Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ಈ ಬಂಧನ ಅಣ್ಣ ತಂಗಿಯರ ರಕ್ಷಾ ಬಂಧನ
"ರಕ್ಷಾ ಬಂಧನ" ಹೆಸರೇ ಸೂಚಿಸುವಂತೆ ಸಹೋದರಿಯರು ತಮ್ಮನ್ನು ಸದಾ ರಕ್ಷಿಸುವಂತೆ ಕೋರಿ ತಮ್ಮ ಸಹೋದರರಿಗೆ ಮತ್ತು ಸಹೋದರ ಸಮಾನರಾದವರಿಗೆ ಕಟ್ಟುವ ಒಂದು ಪವಿತ್ರವಾದ ದಾರ ಅಥವಾ ಬಂಧನ.
ಸಹೋದರ ಅಥವಾ ಸಹೋದರಿ ಎಂಬ ಪದವು ಸಹ + ಉದರ ಎಂದರೆ ಒಂದೇ ಹೊಟ್ಟೆಯಲ್ಲಿ ಜನಿಸಿದವರು ಎಂದು ಸೂಚಿಸುತ್ತದೆ. ಹೀಗೆ ಒಂದೇ ಹೊಟ್ಟೆಯಲ್ಲಿ ಹುಟ್ಟಿದರು, ತಮ್ಮ ಜನ್ಮ ಪೂರ್ವಕವಾಗಿ ಬಂದ ಅಭದ್ರತೆ, ಅಥವಾ ಅಸಹಾಯಕತೆ ಇರಬಹುದು. ಇಲ್ಲವೆ ತಾನು ಅಬಲೆ ಎಂಬ ಭಾವಕ್ಕಾಗಿ ಇರಬಹುದು ಹೆಣ್ಣಿಗೆ ಸದಾ ತನಗೆ ಸುರಕ್ಷಿತ ಭಾವನೆಯನ್ನು ಒದಗಿಸುವ ಒಂದು ಗಂಡಿನ ಅವಶ್ಯಕತೆ ಸದಾ ಕಾಡುತ್ತದೆ. ಅದು ತಂದೆಯ ರೂಪದಲ್ಲಿ, ಸಹೋದರನ ರೂಪದಲ್ಲಿ, ಸ್ನೇಹಿತನ ರೂಪದಲ್ಲಿ, ಗಂಡನ ಅಥವಾ ಮಗನ ರೂಪದಲ್ಲಿ ಹೀಗೆ ಹೆಣ್ಣಿಗೆ ಹಲವು ರೂಪದಲ್ಲಿ ಗಂಡಸು ಆಕೆಗೆ ಬೇಕಾದ ಭದ್ರತೆಯ ಭಾವನೆಯನ್ನು ಕಾಲ ಕಾಲಕ್ಕೆ ಒದಗಿಸುತ್ತ ಬರುತ್ತಾನೆ. ಇದರಲ್ಲಿ ತಂದೆ, ಗಂಡ ಮತ್ತು ಮಗ ತಮ್ಮ ಜವಾಬ್ದಾರಿಯನ್ನು ತಾವು ನಿರ್ವಹಿಸುತ್ತಾರೆ ಎಂಬುದು ನಿಜವಾದರು ಇವರಿಗೆ ಮೀರಿದ ಒಂದು ಸಂಬಂಧ ಹೆಣ್ಣಿನ ಜೀವನದಲ್ಲಿ ಇರುತ್ತದೆ. ಅದೇ ಆಕೆಯ ಸಹೋದರ.

"ಸಾವಿರ ಜನರ ಮಧ್ಯೆಯು ನನ್ನಣ್ಣಯ್ಯನ ಎದ್ದು ಕಾಣುವ ಮುಖವನ್ನು ಕಂಡು ಎದೆ ಹುಬ್ಬಿ ಬಂತು" ಎಂಬ ಸಾಲು ನಮ್ಮ ಕನ್ನಡದ ಜನಪದ ಗೀತೆಯಲ್ಲಿ ಬಂದಿದೆ. ಹೆಣ್ಣಿಗೆ ತವರು ಎಂದರೇ ಅಭಿಮಾನ ಅದರಲ್ಲಿಯೂ ತನ್ನ ಅಣ್ಣ-ತಮ್ಮಂದಿರ ಮೇಲೆ ಆಕೆಯದು ಮತ್ತಷ್ಟು ಅಭಿಮಾನ ತುಂಬಿದ ಪ್ರೀತಿ ಮತ್ತು ಮಮತೆ ಇರುತ್ತದೆ. ಅಣ್ಣನು ತಂದೆಯ ಸಮಾನ ಎನ್ನುವ ಭಾವನೆಯಾದರೆ, ತಮ್ಮನ ಮೇಲೆ ತನ್ನ ಅಮ್ಮನನ್ನು ಮೀರಿಸುವಷ್ಟು ಮಾತೃ ವಾತ್ಸಲ್ಯ. ಹೀಗೆ ಒಬ್ಬ ಸಹೋದರನಿಗೆ ಈಕೆ ಮಗಳಂತಾದರೆ, ಮತ್ತೊಬ್ಬನಿಗೆ ತಾಯಿಯಂತಾಗುತ್ತಾಳೆ. ಇದಕ್ಕೆ ಅಲ್ಲವೇ ನಾವು ಪ್ರಕೃತಿಯಲ್ಲಿ ಕಾಣುವ ಪ್ರತಿಯೊಂದು ಮರ, ನದಿ ಮುಂತಾದವಕ್ಕೆಲ್ಲ ಸ್ತ್ರೀತನವನ್ನು ಆರೋಪಿಸುವುದು.
