Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ದಾಂಪತ್ಯದ ಈ ಸೀಕ್ರೆಟ್ಸ್ ಯಾವತ್ತಿಗೂ ಹೊರಬರದಿರಲಿ
ಹೊಸದಾಗಿ ಮದುವೆಯಾದರು ದೊಡ್ಡವರ ಹತ್ತಿರ, ಫ್ರೆಂಡ್ಸ್ ಹತ್ತಿರ marriage advice ಕೇಳುತ್ತಾರೆ. ನಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗಬೇಕು, ನನ್ನಲ್ಲಿ ನನ್ನ ಸಂಗಾತಿಗೆ ಯಾವ ಲೋಪ ದೊಷ ಕಾಣಬಾರದೆಂಬ ಕಾರಣದಿಂದ ಈ ರೀತಿಯ ಸಲಹೆ ಕೇಳುತ್ತಾರೆ. ಆದರೆ ಹೀಗೆ ಸಲಹೆ ಕೇಳುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು, ಸಲಹೆ ಕೇಳಲು ಹೋಗಿ ನಿಮ್ಮ ದಾಂಪತ್ಯದ ಕೆಲವೊಂದು ರಹಸ್ಯಗಳನ್ನು ಫ್ರೆಂಡ್ಸ್ ಅಥವಾ ಕುಟುಂಬದವರ ಜೊತೆ ಹೇಳುವುದರಿಂದ ಅಪಾಯವೇ ಹೆಚ್ಚು.
ಏಕೆಂದರೆ ಸಂಬಂಧ ಗಟ್ಟಿಯಾಗಬೇಕೆಂದಾದರೆ ಗಂಡ-ಹೆಂಡತಿಯ ನಡುವೆ ಇರುವ ಕೆಲವೊಂದು ಸೀಕ್ರೆಟ್ಸ್ ಹೊರಗಿನವರಿಗೆ ಗೊತ್ತಾಗದೆ ಇರುವುದೇ ಒಳ್ಳೆಯದು. ಅದರಲ್ಲಂತೂ ಈ ಸೀಕ್ರೆಟ್ಸ್ ಯಾವತ್ತೂ ಹೊರಬರದಿರಲಿ:

ನಿಮ್ಮ ಆರ್ಥಿಕ ಖರ್ಚು
ತಿಂಗಳಿನಲ್ಲಿ ಎಷ್ಟು ಹಣ ಖರ್ಚು ಮಾಡುತ್ತೀರಿ, ಹೇಗೆ ಖರ್ಚು ಮಾಡುತ್ತೀರಿ ಈ ರೀತಿಯ ವಿಷಯಗಳನ್ನು ಮೂರನೆಯವರ ಹತ್ತಿರ ಹೇಳಲು ಹೋಗಬೇಡಿ.

ನಿಮ್ಮ ಸಂಗಾತಿಯ ಬಗ್ಗೆ ಮೂರನೆಯವರ ಅಭಿಪ್ರಾಯ ತೆಗೆದುಕೊಳ್ಳಬೇಡಿ
ಎಲ್ಲರಿಗೂ ಕೆಲವೊಮ್ಮೆ ತನ್ನ ಸಂಗಾತಿ ಹೀಗೆ ವಿಚಿತ್ರವಾಗಿ ಆಡುತ್ತಿದ್ದಾನೆ/ಳೆ ಎಂದು ಅನಿಸುವುದು ಸಹಜ. ಆದರೆ ಈ ವಿಷಯವನ್ನು ನಿಮ್ಮ ಫ್ರೆಂಡ್ಸ್ ಜೊತೆ ಹೇಳಬೇಡಿ, ನೀವೇ ಡೀಲ್ ಮಾಡಿ.

ನಿಮ್ಮ ದುಡಿಮೆಯ ಬಗ್ಗೆ
ಈಗೀನ ಕಾಲದಲ್ಲಿ ಗಂಡ-ಹೆಂಡತಿ ಇಬ್ಬರು ಹೊರಗಡೆ ದುಡಿಯಲು ಹೋಗುವುದು ಸಹಜ. ಹೆಂಡತಿ ಮನೆಗಾಗಿ ನಾನೆಷ್ಟು ಖರ್ಷು ಮಾಡುತ್ತಿದ್ದೇನೆ ಎಂದು ಫ್ರೆಂಡ್ಸ್ ಜೊತೆ ಹೇಳಿದರೆ , ಗಂಡನಿಗೆ ಅದು ಸಹಿಸಲು ಸಾಧ್ಯವಾಗುವುದಿಲ್ಲ.

