Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಈ ರೀತಿ ಬಯಸದ ಪುರುಷರು ತುಂಬಾ ವಿರಳ!
ಪುರುಷರು ಮಹಿಳೆಯರಿಗಿಂತ ಹೆಚ್ಚಿನ ಎಮೋಷನಲ್ ಜೀವಿಗಳಂತೆ! "ಹೌದಾ? ಹುಡುಗಿಯರು ನೋಡಿದರೆ ಸ್ವಲ್ಪ ಬೇಸರಾದರೂ ಗೊಳೋ ಅಂತ ಬಿಡುತ್ತಾರೆ. ಅಳುವ ಪುರುಷರೇ ತುಂಬಾ ವಿರಳ...ಅದರಲ್ಲೂ ಹೆಚ್ಚಿನವರು ಲವ್ ವಿಷಯದಲ್ಲಿ ಮಾತ್ರ ಕಣ್ಣೀರು ಹಾಕುತ್ತಾರ. ಮತ್ತೆ ಹೇಗೆ ಅವರು ತುಂಬಾ ಭಾವನಾ ಜೀವಿ ಎಂತ ನೀವು ಹೇಳುತ್ತೀರಿ" ಎಂದು ನಿಮಗೆ ಅನಿಸುತ್ತಿರಬಹುದು.
ಪ್ರತಿಯೊಬ್ಬ ಪುರುಷನಿಗೂ ತನ್ನದೇ ಆದ ಆಸೆ, ನಿಲುವುಗಳಿರುತ್ತದೆ. ಅದಕ್ಕೆ ಪೆಟ್ಟಾದರೆ ಅವನಿಗೆ ಸಹಿಸಲು ಸಾಧ್ಯವಿಲ್ಲ. ಅವನು ಬೇಕಾದರೆ ಹಳ್ಳಿಯವ ಆಗಿರಬಹುದು ಅಥವಾ ತುಂಬಾ ಮಾಡರ್ನ್ ಹುಡುಗ ಆಗಿರಬಹುದು, ತುಂಬಾ ಸ್ಟೈಲಿಷ್ ಆಗಿ ಡ್ರೆಸ್ಸಿಂಗ್ ಮಾಡಬಹುದು, ಕೆಲವರಂತೂ ಪಕ್ಕಾ ಫ್ಲರ್ಟ್ ಆಗಿರುತ್ತಾರೆ. ಆದರೆ ಪ್ರತಿಯೊಬ್ಬ ಪುರುಷನಿಗೆ ಮಾತ್ರ ತನ್ನ ಬಾಳಿನಲ್ಲಿ ಬರುವ ಹುಡುಗಿ ಹೀಗೆಯೇ ಇರಬೇಕೆಂಬ ಸ್ಪಷ್ಟ ನಿಲುವು ಇದ್ದೇ ಇರುತ್ತದೆ. ಈ ಕೆಳಗಿನಂತೆ ಬಯಸದಿರುವ ಪುರುಷರು ತುಂಬಾ ವಿರಳ...

ನಿರ್ಬಂಧನೆವಿಲ್ಲದ ಪ್ರೀತಿ
ಮನೆಯಲ್ಲಿ ಹುಡುಗರು ಹೆಚ್ಚಿನ ನಿರ್ಬಂಧನೆಗಳಿಲ್ಲದೆ ಬೆಳೆದಿರುತ್ತಾರೆ. ತನ್ನ ಮಗ ಫ್ರೆಂಡ್ಸ್ ಜೊತೆ ಸುತ್ತಾಡಲು ಹೋಗಿ ಮಧ್ಯರಾತ್ರಿ ಮನೆಗೆ ಬಂದರೆ ' ಏಕೆ ಲೇಟ್ ಬಂದೆ?' ಎಂದು ಕೇಳುವ ಪೋಷಕರು ತುಂಬಾ ವಿರಳ. ತನ್ನ ಹೆಂಡತಿ ಆಗಿ ಬರುವವಳು ಕೂಡ ನನಗೆ ಯಾವುದೇ ನಿರ್ಬಂಧನೆ ಹಾಕಬಾರದೆಂದು ಬಯಸುತ್ತಾನೆ.