ಇದೇ ವಿಚಾರದ ಬಗ್ಗೆ ವರ್ತನಾ ಪಂಥದ ಮನೋವಿಙ್ಞಾನಿಗಳು ( Behaviourism) ಹಲವಾರು ಸಂಶೋಧನೆಗಳನ್ನು ಮಾಡಿದ್ದಾರೆ. ಅವರು ಹೇಳುವ ಪ್ರಕಾರ ಅಣ್ಣನು ತಂಗಿಗೆ ಚಿಕ್ಕಂದಿನಿಂದಲು ನೀಡುವ ಸುರಕ್ಷತಾ ಭಾವನೆಯೇ ಆಕೆಗೆ ಆತನ ಮೇಲೆ ಒಂದು ಅಭಿಮಾನ ಮೂಡಿಸುತ್ತದೆ. ಆಕೆಯ ದೃಷ್ಟಿಯಲ್ಲಿ ಆತನೇ ಹೀರೋ!. ನಿಜ ತಾನು ಹುಟ್ಟಿದಾಗಿನಿಂದ ತನ್ನನ್ನು ತಂದೆಗಿಂತ ಹೆಚ್ಚಾಗಿ ಹೊತ್ತುಕೊಂಡು ಆಟವಾಡಿಸಿದವನು ಇದೇ ಅಣ್ಣಾ. ತನಗೆ ಬೇಕಾದ ಹೂ- ಹಣ್ಣು, ಮನೆಯಲ್ಲಿ ಇಟ್ಟಿದ್ದ ತಿಂಡಿ, ಬೇಕಾದ ಆಟದ ಸಾಮಾನು, ಓರಗೆಯ ಮಕ್ಕಳು ತನ್ನನ್ನು ಹೊಡೆದಾಗ ಓಡಿ ಬಂದು ಅವರಿಗೆ ನಾಲ್ಕು ಒದೆ ಕೊಟ್ಟು ತಂಗಿಯ ನೋವಿಗೆ ಸೇಡು ತೀರಿಸಿಕೊಂಡವನು ಇದೇ ನಮ್ಮಣ್ಣಾ!. ಇಂತಹ ಅಣ್ಣನ ಮೇಲೆ ಆಕೆಗೆ ಅದು ಯಾವ ಪರಿ ಆವರಿಸಿಕೊಂಡಿರುತ್ತಾನೆಯೆಂದರೆ ತಾನು ಯಾರ ಮೇಲಿನ ಅಭಿಮಾನ ಬೇಕಾದರು ಕಳೆದುಕೊಳ್ಳುವ ಹೆಣ್ಣು ಅಣ್ಣನ ಮೇಲಿನ ಅಭಿಮಾನ ಮಾತ್ರ ಕಳೆದುಕೊಳ್ಳುವುದಿಲ್ಲ. ಆಕೆಗೆ ಆತನ ಮೇಲೆ ಅಂತಹ ಒಂದು Possessivenes ಬೆಳೆದು ಬಿಟ್ಟಿರುತ್ತದೆ. ಅದಕ್ಕಾಗಿಯೇ ಅಂತಹ ಅಣ್ಣ ಸದಾ ಕಾಲ ಚೆನ್ನಾಗಿರಲಿ ಎಂದು ತುಂಬು ಹೃದಯದಿಂದ ಪ್ರತಿ ಹೆಣ್ಣು ಮಗಳು ಹಾರೈಸಿ ತಮ್ಮ ಅಣ್ಣಂದಿರಿಗೆ ಈ ರಕ್ಷಾ ಬಂಧನವನ್ನು ಕಟ್ಟುತ್ತಾರೆ.
