Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಹಾಟ್ ಹಾಟ್ ಬಾಯ್ ನೀವಾಗಬೇಕೆ?
ಛೇ..ಯಾವ ಹುಡುಗಿನೂ ನನ್ನ ಕಡೆ ತಿರುಗಿಯೂ ನೋಡಲ್ಲ, ನನ್ನ ಜತೆ ಮಾತನಾಡಲ್ಲ ಎನ್ನುವ ಭಾವನೆ ನಿಮ್ಮಲ್ಲಿರಬಹುದು. ಹುಡುಗಿಯರನ್ನು ಸೆಳೆಯಬೇಕೆಂದರೆ ನಮ್ಮಲ್ಲೇ ಕೆಲವೊಂದು ಬದಲಾವಣೆ ಮಾಡಬೇಕಾಗುತ್ತದೆ.
ಸುಂದರವಾಗಿದ್ದ ಮಾತ್ರಕ್ಕೆ ನೀವು ಹುಡುಗಿಯರ ಕಣ್ಣಿಗೆ ಆಕರ್ಷಕವಾಗಿ ಕಾಣಬೇಕೆಂದಿಲ್ಲ, ನಿಮ್ಮ ನಡುವಳಿಕೆ, ನಿಮ್ಮ ಡ್ರೆಸ್ಸಿಂಗ್, ನಿಮ್ಮ ವ್ಯಕ್ತಿತ್ವ ಅವರನ್ನು ಸೆಳೆಯುವಂತೆ ಇದ್ದರೆ ಮಾತ್ರ ಅವರು ನಿಮ್ಮ ಕಡೆಗೆ ಆಕರ್ಷಿಸುತ್ತಾರೆ. ಇಲ್ಲಿ ಕೆಲವು ಟಿಪ್ಸ್ ನೀಡಲಾಗಿದೆ, ಹಾಟ್ ಬಾಯ್ ನೀವಾಗ ಬಯಸುವುದಾದರೆ ಈ ಟಿಪ್ಸ್ ನಿಮಗೆ ಸಹಾಯ ಮಾಡುವುದು.

ಲೇಟೆಸ್ಟ್ ಫ್ಯಾಶನ್:
ಆತ್ಯಾಧುನಿಕ ಬಟ್ಟೆಬರೆ, ನಿಮ್ಮ ದೇಹಕ್ಕೆ ಹೊಂದಿಕೊಳ್ಳುವ ಬಟ್ಟೆ ಧರಿಸಿ. ನಿಮ್ಮ ಚರ್ಮ, ತಲೆಕೂದಲು, ಕಣ್ಣಿನ ಬಣ್ಣಕ್ಕೆ ಸೂಟ್ ಆಗುವಂತಹ ಬಣ್ಣ ಆಯ್ಕೆ ಮಾಡಿ.

ಜಿಮ್ ಗೆ ಹೋಗಿ
ಹುಡುಗಿಯರನ್ನು ಸೆಳೆಯಲು ಬಾಡಿ ಬಿಲ್ಡರ್ ಆಗಬೇಕೆಂದಿಲ್ಲ. ಹುಡುಗಿಯರನ್ನು ಸೆಳೆಯಲು ಕಟ್ಟುಮಸ್ತಾದ ದೇಹ ಅಷ್ಟೇ ಮುಖ್ಯ. ಇದನ್ನೇ ಹುಡುಗಿಯರು ಇಷ್ಟಪಡುವುದು.

ಹೇರ್ ಸ್ಟೈಲ್ ಹೇಗಿರಬೇಕು
ತಲೆಕೂದಲಿಗೆ ಹೊಸ ವಿನ್ಯಾಸ ಕೊಡಿ. ಉಗುರುಗಳನ್ನು ಕತ್ತರಿಸಿ ಮತ್ತು ಗಡ್ಡ ಬೋಳಿಸಿ ಅಥವಾ ಟ್ರಿಮ್ ಮಾಡಿ. ಕಿವಿ ಅಥವಾ ಮೂಗಿನಲ್ಲಿ ಹೆಚ್ಚಿನ ಕೂದಲುಗಳಿದ್ದರೆ ಅದನ್ನು ಕತ್ತರಿಸಿ.

ದೇಹದಿಂದ ವಾಸನೆ ಬರದಿರಲಿ
ಸರಿಯಾಗಿ ಸ್ನಾನ ಮಾಡಿಕೊಂಡು ಒಳ್ಳೆಯ ಪರಿಮಳ ಬೀರುವ ಡಿಯೋಡ್ರೆಂಟ್ ಹಾಕಿಕೊಳ್ಳಿ. ಬಾಯಿ ವಾಸನೆ ಬರುತ್ತಿದ್ದರೆ ಅದನ್ನು ಹೋಗಲಾಡಿಸಿ. ನೀವು ಎಷ್ಟೇ ಸುಂದರವಾಗಿದ್ದರೂ ದೇಹದ ವಾಸನೆ ಹುಡುಗಿಯರಿಂದ ದೂರ ಮಾಡಬಹುದು.