ಫ್ರೆಂಡ್ಸ್
ಪುರುಷರು ಗೆಳೆತನಕ್ಕೆ ಹೆಚ್ಚಿನ ಮಹತ್ವ ಕೊಡುತ್ತಾರೆ. ಪ್ರಾಣ ಸ್ನೇಹಿತನಿಗಾಗಿ ಯಾವುದೇ ಸಹಾಯ ಮಾಡಲು ಸಿದ್ಧನಿರುತ್ತಾನೆ. ಮದುವೆಯಾದ ಮೇಲೆ ಫ್ರೆಂಡ್ಸ್ ಜೊತೆ ಕಾಲ ಕಳೆಯುವುದಕ್ಕೆ ಹೆಂಡತಿ ತಕರಾರು ಮಾಡಿದರೆ ಅವನಿಗೆ ಇಷ್ಟವಾಗುವುದಿಲ್ಲ.

ಅಮ್ಮ-ಹೆಂಡತಿ ಪರಸ್ಪರ ಹೊಂದಿಕೊಂಡು ಹೋಗಲಿ ದೇವರೇ..
ಹೀಗಂತ ಪ್ರತಿಯೊಬ್ಬ ಗಂಡೂ ಮದುವೆಯಾಗುವಾಗ ಬೇಡುತ್ತಾನೆ. ಪಾಪ ಹೆಚ್ಚಿನ ಪುರುಷರ ಈ ಬೇಡಿಕೆ ದೇವರಿಗೆ ಕೇಳಿಸುವುದೇ ಇಲ್ಲವೇನೋ?

ನಿಯತ್ತು
ಹೆಂಡತಿ ನನಗೆ ಮೋಸ ಮಾಡಬಾರದು, ಅವಳ ನಡತೆ ಶುದ್ಧವಾಗಿರಬೇಕೆಂದು ಬಯಸುತ್ತಾನೆ. ಹೆಂಡತಿ ಪರಪುರುಷನ ಜೊತೆ ಸಲಿಗೆಯಿಂದ ಇರುವುದು ಗಂಡನಿಗೆ ತುಂಬಾ ನೋವು ಉಂಟು ಮಾಡುತ್ತದೆ, ಅಲ್ಲದೆ ಇಂತಹ ವಿಷಯಗಳಲ್ಲಿ ಅವನು ಹೆಂಡತಿಯ ಮೇಲೆ ಇಟ್ಟ ನಂಬಿಕೆ ಬದಲಾದರೆ, ನಂತರ ಅವನು ಅವಳನ್ನು ಯಾವತ್ತೂ ನಂಬುವುದಿಲ್ಲ.

ಆಹಾರ
ಪುರುಷ ಹೋಟೆಲ್ ಅಡುಗೆಗಿಂತ ಮನೆ ಅಡುಗೆ ತುಂಬಾ ಇಷ್ಟಪಡುತ್ತಾನೆ. ಒಳ್ಳೆಯ ಅಡುಗೆ ಮಾಡಿ ಹಾಕಿ ಕೂಡ ಗಂಡನ ಮನಸ್ಸನ್ನು ಸುಲಭದಲ್ಲಿ ಗೆಲ್ಲಬಹುದು

ತಾಳ್ಮೆ
ತನ್ನ ತಪ್ಪು ಏನೇ ಇದ್ದರು ನನ್ನ ಹೆಂಡತಿ ಕ್ಷಮಿಸಿ, ನನ್ನನ್ನು ಮಗುವಿನಂತೆ ನೋಡಿಕೊಳ್ಳಬೇಕೆಂದು ಬಯಸುತ್ತಾನೆ. ಅವನ ತಪ್ಪು ಎತ್ತಿ ತೋರಿಸಿದರೆ ಅವನ ಸ್ವಾಭಿಮಾನಕ್ಕೆ ಪೆಟ್ಟಾಗುತ್ತದೆ! ತನ್ನ ತಪ್ಪಿನ ಬಗ್ಗೆ ಯೋಚಿಸದೆ ಅವಳು ನನ್ನನ್ನು ಕ್ಷಮಿಸಬೇಕು ಎಂದು ಮಾತ್ರ ಯೋಚಿಸುತ್ತಾನೆ.

ಗುಣದಲ್ಲಿ ರೂಪವಂತೆ
ನೋಡಲು ತುಂಬಾ ಚೆಂದ ಇದ್ದು, ಗುಣ ಸ್ವಲ್ಪವೂ ಹೊಂದಾಣಿಕೆಯಾಗದಿದ್ದರೆ ಅಂತವಳ ಜೊತೆ ಜೀವನ ಮಾಡುವುದು ಕಷ್ಟವಾಗುತ್ತದೆ. ಒಳ್ಳೆಯ ಗುಣವಿದ್ದರೆ ಅವನ ಮನಸ್ಸನ್ನು ಸುಲಭದಲ್ಲಿ ಗೆಲ್ಲಬಹುದು.