ಇನ್ನು ತಮ್ಮನ ಮೇಲೆ ಹೆಣ್ಣಿನಲ್ಲಿ ಅಡಗಿರುವ ತಾಯಿ ಪ್ರೇಮ ಉಕ್ಕಿ ಹರಿಯುತ್ತಿರುತ್ತದೆ. ಮೊದಲೆ ಹೇಳಿದಂತೆ ಪ್ರತಿ ಹೆಣ್ಣು, ತಾನು ತಾಯಿಯಂತಾಗಬೇಕು ಎಂದು ಬಯಸುತ್ತಿರುತ್ತಾಳೆ. ಆಗ ಅವರಿಗೆ ತಮ್ಮ ಮಾತೃ ವಾತ್ಸಲ್ಯವನ್ನು ತೋರಿಸಲು ಮೊದಲು ದೊರೆಯುವ ವ್ಯಕ್ತಿ ತಮ್ಮ. ಹುಟ್ಟಿದಾಗಿನಿಂದ ನನ್ನ ತಮ್ಮ, ನನ್ನ ತಮ್ಮ ಎಂದು ತುಡಿಯುವ ಆಕೆಯ ಹೃದಯ, ಆಕೆಯಲ್ಲಿ ಒಬ್ಬ ಪುಟ್ಟ ಅಮ್ಮನನ್ನೆ ಸೃಷ್ಟಿಸಿಬಿಡುತ್ತದೆ. ತಾಯಿಗಿಂತ ಹೆಚ್ಚಾಗಿ ಹೊತ್ತು ತಿರುಗುತ್ತ, ತನ್ನ ಪಾಲಿನ ಊಟ-ತಿಂಡಿಗಳನ್ನು ಆತನಿಗೆ ಕೊಟ್ಟು ಅದನ್ನು ಅವನು ತಿನ್ನುವುದನ್ನು ನೋಡಿ ಸಂತೋಷಪಡುವ ಹೆಣ್ಣು ಮಗಳನ್ನು ಕಾಣದವರು ಯಾರಿದ್ದಾರೆ? ನಮ್ಮ ಮನೆ-ಮನೆಗಳಲ್ಲಿ ಅಂತಹ ಒಬ್ಬ ಮಾತೃ ಹೃದಯಿ ಅಕ್ಕ ಇರುತ್ತಾಳೆ. ರಸ್ತೆ ದಾಟುವಾಗ ಇರಲಿ, ಮೊದಲ ಸಲ ಶಾಲೆಗೆ ಕರೆದೊಯ್ಯುವಾಗ ಇರಲಿ, ತಮ್ಮನ ಶಾಲೆಯ ಹೋಮ್ ವರ್ಕ್ ತಾನೇ ಅವನ ಹಸ್ತಾಕ್ಷರದಂತೆ ಮಾಡಿ, ತಂದೆಯ ಕೈಯಲ್ಲಿ ಒದೆ ತಿನ್ನುವ ತಮ್ಮನನ್ನು ಬಿಡಿಸಿಕೊಂಡು ಅವನಿಗೆ ಬೆಂಬಲ ವ್ಯಕ್ತಪಡಿಸುವ ಅಕ್ಕ ಪ್ರತಿಯೊಬ್ಬರ ಆಸ್ತಿ. ಅಂತಹ ಅಕ್ಕ ತನ್ನ ತಮ್ಮ ಚಿರಂಜೀವಿಯಾಗಿರಲಿ ಸದಾ ನನಗೆ ಸಂತೋಷವನ್ನು ನೀಡುತ್ತಿರಲಿ ಎಂದು ಹಾರೈಸಿ ಈ ರಕ್ಷಾ ಬಂಧನವನ್ನು ಕಟ್ಟುತ್ತಾಳೆ.
ಇದರ ಜೊತೆಗೆ ತನ್ನ ಓರಗೆಯಲ್ಲಿ ಬೆಳೆದ ಅಣ್ಣ ಅಥವಾ ತಮ್ಮನ ಸಮಾನರಾದವರಿಗೆ ಇಲ್ಲವೇ ಅವರಂತೆ ತನಗೆ ಪ್ರಿಯವಾದವರಿಗು ನಮ್ಮ ಹೆಣ್ಣು ಮಕ್ಕಳು ಈ ರಕ್ಷಾ ಬಂಧನವನ್ನು ಕಟ್ಟುತ್ತಾರೆ.
ಹೀಗೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ, ನಮ್ಮ ಸಂತೋಷದಲ್ಲಿ ತಮ್ಮ ಸಂತೋಷವನ್ನು ಕಾಣುವ ನಮ್ಮ ಎಲ್ಲಾ ಅಕ್ಕ- ತಂಗಿಯರಿಗೆ ಹಾಗು ಅವರ ಪ್ರೀತಿ ಪಾತ್ರ ಅಣ್ಣ- ತಮ್ಮಂದಿರಿಗೆ ಕನ್ನಡ ಬೋಲ್ಡ್ ಸ್ಕೈ ಪರವಾಗಿ ರಕ್ಷಾ ಬಂಧನದ ಹಾರ್ಧಿಕ ಶುಭಾಶಯಗಳು. ಈ ಬಂಧನದಿಂದ ನಿಮ್ಮ ಬಾಂಧವ್ಯವು ಸದಾ ಚಿರಾಯುವಾಗಿರಲಿ ಎಂದು ಹಾರೈಸುತ್ತೇವೆ.



Click it and Unblock the Notifications











