿದ ಬದುಕು ಪೂರ್ತಿ ಅವರ ಜೊತೆ ಕಳೆಯಲು ತೀರ್ಮಾನಿಸುತ್ತೇವೆ, ಈ ರೀತಿ ತೀರ್ಮಾನ ತೆಗೆದುಕೊಳ್ಳುವ ಸಮಯದಲ್ಲಿ ತುಂಬಾ ಎಚ್ಚರವಾಗಿರಬೇಕು!
ನಾನು ಮದುವೆಯಾಗಬೇಕೆಂದಿರುವ ಈ ವ್ಯಕ್ತಿ ನನ್ನ ಜೊತೆ ಹೊಂದಿಕೊಂಡು ಹೋಗಬಹುದೇ ಎಂಬುದನ್ನು ನೋಡಿಕೊಳ್ಳಬೇಕು. ಇಬ್ಬರ ಆಲೋಚನೆ, ನಡುವಳಿಕೆಗಳು ಸಂಪೂರ್ಣವಾಗಿದ್ದು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ವಿಫಲವಾದರೆ ಮುಂದೆ ದಾಂಪತ್ಯ ಜೀವನದಲ್ಲಿ ದೊಡ್ಡ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಮದುವೆಗೆ ಓಕೆ ಹೇಳುವ ಮುನ್ನ ಆ ವ್ಯಕ್ತಿ ಜೊತೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದರೆ ಒಳ್ಳೆಯದು.

ಸಾಕಷ್ಟು ಮದುವೆಯಲ್ಲಿ ಮದುವೆಯ ಸಂಪೂರ್ಣ ನಿರ್ಣಯವನ್ನು ಮನೆಯವರು ತೆಗೆದುಕೊಳ್ಳುತ್ತಾರೆ. ಆದರೆ ಮುಂದೆ ಮದುವೆಯಾಗಿ ಬಾಳಬೇಕಾದವರು ನೀವು ಆದ ಕಾರಣ, ನಿಮ್ಮ ಕೆರಿಯರ್, ನಿಮ್ಮ ಗುರಿ ಇವುಗಳ ಬಗ್ಗೆ ಬಾಳ ಸಂಗಾತಿಯಲ್ಲಿ ಚರ್ಚಿಸುವುದು ಒಳ್ಳೆಯದು. ಅದರಲ್ಲೂ ಈ ಕೆಳಗಿನ ಎರಡು ವಿಷಯದಲ್ಲಿ ಪ್ರಶ್ನೆ ಕೇಳಿದ ಬಳಿಕವಷ್ಟೇ ಮದುವೆಗೆ ಓಕೆ ಅಂದರೆ ಒಳ್ಳೆಯದು ಅನ್ನುವುದು ನಮ್ಮ ಸಲಹೆ.
ಕೆರಿಯರ್
ಈಗೀನ ಹೆಣ್ಣು ಮಕ್ಕಳಲ್ಲಿ ಹೆಚ್ಚಿನವರು ಹೊರಗಡೆ ದುಡಿಯಬೇಕು, ಆರ್ಥಿಕ ಸ್ವಾತಂತ್ರ್ಯ ಇರಬೇಕು ಎಂದು ಬಯಸುತ್ತಾರೆ. ಆದರೆ ಕೆಲ ಗಂಡಸರು ಜಾಬ್ ನಲ್ಲಿರುವ ಹುಡುಗಿಯನ್ನು ಮದುವೆಯಾಗಿ, ನಂತರ "ನೀನು ಕೆಲಸಕ್ಕೆ ಹೋಗುವುದು ನನಗೆ ಇಷ್ಟವಿಲ್ಲ ಎಂದು ಹೇಳಿ ಬಿಡುತ್ತಾರೆ" ಆದರೆ ಆ ಹೆಣ್ಣಿಗೆ ಹೌಸ್ ವೈಫ್ ಆಗಿ ಮಾತ್ರ ಸೀಮಿತವಾಗಿರುವುದು ಇಷ್ಟವಿಲ್ಲದಿದ್ದರೆ ಆಗ ಗಂಡ-ಹೆಂಡತಿಯ ನಡುವೆ ಜಗಳ ಪ್ರಾರಂಭವಾಗುವುದು. ಆದ್ದರಿಂದ ಈ ವಿಷಯದಲ್ಲಿ ನಿಮ್ಮ ಸ್ಪಷ್ಟ ನಿಲುವು ಏನು, ಅದಕ್ಕೆ ಅವರ ಅಭಿಪ್ರಾಯವೇನು ಅನ್ನುವುದನ್ನು ಕೆಳಿ ತಿಳಿದುಕೊಳ್ಳಿ.
ಭವಿಷ್ಯದ ಪ್ಲಾನಿಂಗ್, ಕೆರಿಯರ್, ಸಂಬಳ ಇವೆಲ್ಲವನ್ನು ತಿಳಿದುಕೊಳ್ಳುವುದು ಒಳ್ಳೆಯದು.
ಮನೆಯವವರ ಬಗ್ಗೆ ಮತ್ತು ಅವನ/ಅವಳ ಬಗ್ಗೆ
ಆ ವ್ಯಕ್ತಿಯ ಇಷ್ಟದ ವಿಷಯಗಳೇನು, ನಿಮ್ಮಲ್ಲಿ ಅವರು ಇಷ್ಟ ಪಡುವುದು ಏನು, ಇಷ್ಟ ಪಡದಿರುವುದು ಏನು, ನಿಮ್ಮ ಮನೆಯವರ ಬಗ್ಗೆ ಅವರ ಅಭಿಪ್ರಾಯವೇನು ಎಲ್ಲವನ್ನು ಕೇಳಿ ತಿಳಿದುಕೊಳ್ಳಿ. ಅವರ ಬಗೆಯೂ ಕೆಲವೊಂದು ಪ್ರಶ್ನೆಗಳನ್ನು ಕೇಳಿ, ಆಗ ಅವರ ಬಗ್ಗೆ ತಿಳಿದುಕೊಳ್ಳಬಹುದು.
ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯವಾದ ಅಂಶವೆಂದರೆ ಪ್ರಶ್ನೆ ಕೇಳುವಾಗ ತುಂಬಾ ನಾಜೂಕಾಗಿರಿ. ಸಂದರ್ಶನದಲ್ಲಿ ಪ್ರಶ್ನೆ ಕೇಳಿದಂತೆ ಕೇಳಬೇಡಿ, ಆ ವ್ಯಕ್ತಿಗೆ ಇಷ್ಟವಾಗದೆ ಹೋಗಬಹುದು, ಹಾಗೇ ಮಾತನಾಡುತ್ತಾ ನಿಮಗೆ ಏನು ತಿಳಿಯಬೇಕು, ಅದನ್ನು ಕೇಳಿ ತಿಳಿದುಕೊಳ್ಳಿ, ಆಲ್ ದಿ ಬೆಸ್ಟ್.



Click it and Unblock the Notifications