ಬುದ್ಧಿವಂತಿಕೆ
ಬುದ್ಧಿವಂತೆ ಹೆಂಡತಿಯ ಮೇಲೆ ಗಂಡನಿಗೆ ಅಭಿಮಾನ ಸ್ವಲ್ಪ ಜಾಸ್ತಿಯೇ ಇರುತ್ತದೆ. ನನ್ನವಳು ರೂಪವಂತೆ ಹಾಗೂ ಬುದ್ಧಿವಂತೆಯಾದ ಹೆಣ್ಣು ಅವನ ಕನಸ್ಸಿನ ಕನ್ಯೆಯಾಗಿರುತ್ತಾಳೆ.

ಸ್ವಾವಲಂಬಿ
ಎಲ್ಲಾ ವಿಷಯಕ್ಕೂ ಅವನನ್ನು ಅವಲಂಭಿಸದೆ, ಸ್ವಾವಲಂಬಿಯಾಗಿರುವ ಹೆಣ್ಣು ಅವನಿಗೆ ತುಂಬಾ ಪ್ರಿಯವಾಗುತ್ತಾಳೆ. ಹಾಗಂತ ಎಲ್ಲವನ್ನು ತನ್ನ ಸ್ವಂತ ನಿರ್ಧಾರದಂತೆ ಮಾಡುವ ಹೆಂಡತಿಯೂ ಅವನಿಗೆ ಇಷ್ಟವಾಗುವುದಿಲ್ಲ.

ಮಾನಸಿಕ ಪ್ರೌಢತೆ
ಮಾನಸಿಕ ಪ್ರೌಢತೆ ಇರುವ ಸ್ತ್ರೀಯರು ಜವಬ್ದಾರಿಯನ್ನು ನಿಭಾಯಿಸುವಷ್ಟು ಸಮರ್ಥರಾಗಿರುತ್ತಾರೆ. ಇಂತಹ ಸ್ತ್ರೀ ತನ್ನ ಪುರುಷನಿಗೆ ತುಂಬಾ ಹತ್ತಿರವಾಗುತ್ತಾಳೆ.

ಉತ್ತಮ ಜೀವನ
ಉತ್ತಮವಾದ ಮನೆ ಇರಬೇಕು, ಮನೆಯಲ್ಲಿ ಐಷರಾಮಿ ವಸ್ತುಗಳಿರಬೇಕು, ಕಾರು, ಬೈಕ್, ಗ್ಯಾಡ್ಜೆಟ್ಸ್ ಇವೆಲ್ಲಾ ಇರಬೇಕು ಅನ್ನುವುದು ಪ್ರತಿಯೊಬ್ಬನ ಕನಸ್ಸಾಗಿರುತ್ತದೆ.
ಕೈತುಂಬಾ ದುಡ್ಡು ಓಡಾಡಬೇಕು, ನನ್ನ ಜೀವನ ಶೈಲಿ ಚೆನ್ನಾಗಿರಬೇಕು ಅನ್ನುವುದನ್ನು ಪ್ರತಿಯೊಬ್ಬ ಪುರುಷನು ಬಯಸುತ್ತಾನೆ ಅಲ್ಲದೆ ಮದುವೆಯ ನಂತರ ಇಡೀ ಸಂಸಾರ ನಿಭಾಯಿಸುವ ಜವಬ್ದಾರಿ ಅವನ ಮೇಲಿರುತ್ತದೆ ಅಲ್ಲವೇ?

ಹಾಸ್ಯ ಪ್ರವೃತ್ತಿ
ಹಾಸ್ಯ ಸ್ವಭಾವದ ಮಹಿಳೆಯರು ಪುರುಷರಿಗೆ ತುಂಬಾ ಇಷ್ಟವಾಗುತ್ತಾರೆ.

ಸಮಾನ ಮನಸ್ಥಿತಿ
ಸಮಾನ ಮನಸ್ಥಿತಿಯ ಜೋಡಿ ಸಿಗುವುದು ತುಂಬಾ ಅಪರೂಪ. ಅವನ ಆಸಕ್ತಿಗಳನ್ನು ಹುರಿದುಂಬಿಸುವ ಹುಡುಗಿ ಅವನ ಬಾಳಿನಲ್ಲಿ ಬರಬೇಕೆಂದು ಬಯಸುತ್ತಾನೆ.



Click it and Unblock the Notifications