ದೇಹದ ಭಂಗಿ
ನಿಂತುಕೊಳ್ಳುವ ಮತ್ತು ಕುಳಿತುಕೊಳ್ಳುವ ಭಂಗಿಯಿಂದ ವ್ಯಕ್ತಿಯ ಆತ್ಮವಿಶ್ವಾಸವನ್ನು ತಿಳಿಯಬಹುದು. ದೇಹದ ನಿಲುವು ಹುಡುಗಿಯರನ್ನು ಆಕರ್ಷಿಸಲಿದೆ.

ಸ್ವರದಲ್ಲಿ ಸೆಳೆತವಿರಲಿ
ನಿಮ್ಮ ಸ್ವರ ರೇಡಿಯೋ ಆರ್. ಜೆ.ಗಳಂತೆ ಇರಬೇಕೆಂದಿಲ್ಲ. ಆದರೆ ತುಂಬಾ ಮಧುರವಾಗಿ ಮಾತನಾಡಲು ಕಲಿಯಿರಿ. ನೀವು ಮಾತನಾಡುತ್ತಿದ್ದರೆ ಹುಡುಗಿಯರು ಮುಗಿಬೀಳುವಂತಿರಬೇಕು.

ಭಾವನಗೆಳಿಗೆ ನೀರಾಗಬೇಡಿ
ಇದು ಭಾವನೆಗಳಲ್ಲಿ. ನಿಮ್ಮೊಂದಿಗೆ ಕುಳಿತಿರುವ ಮಹಿಳೆ ತುಂಬಾ ಭಾವನಾತ್ಮಕವಾಗಿ ಮಾತನಾಡಿದರೂ ನೀವು ನಿಮ್ಮನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಆಕೆಯ ಭಾವನೆಗಳೊಂದಿಗೆ ನೀವು ನೀರಾಗಿ ಹೋಗಬಾರದು. ಬಲಿಷ್ಠವಾಗಿರಬೇಕು.

ನಿಮ್ಮಲ್ಲಿ ಶಿಷ್ಟಾಚಾರವಿರಲಿ
ಆಕೆಯೊಂದಿಗೆ ನೀವು ಹೋಗುವಾಗ ಬಾಗಿಲು ತೆರೆಯುವುದು, ಯಾವುದೋ ವಿಷಯಕ್ಕೆ ಧನ್ಯವಾದ ಹೇಳುವುದು ನಿಮ್ಮಲ್ಲಿನ ಶಿಷ್ಟಾಚಾರವನ್ನು ಎತ್ತಿ ತೋರಿಸುತ್ತದೆ. ಈ ರೀತಿ ಮಾಡುವಾಗ ನಿಮ್ಮ ಕಡೆ ವಿಚಿತ್ರ ರೀತಿಯಿಂದ ನೋಡಿದರೆ ಅದಕ್ಕೆ ಚಿಂತಿಸಬೇಡಿ. ಇಂದಿನ ದಿನಗಳಲ್ಲಿ ಶಿಷ್ಟಾಚಾರ ಪಾಲಿಸುವ ಮಂದಿಯೇ ಕಡಿಮೆಯಾಗಿದ್ದಾರೆ.

ಚಾನ್ಸ್ ಬಿಡಬೇಡಿ
ಹುಡುಗಿಯರ ಬಗ್ಗೆ ಏನೆಲ್ಲಾ ತಿಳಿದುಕೊಳ್ಳಬಹುದು ಮತ್ತು ಯಾವುದು ಕೆಲಸ ಮಾಡುತ್ತದೆ ಎನ್ನುವುದನ್ನು ನೋಡಿ. ನೀವು ಚಾನ್ಸ್ ಪಡೆಯದಿದ್ದರೆ ಆಕೆಯನ್ನು ಆಕರ್ಷಿಸಲು ಸಾಧ್ಯವಿಲ್ಲ.

ಮುನ್ನುಗ್ಗಿ
ಆಕೆಯಿಂದ ನಿಮ್ಮ ಕಡೆ ಆಕರ್ಷಣೆಯ ಸಿಗ್ನಲ್ ಬಂದ ಕೂಡಲೇ ನೀವು ಮುಂದಡಿಯಿಡಿ. ಆಕೆಯೊಂದಿಗೆ ಏಕಾಂತದಲ್ಲಿ ಮಾತನಾಡಿ. ಬೇಗನೇ ಅರ್ಥಮಾಡಿಕೊಳ್ಳುವವರ ಕಡೆ ಹುಡುಗಿಯರಿಗೆ ಮೋಹ ಹೆಚ್ಚು.



Click it and Unblock the Notifications