ಸಂಗಾತಿಯ ಮನೆಯವರ ಜೊತೆಗೆ ನಿಮ್ಮ ಸಂಬಂಧ
ನಿಮ್ಮ ಸಂಗಾತಿಯ ಮನೆಯವರು ನೀವು ಬಯಸಿದಂತೆ ಇರಲು ಸಾಧ್ಯವಿಲ್ಲ, ಅವರ ಸ್ವಭಾವ ಕೆಲವೊಮ್ಮೆ ಇಷ್ಟವಾಗದೆ ಹೋದರು ಸಂಗಾತಿಯ ಜೊತೆಗೆ ನಿಮ್ಮ ಸಂಬಂಧ ಗಟ್ಟಿಯಾಗಲು ಸಂಗಾತಿಯ ಮನೆಯವರ ಬಗ್ಗೆ ನಿಮ್ಮ ಫ್ರೆಂಡ್ಸ್ ಜೊತೆ ಹೇಳಬೇಡಿ.

ನಿಮ್ಮ ಸಂಗಾತಿಯ ಕೆಲ ಕೆಟ್ಟ ಅಭ್ಯಾಸಗಳ ಬಗ್ಗೆ
ನಿಮ್ಮ ಸಂಗಾತಿಯ ಕೆಲವೊಂದು ಅಭ್ಯಾಸ ನಿಮಗೆ ಇಷ್ಟವಾಗದೆ ಇರಬಹುದು, ಆದರೆ ಫ್ರೆಂಡ್ಸ್ ಜೊತೆ ಹೇಳಿ ಅವರನ್ನು ಮತ್ತಷ್ಟು ಮುಜುಗರಕ್ಕೀಡು ಮಾಡಬೇಡಿ.

ಮಗುವಿಗಾಗಿ ಪ್ಲಾನ್ ಮಾಡುವಾಗ
ಇದು ನಿಮ್ಮ ವೈಯಕ್ತಿಕ ವಿಚಾರ, ಇದನ್ನು ಫ್ರೆಂಡ್ಸ್ ಜೊತೆ ಹೇಳಬೇಡಿ, ಹೇಳಬೇಕೆಂದು ಅನಿಸಿದರೆ ಗರ್ಭಿಣಿಯಾದ ಬಳಿಕ ಹೇಳಿ.

ನಿಮ್ಮ ಬೆಡ್ ರೂಂ ರಹಸ್ಯ
ನಿಮ್ಮ ಬೆಡ್ ರೂಂ ನ ರಹಸ್ಯವನ್ನು ಫ್ರೆಂಡ್ಸ್ ಜೊತೆ ಹೇಳಬೇಡಿ.

ಬಾಸ್ ಯಾರು?
ನಿಮ್ಮ ಮನೆಯಲ್ಲಿ ಏನಾದರೂ ನಿರ್ಧಾರ ತೆಗೆದುಕೊಳ್ಳುವಾಗ ಇಬ್ಬರಲ್ಲಿ ಯಾರ ನಿರ್ಧಾರ ಎಂದು ಹೊರಗಿನವರಿಗೆ ತಿಳಿಸಬೇಡಿ. ಏನಾದರೂ ನಿರ್ಧಾರ ತೆಗೆದುಕೊಳ್ಳುವಾಗ ನೀವಿಬ್ಬರೇ ಚರ್ಚಿಸಿ, ಹೊರಗಿನವರ ಬಳಿ ಇದು ನಮ್ಮಿಬ್ಬರ ನಿರ್ಧಾರ ಎಂದು ಹೇಳಿ.

ನಿಮ್ಮ ಸಂಗಾತಿ ದ್ವೇಷಿಸುವ ವ್ಯಕ್ತಿ ಜೊತೆ ಸ್ನೇಹ ಬೇಡ
ನಿಮ್ಮ ಸಂಗಾತಿ ದ್ವೇಷಿಸುವ ವ್ಯಕ್ತಿ ಜೊತೆ ನೀವು ಸ್ನೇಹ ಬೆಳೆಸಿದರೆ ನಿಮ್ಮಿಬ್ಬರ ನಡುವೆ ವೃಥಾ ಜಗಳ ಬರುವುದು, ಆದ್ದರಿಂದ ನಿಮ್ಮ ಸಂಗಾತಿ ದ್ವೇಷಿಸುವ ವ್ಯಕ್ತಿಯನ್ನು avoid ಮಾಡಿ.

ನಿಮ್ಮಿಬ್ಬರ ಜಗಳ ಬಗ್ಗೆ
ದಂಪತಿಗಳ ನಡುವೆ ಜಗಳ ಬರುವುದು ಸಹಜ. ಅದನ್ನು ನೀವೇ ಪರಿಹರಿಸಿಕೊಳ್ಳಿ, ಮೂರನೆಯವರಿಗೆ ಅವಕಾಶ ಕೊಡಬೇಡಿ.



Click it and Unblock the Notifications
